ಅಣ್ಣೀಗೇರಿಯು ಧಾರವಾಡ ಜಿಲ್ಲೆಯ ಒಂದು ತಾಲೂಕಾಗಿದೆ. ಇದು ಹುಬ್ಬಳ್ಳಿ - ಗದಗ ಮಾರ್ಗದಲ್ಲಿದ್ದು, ಗದಗನಿಂದ ಪಶ್ಚಿಮಕ್ಕೆ ೨೦ ಕಿಮಿ ದೂರದಲ್ಲಿದ್ದು, ಹುಬ್ಬಳ್ಳೀಯಿಂದ ೩೫ ಕಿಮಿ ದೂರದ್ದಲ್ಲಿದೆ.

ಅಣ್ಣೀಗೇರಿಯು ಆದಿ ಕವಿ ಪಂಪನ ಜನ್ಮಸ್ಥಳವಾಗಿದ್ದು, ಬಳಪದ ಕಲ್ಲಿನಿಂದ ಕಲ್ಯಾಣಿ ಚಾಲುಕ್ಯರ ಕಾಲದ ಅಮೃತೇಶ್ವರ ದೇವಲಯವು ಇಲ್ಲಿದೆ. ಈ ದೇವಾಲಯದಲ್ಲಿ ೭೬ ಕಂಬಗಳಿವೆ.

ಇತಿಹಾಸ

ಬದಲಾಯಿಸಿ

ಹಿಂದೆ ಅಣ್ಣೀಗೇರಿಯು ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಪ್ರಮುಖ ಸ್ಥಳವಾಗಿತ್ತು. ಕಲಚೂರಿ ಕಲ್ಯಾಣಿ ರಾಜರ ಭಾಗವಾಗಿದ್ದ ಅಣ್ಣೀಗೇರಿಯನ್ನು ನಂತರದ ಕಾಲದಲ್ಲಿ ಚಾಲುಕ್ಯರು, ಸೇವುಣರು, ಮತ್ತು ಹೊಯ್ಸಳರು ಬೇರೆ ಬೇರೆ ಸಮಯದಲ್ಲಿ ವಶಪಡಿಸಿಕೊಂಡಿದ್ದರು.

ಅಣ್ಣೀಗೇರಿಯು ೧೧೮೪ರಿಂದ ೧೧೮೯ ರವರೆಗೆ ಚಾಲುಕ್ಯ ದೊರೆ ೪ನೇಯ ಸೋಮೇಶ್ವರನ ಕೊನೆಯ ರಾಜಧಾನಿಯಾಗಿತ್ತು.

ಕಲಚೂರಿ ಕಲ್ಯಾಣಿ ರಾಜ ಇಮ್ಮಡಿ ಬಿಜ್ಜಳನು ೧೧೫೭ ಬಸವ ಕಲ್ಯಾಣವನ್ನು ವಶಪಡಿಸಿಕೊಂಡನು, ೨೦ ವರ್ಷಗಳ ಕಾಲ ಬಸವ ಕಲ್ಯಾಣವು ಅವನ ವಶದಲ್ಲಿತ್ತು, ಆವಾಗ ಚಾಲುಕ್ಯರು ತಮ್ಮ ರಾಜಧಾನಿಯನ್ನು ಅಣ್ಣೀಗೇರಿಗೆ ಸ್ಥಳಾಂತರಿಸಿದರು.

ಪ್ರಾಥಮಿಕ ಮತ್ತು ವೇದ ಶಿಕ್ಷಣಕ್ಕಾಗಿ ಅಣ್ಣೀಗೇರಿಯಲ್ಲಿ ೫ ಬ್ರಹ್ಮಪುರಿಗಳಿದ್ದವು.

ಅಣ್ಣೀಗೇರಿ ಬುರುಡೆಗಳು

ಬದಲಾಯಿಸಿ

೨೦೧೦ರಲ್ಲಿ ಗಟಾರವೊಂದರ ನಿರ್ಮಾಣ ಸಮಯದಲ್ಲಿ, ೧೦೦ರಷ್ಟು ತೆಲೆ ಬುರುಡೆಗಳು ಸಿಕ್ಕವು. ಪ್ರಾಥಮಿಕ ವರದಿಗಳ ಪ್ರಕಾರ ೧೫೦ರಿಂದ ೨೦೦ ವರ್ಷಗಳ ಹಿಂದೆ ಆ ಸ್ಥಳದಲ್ಲಿ ಸಾಮೂಹಿಕ ಶವಸಂಸ್ಕಾರವನ್ನು ಮಾಡಿದ್ದಾರೆ ಅಥವಾ ಯುದ್ಧ ಭೂಮಿಯಾಗಿತ್ತು ಎಂದು ಊಹಿಸಲಾಗಿತ್ತು. ಈ ಆವಿಷ್ಕಾರದ ನಂತರ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳ ಪರೀಶಿಲನೆ ಮಾಡಿದ ನಂತರ, ಕರ್ನಾಟಕ ಸರಕಾರ ಹೆಚ್ಚಿನ ಉತ್ಖನನಕ್ಕಾಗಿ ಆದೇಶ ನೀಡಿತು. ಆ ಸಮಯದಲ್ಲಿ ೧೫.೬ ಮೀ * ೧.೭ಮೀ ವಿಸ್ತೀರ್ಣದಲ್ಲಿ ಉತ್ಖನನ ಮಾಡಿದಾಗ ೪೭೧ ತಲೆ ಬುರುಡೆಗಳು ಸಿಕ್ಕವು. ೨೦೧೧ರ ಸಮಯದಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ಐತಿಹಾಸಿಕ ದಾಖಲೆಗಳ ಪರಿಶೀಲನೆ Archived 2011-03-10 ವೇಬ್ಯಾಕ್ ಮೆಷಿನ್ ನಲ್ಲಿ. ಮುಂದುವರಿಸಿದ್ದು ಯಾವುದೇ ಸಾಮೂಹಿಕ ಶವಸಂಸ್ಕಾರ ಆದುದರ ಬಗ್ಗೆ ದಾಖಲೆಗಳನ್ನು ಹುಡುಕುತ್ತಿದ್ದಾರೆ.