ಕನ್ನಡದ ಖ್ಯಾತ ಲೇಖಕರಾದ ಶ್ರೀ ಅನಂತ ಕಲ್ಲೋಳ ಇವರು ೧೯೩೭ ಮಾರ್ಚ ೨೪ರಂದು ತಮ್ಮ ತಾಯಿಯ ತವರೂರಾದ ಕೊಲ್ಲಾಪುರದಲ್ಲಿ ಜನಿಸಿದರು. ಇವರ ತಾಯಿ: ರಮಾಬಾಯಿ; ತಂದೆ: ಅಣ್ಣಾಜಿ.

ಶಿಕ್ಷಣ

ಬದಲಾಯಿಸಿ

ಅನಂತ ಕಲ್ಲೋಳರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಹಾಗು ಎಲ್.ಎಲ್.ಬಿ. ಪದವಿಯನ್ನು ಪಡೆದಿದ್ದಾರೆ.

ಉದ್ಯೋಗ

ಬದಲಾಯಿಸಿ

ಕೇಂದ್ರ ಅಬಕಾರಿ ಮತ್ತು ಸೀಮಾಶುಲ್ಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ೧೯೯೨ರಲ್ಲಿ ಅಸಿಸ್ಟಂಟ ಕಮಿಶನರ ಎಂದು ನಿವೃತ್ತಿ ಹೊಂದಿ, ಬೆಳಗಾವಿಯಲ್ಲಿ ನೆಲಸಿದ್ದಾರೆ.

ಸಾಹಿತ್ಯ

ಬದಲಾಯಿಸಿ

ಹಾಸ್ಯ ಸಂಕಲನ

ಬದಲಾಯಿಸಿ
  • ಬ್ರಹ್ಮ ಹಾಕಿದ ಗಂಟು
  • ರಾಜಾ ಪಾಯಿಂಟ್
  • ವೈಭೋಗದ ವೈಖರಿ
  • ತಾಮ್ರದ ಕಡಗ
  • ಹಗರಣ
  • ಕಂಡಲ್ಲಿ ಗುಂಡು
  • ತಂಡು ಮುಂಡು
  • ರೇಡಿಯೋದಿಂದ ವಿಡಿಯೋದವರೆಗೆ
  • ಮೂಗಿನ ತುದಿ
  • ಜೇನಿನ ಬಾಬು

ಚರಿತ್ರೆ

ಬದಲಾಯಿಸಿ
  • ಕನಕದಾಸರು
  • ರಾಮದಾಸರು
  • ಸ್ವಾತಂತ್ರ್ಯವಿರ ಸಾವರಕರ
  • ಧೋಂಡೊ ಕೇಶವ ಕರ್ವೆ
  • ಬೆಳಗಿನ ಬೆಳಗು

ಏಕಾಂಕ ನಾಟಕ

ಬದಲಾಯಿಸಿ
  • ಅದೇ ದಾರಿ
  • ಕುಂಟಕಾಲಿಗೆ ವೈದ್ಯ
  • ಕನ್ನಡ ಸಂಚು ೦೦೧

ಕಥಾಸಂಕಲನ

ಬದಲಾಯಿಸಿ
  • ಕ್ಯಾಕ್ಟಸ್
  • ಮೋಹಮತ್ಸರ
  • ಕರೆ

ವೈಚಾರಿಕ

ಬದಲಾಯಿಸಿ
  • ಚಿನ್ನ ನಿಯಂತ್ರಣ ಅಧಿನಿಯಮ
  • ಮಹಾಜನ ವರದಿ

ಅನುವಾದ

ಬದಲಾಯಿಸಿ
  • ಒಡೆಯನುಲಿದ ಪಾಡು (ಭಗವದ್ಗೀತೆಯ ಕನ್ನಡಾನುವಾದ)
  • ಗಾಂಧಿ ಮತ್ತು ಅಂಬೇಡಕರ (ಮೂಲ ಮರಾಠಿ)

ಸಂಪಾದನೆ

ಬದಲಾಯಿಸಿ
  • ಬೆಳಗಾವಿ ಕರ್ನಾಟಕ ಸಂಘ ಮತ್ತು ವಾಚನಾಲಯ ಸ್ಮರಣಸಂಚಿಕೆ
  • ಪ್ರಾ. ಪ್ರಹ್ಲಾದಕುಮಾರ ಭಾಗೋಜಿ ಸನ್ಮಾನ ಸಮಾರಂಭದ ಸ್ಮರಣ ಸಂಚಿಕೆ
  • ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದಶಮಾನೋತ್ಸವ ಸ್ಮರಣ ಸಂಚಿಕೆ: ಸದಭಿಮಾನ

ಪ್ರಶಸ್ತಿ, ಪುರಸ್ಕಾರ

ಬದಲಾಯಿಸಿ
  • ೧೯೯೩ರಲ್ಲಿ “ಹಗರಣ” ವಿನೋದ ಲೇಖನ ಸಂಕಲನಕ್ಕೆ ವರ್ಷದ ಶ್ರೇಷ್ಠ ವಿನೋದ ಸಾಹಿತ್ಯ ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ.
  • “ತಂಡ ಮುಂಡು” ಸಂಕಲನಕ್ಕೆ ಗೊರೂರು ಸ್ಮಾರಕ ಪ್ರಶಸ್ತಿ ಬಂದಿದೆ.
  • ೧೯೯೪ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಪ್ರಶಸ್ತಿ ದೊರೆತಿದೆ.
  • ೨೦೦೬ರಲ್ಲಿ “ಮಹಾಜನ ವರದಿ” ಪುಸ್ತಕಕ್ಕೆ ಶ್ರೀ ಎಸ್. ಎಮ್. ಕುಲಕರ್ಣಿ ಷಷ್ಟ್ಯಬ್ದಿ ಸ್ಮರಣೆಯ ಪುರಸ್ಕಾರ ದೊರೆತಿದೆ.
  • ೧೯೯೭ರಲ್ಲಿ ನಡೆದ ಚಿಕ್ಕೋಡಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನದ ಗೌರವ.

ವೈಯಕ್ತಿಕ

ಬದಲಾಯಿಸಿ

ಶ್ರೀ ಅನಂತ ಕಲ್ಲೋಳ ಇವರು ಬೆಳಗಾವಿಯಲ್ಲಿ ಕನ್ನಡದ ಕಟ್ಟಾಳು ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮಡದಿ ಶೋಭಾ. ಇವರಿಗೆ ಇಬ್ಬರು ಮಕ್ಕಳು. ಮಗ ನಾಗೇಶ ಇಂಜನಿಯರ ಆಗಿ, ಬೆಳಗಾವಿಯಲ್ಲಿಯೆ ಸ್ವಂತ ಉದ್ಯೋಗದಲ್ಲಿದ್ದಾರೆ. ಮಗಳು ನಿರ್ಮಲಾ ಮದುವೆ ಆಗಿ ಗೃಹಿಣಿಯಾಗಿದ್ದಾರೆ.