ಅತೀಶ ದೀಪಂಕರ
ಅತೀಶ ದೀಪಂಕರ (982-1054). ಟಿಬೆಟ್ಟಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಇವನ ಹೆಸರು ಚಿರಸ್ಥಾಯಿಯಾಗಿದೆ. ಬುದ್ಧ ಮತ್ತು ಪದ್ಮಸಂಭವರನ್ನು ಬಿಟ್ಟರೆ, ಇವನೇ ಅತ್ಯಂತ ಪ್ರತಿಭಾವಂತ ವ್ಯಕ್ತಿ.
ಅತೀಶ ದೀಪಂಕರ ಶ್ರೀಜ್ಞಾನ | |
---|---|
Born | 980 |
Died | 1054 Nyêtang, Tibet (now in China) |
Occupation | Buddhist teacher |
Known for | The major figure in the establishment of the Sarma lineages in Tibet. |
ಬಾಲ್ಯ ಮತ್ತು ಶಿಕ್ಷಣ
ಬದಲಾಯಿಸಿಈತ ಪೂರ್ವಭಾರತದಲ್ಲಿ ಜನಿಸಿದ.ಬುದ್ಧನಂತೆಯೇ ಇವನದೂ ಕೂಡಾ ರಾಜ ಮನೆತನ[೨].ತಂದೆ ಕಲ್ಯಾಣ ಶ್ರೀ ಎಂಬ ರಾಜ, ತಾಯಿ ಪ್ರಭಾವತಿ. ಬಾಲ್ಯದಿಂದಲೇ ಧಾರ್ಮಿಕ ವಿಷಯಗಳಲ್ಲಿ ಇವನಿಗೆ ವಿಶೇಷ ಆಸಕ್ತಿ ಇತ್ತು. ನಲಂದ ವಿಶ್ವವಿದ್ಯಾನಿಲಯದಲ್ಲಿ ಬೋಧಿಭದ್ರನಿಂದ ದೀಕ್ಷೆಪಡೆದ. ದೀಪಂಕರ ಶ್ರೀಜ್ಞಾನ ಎಂಬ ಹೆಸರಿನಿಂದ ಪ್ರಖ್ಯಾತನಾದ. ಅನಂತರ ವಜ್ರಾಸನ ಮಹಾವಿಹಾರಕ್ಕೆ ಹೋಗಿ ಶೀಲರಕ್ಷಿತನಲ್ಲಿ ವಿನಯಪಿಟಕಗಳ ಅಧ್ಯಯನವನ್ನು ನಡೆಸಿದ. ಆದರೂ ಅವನ ಜ್ಞಾನತೃಷೆ ಕಡಿಮೆಯಾಗಲಿಲ್ಲ. ಸುವರ್ಣದ್ವೀಪಕ್ಕೆ ಹೋಗಿ ಧರ್ಮಪಾಲನೆಂಬ ಪಂಡಿತನ ಆಶ್ರಯದಲ್ಲಿ ತಾಂತ್ರಿಕ ಗ್ರಂಥಗಳನ್ನು ಹನ್ನೆರಡುವರ್ಷ ಅಭ್ಯಾಸಮಾಡಿ, ಹಿಂದಿರುಗಿ ವಿಕ್ರಮಶೀಲ ವಿಶ್ವವಿದ್ಯಾನಿಲಯವನ್ನು ಸೇರಿದ.
ಬರವಣಿಗೆಗಳು
ಬದಲಾಯಿಸಿಜ್ಞಾನಪ್ರಭನೆಂಬ ವಿದ್ವಾಂಸನ ಆಶಯದಂತೆ ಟಿಬೆಟ್ಟಿಗೆ ಹೋಗಿ ಬೌದ್ಧಗ್ರಂಥಗಳನ್ನು ಸಂಪಾದಿಸುವ ಮತ್ತು ಭಾಷಾಂತರಿಸುವ ಮಹಾಕಾರ್ಯವನ್ನು ಕೈಗೊಂಡ. ಸಂಸ್ಕೃತದಿಂದ ಟಿಬೆಟ್ ಭಾಷೆಗೆ ಅನುವಾದ ಮಾಡಿರುವ ಇವನ ಗ್ರಂಥಗಳು ಕಾಂಜೂರ್ ಎಂಬ ಟಿಬೆಟ್ಟಿನ ತ್ರಿಪಿಟಕದಲ್ಲಿ ಸೇರಿವೆ. ಸಾಮ್ಯೆ ಎಂಬ ವಿಹಾರದಲ್ಲಿ ಅತ್ಯಮ್ಯೂಲವಾದ ಬೌದ್ಧಗ್ರಂಥಗಳ ಭಂಡಾರ ಸ್ಥಾಪಿತವಾಯಿತು. ಇಲ್ಲಿಯೇ ಕಾಲಚಕ್ರ ಎಂಬ ಬೃಹದ್ಗ್ರಂಥಕ್ಕೆ ವ್ಯಾಖ್ಯಾನವನ್ನು ಬರೆದ.
ಧರ್ಮ ಪ್ರಸಾರ
ಬದಲಾಯಿಸಿಟಿಬೆಟ್ಟಿನಲ್ಲಿ ಮೊದಲಿಂದ ಇದ್ದ ಭೂತಾರಾಧನೆಯ ಪಂಥದಿಂದ ಬೌದ್ಧಮತ ಖಿಲವಾಗುತ್ತಿದ್ದುದನ್ನು ಗಮನಿಸಿ ವಿನಯವೂ ಧರ್ಮವೂ ಉಳಿಯುವಂತೆ ಭಾರತೀಯ ದೃಷ್ಟಿಗನುಗುಣವಾದ ಆಚಾರ ವ್ಯವಹಾರಗಳನ್ನೊಳಗೊಂಡ ಮಠವೊಂದನ್ನು ಏರ್ಪಡಿಸಿದ. ಮೊದಲಿಗೆ ವಿನಯ ಪಂಥವೆಂದು ಹೆಸರುಗೊಂಡ ಈ ಶಾಖೆ ಕಾಲಾಂತರದಲ್ಲಿ ಪೀತಮುಕುಟಪಂಥವೆಂದು ಪ್ರಸಿದ್ಧವಾಯಿತು. ಈ ಶಾಖೆ ಟಿಬೆಟ್ಟಿನಲ್ಲಿ ಇಂದಿಗೂ ಇದೆ. ಮುಂದೆ ಮಾರ್ಪ, ಮಿಲರೇಪ ಎಂಬುವರು ಈ ಶಾಖೆಯನ್ನು ಬೆಳೆಸಿದರು. ಅತೀಶನಿಂದಾಗಿ ಬೌದ್ಧಮತದಲ್ಲಿ ಬ್ರಹ್ಮಚರ್ಯದ ಅನುಷ್ಠಾನ ಏರ್ಪಟ್ಟಿತಲ್ಲದೆ ತಾಂತ್ರಿಕವಿಧಿಗಳ ವಿಸರ್ಜನೆಯಾಯಿತು. ಅತೀಶ ಲ್ಹಾಸ ಬಳಿ ನೆಕಾಂಗ್ ಎಂಬಲ್ಲಿ ತೀರಿಕೊಂಡ. ಅಲ್ಲಿ ಅವರ ಸಮಾಧಿ ಇದೆ.
ಉಲ್ಲೇಖಗಳು
ಬದಲಾಯಿಸಿ- ↑ "Portrait of Atiśa [Tibet (a Kadampa monastery)] (1993.479)". Timeline of Art History. New York: The Metropolitan Museum of Art, 2000–. October 2006. Retrieved 2008-01-11.
- ↑ Maha-Bodhi Society, The Maha Bodhi, Volume 90, p. 238.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Bibliography of Atisha's works, Item 596 Archived 2021-11-13 ವೇಬ್ಯಾಕ್ ಮೆಷಿನ್ ನಲ್ಲಿ., Karl Potter, University of Washington
- Advice from Atiśa's Heart
- Atiśa Dipamkara on Banglapedia
- Tibetan Biography of Atiśa
- English Translation of Lamp to the Path of Enlightenment (by Dr. Alexander Berzin)
- Atiśa Dipankar Srijnan: Eye of Asia by Deba Priya Barua
- Atiśa's work in India and Tibet