ಅನಿತಾ ಹಸನಂದಾನಿ ರೆಡ್ಡಿ

ಅನಿತಾ ಹಸನಂದಾನಿ ರೆಡ್ಡಿ ಬಹುಭಾಷಾ ಚಲನಚಿತ್ರಗಳು ಮತ್ತು ಧಾರವಾಹಿಗಳಲ್ಲಿ ಅಭಿನಯಿಸಿದ ಭಾರತೀಯ ನಟಿ.[] ಅವರು ೧೪ ಏಪ್ರಿಲ್ ೧೯೮೧ರಂದು ಜನಿಸಿದರು.[] ಅವರು ಕಬಿ ಸೌತನ್ ಕಬಿ ಸಾಹೇಲಿ (೨೦೦೧) ಎಂಬ ಧಾರಾವಾಹಿ ಇಂದ ನಟಿಸಲು ಪ್ರಾರಂಭಿಸಿದರು. ಅವರ ಸಿನಿಮಾ ಅಭಿನಯವನ್ನು ತಮಿಳು ಚಲನಚಿತ್ರ ವರುಶುಮೆಲ್ಲಮ್ ವಸಂತಮ್ ಮೂಲಕ ಪ್ರಾರಂಭಿಸಿದರು. ಅವರ ಬಾಲಿವುಡ್ ಅಭಿನಯವನ್ನು ಸುಭಾಷ್ ಘಾಯಿಯವರು ನಿರ್ದೇಶಿಸಿದ ತಾಲ್ (೧೯೯೯) ಚಲನಚಿತ್ರದಿಂದ ಪ್ರಾರಂಭಿಸಿದರು ಮತ್ತು 2003 ರಲ್ಲಿ ಕುಚ್ ತೊ ಹೈ ಚಲನಚಿತ್ರದಲ್ಲಿ ನಟಿಸಿದರು. ಅವರ ಜನಪ್ರಿಯತೆ ಕಿರುತೆರೆ ಸರಣಿಯ ಕಾವ್ಯಾಂಜಲಿ (೨೦೦೫) ಧಾರಾವಾಹಿಯ ಅಂಜಲಿ ಎಂಬ ಹೆಸರಿನ ಮೂಲಕ ಮನೆಮಾತಾದರು.[] ಯೆ ಹೈ ಮೊಹಬ್ಬತೇಯ್ ಧಾರವಾಹಿಯಲ್ಲಿ ಶಾಗುನ್ ಅರೋರಾ ಎಂಬ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ನಾಗಿನ್ ಧಾರವಾಹಿಯ ಮೂರನೇ ಋತುವಿನಲ್ಲಿ ಅವರು ವಿಷ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.[]

ಅನಿತಾ ರೆಡ್ಡಿ
Born
Anita Hassanandani

೧೪ ಎಪ್ರಿಲ್ ೧೯೮೧(age 38)[]
Nationalityಭಾರತ
Occupation(s)ರೂಪದಋಷಿ, ನಟಿ
Years active೨೦೦೧ ರಿಂದ
Height೧೭೦ cm []
Spouse

ರೊಹಿತ್ ರೆಡ್ಡಿ (ವಿವಾಹ:2013)

[]

ವೃತ್ತಿಜೀವನ

ಬದಲಾಯಿಸಿ

ಅನಿತಾ ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಪಂಜಾಬಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.[] ಎವರ್ಯುತ್, ಸನ್ಸಿಲ್ಕ್, ಬೊರೊಪ್ಲಸ್ ಮತ್ತು ಇತರ ಬ್ರಾಂಡ್ಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡ ನಂತರ, ಅವರು ಹಗಲಿನ ಧಾರವಾಹಿಯಾದ ಕಬಿ ಸೌತನ್ ಕಬಿ ಸಾಹೇಲಿಯಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ಅವರು ತಮಿಳು ಚಲನಚಿತ್ರ ಸಮುರಾಯ್ 2002 ರಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದರು ನಟನೆಗೆ ಪಾದರ್ಪಣೆ ಮಾಡಿದರು. ಅವರು 2003 ರ ಹಿಂದಿ ಥ್ರಿಲ್ಲರ್ ಚಲನಚಿತ್ರ ಕುಚ್ ತೊ ಹೈ ಮೂಲಕ ಚೊಚ್ಚಲ ಪ್ರವೇಶ ಮಾಡಿದರು. ನಂತರ ಅವರು ಕೃಷ್ಣ ಕಾಟೇಜ್, ಕೊಯಿ ಆಪ್ ಸ ನಂತಹ ಚಲನಚಿತ್ರಗಳಲ್ಲಿ ನಟಿಸಿದರು.[] ಅವರು ಕವ್ಯಾನ್ಜಾಲಿ ಧಾರವಾಹಿಯಲ್ಲಿ ಉದ್ಯಮಿ ಕುಟುಂಬಕ್ಕೆ ಮದುವೆಯಾದ ಮಧ್ಯಮ ವರ್ಗದ ಹುಡುಗಿಯ ಪಾತ್ರಧಾರಿ ಅಂಜಲಿ ಆಗಿ ಕಿರುತೆರೆಯಲ್ಲಿ ನಟಿಸಿದರು. ಅವರು ಬಾಲಿವುಡ್ ಚಲನಚಿತ್ರ ಮತ್ತು ಧಾರವಾಹಿಗಳಲ್ಲದೆ, ದಕ್ಷಿಣ ಭಾರತದ ಕೆಲವು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿ ನೇನು ಪೆಲ್ಲಿಕಿ ರೆಡಿ, ತೊಟ್ಟಿ ಗ್ಯಾಂಗ್ ಮತ್ತು ನುವು ನೇನು ಪ್ರಮುಖ. ಅವರು ತೆಲುಗು ಚಿತ್ರವಾದ ನೆನ್ನುನ್ನನು ಎಂಬ ಹಾಡಿನಲ್ಲಿ ಕಾಣಿಸಿಕೊಂಡರು. ಜಲಕ್ ದಿಖ್ಲಾಜಾ ಎಂಬ ರಿಯಾಲಿಟಿ ಶೋನಲ್ಲಿ 8 ನೇ ಋತುವಿನಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದರು.

ವೈಯಕ್ತಿಕ ಜೀವನ

ಬದಲಾಯಿಸಿ
 
ತನ್ನ ಪತಿಯೊಡನೆ ಅನಿತಾ

ಅನಿತಾ ಹಸನಂದಾನಿ ರೆಡ್ಡಿಯವರು 14 ಅಕ್ಟೋಬರ್ 2013 ರಂದು ಗೋವಾದಲ್ಲಿ ಕಾರ್ಪೊರೇಟ್ ವೃತ್ತಿಪರ ರೋಹಿತ್ ರೆಡ್ಡಿ ಅವರನ್ನು ವಿವಾಹವಾದರು.[೧೦]

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ
  • ತಾಲ್ 1999; ಹಿಂದಿ.[೧೧]
  • ನುವ್ವು ನೇನು 2001; ತೆಲುಗು, ವಸುಂಧರಾ ಎಂಬ ಪಾತ್ರದಲ್ಲಿ. [೧೨]
  • ವರುಶುಮೆಲ್ಲಮ್ ವಸಂತ 2002; ತಮಿಳು, ಲತಾ ಎಂಬ ಪಾತ್ರದಲ್ಲಿ.[೧೩]
  • ಸಮುರಾಯ್ 2002; ತಮಿಳು, ದಿವಾ ಎಂಬ ಪಾತ್ರದಲ್ಲಿ.
  • ಶ್ರೀರಾಮ್ 2002; ತೆಲುಗು, ಮಧುಲತಾ ಎಂಬ ಪಾತ್ರದಲ್ಲಿ.[೧೪]
  • ಥೋಟ್ಟಿ ಗ್ಯಾಂಗ್ 2002; ತೆಲುಗು, ವೆಂಕಟ ಲಕ್ಷ್ಮಿ ಎಂಬ ಪಾತ್ರದಲ್ಲಿ.
  • ಕುಚ್ ತೊ ಹೈ 2003; ಹಿಂದಿ, ನತಾಶಾ ಎಂಬ ಪಾತ್ರದಲ್ಲಿ.[೧೫]
  • ಯೇ ದಿಲ್ 2003; ಹಿಂದಿ, ವಸುಂಧರಾ ಯಾದವ್ ಎಂಬ ಪಾತ್ರದಲ್ಲಿ.[೧೬]
  • ನಿನ್ನೆ ಇಸ್ತಪ್ಪದಾನು 2003; ತೆಲುಗು, ಸಂಜನಾ / ಸಂಜು ಎಂಬ ಪಾತ್ರದಲ್ಲಿ.
  • ಆಧನೆ ಅಡೋ ಟೈಪ್ 2003; ತೆಲುಗು, ಬ್ರಿಂದಾ ಎಂಬ ಪಾತ್ರದಲ್ಲಿ.
  • ನೆನು ಪೆಲ್ಲಿಕಿ ರೆಡಿ 2003; ತೆಲುಗು, ಸಾವಿತ್ರಿ ಎಂಬ ಪಾತ್ರದಲ್ಲಿ.
  • ನನೂನ್ನನು 2004; ತೆಲುಗು, ವಿಶೇಷ ಪಾತ್ರದಲ್ಲಿ.
  • ಕೃಷ್ಣ ಕಾಟೇಜ್ 2004; ಹಿಂದಿ, ಶಾಂತಿ ಎಂಬ ಪಾತ್ರದಲ್ಲಿ.
  • ವೀರ ಕನ್ನಡಿಗ 2004; ಕನ್ನಡ.[೧೭]
  • ಸುಖ್ರಾನ್ 2005; ತಮಿಳು, ಸಂದ್ಯಾ ಎಂಬ ಪಾತ್ರದಲ್ಲಿ.
  • ಸಿಲ್ಸಿಲೈ 2005; ಹಿಂದಿ, ಪಿಯಾ ಎಂಬ ಪಾತ್ರದಲ್ಲಿ.
  • ಕೋಯಿ ಆಪ್ ಸಾ 2005; ಹಿಂದಿ, ಸಿಮ್ರಾನ್ / ಸಿಮಿ ಎಂಬ ಪಾತ್ರದಲ್ಲಿ.
  • ಡಸ್ ಕಹಾನಿಯಾನ್ 2007; ಹಿಂದಿ, ಸಿಮ್ರಾನ್ ಎಂಬ ಪಾತ್ರದಲ್ಲಿ.
  • ಎಕ್ ಸೆ ಬ್ಯೂರ್ ಡೂ 2009; ಹಿಂದಿ, ಪೇಲ್ ಎಂಬ ಪಾತ್ರದಲ್ಲಿ.
  • ಬೆನ್ನಿ ಮತ್ತು ಬಾಬ್ಲೂ 2010; ಹಿಂದಿ, ಇಶಾ / ಸರಿತಾ ಎಂಬ ಪಾತ್ರದಲ್ಲಿ.
  • ಆಹಾ ನಾ ಪೆಲ್ಲಂತಾ 2011; ತೆಲುಗು,
  • ರಾಗಿಣಿ ಎಂಎಂಎಸ್ 2 2014; ಹಿಂದಿ, ಗಿನಾ ಎಂಬ ಪಾತ್ರದಲ್ಲಿ.
  • ಯಾರನ್ ಡಾ ಕಚ್ಅಪ್ 2014; ಪಂಜಾಬಿ, ಸಿಮ್ರಾಟ್ ಎಂಬ ಪಾತ್ರದಲ್ಲಿ.[೧೮]
  • ಹೀರೋ 2015; ಹಿಂದಿ, ರಾಧಾಳ ನಾದಿನಿಯ ಪಾತ್ರದಲ್ಲಿ .[೧೯]
  • ಮನೋಲೋ ಓಕಕಾಡು 2016; ತೆಲುಗು , ಶ್ರಾವನಿ ಎಂಬ ಪಾತ್ರದಲ್ಲಿ.[೨೦]

ಪ್ರಶಸ್ತಿಗಳು

ಬದಲಾಯಿಸಿ
  • ೨೦೦೫ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗಳು - ಅತ್ಯುತ್ತಮ ನಟಿ - ಕವ್ಯಾನ್ಜಾಲಿ.[೨೧]
  • ೨೦೦೫ ಇಂಡಿಯನ್ ಟೆಲಿ ಪ್ರಶಸ್ತಿಗಳು - ಅತ್ಯುತ್ತಮ ಜೋಡಿ (ಇಜಾಜ್ ಖಾನ್ ಜೊತೆಯಲ್ಲಿ) - ಕವ್ಯಾನ್ಜಾಲಿ.[೨೨]
  • ೨೦೦೬ ಇಂಡಿಯನ್ ಟೆಲಿ ಪ್ರಶಸ್ತಿಗಳು - ಅತ್ಯುತ್ತಮ ನಟಿ - ಕವ್ಯಾನ್ಜಾಲಿ.
  • ೨೦೧೪ ಜೀ ಗೋಲ್ಡ್ ಪ್ರಶಸ್ತಿಗಳು - ಅತ್ಯುತ್ತಮ ನಟಿ (ನಕಾರಾತ್ಮಕ ಪಾತ್ರದಲ್ಲಿ) - ಯೆ ಹೈ ಮೊಹಬ್ಬತೇಯ್.
  • ೨೦೧೫ ಜೀ ಗೋಲ್ಡ್ ಪ್ರಶಸ್ತಿಗಳು - ಅತ್ಯುತ್ತಮ ನಟಿ (ನಕಾರಾತ್ಮಕ ಪಾತ್ರದಲ್ಲಿ) - ಯೆ ಹೈ ಮೊಹಬ್ಬತೇಯ್.[೨೩]
  • ೨೦೧೫ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗಳು - ಅತ್ಯುತ್ತಮ ನಟಿ (ನಕಾರಾತ್ಮಕ ಪಾತ್ರದಲ್ಲಿ) - ಯೆ ಹೈ ಮೊಹಬ್ಬತೇಯ್.
  • ೨೦೧೫ ಟೆಲಿವಿಷನ್ ಸ್ಟೈಲ್ ಪ್ರಶಸ್ತಿಗಳು - ಅತ್ಯಂತ ಸ್ಟೈಲಿಶ್ ವ್ಯಾಂಪ್ - ಯೆ ಹೈ ಮೊಹಬ್ಬತೇಯ್.[೨೪]
  • ೨೦೧೯ ಇಂಡಿಯನ್ ಟೆಲಿ ಪ್ರಶಸ್ತಿ - ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ -ನಾಗಿನ್ ೩ .[೨೫]

ಉಲ್ಲೇಖಗಳು

ಬದಲಾಯಿಸಿ
  1. "ಜನನ". Archived from the original on 2018-05-22. Retrieved 2018-05-28.
  2. "Personal information". Archived from the original on 2018-05-22. Retrieved 2018-05-28.
  3. Deccanchronicle Thursday, Jun 06, 2019 | Last Update : 11:11 PM IST
  4. ಭಾರತೀಯ ನಟಿ
  5. "ಜನನ". Archived from the original on 2018-05-22. Retrieved 2018-05-28.
  6. ಕಾವ್ಯಾಂಜಲಿ ಧಾರವಾಹಿ ಮೂಲಕ ಮನೆಮತಾದ ಅನಿತಾ
  7. Indiaforums
  8. Music Department
  9. ಚಲನಚಿತ್ರದಲ್ಲಿ ಅನಿತಾರವರ ಪಾತ್ರ
  10. Anita Hassanandani ties the knot with Rohit Reddy Times of India
  11. ತಾಲ್ ಸಿನಿಮಾದಲ್ಲಿ ನರ್ತಕಿಯಾಗಿ ಕಾಕಾಣಿಸಿಕೊಂಡ ಅನಿತಾ
  12. ಉದಯ್ ಕಿರಣ್ ರವರ ಜೊತೆ ವಸುಂಧರಾ ಪಾತ್ರದಲ್ಲಿ ಅನಿತಾ
  13. ವರುಶುಮೆಲ್ಲಮ್ ವಸಂತ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಅನಿತಾ
  14. ಮಧು ಪಾತ್ರದಲ್ಲಿ ಉದಯ್ ಕಿರಣ್ ರವರ ಜೊತೆ ಅನಿತಾ
  15. ಕುಚ್ ತೊ ಹೈ ಸಿನಿಮಾದಲ್ಲಿ ಅನಿತಾ
  16. ವಸುಂಧರಾ ಯಾದವ್ ಪಾತ್ರದಲ್ಲಿ ಅನಿತಾ
  17. ಪುನೀತ್ ರಾಜ್‍ಕುಮಾರ್ (ನಟ)ರವರ ಜೊತೆ ನಟಿಸಿದ ಅನಿತಾ
  18. ಸಿಮ್ರತ್ ಪಾತ್ರದಲ್ಲಿ ಅನಿತಾ
  19. ಹೀರೋ
  20. ಮನೋಲೋ ಓಕಕಾಡು
  21. Television Academy Awards 2015: Complete List Of Winners!April 06, 2016 11:01 AM IST
  22. Indiatoday
  23. International Business Times India International Business Times, India Edition
  24. Award-list
  25. Performance by an Actress in a Supporting Role Telly award winner