ಅದ್ನಾನಿಗಳು (ಅರಬ್ಬಿ: عدنانيون ಆಂಗ್ಲ: Adnanites) — ಇಷ್ಮಾಯೇಲಿ ಅರಬ್ಬರ ಬುಡಕಟ್ಟು ಒಕ್ಕೂಟಕ್ಕೆ ಸೇರಿದ, ಅಬ್ರಹಾಮರ ಮಗ ಇಷ್ಮಾಯೇಲ್‌ರ ವಂಶದ ಅದ್ನಾನ್ ಬಿನ್ ಉದದ್‌ರ ಸಂತತಿಗಳು. ಇವರನ್ನು ಅದ್ನಾನ್‌ರ ಸಂತತಿಗಳು ಎಂದು ಕೂಡ ಕರೆಯಲಾಗುತ್ತದೆ. ಮುಹಮ್ಮದ್ ಪೈಗಂಬರ್ ಈ ಸಂತತಿಯಲ್ಲಿ ಸೇರಿದ ಕುರೈಷ್ ಬುಡಕಟ್ಟಿನ ಬನೂ ಹಾಶಿಂ ಗೋತ್ರದವರಾಗಿದ್ದಾರೆ.

ಇತಿಹಾಸ

ಬದಲಾಯಿಸಿ

ಅರಬ್ ಐತಿಹ್ಯದ ಪ್ರಕಾರ, ಅರಬ್ಬರನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.

  • ನಾಶವಾದ ಅರಬ್ಬರು: ಇವರು ಸಂಪೂರ್ಣ ನಾಶವಾಗಿದ್ದು ಇವರ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ.
  • ಅರಬ್ಬೀಕರಣಗೊಂಡ ಅರಬ್ಬರು: ಇವರನ್ನು ಉತ್ತರ ಅರೇಬಿಯಾದವರು ಎಂದು ಕೂಡ ಕರೆಯಲಾಗುತ್ತದೆ. ಇವರು ಅಬ್ರಹಾಮರ ಮಗ ಇಷ್ಮಾಯೇಲ್‌ರ ವಂಶದವರು. ಅದ್ನಾನಿಗಳು ಈ ವಿಭಾಗದಲ್ಲಿ ಸೇರುತ್ತಾರೆ.
  • ಮೂಲ ಅರಬ್ಬರು: ಇವರನ್ನು ದಕ್ಷಿಣ ಅರೇಬಿಯಾದವರು ಎಂದು ಕೂಡ ಕರೆಯಲಾಗುತ್ತದೆ. ಕಹ್ತಾನಿಗಳು ಈ ವಿಭಾಗದಲ್ಲಿ ಸೇರುತ್ತಾರೆ. ಇವರು ಹೂದ್‌ರ ಸಂತತಿಗಳೆಂದು ಹೇಳಲಾಗುತ್ತದೆ.

ಇದನ್ನೂ ನೋಡಿ

ಬದಲಾಯಿಸಿ