ಅಡೂರು ಗೋಪಾಲಕೃಷ್ಣನ್

ಅಡೂರು ಗೋಪಾಲಕೃಷ್ಣನ್ ಭಾರತೀಯ ಚಿತ್ರರಂಗದ ಪ್ರಸಿದ್ಧ ಚಿತ್ರ ನಿರ್ದೇಶಕ. ಮಲೆಯಾಳ ಭಾಷೆಯಲ್ಲಿ ಉತ್ತಮ ಚಿತ್ರಗಳನ್ನು ನಿರ್ದೇಶಿಸಿ ಭಾರತದ ಅತ್ಯುತ್ತಮ ಚಿತ್ರ ನಿರ್ದೇಶಕರಲ್ಲಿ ಒಬ್ಬರು ಎಂಬ ಹೆಸರು ಪಡೆದವರು. ಹದಿನಾರು ಬಾರಿ ಉತ್ತಮ ನಿರ್ದೇಶಕ ಎಂಬ ರಾಷ್ಟ್ರೀಯ ಪ್ರಶಸ್ತಿ, ಹದಿನೇಳು ಬಾರಿ ಕೇರಳ ರಾಜ್ಯದ ಉತ್ತಮ ನಿರ್ದೇಶಕ ಪ್ರಶಸ್ತಿಗಳಲ್ಲದೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರಿಗೆ ೧೯೮೪ರಲ್ಲಿ ಪದ್ಮಶ್ರೀ, ೨೦೦೬ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ. ೨೦೦೪ರಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಕೂಡಾ ಇವರಿಗೆ ಸಿಕ್ಕಿದೆ.

ಡಾ. ಅಡೂರ್ ಗೋಪಾಲಕೃಷ್ಣನ್
ಅಡೂರ್ ಗೋಪಾಲಕೃಷ್ಣನ್
Born
ಮೌತತ್ತ್ ಗೋಪಾಲಕೃಷ್ಣನ್ ಉಣ್ಣಿತ್ತಾನ್

(೧೯೪೧-೦೭-೦೩)೩ ಜುಲೈ ೧೯೪೧
Other namesAdoor
Occupation(s)ನಿರ್ದೇಶಕ, ಚಿತ್ರಕಥಾ ಲೇಖಕ, ನಿರ್ಮಾಪಕ
Years active1965 – present
Parent(s)ಮಾಧವನ್ ಉಣ್ಣಿತ್ತಾನ್, ಗೌರಿ ಕುಞ್ಞಮ್ಮ
Websitehttp://www.adoorgopalakrishnan.com