ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ,ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ. ಇವರ ಬರಹಗಳು ದಮನಿಸಲ್ಪಟ್ಟ ಮನಸುಗಳ ಆಕ್ರಂದನಕ್ಕೆ, ಶೋಷಿತರ ಒಳ ಬಂಡಾಯಕ್ಕೆ ದನಿಯಾಗಿವೆ.

ಅನುಪಮಾ ಪ್ರಸಾದ್

ಅನುಪಮಾ ಪ್ರಸಾದ್ ಅವರು ಅಕ್ಟೋಬರ್ ೭, ೧೯೭೧ ರಲ್ಲಿ ಉತ್ತರಕನ್ನಡ ಜಿಲ್ಲೆಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನು ಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದುಕೊಂಡರು.

ಕೃತಿಗಳು

ಬದಲಾಯಿಸಿ

ಕಥಾಸಂಕಲನಗಳು

ಬದಲಾಯಿಸಿ
  • ಚೇತನ
  • ಕರವೀರದ ಗಿಡ
  • ದೂರತೀರ
  • ಜೋಗತಿ ಜೋಳಿಗೆ

ಜೀವನ ಕಥಾನಕ

ಬದಲಾಯಿಸಿ
  • ಅರ್ಧ ಕಥಾನಕ-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ಅವರ ಮಗ ತೇಜಸ್ವಿ ವ್ಯಾಸರ ನುಡಿಗಳ ಕಥನ ನಿರೂಪಣೆ.

ನಾಟಕಗಳು

ಬದಲಾಯಿಸಿ

ಪ್ರಶಸ್ತಿಗಳು

ಬದಲಾಯಿಸಿ
  • ಕರವೀರದ ಗಿಡ ಕಥಾಸಂಕಲನದ ಹಸ್ತಪ್ರತಿಗೆ 2009ನೇ ಸಾಲಿನ (ರಂಗಕರ್ಮಿ ಸದಾನಂದ ಸುವರ್ಣ) ಮುಂಬೆಳಕು ಸಾಹಿತ್ಯ ಪ್ರಶಸ್ತಿ
  • ಕರವೀರದ ಗಿಡ ಕಥಾಸಂಕಲನಕ್ಕೆ ೨೦೧೧ ರಲ್ಲಿ ಬೇಂದ್ರೆ ಪುಸ್ತಕ ಬಹುಮಾನ.
  • ಕರವೀರದ ಗಿಡ ಕಥಾಸಂಕಲನಕ್ಕೆ ಅತ್ತಿಮಬ್ಬೆ ಪ್ರಶಸ್ತಿ.[]
  • ದೂರತೀರ ಕಥಾಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ತ್ರಿವೇಣಿ ಕಥಾ ಪ್ರಶಸ್ತಿ.[]
  • ದೂರತೀರ ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ,"ವಸುದೇವ ಭೂಪಾಲಂ" ದತ್ತಿ ಕಥಾ ಪ್ರಶಸ್ತಿ .
  • ದೂರತೀರ ಕಥಾಸಂಕಲನಕ್ಕೆ "ಬೆಸಗರ ಹಳ್ಳಿ ರಾಮಣ್ಣ" ಕಥಾ ಪ್ರಶಸ್ತಿ.
  • ದೂರತೀರ ಕಥಾಸಂಕಲನಕ್ಕೆ "ಮಾಸ್ತಿ" ಕಥಾ ಪ್ರಶಸ್ತಿ.
  • ಅರ್ಧಕಥಾನಕಕ್ಕೆ ಕರ್ನಾಟಕ ಲೇಖಕಿಯರ ಸಂಘ ನೀಳದೇವಿ ದತ್ತಿ ಪುಸ್ತಕ ಬಹುಮಾನ.
  • ಜೋಗತಿ ಜೋಳಿಗೆ ಕಥಾಸಂಕಲನಕ್ಕೆ ೨೦೧೬ ರಲ್ಲಿ 'ಸಾರಾ ಅಬೂಬಕ್ಕರ್ ಸಾಹಿತ್ಯ ಪ್ರಶಸ್ತಿ.[]
  • ಚೇತಾನ ಕಥಾಸಂಕಲನಕ್ಕೆ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ.[]

ಉಲ್ಲೇಖ

ಬದಲಾಯಿಸಿ
  1. http://planetkannada.com/node/10151[permanent dead link]
  2. http://narendrapai.blogspot.in/2015/02/blog-post_5.html
  3. http://surahonne.com/?p=11210
  4. http://narendrapai.blogspot.in/2012/07/blog-post.html