ನಾಶವಾದ ಅರಬ್ಬರು (ಅರಬ್ಬಿ: العرب البائدة) ― ಅರೇಬಿಯನ್ ಪರ್ಯಾಯ ದ್ವೀಪದ ಮೂಲ ನಿವಾಸಿಗಳು. ಇವರ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದ್, ಸಮೂದ್, ತಸ್ಮ್, ಜದೀಸ್, ಉಮೈಮ್, ಒಂದನೇ ಜುರ್ಹುಂ, ಇಮ್ಲಾಕ್, ಮುಂತಾದ ಬುಡಕಟ್ಟುಗಳು ಈ ವಿಭಾಗದಲ್ಲಿ ಒಳಪಡುತ್ತದೆ.[][] ಇವರು ಅತ್ಯಂತ ಪ್ರಾಚೀನ ಅರಬ್ಬರಾಗಿದ್ದು ಸಂಪೂರ್ಣ ನಾಶವಾಗಿ ಹೋಗಿದ್ದಾರೆ. ಇವರ ಕುರುಹುಗಳು ಮತ್ತು ಸ್ಮರಣೆಗಳ ಹೊರತು ಬೇರೇನೂ ಬಾಕಿಯಾಗಿಲ್ಲ.

  • ಆದ್ ಬುಡಕಟ್ಟಿನವರು ಆದ್ ಬಿನ್ ಔಸ್ (Uz) ಬಿನ್ ಇರಮ್ (Aram) ಬಿನ್ ಸಾಮ್ (Sam) ಬಿನ್ ನೋಹ್ (Noah) ರ ಸಂತತಿಗಳು.
  • ಸಮೂದ್ ಬುಡಕಟ್ಟಿನವರು ಸಮೂದ್ ಬಿನ್ ಗಾಸಿರ್ (Gether) ಬಿನ್ ಇರಮ್ (Aram) ಬಿನ್ ಸಾಮ್ (Sam) ಬಿನ್ ನೋಹ್ (Noah) ರ ಸಂತತಿಗಳು.
  • ತಸ್ಮ್ ಬುಡಕಟ್ಟಿನವರು ತಸ್ಮ್ ಬಿನ್ ಲಾವಿಝ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು.
  • ಜದೀಸ್ ಬುಡಕಟ್ಟಿನವರು ಜದೀಸ್ ಬಿನ್ ಗಾಸಿರ್ ಬಿನ್ ಇರಮ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು.
  • ಉಮೈಮ್ ಬುಡಕಟ್ಟಿನವರು ಉಮೈಮ್ ಬಿನ್ ಲಾವಿಝ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು.

ಉಲ್ಲೇಖಗಳು

ಬದಲಾಯಿಸಿ
  1. Hitti, Philip K. (1970). History of the Arabs: From the Earliest Times to the Present (10th ed.). MacMillan Publishers. p. 30.
  2. ಪ್ರೊ. ಜವ್ವಾದ್ ಅಲಿ. The Detailed History of Arabs before Islam. Vol. 1. p. 295.