ಅಣಕು ರಾಮನಾಥ್
ಈ ಲೇಖನವು ಅಪೂರ್ಣವಾಗಿದೆ. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಅಣಕು ರಾಮನಾಥ್ (24 ಏಪ್ರಿಲ್ 1962 -) ಎಂಬ ಕಾವ್ಯನಾಮದಿಂದ ಜನಪ್ರಿಯವಾಗಿರುವ ನರಸಿಂಹಮೂರ್ತಿ ರಾಮನಾಥ್ ಒಬ್ಬ ಹಿರಿಯ ಲೇಖಕ, ಹಾಸ್ಯಗಾರ, ಅಂಕಣಕಾರ ಪತ್ರಕರ್ತ, ವಿಮರ್ಶಕ, ಪ್ರಕಾಶಕ ಮತ್ತು ಅನುವಾದಕರಾಗಿ ಮುಖ್ಯವಾಗಿ ಕನ್ನಡ ಸಾಹಿತ್ಯ ಕ್ಷೇತ್ರ ಮತ್ತು ಪ್ರಕಾಶನ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಸುಧಾ, ವಿಜಯ ಕರ್ನಾಟಕ ಮತ್ತು ಅಪರಂಜಿ ಸೇರಿದಂತೆ ಹಲವಾರು ಪ್ರಮುಖ ಕನ್ನಡ ದೈನಿಕ, ಸಾಪ್ತಾಹಿಕ, ಮತ್ತು ಮಾಸಿಕ ಪತ್ರಿಕೆಗಳಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕನ್ನಡದಲ್ಲಿ ವಿಡಂಬನೆ, ಲಲಿತ ಪ್ರಬಂಧಗಳು, ಹಾಸ್ಯ ಅಂಕಣಗಳು ಮತ್ತು ಸಣ್ಣ ಕಥೆಗಳಲ್ಲದೇ ಅನೇಕ ಕಾದಂಬರಿಯೇತರ ಸಾಹಿತ್ಯದ ಪುಸ್ತಕಗಳನ್ನೂ ಬರೆದಿದ್ದಾರೆ.ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2020ರ ಪುರಸ್ಕೃತರಾಗಿದ್ದಾರೆ. ಅದೇ ವರ್ಷದ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಅಣಕು ರಾಮನಾಥ್ | |
---|---|
ಜನನ | ಬೆಂಗಳೂರು, ಬೆಂಗಳೂರು ನಗರ ಜಿಲ್ಲೆ, ಕರ್ನಾಟಕ, ಭಾರತ | ೨೪ ಏಪ್ರಿಲ್ ೧೯೬೨
ಕಾವ್ಯನಾಮ | ಅಣಕು ರಾಮನಾಥ್ |
ವೃತ್ತಿ | ಹಾಸ್ಯ ಸಾಹಿತಿಗಳು, ಕಥೆಗಾರರು, ಅನುವಾದಕರು, ಪ್ರಕಾಶಕರು, ಮತ್ತು ವಿಮರ್ಶಕರು |
ರಾಷ್ಟ್ರೀಯತೆ | ಭಾರತ |
ಪ್ರಕಾರ/ಶೈಲಿ | ಹಾಸ್ಯ ಸಾಹಿತ್ಯ, ಲಲಿತ ಪ್ರಬಂಧ, ಕಾದಂಬರಿಯೇತರ ಸಾಹಿತ್ಯ |
ವಿಷಯ | ಕನ್ನಡ |
ಸಾಹಿತ್ಯ ಚಳುವಳಿ | ಕನ್ನಡ ಪ್ರಗತಿಶೀಲ ಸಾಹಿತ್ಯ |
ಜನನ, ಜೀವನ
ಬದಲಾಯಿಸಿಸಾಹಿತ್ಯ
ಬದಲಾಯಿಸಿಇವರ ಕೃತಿಗಳು ತೇಜು ಪಬ್ಲಿಕೇಶನ್ಸ್ Archived 2023-10-09 ವೇಬ್ಯಾಕ್ ಮೆಷಿನ್ ನಲ್ಲಿ., ನ್ಯೂ ವೇವ್ ಬುಕ್ಸ್, ಸಪ್ನಾ ಬುಕ್ ಹೌಸ್ ಮತ್ತು ಶ್ರೀನಿವಾಸ ಪ್ರಕಾಶನದಡಿಯಲ್ಲಿ ಪ್ರಕಟಗೊಂಡಿವೆ. ಇವರು ಬರೆದ ಕೃತಿಗಳ ಪಟ್ಟಿ ಈ ಕೆಳಕಂಡಂತಿದೆ:
ಪದ್ಯ ಪ್ರಕಾರ
ಆಯ್ದ ಅಣಕವಾಡುಗಳು (ಸಂ)
ಕೇಸು ಸಾಗಲಿ
ಅಣಕ ಶತಕಂ
ಮಾಸದ ಅಣಕು ಗೀತೆಗಳು
ಅಣಕವಾಡಿನ ಅಂಗಳದಲ್ಲಿ
ಮಂಕುದಿಣ್ಣೆಯ ಕಗ್ಗ
ವಕ್ರೋಕ್ತಿ ವಿಲಾಸ
ಡುಂಡಿರಾಮ್ಸ್ ಲಿಮರಿಕ್ಸ್
ಗದ್ಯ ಪ್ರಕಾರ – ಹಾಸ್ಯ
ಅಯ್ಯೋ ಶಿವನೇ...
ಆಟೋಟೋಪ
ತುಂಟ ತೇಜು ನೂರೆಂಟು ಹೇಳಿದ
ಬೊಜ್ಜುಂ ಶರಣಂ ಗಚ್ಛಾಮಿ
ಹಾಸ್ಯವಲ್ಲರೀ
ನಿದ್ರಾಂಗನೆಯ ಸೆಳವಿನಲ್ಲಿ
ಗದ್ಯ – ಪ್ರಶ್ನಾಂಕಣ
ರಾಮ್ ಬಾಣ
ರಾಮ್ ಬಾಣ – 2
ಗದ್ಯ – ಅನುವಾದ
ದ್ರೌಪದಿಯ ಅಸ್ಮಿತೆ
ಹಸಿರು ಬಾಗಿಲು (ಓ ಹೆನ್ರಿಯ ಕಥೆಗಳ ಅನುವಾದ)
ಗದ್ಯ – ಅಂಕಣ
ಗರಮಾಗರಂ
ವೀಕೆಂಡ್ ವಿನೋದ
ಯಾಕೋ... ಏನೋ...
ಪ್ರಹಸನ ಸಂಕಲನ
ವಿನೋದರಂಗ ಅಥವಾ ಡ್ರಾಮಾರಾಮ
ಇಂಗ್ಲಿಷ್ನಲ್ಲಿ
Laugh lines
Off Track
Fun O’Rama
Visionary Statesman S.Nijalingappa
ಇವರ 60ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಇವರನ್ನು ಕುರಿತಾದ ಪನ್ ಡ್ರೈವ್ ಎಂಬ ಪುಸ್ತಕವನ್ನು ಹೊರತರಲಾಯಿತು.
ಪ್ರಶಸ್ತಿ ಪುರಸ್ಕಾರಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ
ಬಾಹ್ಯ ಕೊಂಡಿಗಳು
ಬದಲಾಯಿಸಿತೇಜು ಪಬ್ಲಿಕೇಶನ್ಸ್ Archived 2023-10-09 ವೇಬ್ಯಾಕ್ ಮೆಷಿನ್ ನಲ್ಲಿ.