ಅನುಷ್ಕಾ ಶಂಕರ್ರವರು (ಜನನ: ೦೯ ಜೂನ್, ೧೯೮೧) ಒಬ್ಬ ಬ್ರಿಟಿಷ್–ಭಾರತೀಯ ಸಿತಾರ್ ವಾದಕರು ಮತ್ತು ಸಂಯೋಜಕರಾಗಿದ್ದಾರೆ.[] ಅವರು ಭಾರತದ ಸುಪ್ರಸಿದ್ಧ ಸಿತಾರ್ ವಾದಕರಾಗಿದ್ದ ದಿ. ಪಂಡಿತ್ ರವಿಶಂಕರ್ರವರ ಪುತ್ರಿಯಾಗಿದ್ದಾರೆ.[]

ಅನುಷ್ಕಾ ಶಂಕರ್
೨೦೧೬ರ ರುಡೋಲ್ಸ್ಟಾಟ್ ಹಬ್ಬದಲ್ಲಿ ಅನುಷ್ಕಾ ಶಂಕರ್
ಜನನಜೂನ್ ೯, ೧೯೮೧
ವೃತ್ತಿ(ಗಳು)ಸಂಗೀತಗಾರರು, ಸಂಗೀತ ಸಂಯೋಜಕರು
ಸಕ್ರಿಯ ವರ್ಷಗಳು೧೯೯೫ - ಪ್ರಸ್ತುತ
ಜಾಲತಾಣanoushkashankar.com

ಆರಂಭಿಕ ಜೀವನ

ಬದಲಾಯಿಸಿ

ಸುಕನ್ಯಾ ಶಂಕರ್ ಮತ್ತು ಪಂ. ರವಿ ಶಂಕರ್ ರವರಿಗೆ ಲಂಡನ್ನಿನಲ್ಲಿ ಜನಿಸಿದ ಅನುಷ್ಕಾರವರು ತಮ್ಮ ಬಾಲ್ಯವನ್ನು ಲಂಡನ್ ಮತ್ತು ದೆಹಲಿಯಲ್ಲಿ ಕಳೆದಿದ್ದಾರೆ. ಅವರು ಕ್ಯಾಲಿಫೊರ್ನಿಯದ ಎನ್ಸಿನಿಟಾಸ್ ಪಟ್ಟಣದ ಸ್ಯಾನ್ ಡಿಯಗ್ವಿಟೋಸ್ ಹೈಸ್ಕೂಲ್ ಅಕಾಡೆಮಿಯಲ್ಲಿ ಓದಿದ್ದಾರೆ. ಅನುಷ್ಕಾರವರು ಮುಂದೆ ಕಾಲೇಜು ಅಧ್ಯಯನದ ಬದಲಾಗಿ ಸಂಗೀತದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು[].

ವೃತ್ತಿಜೀವನ

ಬದಲಾಯಿಸಿ

ಅನುಷ್ಕಾ ಏಳು ವರ್ಷ ವಯಸ್ಸಿನಲ್ಲೇ ತಮ್ಮ ತಂದೆ ರವಿ ಅವರ ಹತ್ತಿರ ಸಿತಾರಿನಲ್ಲಿ ತರಬೇತಿ ಪಡೆಯಲು ಪ್ರಾರಂಭಿಸಿದರು. ತಮ್ಮ ತರಬೇತಿಯ ಭಾಗವಾಗಿ, ಅವರು ಹತ್ತು ವರ್ಷ ವಯಸ್ಸಿನವರಾಗಿದ್ದಾಗ ತಂಬೂರಿಯೊಂದಿಗೆ ತಮ್ಮ ತಂದೆಯ ಜೊತೆ ವೇದಿಕೆ ಹಂಚಿಕೊಳ್ಳುತಿದ್ದರು. ಅನುಷ್ಕಾರವರು ಫೆಬ್ರವರಿ ೨೭, ೧೯೯೫ರಂದು ೧೩ನೇ ವಯಸ್ಸಿನಲ್ಲಿ, ದೆಹಲಿಯ ಸಿರಿ ಕೋಟೆಯಲ್ಲಿ ತಮ್ಮ ಮೊದಲ ಸಾರ್ವಜನಿಕ ಸಿತಾರ್ ಪ್ರದರ್ಶನವನ್ನು ನೀಡಿದರು. ಅದು ಅವರ ತಂದೆಯ ೭೫ನೇ ಹುಟ್ಟುಹಬ್ಬದ ಆಚರಣೆಗೆ ಏರ್ಪಡಿಸಿದ ಕಚೇರಿಯಾಗಿತ್ತು. ಈ ಚೊಚ್ಚಲ ಏಕವ್ಯಕ್ತಿ ಪ್ರದರ್ಶನಕ್ಕಾಗಿ, ತಬಲಾ ಪರಿಣಿತ ಝಾಕೀರ್ ಹುಸೇನ್ ಅವರ ಜೊತೆಗೂಡಿದರು.

ಪ್ರಶಸ್ತಿಗಳು

ಬದಲಾಯಿಸಿ
  • ಬ್ರಿಟಿಷ್ ಹೌಸ್ ಆಫ಼್ ಕಾಮನ್ಸ್ ಫ಼ಲಕ, ೧೯೯೮[]
  • ವರ್ಷದ ಮಹಿಳೆ ಪ್ರಶಸ್ತಿ, ಅಂತರರಾಷ್ಟ್ರೀಯ ಮಹಿಳಾ ದಿನ, ೨೦೦೩[]

ವೈಯಕ್ತಿಕ ಜೀವನ

ಬದಲಾಯಿಸಿ

ಬ್ರಿಟಿಷ್ ನಿರ್ದೇಶಕ ಜೋ ರೈಟ್‌ರೊಂದಿಗೆ‌ ಸಂಬಂಧವನ್ನು ಪ್ರಾರಂಭಿಸಿದ ನಂತರ, ೨೦೦೯ರಲ್ಲಿ ಅವರು ಲಂಡನ್ನಿನಲ್ಲಿ ನೆಲೆಯೂರಿ ಸೆಪ್ಟೆಂಬರ್ ೨೬, ೨೦೧೦ರಂದು ಅವರಿಬ್ಬರು ವಿವಾಹವಾದರು.[] ಅವರ ಮೊದಲ ಪುತ್ರ ಜುಬಿನ್ ಶಂಕರ್ ರೈಟ್ ಫೆಬ್ರವರಿ 22, 2011 ರಂದು ಜನಿಸಿದರು, ನಂತರ ಎರಡನೇ ಮಗ, ಮೋಹನ್ ಶಂಕರ್ ರೈಟ್, ಫೆಬ್ರವರಿ 17, 2015 ರಂದು ಜನಿಸಿದರು.[]

ಉಲ್ಲೇಖಗಳು

ಬದಲಾಯಿಸಿ
  1. "Anoushka Shankar Biography". Musician Guide. Retrieved 23 March 2018.
  2. "Anoushka Shankar Biography". Musician Guide. Retrieved 23 March 2018.
  3. ಚಿಬ್ಬರ್, ಕವಿತಾ. "Anoushka Shankar". Kavita Chhibber. Archived from the original on 18 ಜನವರಿ 2017. Retrieved 23 March 2018.
  4. ಡಿ ಕ್ರೂಝ್, ಎರೋಲ್ (27 February 2001). "Shankar guru a left-handed genius". New Straits Times. Kuala Lumpur, Malaysia. Retrieved 23 March 2018.
  5. "Anoushka Shankar Biography". Musician Guide. Retrieved 23 March 2018.
  6. ಬಾರ್ನೆಟ್, ಲಾರಾ (20 May 2014). "Interview Anoushka Shankar: 'Suddenly I'm the parent'". the Guardian. the Guardian. Retrieved 23 March 2018.
  7. "Ravi Shankars Website". Archived from the original on 26 February 2011. Retrieved 2 March 2011. {{cite web}}: Unknown parameter |deadurl= ignored (help)

[] [] []

  1. https://vijaykarnataka.indiatimes.com/lavalavk/culture/anoushka-shankar/articleshow/55921685.cms
  2. https://www.wikidata.org/wiki/Q259379
  3. https://kannada.news18.com/news/entertainment/this-week-movie-release-details-in-karnataka-2-57683.html