ಅಭಯ ಹಿರಣ್ಮಯಿ (ಜನನ ೨೪ ಮೇ ೧೯೮೯) ಒಬ್ಬ ಭಾರತೀಯ ಹಿನ್ನೆಲೆ ಗಾಯಕಿ. ಇವರು ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿನ ಚಲನಚಿತ್ರ ಸಂಗೀತಕ್ಕಾಗಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಹಿನ್ನೆಲೆ ಗಾಯನವನ್ನು ನೀಡಿದ್ದಾರೆ. []

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ತಿರುವನಂತಪುರಂನಲ್ಲಿ ಸೃಜನಾತ್ಮಕವಾಗಿ ಒಲವು ಹೊಂದಿರುವ ಕುಟುಂಬದಲ್ಲಿ ಜನಿಸಿದ ಹಿರಣ್ಮಯಿರವರು ಸಂಗೀತದಲ್ಲಿ ಯಾವುದೇ ಔಪಚಾರಿಕ ತರಬೇತಿಯನ್ನು ತೆಗೆದುಕೊಳ್ಳಲಿಲ್ಲ.ಸಂಗೀತದ ಮೊದಲ ಪಾಠವನ್ನು ತನ್ನ ತಾಯಿಯಾದ ಲತಿಕಾ ಅವರಿಂದ ಪಡೆದರು. ಲತಿಕಾ ಅವರು ಪ್ರೊ. ನೆಯ್ಯಟ್ಟಿಂಕರ ಎಂಕೆ ಮೋಹನಚಂದ್ರನ್ರವರ ಶಿಷ್ಯೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಪದವೀಧರೆಯಾಗಿದ್ದರು. ಅಲ್ಲದೇ ತನ್ನ ತಂದೆಯ ಸಹೋದರ ಸ್ವಾತಿ ತಿರುನಾಳ್ ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದಾಗ ನಡೆಸಿದ ಸಂಗೀತ ಪಾಠಗಳನ್ನು ಆಲಿಸುವ ಮೂಲಕ ಸಂಗೀತದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದರು. ಆಕೆಯ ತಂದೆ ಜಿ. ಮೋಹನ್ ದೂರದರ್ಶನ ಕೇಂದ್ರದ ಕಾರ್ಯಕ್ರಮ ನಿರ್ಮಾಪಕರಾಗಿದ್ದರು . []

ಹಿರಣ್ಮಯಿ ಅವರು ತಿರುವನಂತಪುರದಲ್ಲಿ ಬೆಳೆದು, ಅಲ್ಲಿ ಅವರು ಕಾರ್ಮೆಲ್ ಶಾಲೆಯಲ್ಲಿ ಓದಿದರು. ಅವರು ಸಂಗೀತದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸುವ ಮೊದಲು ಮುಸ್ಲಿಂ ಅಸೋಸಿಯೇಶನ್ ಕಾಲೇಜ್ ಆಫ್ ಇಂಜಿನಿಯರಿಂಗ್, ವೆಂಜರಮೂಡುನ ತಿರುವನಂತಪುರದಲ್ಲಿ ಎಂಜಿನಿಯರಿಂಗ್ ಓದಿದರು.

ಅಭಯ ಅವರು ಗಾನ ಸಂಯೋಜಕರಾದ ಗೋಪಿ ಸುಂದರ್ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು ಮತ್ತು ಜುಲೈ ೨೦೧೮ ರಲ್ಲಿ ಸುಂದರ್ ಅವರು ೯ ವರ್ಷಗಳ ಕಾಲ ಒಟ್ಟಿಗೆ ಇದ್ದುದನ್ನು ಬಹಿರಂಗಪಡಿಸಿದರು. [] ಮೇ ೨೦೨೨ ರಂದು, ಗಾಯಕ ಅಮೃತಾ ಸುರೇಶ್ ಅವರೊಂದಿಗಿನ ಸಂಬಂಧವನ್ನು ದೃಢೀಕರಿಸುವ ಮೂಲಕ ಗೋಪಿ ಸುಂದರ್ ಅಭಯ ಅವರೊಂದಿಗಿನ ಸಂಬಂಧವನ್ನು ಮುರಿದರು.

ವೃತ್ತಿ

ಬದಲಾಯಿಸಿ

ಹಿರಣ್ಮಯಿ ಅವರು ೨೦೧೪ ರಲ್ಲಿ ಮಲಯಾಳಂ ಚಲನಚಿತ್ರದ ಗೀತೆಗಳಿಗೆ ಹಿನ್ನೆಲೆ ಗಾಯನವನ್ನು ಒದಗಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಾಮಸೂಚಕ ಚಿತ್ರದ ನಾಕು ಪೆಂಟಾ, ನಾಕು ಟಾಕಾ ಹಾಡಿನ ಮೂಲಕ ಅವರು ಸಿನೆಮಾ ಗಾಯನ ಜೀವನಕ್ಕೆ ಪ್ರವೇಶ ಮಾಡಿದರು. ಸ್ವಾಹಿಲಿ ಉಪಭಾಷೆಯಲ್ಲಿ ಬ್ಯಾಕಪ್ ಗಾಯನವನ್ನು ಒದಗಿಸಿದರು. [] ಅದರ ನಂತರ ದಿಲೀಪ್ - ಮಮತಾ ಮೋಹನ್‌ದಾಸ್ ಅಭಿನಯದ ಟು ಕಂಟ್ರಿಸ್‌ನಲ್ಲಿ ಕೂಡಾ ಹಾಡಿದರು. ಅದೇ ವರ್ಷ, ಅವರು ತೆಲುಗು ಚಿತ್ರ ಮಲ್ಲಿ ಮಲ್ಲಿ ಇದಿ ರಾಣಿ ರೋಜು ಗಾಗಿ ಚೋಟಿ ಜಿಂದಗಿ ಹಾಡನ್ನು ಹಾಡಿದರು. [] ೨೦೧೬ರಲ್ಲಿ, ಅವರು ಜೇಮ್ಸ್ ಅಂಡ್ ಆಲಿಸ್ ಚಿತ್ರಕ್ಕಾಗಿ ಕಾರ್ತಿಕ್ ಜೊತೆಗೆ ರೊಮ್ಯಾಂಟಿಕ್ ಬಲ್ಲಾಡ್ ಮಜಯೇ ಮಜಯೇಗೆ ತಮ್ಮ ಗಾಯನವನ್ನು ನೀಡಿದರು. ನಂತರದ ವರ್ಷದಲ್ಲಿ, ಕೋಯಿಕೋಡ್ ಹಾಡು, ಕೋಯಿಕೋಡ್ ಮತ್ತು ಅದರ ಹಳ್ಳಿಗಾಡಿನ ಸಂಗೀತವನ್ನು ಸಂಯೋಜಿಸಿದರು. ಮಲಯಾಳಂ ಚಲನಚಿತ್ರವಾದ ಗೂಡಲೋಚನಕ್ಕಾಗಿ ದೀರ್ಘಕಾಲದ ಸಹಯೋಗಿ, ಗೋಪಿ ಸುಂದರರವರು ಬಿಡುಗಡೆ ಮಾಡಿದ ಕೋಯಿಕೋಡ್ ಹಾಡು ಪ್ರಸಿದ್ಧಿ ಪಡೆಯಿತು. ಈ ಗಾಯನಕ್ಕಾಗಿ ಶ್ರೇಷ್ಠತೆಗಾಗಿ ಮೀಸಲಿಟ್ಟ ಏಷ್ಯಾವಿಷನ್ ಪ್ರಶಸ್ತಿಗಳಲ್ಲಿ ತನ್ನ ಮೊದಲ ಪ್ರಶಸ್ತಿಯನ್ನು ಪಡೆದರು. [] []

ಧ್ವನಿಮುದ್ರಿಕೆ

ಬದಲಾಯಿಸಿ
ವರ್ಷ ಚಲನಚಿತ್ರ ಹಾಡು ಸಂಯೋಜಕ ರೆ.ಫಾ
2014 ನಾಕು ಪೆಂಟಾ ನಾಕು ಟಾಕಾ ನಾಕು ಪೆಂಟಾ, ನಾಕು ಟಾಕಾ ಗೋಪಿ ಸುಂದರ್ []
2015 ವಿಶ್ವಾಸಂ, ಅತ್ತಲ್ಲೆ ಎಲ್ಲಂ ಫೂಲಕಿಂಗ್ ಇಲ್ಲ ಗೋಪಿ ಸುಂದರ್ []
2015 ಮಲ್ಲಿ ಮಲ್ಲಿ ಇದಿ ರಾಣಿ ರೋಜು ಚೋಟಿ ಝಿನಾಗಿ ಗೋಪಿ ಸುಂದರ್ []
2015 ಎರಡು ದೇಶಗಳು ತಾನ್ನೆ ತಾನೆ ಗೋಪಿ ಸುಂದರ್ []
2015 ಜೇಮ್ಸ್ ಮತ್ತು ಆಲಿಸ್ ಮಜಯೇ ಮಜಯೇ ಗೋಪಿ ಸುಂದರ್ []
2017 ಸತ್ಯ ನಿಂಜನ್ ನಿನ್ನೇ ತೆಡಿವರುಂ ಗೋಪಿ ಸುಂದರ್ []
2017 ಗೂಡಲೋಚನ ಕೋಯಿಕೋಡ್ ಹಾಡು ಗೋಪಿ ಸುಂದರ್ []
2017 2 ದೇಶಗಳು ಚೆಳಿಯ ಚೆಳಿಯ ವಿಡಿಪೋಕೆ ಕಲಾಲ ಗೋಪಿ ಸುಂದರ್
2020 ಜೋಶುವಾ ಕೊಂಡ ಕೊಂಡ ಕೊಂಡತ್ತಂ ಗೋಪಿ ಸುಂದರ್ []

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Sathyendran, Nita (2016-06-23). "Notes of a Bohemian kind". The Hindu (in Indian English). ISSN 0971-751X. Retrieved 2017-11-02.
  2. "Singer Abhaya Hiranmayi in a live-in relationship with Gopi Sundar". Mathrubhumi. 14 February 2019. Archived from the original on 18 ಫೆಬ್ರವರಿ 2019. Retrieved 18 February 2019.
  3. "Naku Penta Naku Taka music review - Times of India". The Times of India. Retrieved 2017-11-02.
  4. ೪.೦ ೪.೧ "Music Review: Malli Malli Idhi Rani Roju - Times of India". The Times of India. Retrieved 2017-11-02.
  5. "Magic behind Koikode song". deccanchronicle.com/ (in ಇಂಗ್ಲಿಷ್). 2017-11-08. Retrieved 2017-12-26.
  6. James, Anu. "Asiavision Movie Awards 2017: Deepika Padukone, Dulquer Salmaan, Manju Warrier, Tovino Thomas grace event [PHOTOS]". International Business Times, India Edition (in ಇಂಗ್ಲಿಷ್). Retrieved 2018-02-24.
  7. ೭.೦ ೭.೧ ೭.೨ ೭.೩ ೭.೪ ೭.೫ "List of Malayalam Songs by Singers Abhaya Hiranmayi". en.msidb.org. Retrieved 2017-11-02.
  8. 2 Countries (Original Motion Picture Soundtrack) - EP by Gopi Sundar on Apple Music (in ಬ್ರಿಟಿಷ್ ಇಂಗ್ಲಿಷ್), 2017-12-13, retrieved 2017-12-16


ಬಾಹ್ಯ ಕೊಂಡಿಗಳು

ಬದಲಾಯಿಸಿ