ಅಡೀಡಸ್
Expression error: Unexpected < operator.
ಸಂಸ್ಥೆಯ ಪ್ರಕಾರ | Aktiengesellschaft (FWB: ADS, ADR:ಟೆಂಪ್ಲೇಟು:Pinksheets) |
---|---|
ಸ್ಥಾಪನೆ | ೧೯೨೪ as Gebrüder Dassler Schuhfabrik (registered in ೧೯೪೯)[೧] |
ಸಂಸ್ಥಾಪಕ(ರು) | Adolf Dassler |
ಮುಖ್ಯ ಕಾರ್ಯಾಲಯ | Herzogenaurach, Germany |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Herbert Hainer (CEO) Robin Stalker (CFO) Erich Stamminger (CEO, Adidas Brand) Igor Landau (Chairman of the supervisory board) |
ಉದ್ಯಮ | Clothing and consumer goods manufacture |
ಉತ್ಪನ್ನ | Footwear, sportswear, sports equipment, toiletries |
ಆದಾಯ | €೧೦.೩೮ billion (೨೦೦೯)[೨] |
ಆದಾಯ(ಕರ/ತೆರಿಗೆಗೆ ಮುನ್ನ) | €೫೦೮ million (೨೦೦೯)[೨] |
ನಿವ್ವಳ ಆದಾಯ | €೨೪೫ million (೨೦೦೯)[೨] |
ಉದ್ಯೋಗಿಗಳು | ೩೯,೬೦೦ (೨೦೦೯)[೨] |
ಜಾಲತಾಣ | www.adidas-group.com |
</ref>
ಅಡೀಡಸ್ AG ಅಡೀಡಸ್ AG FWB: ADS, ADR:ಟೆಂಪ್ಲೇಟು:Pinksheets) ಒಂದು ಜರ್ಮನ್ ಕ್ರೀಡಾ ವಸ್ತ್ರಗಳನ್ನು ತಯಾರಿಸುವ ಸಂಸ್ಥಯಾಗಿದೆ ಹಾಗೂ ಅಡೀಡಸ್ ಗುಂಪಿನ ಮೂಲ ಕಂಪನಿಯಾಗಿದೆ; ಈ ಗುಂಪಿನಲ್ಲಿರುವ ಇತರ ಕಂಪನಿಗಳೆಂದರೆ ರೀಬಾಕ್ ಕ್ರೀಡಾ ತೊಡುಗೆಗಳ ಕಂಪನಿ, ಗಾಲ್ಫ್ ಕಂಪನಿ (ಆಷ್ ವರ್ತ್ ಒಳಗೊಂಡು), ಮತ್ತು ರಾಕ್ ಪೋರ್ಟ್. ಕ್ರೀಡಾ ಪಾದರಕ್ಷಾ ತೊಡುಗೆಗಳಲ್ಲದೆ ಈ ಕಂಪನಿಯು ಇತರ ವಸ್ತುಗಳಾದ ಚೀಲಗಳು (ಬ್ಯಾಗ್ ಗಳು), ಅಂಗಿಗಳು, ಕೈಗಡಿಯಾರಗಳು, ನಯನತೊಡುಗೆಗಳು ಮತ್ತು ಇತರ ಕ್ರೀಡಾ ಹಾಗೂ ವಸ್ತ್ರ-ಸಂಬಂಧಿತ ವಸ್ತುಗಳನ್ನು ಉತ್ಪಾದಿಸುತ್ತದೆ. ಈ ಕಂಪನಿಯು ಯೂರೋಪ್ ನ ಅತಿ ದೊಡ್ಡ ಕ್ರೀಡಾಪೋಷಾಕುಗಳನ್ನು ತಯಾರಿಸುವ ಕಂಪನಿಯಾಗಿದ್ದು, ಅಮೆರಿಕದ ಪ್ರತಿಸ್ಪರ್ಧಿಯಾದ ನೈಕ್ ಕಂಪನಿಯ ಹೊರತಾಗಿ ಜಗತ್ತಿನ ಎರಡನೆಯ ಕ್ರೀಡಾಪೋಷಾಕುಗಳ ತಯಾರಿಕೆ ಕಂಪನಿಯಾಗಿದೆ.[೩] ಅಡೀಡಸ್ ಅನ್ನು ೧೯೪೮ರಲ್ಲಿ ಅಡಾಲ್ಫ್ "ಅಡೀ" ಡಸ್ಸ್ಲರ್ ಸ್ಥಾಪಿಸಿದರು; ಗೆಬ್ರೂಡರ್ ಡಸ್ಸ್ಲರ್ ಸ್ಖಹ್ ಫ್ಯಾಬ್ರಿಕ್ ಕಂಪನಿಯನ್ನು ತಾನು ತನ್ನ ಸಹೋದರ ರುಡಾಲ್ಫ್ ನೊಡನೆ ಹಂಚಿಕೊಂಡಾಗ ಈ ಕಂಪನಿಯನ್ನು ಆರಂಭಿಸಿದರು. ರುಡಾಲ್ಫ್ ನಂತರ ಪೂಮಾವನ್ನು ಸ್ಥಾಪಿಸಿದರು ಹಾಗೂ ಇದು ಅಡೀಡಸ್ ನ ಮೊದಲ ಪ್ರತಿಸ್ಪರ್ಧಿಯಾಗಿತ್ತು. ೧೯೪೯ರಲ್ಲಿ ನೋಂದಣಿಯಾದ ಅಡೀಡಸ್ ಈಗ ಪೂಮಾದೊಂದಿಗೆ ತನ್ನ ಮೂಲಕಚೇರಿಗಳನ್ನು ಜರ್ಮನಿಯ ಹರ್ಝೋಗೆನಾರಾಷ್ ನಲ್ಲಿ ಹೊಂದಿದೆ. ಈ ಕಂಪನಿಯ ವಸ್ತ್ರ ಮತ್ತು ಷೂ ವಿನ್ಯಾಸಗಳು ಮೂರು ಸಮಾನಾಂತರ ಕೋಲುಗಳ ಲಾಂಛನವನ್ನು ಹೊಂದಿರುತ್ತವೆ, ಹಾಗೂ ಅದೇ ಲಾಂಛನವನ್ನೇ ಅಡೀಡಸ್ ಕಂಪನಿಯ ಪ್ರಸ್ತುತ ಚಿಹ್ನೆಯಾಗಿ ಅಧೆಕೃತವಾಗಿ ಅಳವಡಿಸಿಕೊಳ್ಳಲಾಗಿದೆ. ಈ "ಮೂರು ಪಟ್ಟಿಗಳು" ಚಿಹ್ನೆಯನ್ನು ಫಿನ್ ಲ್ಯಾಂಡ್ ನ ಕಂಪನಿಯಾದ ಕರ್ಹು ಸ್ಪೋರ್ಟ್ಸ್ ನಿಂದ ೧೯೫೧ರಲ್ಲಿ ಕೊಳ್ಳಲಾಯಿತು.[೪][೫] ಈ ಕಂಪನಿಯ ಆದಾಯವು ೨೦೦೯ರಲ್ಲಿ €೧೦.೩೮ ಬಿಲಿಯನ್ ಮತ್ತು ೨೦೦೮ರಲ್ಲಿ €೧೦.೮೦ ಬಿಲಿಯನ್ ಆಗಿದ್ದಿತು.
ಇತಿಹಾಸ
ಬದಲಾಯಿಸಿಗೆಬ್ರೂಡರ್ ಡಸ್ಸ್ಲರ್ ಸ್ಖಹ್ ಫ್ಯಾಬ್ರಿಕ್
ಬದಲಾಯಿಸಿಅಡಾಲ್ಫ್ "ಅಡೂ" ಡಸ್ಸ್ಲರ್ ಮೊದಲನೆಯ ಮಹಾಯುದ್ಧದಿಂದ ಮರಳಿ ಬಂದ ನಂತರ ಬವಾರಿಯಾದ ಹೆರ್ಝೋಗೆನಾರಾಷ್ ನ ತನ್ನ ತಾಯಿಯ ಅಡಿಗೆ ಮನೆಯಲ್ಲಿ ತಮ್ಮದೇ ಆದ ಷೂಗಳ ಉತ್ಪಾದನೆಯನ್ನು ಆರಂಭಿಸಿದರು. ೧೯೨೪ರಲ್ಲಿ ಅವರ ಸಹೋದರ ರುಡಾಲ್ಫ್ "ರೂಡೀ" ಡಸ್ಸ್ಲರ್ ಈ ವ್ಯಾಪಾರಕ್ಕೆ ಕೈಜೋಡಿಸಿ Gebrüder Dassler Schuhfabrik (ಡಸ್ಸ್ಲರ್ ಬ್ರದರ್ಸ್ ಷೂ ಫ್ಯಾಕ್ಟರಿ )ಯ ಸ್ಥಾಪನೆಗೆ ಕಾರಣರಾದರು; ಕಂಪನಿ ಅಭಿವೃದ್ಧಿಯಾಯಿತು. ಇಬ್ಬರೂ ಸೇರಿ ಈ ವ್ಯಾಪಾರವನ್ನು ತಮ್ಮ ತಾಯಿಯ ದೋಭಿಖಾನೆ,[೬]: 5 ಯಲ್ಲಿ ಆರಂಭಿಸಿದರು, ಆದರೆ, ಆ ಕಾಲದಲ್ಲಿ ಆ ಪಟ್ಟಣದಲ್ಲಿ ವಿದ್ಯುತ್ ಸರಬರಾಜು ನಂಬಲರ್ಹವಲ್ಲವಾಗಿದ್ದುದರಿಂದ ಈ ಸಹೋದರರು ಕೆಲವೊಮ್ಮೆ ಒಂದು ಸೈಕಲ್ಲನ್ನು ಒಂದೆಡೆ ಸ್ಟ್ಯಾಂಡ್ ಹಾಕಿ ನಿಲ್ಲಿಸಿ, ಜೋರಾಗಿ ಪೆಡಲ್ ಒತ್ತಿ, ಪೆಡಲ್ ಒತ್ತಿದಾಗ ಹೊಮ್ಮುವ ಶಕ್ತಿಯನ್ನು ಬಳಸಿ ತಮ್ಮ ಸಾಧನಗಳನ್ನು ಚಾಲ್ತಿಯಲ್ಲಿಟ್ಟುಕೊಳ್ಳುತ್ತಿದ್ದರು.[೭] ೧೯೩೬ರ ಬೇಸಿಗೆ ಒಲಿಂಪಿಕ್ಸ್ ವೇಳೆಗೆ, ಅಡೀ ಡಸ್ಸ್ಲರ್ಬವಾರಿಯಾದಿಂದ ಜಗತ್ತಿನ ಮೊದಮೊದಲ ಹೆದ್ದಾರಿಗಳಲ್ಲಿ ಒಂದರ ಗುಂಟ ಸಾಗಿ ಒಲಿಂಪಿಕ್ಸ್ ವಿಲೇಜ್ ಅನ್ನು ತಲುಪಿದರು;ಅವರು ಅಲ್ಲಿಗೆ ಒಂದು ಸೂಟ್ ಕೇಸ್ ಭರ್ತಿ ಸ್ಪೈಕ್(ಷೂ ಗಳಭಾಗಕ್ಕೆ ಹಾಕುವ ಮೊಳೆ)ಗಳನ್ನು ತೆಗೆದುಕೊಂಡುಹೋಗಿದ್ದರು ಹಾಗೂ ಯು.ಎಸ್.ನ ಓಟಗಾರ ಜೆಸ್ಸೆ ಓವನ್ಸ್ ಗನ್ನು ಆ ಸ್ಪೈಕ್ ಗಳನ್ನು ಬಳಸಲು ಒತ್ತಾಯದಿಂದ ಒಪ್ಪಿಸಿದರು; ಇದು ಆಫ್ರಿಕನ್ ಅಮೆರಿಕನ್ ಒಬ್ಬರಿಗೆ ದೊರೆತ ಮೊಟ್ಟಮೊದಲ ಪ್ರಾಯೋಜಕತ್ವವಾಯಿತು. ಓವನ್ಸ್ ಆ ಒಲಿಂಪಿಕ್ಸ್ ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದರು, ಆ ಗೆಲುವು ಪ್ರಪಂಚದ ಖ್ಯಾತ ಕ್ರೀಡಾಪಟುಗಳ ಮೆಚ್ಚುಗೆಯನ್ನು ಖಾಯಮ್ಮಾಗಿ ಡಸ್ಸ್ಲರ್ ಷೂಗಳು ಪಡೆಯಲು ಸಹಕಾರಿಯಾಯಿತು. ಈ ಸಹೋದರರ ಟೇಬಲ್ ನ ಮೇಲೆ ಜಗತ್ತಿನ ಮೂಲೆ ಮೂಲೆಗಳಿಂದ ಪತ್ರಗಳು ಬರಲಾರಂಭಿಸಿದವು, ಇತರ ರಾಷ್ಟ್ರೀಯ ತಂಡಗಳ ತರಬೇತಿದಾರರು ಸಹ ಈ ಷೂಗಳ ಬಗ್ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲಾರಣಭಿಸಿದರು. ವ್ಯಾಪಾರ ಭರದಿಂದ ಸಾಗಿತು ಮತ್ತು ಡಸ್ಸ್ಲರ್ಸ್ ಎರಡನೆಯ ಮಹಾಯುದ್ಧದ ಮುಂಚೆಯವರೆಗೆ ಪ್ರತಿ ವರ್ಷ ೨೦೦,೦೦೦ ಜೊತೆ ಷೂಗಳನ್ನು ಮಾರುತ್ತಿದ್ದರು.[೮] ನಂತರ, ಎರಡನೆಯ ಮಹಾಯುದ್ಧದ ಸಮಯದಲ್ಲಿ ಈ ಷೂ ಕಂಪನಿಯು ಪಾಂಝೆರ್ಷ್ರೆಕ್ ಆಂಟಿ-ಟ್ಯಾಂಕ್ ಶಸ್ತ್ರಗಳನ್ನು ತಯಾರಿಸಲಾರಂಭಿಸಿತು.[೯]
ಇಬ್ಭಾಗವಾದ ಕಂಪನಿ
ಬದಲಾಯಿಸಿಸಹೋದರರಿಬ್ಬರೂ ನಾಝಿ ಪಕ್ಷವನ್ನು ಸೇರಿದರು, ಆದರೆ ರುಡಾಲ್ಫ್ ಪಾರ್ಟಿಗೆ ಅಡೀಗಿಂತಲೂ ಹೆಚ್ಚು ಸನಿಹದವರಾಗಿದ್ದರು. ಯುದ್ಧಕಾಲದಲ್ಲಿ ಈ ಸಹೋದರರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಇವರಿಬ್ಬರೂ ದೂರವಾಗುವ ಸನ್ನಿವೇಶವನ್ನು ತೊಂದೊಡ್ಡಿತು; ೧೯೪೩ರಲ್ಲಿ ಮಿತ್ರಸೇನೆಗಳು ಬಾಂಬ್ ಧಾಳಿಯಿಂದ ತಪ್ಪಿಸಿಕೊಳ್ಳಲು ಅಡೀ ಮತ್ತು ಅವರ ಹೆಂಡತಿ ಬಾಂಬ್ ನಿಂದ ತಪ್ಪಿಸಿಕೊಳ್ಳಲೆಂದೇ ಕಟ್ಟಿದ ಸುರಕ್ಷಾತಾಣವೊಂದರಲ್ಲಿ ನುಸುಳಿದರು, ಅದೇ ತಾಣದಲ್ಲಿ ರುಡಾಲ್ಫ್ ಮತ್ತು ಅವರ ಕುಟುಂಬವೂ ಆಗಲೇ ಸೇರಿತ್ತು: ಮಿತ್ರಸೇನೆಯ ವಿಮಾನಗಳನ್ನು ಕುರಿತೋ ಏನೋ ಅಡೀ "ಈ ಕೊಳಕು ಬೇವಾರಿಸ್ ಗಳು ಮತ್ತೆ ಬಂದರು" ಎಂದರು, ಆದರೆ ಅದನ್ನು ತಮ್ಮನ್ನು ಕುರಿತಾಗಿಯೇ ಅಡೀ ಹೇಳಿದುದು ಎಂದು ರುಡಾಲ್ಫ್ ಬಲವಾಗಿ ನಂಬಿಬಿಟ್ಟರು.[೧೦] ರುಡಾಲ್ಫ್ ರನ್ನು ನಂತರ ಅಮೆರಿಕದ ಸೈನಿಕರು ಬಂಧಿಸಿ ಅವರು ವಾಫೆನ್ SSನ ಸದಸ್ಯರೆಂದು ಆರೋಪ ಹೊರಿಸಿದಾಗ, ರುಡಾಲ್ಫ್ ಗೆ ತಮ್ಮ ಸಹೋದರನೇ ತಮ್ಮನ್ನು ಹಿಡಿದುಕೊಟ್ಟುಬಿಟ್ಟದ್ದೆಂಬ ಅಭಿಪ್ರಾಯ ಬಲವಾಗಿ ಬೇರೂರಿತು.[೭] ೧೯೪೭ರಲ್ಲಿ ಸಹೋದರರು ಬೇರೆಯಾದರು,[೧೧] ಹಾಗೂ
- ರೂಡಿ ಒಂದು ನೂತನ ಸಂಸ್ಥೆಯನ್ನು ಆರಂಭಿಸಿ ಅದನ್ನು ರುಡಾ ಎಂದು ಕರೆದರು – from ರು ರುಡಾಲ್ಫ್ ನಿಂದ ಮತ್ತು ಡಾ ಡಸ್ಸ್ಲರ್ ಇಂದು, ನಂತರ ಈ ಕಂಪನಿಗೆ ಪೂಮಾಎಂಬ ಹೆಸರನ್ನಿಡಲಾಯಿತು,
- ಮತ್ತು ಅಡೀ ಔಪಚಾರಿಕವಾಗಿ ಅಡೀಡಸ್ AG ಎಂದು(ಚಿಕ್ಕ ಅಕ್ಷರಗಳನ್ನು ಬಳಸಿದಂತಹ ಹೆಸರಿನಲ್ಲಿ)ನೋಂದಣಿಗೊಂಡ ಸಂಸ್ಥೆಯೊಂದನ್ನು ೧೮ ಆಗಸ್ಟ್ ೧೯೪೯ರಲ್ಲಿ ಸ್ಥಾಪಿಸಿದರು. ಆಂಗ್ಲದ ಅಡೀಡಸ್ ಎಂಬುದು ಹ್ರಸ್ವಗೊಳಿಸಲ್ಪಟ್ಟ ಆಲ್ ಡೇ ಐ ಡ್ರೀಮ್ ಅಬೌಟ್ ಸ್ಪೋರ್ಟ್/೧} ಎಂಬುದರ ಆದಿ ರೂಪವೆಂದು ಹೇಳಲಾಗುತ್ತದೆಯಾದರೂ, ಮೊದಲು ಅಡೀಡಸ್ ಎಂಬ ಹೆಸರನ್ನಿಟ್ಟು, ನಂತರ ಆ ಅಕ್ಷರಗಳಿಗೆ ಪದಗಳನ್ನು ಜೋಡಿಸಿರುವುದರಿಂದ ಇದನ್ನು ವಿಸ್ತರಿತನಾಮರೂಪ ವೆಂದೂ ಪರಿಗಣಿಸಲಾಗುತ್ತದೆ. ವಾಸ್ತವವಾದಿ ಈ ಹೆಸರು "ಅಡೀ" (ಅಡಾಲ್ಫ್ ನ ಅಡ್ಡಹೆಸರು) ಮತ್ತು "ಡಸ್" (ಡಸ್ಸ್ಲರ್ ನಿಂದ)ಗಳ ಜಾಮದಾನಿ(ಸಂಯುಕ್ತಪದ)ಯಾಗಿದೆ.[೧]
ಟಾಪೀ ವಿಷಯ
ಬದಲಾಯಿಸಿಈ sectionಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (October 2010) |
ಅಡಾಲ್ಫ್ ಡಸ್ಸ್ಲರ್ ರ ಮಗ ಹೋರ್ಸ್ಟ್ ಡಸ್ಸ್ಲರ್ ೧೯೮೭ರಲ್ಲಿ ಮಡಿದ ನಂತರದ ದಿನಗಳಲ್ಲಿ ಕಂಪನಿಯು ಬಹಳ ಕಷ್ಟದ ದಿನಗಳನ್ನು ಎದುರಿಸಬೇಕಾಗಿಬಂದಿತು ಹಾಗೂ ೧೯೮೯ರಲ್ಲಿ ಈ ಕಂಪನಿಯನ್ನು ಫ್ರೆಂಚ್ ಕೈಗಾರಿಕೋದ್ಯಮಿಯಾದ ಬರ್ನಾರ್ಡ್ ಟಾಪೀಯವರು ₣೧.೬ ಬಿಲಿಯನ್ (ಈಗ €೨೪೩.೯೧೮ ಮಿಲಿಯನ್) ಇತ್ತು ಕೊಂಡುಕೊಂಡರು; ಈ ಇಡೀ ಮೊತ್ತವನ್ನು ಅವರು ಸಾಲ ಮಾಡಿ ಪಡೆದಿದ್ದರು. ಟಾಪೀ ಆ ಕಾಲದಲ್ಲಿ ಪಾಪರ್ ಆದ ಕಂಪನಿಗಳನ್ನು ಉಳಿಸುವುದರಲ್ಲಿ ವಿಶೇಷ ಪರಿಣತಿ ಹೊಂದಿದ್ದರು ಹಾಗೂ ಈ ಪರಿಣತಿಯನ್ನು ಬಳಸಿ ಅಪಾರ ಐಶ್ವರ್ಯ ಮತ್ತು ಖ್ಯಾತಿಯನ್ನು ಗಳಿಸಿದ್ದರು. ಟಾಪೀ ಉತ್ಪಾದನಾ ವಿಭಾಗವನ್ನು ಕಡಲಾಚೆಯ ಏಷ್ಯಾಗೆ ವರ್ಗಾಯಿಸಲು ನಿರ್ಧರಿಸಿದರು. ಕಂಪನಿಯ ಉತ್ಪಾದನೆಗಳ ಪ್ರಚಾರಕ್ಕಾಗಿ ಅವರು ಮಡೋನಾ ರನ್ನೂ ನಿಯಮಿಸಿಕೊಂಡರು. ಅವರು ನ್ಯೂಝಿಲೆಂಡ್ ನ ಕ್ರೈಸ್ತ್ ಚರ್ಚ್ ನಿಂದ ಒಬ್ಬ ಷೂ ಮಾರಾಟ ಪ್ರತಿನಿಧಿಯನ್ನು ಜರ್ಮನಿಯಲ್ಲಿದ್ದ ಅಡಾಲ್ಫ್ ಡಸ್ಸ್ಲರ್ ರ ವಂಶದವರನ್ನು(ಅಮೇಲಿಯ ರಾಂಡಾಲ್ ಡಸ್ಸ್ಲರ್ ಮತ್ತು ಬೆಲ್ಲಾ ಬೆಕ್ ಡಸ್ಸ್ಲರ್)ಭೇಟಿಯಾಗಲು ಕಳುಹಿಸಿದರು; ಅವರು ಕಂಪನಿಯ ಪ್ರಚಾರಕಾರ್ಯಕ್ಕೆ ಅನುವಾಗುವಂತಹ ಕೆಲವು ವಸ್ತುಗಳನ್ನು ಪ್ರತಿನಿಧಿಯ ಕೈಗಿತ್ತು ಕಳುಹಿಸಿದರು. ೧೯೯೨ರಲ್ಲಿ, ಸಾಲದ ಬಡ್ಡಿಯನ್ನು ತೆರಲಾಗದೆ, ಟಾಪೀ ಕ್ರೆಡಿಟ್ ಲಿಯೋನಾಯಿಸ್ ಬ್ಯಾಂಕ್ ಗೆ ಅಡೀಡಸ್ ಕಂಪನಿಯನ್ನು ಮಾರಾಟ ಮಾಡುವ ಹಕ್ಕನ್ನು ಇತ್ತರು ಹಾಗೂ ಆ ಬ್ಯಾಂಕ್ ಇದ್ದ ಸಾಲವನ್ನು ಅದೇ ಕಂಪನಿಯ ಷೇರುಗಳಾಗಿ ಬದಲಾಯಿಸಿ ಷೇರುದಾರರಿಗೆ ಅದನ್ನು ಕೊಳ್ಳಲು ಆಹ್ವಾನ ನೀಡಿತು; ಇದು ಅಂದಿನ ಫ್ರ್ಯಾನ್ಸ್ ದೇಶದ ಬ್ಯಾಂಕಿಂಗ್ ಪದ್ಧತಿಯಲ್ಲಿ ರೂಢಿಯಲ್ಲಿಲ್ಲದಂತಹುದ್ದಾಗಿತ್ತು. ಪ್ರಾಯಶಃ ಆ ರಾಜ್ಯ-ಸ್ವಾಮ್ಯದ ಬ್ಯಾಂಕ್ ಟಾಂಪಿಯನ್ನು ಹೀನಾಯವಾದ ಆರ್ಥಿಕಮುಗ್ಗಟ್ಟಿನಿಂದ ಹೊರತರಲು ಅವರಿಗಾಗೆ ವಿಶೇಷ ಸವಲತ್ತುಗಳನ್ನು ಒದಗಿಸಿತೇನೋ; ಅದು ಹಾಗೆ ಮಾಡಲು ಆಗ ಟಾಪೀ ಫ್ರೆಂಚ್ ಸರ್ಕಾರದ ನಗರಾಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದ ಇಲಾಖೆಯ ಮಂತ್ರಿ(ಮಿನಿಸ್ಟರ್ ಡಿ ಲಾ ವಿಲ್ಲಾ)ಯಾಗಿದ್ದುದೇ ಕಾರಣ ಎಂದು ವರದಿ ಇದೆ. ಫೆಬ್ರವರಿ ೧೯೯೩ರಲ್ಲಿ ಕ್ರೆಡಿಟ್ ಲಿಯೋನಾಯಿಸ್ ಅಡೀಡಸ್ ಅನ್ನು ಬರ್ನಾರ್ಡ್ ಟಾಪೀಯ ಸ್ನೇಹಿತರಾದ ರಾಬರ್ಟ್ ಲೂಯಿಸ್-ಡ್ರೇಫಸ್ ರಿಗೆ ಟಾಪೀ ಬ್ಯಾಂಕ್ ಗೆ ನೀಡಬೇಕಿದ್ದ ಹಣಕ್ಕಿಂತಲೂ ಬಹಳವೇ ಹೆಚ್ಚಾದ ಮೊತ್ತವಾದ ೪.೪೮೫ ಬಿಲಿಯನ್ (€೬೮೩.೫೧೪ ಮಿಲಿಯನ್) ಫ್ರ್ಯಾಂಕ್ ಗಳಿಗೆ ಮಾರಾಟ ಮಾಡಿತು; ಸಾಲದ ಮೊತ್ತ ಇದ್ದದ್ದು ೨.೮೫ ಬಿಲಿಯನ್ (€೪೩೪.೪೭೯ ಮಿಲಿಯನ್). ಟಾಪೀ ತಾವು ಈ ನೇರವಲ್ಲದ ಮಾರಾಟದಿಂದ ತಾವು "ಹಾಳಾದಂತೆನ್ನಿಸುತ್ತಿದೆ" ಎನ್ನುತ್ತಾ ಬ್ಯಾಂಕ್ ನ ವಿರುದ್ಧ ದಾವೆ ಹೂಡಿದರು.[ಸೂಕ್ತ ಉಲ್ಲೇಖನ ಬೇಕು] ರಾಬರ್ಟ್ ಲೂಯಿಸ್-ಡ್ರೇಫಸ್ ಕಂಪನಿಯ ನೂತನ CEO ಆದರು. ಅವರು ಒಲಿಂಪಿಕ್ ಡಿ ಮಾರ್ಸಿಯೆಲ್ಲಿಯ ಅಧ್ಯಕ್ಷರೂ ಆಗಿದ್ದರು ಹಾಗೂ ಆ ತಂಡವೂ ೧೯೯೩ರವರೆಗೆ ಟಾಪೀಯವರ ಮಾಲಿಕತ್ವದಲ್ಲಿದ್ದಿತು.[ಸೂಕ್ತ ಉಲ್ಲೇಖನ ಬೇಕು] ೧೯೯೪ರಲ್ಲಿ ಟಾಪೀ ವೈಯಕ್ತಿಕ ಪಾಪರ್ ಚೀಟಿ ಗಾಗಿ ಅರ್ಜಿ ಸಲ್ಲಿಸಿದರು. ಅವರು ಹಲವಾರು ದಾವೆಗಳಿಗೆ ಗುರಿಯಾಗಿದ್ದರು, ಪ್ರಮುಖವಾಗಿ ಫುಟ್ ಬಾಲ್ ಕ್ಲಬ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ. ೧೯೯೭ರಲ್ಲಿ ಅವರು ಹದಿನೆಂಟು ತಿಂಗಳ ಜೈಲುಶಿಕ್ಷೆಯ ಪೈಕಿ ಅರು ತಿಂಗಳ ಕಾಲ ಲಾ ಸಾಂತೆ ಎಂಬ ಪ್ಯಾರಿಸ್ ನ ಸೆರೆಮನೆಯಲ್ಲಿ ಖೈದಿಯಾಗಿ ಕಳೆದರು. ೨೦೦೫ರಲ್ಲಿ ಫ್ರೆಂಚ್ ನ್ಯಾಯಾಲಯವು ಟಾಪೀಗೆ €೧೩೫ ಮಿಲಿಯನ್ ಅನ್ನು ಪರಿಹಾರಧನವಾಗಿ ನೀಡಿತು(ಸುಮಾರು ೮೮೬ ಮಿಲಿಯನ್ ಫ್ರ್ಯಾಂಕ್ ಗಳು).[ಸೂಕ್ತ ಉಲ್ಲೇಖನ ಬೇಕು]
ಟಾಪೀ ನಂತರದ ಯುಗ
ಬದಲಾಯಿಸಿ೧೯೯೪ರಲ್ಲಿ FIFA ಯುವ ತಂಡದೊಡನೆ ಸೇರಿದ SOS ಮಕ್ಕಳ ಗ್ರಾಮವು ಈ ಕಂಪನಿಯ ಪ್ರಮುಖ ದಾನಭೋಗಿಯಾಯಿತು. ೧೯೯೭ರಲ್ಲಿ ಅಡೀಡಸ್ AG ಸ್ಕೀ ತೊಡುಗೆಗಳನ್ನು ತಯಾರಿಸುವಲ್ಲಿ ವಿಶೇಷತೆ ಹೊಂದಿದ್ದ ಸಾಲ್ಮನ್ ಗ್ರೂಪ್ ಅನ್ನು ತನ್ನದಾಗಿಸಿಕೊಂಡು ಅದರ ಸಂಯುಕ್ತ ಅಧಿಕೃತ ಹೆಸರನ್ನು ಅಡೀಡಸ್-ಸಾಲ್ಮನ್ AG ಎಂದು ಬದಲಾಯಿಸಿತು; ಏಕೆಂದರೆ ಈ ಕೊಳ್ಳುವಿಕೆಯ ಜೊತೆಜೊತೆಗೇ ಅಡೀಡಸ್ ಟೈಲರ್ ಮೇಡ್ ಗಾಲ್ಫ್ ಕಂಪನಿ ಮತ್ತು ಮ್ಯಾಕ್ಸ್ ಫೀ ಗಳನ್ನೂ ಕೊಂಡಿತಾದ್ದರಿಂದ ನೈಕ್ ಗಾಲ್ಫ್ ನ ಪ್ರತಿಸ್ಪರ್ಧಿಯಾಗಲು ಇದು ಪೂರಕವಾಯಿತು. ೧೯೯೮ರಲ್ಲಿ ಅಡೀಡಸ್ NCAAಸಂಸ್ಥೆಯು ತಂಡದ ಸಮವಸ್ತ್ರಗಳು ಮತ್ತು ಉಡಿಗೆ ತೊಡುಗೆಗಳ ಮೇಲೆ ಇರುವ ಲಾಂಛನ(ಲೋಗೋ)ಗಳ ಸಂಖ್ಯೆ ಮತ್ತು ಪ್ರಮಾಣದ ಮೇಲೆ ಹೇರಿದ್ದ ಮಿತಿಯನ್ನು ವಿರೋಧಿಸಿ ಆ ಸಂಸ್ಥೆಯ ವಿರುದ್ಧ ದಾವೆ ಹೂಡಿತು. ಅಡೀಡಸ್ ಕೇಸ್ ಹಿಂತೆಗೆದುಕೊಂಡಿತು ಹಾಗೂ ಎರಡೂ ತಂಡಗಳು ಯಾವ ಮೂರು ಪಟ್ಟಿಗಳ ವಿನ್ಯಾಸಗಳು ಅಡೀಡಸ್ ನ ಲಾಂಛನವಾಗುವುವು ಎಂಬುದರ ಬಗ್ಗೆ ಚರ್ಚಿಸಿ ತನ್ಮೂಲಕ ರೂಪರೇಷೆಗಳನ್ನು ಸ್ಥಾಪಿಸಿದವು. ೨೦೦೩ರಲ್ಲಿ ಅಡೀಡಸ್ ಫಿಟ್ ನೆಸ್ ವರ್ಲ್ಡ್ ಟ್ರೇಡಿಂಗ್ ನವರು ಅಡೀಡಸ್ನ ಮೂರು ಪಟ್ಟಿಗಳಂತಹುದೇ ಆದ ಎರಡು ಪಟ್ಟಿಗಳ ಚಿಹ್ನೆಯನ್ನು ಬಳಸಿದುದನ್ನು ವಿರೋಧಿಸಿ ಬ್ರಿಟಿಷ್ ನ್ಯಾಯಾಲಯವೊಂದರಲ್ಲಿ ಕೇಸ್ ಹಾಕಿತು. ಫಿಟ್ ನೆಸ್ ವರ್ಲ್ಡ್ ನವರ ಚಿಹ್ನೆಯು ಸರಳವಾಗಿದ್ದೂ, ಆ ಚಿಹ್ನೆಯ ಬಳಕೆಯು ಉಲ್ಲಂಘನಾಕ್ರಮವಾಗುತ್ತದೆ, ಏಕೆಂದರೆ ಸಾರ್ವಜನಿಕರು ಅದು ಮತ್ತು ಅಡೀಡಸ್ ಬಳಸುವ ಚಿಹ್ನೆಗಳಿಗೆ ಸಂಬಂಧವಿದೆಯೆಂದು ಭಾವಿಸುತ್ತಾರೆ, ಎಂದು ನ್ಯಾಯಾಲಯ ತೀರ್ಪು ನೀಡಿತು.[೧೨] ಸೆಪ್ಟೆಂಬರ್ ೨೦೦೪ರಲ್ಲಿ ಪ್ರಮುಖ ಆಂಗ್ಲ ಫ್ಯಾಷನ್ ಡಿಸೈನರ್ ಆದ ಸ್ಟೆಲ್ಲಾ ಮೆಕಾರ್ಟ್ನೀ ಅಡೀಡಸ್ ನೊಂದಿಗೆ ಒಂದು ಜಂಟಿ-ವ್ಯವಹಾರವನ್ನು ಆರಂಭಿಸಿದರು ಹಾಗೂ ಈ ಕಂಪನಿಯೊಂದಿಗೆ ದೀರ್ಘಕಾಲಿಕ ಸಹಭಾಗಿತ್ವವನ್ನು ಸ್ಥಾಪಿಸಿದರು. ಈ ಉತ್ಪಾದನಾ ವಿಭಾಗವು ಪುರುಷರ ಕ್ರೀಡಾ ಪ್ರದರ್ಶನ ಸಂಗ್ರಹ(ಸಂಬಂಧಿತ ವಸ್ತುಗಳ)ವಾಗಿದ್ದು ಇದನ್ನು "ಅಡೀಡಸ್ ಬೈ ಸ್ಟೆಲ್ಲಾ ಮೆಕಾರ್ಟ್ನೀ"[೧೩] ಎಂದು ಕರೆಯಲಾಗುತ್ತದೆ ಮತ್ತು ಇದು ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದೆ.[೧೪] ೨೦೦೫ರಲ್ಲಿಯೇ, ಮೇ ೩ರಂದು, ಅಡೀಡಸ್ ತಮ್ಮ ಸಹಭಾಗಿತ್ವದಲ್ಲಿದ್ದ ಕಂಪನಿಯಾದ ಸಾಲ್ಮನ್ ಗ್ರೂಪ್ ಅನ್ನು €೪೮೫ಮಿಲಿಯನ್ ಗೆ ಫಿನ್ ಲ್ಯಾಂಡ್ ನ ಆಮೆರ್ ಸ್ಪೋರ್ಟ್ಸ್ ಗೆ ಮಾರಿರುವುದಾಗಿ ಸಾರ್ವಜನಿಕರಿಗೆ ತಿಳಿಸಿತು.
ಆಗಸ್ಟ್ ೨೦೦೫ರಲ್ಲಿ ಅಡೀಡಸ್ ತಮ್ಮ ಬ್ರಿಟಿಷ್ ಪ್ರತಿಸ್ಪರ್ಧಿಯಾದ ರೀಬಕ್ ಅನ್ನು $೩.೮ ಬಿಲಿಯನ್(US)ಗೆ ಕೊಳ್ಳುವ ಆಸಕ್ತಿ ತೋರಿಸಿತು. ಈ ಕೊಳ್ಳುವ ಪ್ರಕ್ರಿಯೆಯನ್ನು ೨೦೦೬ರಕ ಜನವರಿಯಲ್ಲಿ ಸಹಭಾಗಿಉತ್ವವನ್ನು ಕೈಗೊಳ್ಳುವ ಮೂಲಕ ಸಂಪೂರ್ಣಗಿಳಿಸಲಾಯಿತು[೧] ಹಾಗೂ ಇದರಿಂದ ಈ ಕಂಪನಿಯ ಉತ್ಪನ್ನಗಳು ಉತ್ತರ ಅಮೆರಿಕದಲ್ಲಿರುವ ನೈಕ್ ನ ಉತ್ಪನ್ನಗಳ ಮಾರಾಟಕ್ಕೆ ಪೈಪೋಟಿಯಾಗಿರಲು ಹತ್ತಿರದಲ್ಲಿಯೇ ಇರುವಂತಾಯಿತು. ಅಡೀಡಸ್ ನ ಈ ಸ್ವಾಮ್ಯವು ರೀಬಕ್ ನೈಕ್ ನೊಡನೆ ಜಗದಾದ್ಯಂತ ವಿಶ್ವದ ಎರಡನೆಯ ಅಥ್ಲೆಟಿಕ್ ಷೂ ತಯಾರಿಕಾ ಸಂಸ್ಥೆಯಾಗಿ ಪೈಪೋಟಿ ನಡೆಸುವಲ್ಲಿ ಸಹಕಾರಿಯಾಯಿತು.[೧೫] ಅಡೀಡಸ್ ನ ವಿಶ್ವ ಸಾಂಫಿಕ ಕೇಂದ್ರಕಚೇರಿಗಳು ಜರ್ಮನಿಯಲ್ಲಿವೆ ಹಾಗೂ ವಿಶ್ವದಾದ್ಯಂತ ಹಲವಾರು ವ್ಯಾಪಾರಗಳು ಸ್ಥಾಪಿತವಾಗಿದ್ದು ಪೋರ್ಟ್ ಲ್ಯಾಂಡ್ OR, ಹಾಂಗ್ ಕಾಂಗ್, ಟೊರೊಂಟೋ, ತೈವಾನ್, ಇಂಗ್ಲೆಂಡ್, ಜಪಾನ್, ಆಸ್ಟ್ರೇಲಿಯಾ ಹಾಗೂ ಸ್ಪೇಯ್ನ್ ಗಳಲ್ಲಿ ಇದರ ವ್ಯವಹಾರ ಕಚೇರಿಗಳಿವೆ. ಹೆಚ್ಚಿನ ವ್ಯಾಪಾರವನ್ನು ಯು.ಎಸ್.ನಲ್ಲಿ ಹೊಂದಿರುವ ಅಡೀಡಸ್ ಈ ದೇಶಗಳಿಂದ ಹೇರಳವಾದ ಆಸ್ತಿಗಳನ್ನು ಮಾಡಿಕೊಳ್ಳುತ್ತದೆ ಹಾಗೂ ಹೆಚ್ಚು ಹೆಚ್ಚು ಕಡಲಿನಾಚೆಯ ದೇಶಗಳಲ್ಲಿ ತನ್ನ ವಿಸ್ತಾರವನ್ನು ಸ್ಥಾಪಿಸುತ್ತಿದೆ. ೨೦೦೫ರಲ್ಲಿ ಅಡೀಡಸ್ ಮೈಕ್ರೋಪ್ರೋಸೆಸರ್ ಅನ್ನು ಬಳಸಿದ ಮೊದಲ ಉತ್ಪಾದನಾ ಷೂ ಆದ ಅಡೀಡಸ್ ೧ ಅನ್ನು ಪರಿಚಯಿಸಿತು. "ವಿಶ್ವದ ಮೊದಲ ಬುದ್ಧಿವಂತ ಷೂ" ಎಂದು ಕಂಪನಿಯು ಪ್ರಚಾರ ಮಾಡಿದ ಈ ಷೂನಲ್ಲಿ ಪ್ರತಿ ಸೆಕೆಂಡ್ ಗೆ ೫ ಮಿಲಿಯನ್ ಲೆಕ್ಕಾಚಾರಗಳನ್ನು ಮಾಡಲು ಸಾಮರ್ಥ್ಯವುಳ್ಳ ಮೈಕ್ರೋಪ್ರೋಸೆಸರ್ ಅಳವಡಿಸಲ್ಪಟ್ಟಿದ್ದು, ಅದು ಪರಿಸರಕ್ಕೆ ತಕ್ಕಂತೆ ಷೂನಲ್ಲಿರುವ ಮೆತ್ತೆ(ಕುಷನ್)ಯ ಮಟ್ಟವನ್ನು ಸ್ವಯಂ ಹೊಂದಿಸುತ್ತದೆ. ಈ ಷೂಗೆ ಚಿಕ್ಕದಾದ, ಗ್ರಾಹಕರೇ ಬದಲಾಯಿಸಿಕೊಳ್ಳಬಲ್ಲಂತಹ ಬ್ಯಾಟರಿಯ ಅಗತ್ಯವಿದ್ದು, ಆ ಬ್ಯಾಟರಿಯು ಸುಮಾರು ೧೦೦ ಗಂಟೆಗಳ ಓಟದವರೆಗೆ ಬಾಳಿಕೆ ಬರುತ್ತದೆ. ೨೫ ನವೆಂಬರ್ ೨೦೦೫ರಂದು ಅಡೀಡಸ್ ಅಡೀಡಸ್ ೧ನ ನೂತನ ವಿಧಾನದ ಷೂವನ್ನು ಬಿಡುಗಡೆಮಾಡಿತು; ಇದರಲ್ಲಿ ಮೆತ್ತೆಯ ವ್ಯಾಪಕತೆ ಹೆಚ್ಚಿದ್ದು, ಷೂ ಮೃದು ಅಥವಾ ಗಟ್ಟಿಯಾಗುವ ಅನುಕೂಲತೆಗಳಿದ್ದು, ಹೊಸ ಮೋಟಾರ್ ಒಂದು ಅಳವಡಿಸಲ್ಪಟ್ಟಿದ್ದು, ಇದರ ತಿರುಗುವಿಕೆಯ ಸಾಮರ್ಥ್ಯವು ಬೇರೆಯದಕ್ಕಿಂತಲೂ ೧೫೩% ಹೆಚ್ಚಿನದ್ದಾಗಿದೆ.[ಸೂಕ್ತ ಉಲ್ಲೇಖನ ಬೇಕು] ೧೧ ಏಪ್ರಿಲ್ ೨೦೦೬ರಂದು ಅಡೀಡಸ್ NBAಗೆ ಹನ್ನೊಂದು ವರ್ಷಗಳ ಕಾಲ ಉಡುಗೆತೊಡುಗೆಗಳನ್ನು ತಯಾರಿಸಿ, ಸರಬರಾಜು ಮಾಡುವ ಮೊದಲ ಕಂಪನಿ ತಾವಾಗಿರುವುದಾಗಿ ಘೋಷಿಸಿತು. ಅಡೀಡಸ್e NBA, NBDL, ಮತ್ತು WNBA ಜರ್ಸೀಗಳನ್ನು ಹಾಗೂ "ಸೂಪರ್ ಸ್ಟಾರ್" ಬ್ಯಾಸ್ಕೆಟ್ ಬಾಲ್ ಷೂಗಳ ತಂಡಗಳ ಆಧಾರಿತ ಬಣ್ಣದ ಕ್ರೀಡಾ ಉತ್ಪನ್ನಗಳನ್ನು ಹೊರತರಲಿದೆ. ಈ ಒಪ್ಪಂದವು ($೪೦೦ಮಿಲಿಯನ್ ಗಿಂತಲೂ ಹೆಚ್ಚಿನ ಮೌಲ್ಯದ್ದು) ೧೦೦೧ರಲ್ಲಿ ಹತ್ತು ವರ್ಷಗಳ ಕಾಲ ಮಾಡಿಕೊಂಡಿದ್ದ ರೀಬಕ್ ಒಪ್ಪಂದದ ಸ್ಥಾನವನ್ನಲಂಕರಿಸಿದೆ.
ಉತ್ಪನ್ನಗಳು
ಬದಲಾಯಿಸಿಓಟ
ಬದಲಾಯಿಸಿಅಡೀಡಸ್ ಪ್ರಸ್ತುತದಲ್ಲಿ ಹಲವಾರು ಓಟದ ಷೂಗಳನ್ನು ತಯಾರಿಸುತ್ತಿದ್ದು, ಅವುಗಳ ಪೈಕಿ ಅಡೀಸ್ಟಾರ್ ಕಂಟ್ರೋಲ್ ೫, ಅಡೀಸ್ಟಾರ್ ರೈಡ್ (ಅಡೀಸ್ಟಾರ್ ಕುಷನ್ ೬ರ ಬದಲಿಗೆ), ಸೂಪರ್ನೋವಾ ಸರಣಿ (ಸೂಪರ್ನೋವಾ ಕಂಟ್ರೋಲ್ ೧೦ರ ಬದಲಿಗೆ), ಮತ್ತು ಸೂಪರ್ನೋವಾ ಕುಷನ್ ೭ (ಇದರ ಸ್ಥಾನವನ್ನು ಶೀಘರದಲ್ಲೇ ಸೂಪರ್ನೋವಾ ಗ್ಲೈಡ್ ತುಂಬಲಿದೆ),ಹಾಗೂ ಮತ್ತಷ್ಟು ಉತ್ಪನ್ನಗಳಿವೆ. ಅಲ್ಲದೆ ಈ ಕಂಪನಿಯ ಪ್ರದರ್ಶನ ಉಡುಗೆತೊಡುಗೆಗಳನ್ನು (ಆಡುವ ತೊಡುವಂತಹುದನ್ನು) ಹಲವಾರು ಓಟಗಾರರು ಬಳಸುತ್ತಾರೆ. ಅಡೀಡಸ್ ತನ್ನ ಹೆಚ್ಚು ಬೆಲೆ ಬಾಳುವ ಷೂಗಳನ್ನು ತಯಾರಿಸಲು ಕಾಂಗರೂ ಚರ್ಮವನ್ನು ಸಹ ಬಳಸುತ್ತದೆ.[೧೬][೧೭]
ಫುಟ್‌ಬಾಲ್ (ಸಾಕರ್)
ಬದಲಾಯಿಸಿಅಡೀಡಸ್ ನ ಪ್ರಮುಖ ಕೇಂದ್ರೀಕರಣಗಳಲ್ಲಿ ಫುಟ್ ಬಾಲ್ ಕಿಟ್ ಮತ್ತು ತತ್ಸಂಬಂಧಿತ ಉಪಕರಣಗಳ ತಯಾರಿಕೆಯೂ ಒಂದು. ಅಡೀಡಸ್ ಮೇಜರ್ ಲೀಗ್ ಸಾಕರ್ ನ ಎಲ್ಲಾ ತಂಡಗಳಿಗೂ ಉಡುಗೆತೊಡುಗೆಗಳನ್ನು ಮತ್ತು ಉಪಕರಣಗಳನ್ನು ಒದಗಿಸುತ್ತದೆ. ಅಡೀಡಸ್ ಅಂತರರಾಷ್ಟ್ರೀಯ ಫುಟ್ ಬಾಲ್ ತಂಡಗಳಿಗೆ ಟೀಂ ಕಿಟ್ ಗಳನ್ನು ಸರಬರಾಜು ಮಾಡುವ ಅಗ್ರ ಕಂಪನಿಯಾಗಿಯೇ ಮುಂದುವರಿದಿದೆ. ಅಡೀಡಸ್ ರೆಫರಿ (ಅಂಪೈರ್) ಕಿಟ್ ಗಳನ್ನು ಸಹ ತಯಾರಿಸುತ್ತದೆ ಹಾಗೂ ಇವನ್ನು ಅಂತರರಾಷ್ಟ್ರೀಯ ಸ್ಪರ್ಧೆಗಳು ಹಾಗೂ ಹಲವಾರು ದೇಶಗಳು ಮತ್ತು ಲೀಗ್ ಗಳಲ್ಲಿ ಬಳಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ, ಮೂಲ ರೆಫರಿ ಉಡುಗೆತೊಡುಗೆಗಳ ಸರಬರಾಜುದಾರರು ಅಫಿಷಿಯಲ್ ಸ್ಪೋರ್ಟ್ಸ್ ಆಗಿದ್ದರೂ ಸಹ, ರೆಫರಿಗಳು ಅಡೀಡಸ್ ಕಿಟ್ ಗಳನ್ನು MLS ಪಂದ್ಯಗಳಲ್ಲಿ ಧರಿಸುತ್ತಾರೆ. ಈ ಕಂಪನಿಯು ಕ್ರೀಡಾಕ್ಷೇತ್ರದಲ್ಲಿ ಪಾದರಕ್ಷೆಗಳ ಕ್ಷೇತ್ರದಲ್ಲಿ ಹಲವಾರು ಆವಿಷ್ಕಾರಗಳನ್ನು ಪರಿಚಯಿಸಿದ್ದು, ಗಮನಾರ್ಹವಾದ ಕೊಡುಗೆಗಳನ್ನು ನೀಡಿದ್ದು, ಅವುಗಳಲ್ಲಿ ಒಂದು ಆವಿಷ್ಕಾರವಾದ ಕೋಪಾ ಮೂನ್ ಡೈಯಲ್ ಮೌಲ್ಡೆಡ್ ಬೂಟುಗಳು ಸುಮಾರು ನಲವತ್ತು ವರ್ಷಗಳಿಂದಲೂ ಗಟ್ಟಿಯಾದ ಶುಷ್ಕ ಪಿಚ್ ಗಳಲ್ಲಿ ಪಂದ್ಯಗಳನ್ನಾಡುವಾಗ ಬಳಸಲಾಗುತ್ತಿವೆ. ಸ್ಟಡ್ ಗಳುಳ್ಳ ಇದಕ್ಕೆ ಸಮನಾದ ಷೂಗಳನ್ನು ಅರ್ಜೆಂಟೀನಾ ಗೆದ್ದಂತಹ ೧೯೭೮ರ ಪಂದ್ಯಾವಳಿಯ ಸಂಭ್ರಮವನ್ನು ಆಚರಿಸುವ ಸಲುವಾಗಿ ವರ್ಲ್ಡ್ ಕಪ್ ಎಂದು ಹೆಸರಿಸಲಾಯಿತು; ಅರ್ಜೆಂಟೀನಾ ಆಗ ಅಡೀಡಸ್ ಸರಬರಾಜು ಮಾಡುತ್ತಿದ್ದ ದೇಶಗಳಲ್ಲಿ ಒಂದಾಗಿತ್ತು. ಪ್ರಸ್ತುತದಲ್ಲಿ ಬಹಳ ಪ್ರಸಿದ್ಧವಾದ ಕೆಲಚು ಫುಟ್ ಬಾಲ್ ತಂಡಗಳಿಗೆ ಅಡೀಡಸ್ ಪ್ರಾಯೋಜಕವಾಗಿದೆ. ಮಾಜಿ ಲಿವರ್ ಪೂಲ್ ಮತ್ತು ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ಮಟ್ಟದ ಆಟಗಾರರಾದ ಕ್ರೈಗ್ ಜಾನ್ ಸ್ಟನ್ ಅಭಿವೃದ್ಧಿಗೊಳಿಸಿದ ಪ್ರಿಡೇಟರ್ ಬೂಟ್ ವಿನ್ಯಾಸವನ್ನು ವೃದ್ಧಿಗೊಳಿಸಿದುದಕ್ಕಾಗಿ ಅಡೀಡಸ್ ಖ್ಯಾತಿ ಪಡೆಯಿತು. ಈ ವಿನ್ಯಾಸವು ಕೊಡೆಕಡ್ಡಿಯಂತಹ ರಬ್ಬರ್ ರಚನೆಯನ್ನು ಷೂನ ಮೇಲ್ಭಾಗದ ತೊಗಲಿನಲ್ಲಿ ಹೊಂದಿದ್ದು, ಚೆಂಡನ್ನು ಒದ್ದಾಗ ಅದರ ಚಲನೆಯನ್ನು ಹೆಚ್ಚುಸುವಲ್ಲಿ ಅದು ಸಹಕಾರಿಯಾಗುತ್ತಿತ್ತು; ಶ್ರೇಷ್ಠ ಕೌಶಲವಿರುವ ಆಟಗಾರರು ಚೆಂಡಿನ ಹಾರುವಿಕೆಯ ಗತಿಯನ್ನು ವಕ್ರಪಥದಲ್ಲಿ ಕಳುಹಿಸಲು ಈ ಹೊಸ ವಕ್ರತೆಯ ವಿನ್ಯಾಸದ ಷೂವನ್ನು ಧರಿಸಿದಾಗ ಹೆಚ್ಚು ಸುಲಭವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.[ಸೂಕ್ತ ಉಲ್ಲೇಖನ ಬೇಕು]ಪ್ರಿಡೇಟರ್ ನ ಪ್ರಮುಖ ಲಕ್ಷಣಗಳಲ್ಲಿ ಕ್ರೈಗ್ ಜಾನ್ ಸ್ಟನ್ ಸಂಶೋಧಿತ ಟ್ರಾಕ್ಸಿಯಾನ್ ಸೋಲ್ ಸಹ ಪ್ರಮುಖವಾದುದು. FIFA, ವಿಶ್ವದ ಫುಟ್ ಬಾಲ್ ನಿಯಾಮಕ ಸಂಸ್ಥೆಯು, ತನ್ನದೇ ಆದ ವರ್ಲ್ಡ್ ಕಪ್ ಪಂದ್ಯಾಗಳಿಗಳಲ್ಲಿ ಬಳಸಲು ಹೆಚ್ಚಿನ ಆಕ್ರಮಣಕಾರಿ ಆಟಕ್ಕೆ ಅನುಕೂಲವಾಗುವಂತಹ ಪುಟ್ ಬಾಲ್ ಗಳನ್ನು ತಯಾರಿಸಲು ಈ ಕಂಪನಿಯನ್ನು ನಿಯಮಿಸಿಕೊಂಡಿತು. ೨೦೦೬ ವರ್ಲ್ಡ್ ಕಪ್ಗೆ ಒದಗಿಸಲಾದ ಚೆಂಡುಗಳಾದ ಟೀಂಜೀಸ್ಟ್ ಚೆಂಡುಗಳು ಒದ್ದಾಗ ಮುಂಚಿನ ಚೆಂಡುಗಳಿಗಿಂತಲೂ ಹೆಚ್ಚು ದೂರ ಕ್ರಮಿಸುವ ಸಾಮರ್ಥ್ಯದಿಂದ ಎಲ್ಲರ ಗಮನ ಸೆಳೆದವು; ಇದರಿಂದ ಹೆಚ್ಚು ದೂರದಿಂದ ಗೋಲ್ ಹೊಡೆಯುವುದು ಸಾಧ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗೋಲ್ ಗಳನ್ನು ಹೊಡೆಯುವಂತಾಗುವುದೇ ಇದರ ಮುಖ್ಯ ಉದ್ದೇಶವಾಗಿತ್ತು. ಆದರೆ ಈ ವಿನ್ಯಾಸದ ಚೆಂಡುಗಳು ಗೋಲ್ ಕೀಪರ್ ಗಳಿಗೆ ತ್ರಾಸದಾಯಕವಾಗಿದ್ದವು; ಈ ಚೆಂಡುಗಳು ಗಮನಾರ್ಹವಾಗಿ ಚಲಿಸುತ್ತವೆ ಮತ್ತು ಅವುಗಳು ಹಾರಿಬರುವ ದಿಕ್ಕು ಅನಿರ್ದಿಷ್ಟವಾಗಿರುತ್ತದೆ ಎಂಬುದು ಅವರ ಅಭಿಮತವಾಗಿತ್ತು. ಅಡೀಡಸ್ ೨೦೧೦ ವರ್ಲ್ಡ್ ಕಪ್ ಗಾಗಿ ಮತ್ತೊಂದು ಚೆಂಡನ್ನು ಸಹ ಪರಿಚಯಿಸಿತು.. ಜಬುಲಾನಿ ಎಂದು ಹೆಸರಿಸಿದ ಈ ಚೆಂಡನ್ನು ಲೂಬೊರೋ ವಿಶ್ವವಿದ್ಯಾಲಯದವರು ಚೆಲೆಸಾ FCಯೊಂದಿಗೆ ಸೇರಿ ವಿನ್ಯಾಸಗೊಳಿಸಿ, ಅಭಿವೃದ್ಧಿಗೊಳಿಸಿದರು. ಈ ಚೆಂಡು ಆಟಗಾರರು, ವ್ಯವಸ್ಥಾಪಕರು ಮತ್ತು ಪರಿಣಿತರಿಂದ 'ಹತೋಟಿಯಲ್ಲಿಟ್ಟುಕೊಳ್ಳಲು ಬಹಳ ಕಷ್ಟ' ಎಂಬ ಟೀಕೆಗೆ ಗುರಿಯಾಯಿತು. ಈ ಹಗುರವಾದ ಮತ್ತು ಗಾಳಿಯಲ್ಲಿ ಹೆಚ್ಚು ತೇಲುವಂತಹ ಚೆಂಡು ಹಲವಾರು ಷಾಟ್ ಗಳು ಮತ್ತು ಪಾಸ್ ಗಳು ಉದ್ದೇಶಿತ ದೂರಕ್ಕಿಂತಲೂ ಹೆಚ್ಚು ದೂರ ಸಾಗಿ ಒದೆತಗಳು ವ್ಯರ್ಥವಾಗುವಂತಾಗಿಸುತ್ತಿತ್ತು. ದೂರದಿಂದ ಹೊಡೆಯಲ್ಪಡುವ ಗೋಲ್ ಗಳ ಸಂಖ್ಯೆ ಬಹಳ ಕಡಿಮೆಯಾದುದಕ್ಕೂ, ಪಂದ್ಯಾವಳಿಯ ಆರಂಭಿಕ ಹೊಡೆತಗಳೇ ಕರಾರುವಾಕ್ಕಾಗಿರದೆ ಗುರಿ ತಪ್ಪುವಂತಾಗಲು ಈ ಚೆಂಡುಗಳೇ ಕಾರಣವೆಂದು ಜಬುಲಾನಿ ಚೆಂಡುಗಳು ವ್ಯಾಪಕವಾಗಿ ನಿಂದೆಗೊಳಗಾದವು. ಮೇಲೆ ಉಲ್ಲೇಖಿಸಿದಂತಹ ಪ್ರಿಡೇಟರ್ ಬೂಟ್ ಗಳಲ್ಲದೆ ಅಡೀಡಸ್ F೫೦ ಮತ್ತು ಅಡೀಪ್ಯೂರ್ ಸರಣಿಯ ಫುಟ್ ಬಾಲ್ ಬೂಟುಗಳನ್ನು ತಯಾರಿಸುತ್ತದೆ.
ಟೆನಿಸ್
ಬದಲಾಯಿಸಿಅಡೀಡಸ್ ಟೆನಿಸ್ ಆಟಗಾರರನ್ನು ಪ್ರಾಯೋಜಿಸಿದೆ ಹಾಗೂ ಇತ್ತೀಚೆಗೆ ಒಂದು ನೂತನ ರಾಕೆಟ್ ಗಳ ಪಂಙ್ತಿಯನ್ನು ಆರಂಭಿಸಿದೆ. ಫೆದರ್ ಎಂಬುವುದು "ಮಾಮೂಲು ಆಟಗಾರ"ರಿಗೆ, ರೆಸ್ಪಾನ್ಸ್ ಎಂಬುವುದು "ಕ್ಲಬ್ ಆಟಗಾರ"ರಿಗೆ ತಯಾರಿಸಲಾಗಿದ್ದು, ಅಡೀಡಸ್ "ಪಂದ್ಯಾವಳಿಗಳ ಆಟಗಾರ"ರಿಗೆ ೧೨.೨ ಔನ್ಸ್ ಬ್ಯಾರಿಕೇಡ್ ಪ್ರವಾಸ ಮಾಡಲ್ ಅನ್ನು ಉದ್ದೇಶಿಸಿದೆ.[೧೮] ಅಡೀಡಸ್ ಈ ಕೆಳಕಂಡ ವೃತ್ತಿಪರ ಆಟಗಾರರಿಗೆ ಪ್ರಮುಖವಾಗಿ ವಸ್ತ್ರ, ಉಡುಗೆತೊಡುಗೆ, ಮತ್ತು ಪಾದತೊಡುಗೆಗಳನ್ನು ಪ್ರಾಯೋಜಿಸುತ್ತಿದೆ: ಆನಾ ಇವಾನೋವಿಕ್, ಆಂಡಿ ಮರ್ರೆ, ಮಾರಿಯಾ ಕಿರಿಲೆಂಕೊ, ಕ್ಯಾರೋಲಿನ್ ವಾಝ್ನಿಯಾಕ್ಕಿ, ಜಸ್ಟಿನ್ ಹೆನಿನ್, ಜೋ-ವಿಲ್ ಫ್ರೆಡ್ ತ್ಸೋಂಗಾ, ದಿನಾರಾ ಸಫೀನಾ, ಡೇನಿಯೆಲಾ ಹಾಂಟುಚೋವಾ, ಅಲೀಷಿಯಾ ಮೋಲಿಕ್, ಫರ್ನಾಂಡೋ ವರ್ಡಾಸ್ಕೋ, ಗಿಲ್ಲೆಸ್ ಸೈಮನ್, ಫರ್ನಾಂಡೋ ಗೊಂಝಾಲೆಝ್, ಫ್ಲೇವಿಯಾ ಪೆನ್ನೆಟಾ, ಲಾರಾ ರಾಬ್ಸನ್, ಮೆಲೇಯ್ನ್ ಔಡಿನ್, ಮತ್ತು ಸೊರಾನಾ ಸಿರ್ಸ್ಟಿಯಾ. ಅಡೀಡಸ್ ಟೆನಿಸ್ ಉಡುಗೆತೊಡುಗೆಗಳು ಕ್ಲೈಮಾಕೂಲ್ ತಂತ್ರಾಂಶವನ್ನು ಹೊಂದಿರುತ್ತವೆ; ಇದು ಇತರ ಅಥ್ಲೆಟಿಕ್ ಜೆರ್ಸೀಗಳು ಮತ್ತು ಷೂಗಳಲ್ಲೂ ಕಂಡುಬರುತ್ತದೆ.[೧೯]
ನವೆಂಬರ್ ೨೦೦೯ರಲ್ಲಿ ವಿಶ್ವ ಕ್ರಮಾಂಕದಲ್ಲಿ ೪ನೆಯವರಾದ ಆಂಡಿ ಮರ್ರೆ ಅಡೀಡಸ್ ಅತ್ಯಂತ ಹೆಚ್ಚು ಸಂಭಾವನೆ ಇತ್ತ ಆಟಗಾರರೆಂದು ದೃಢೀಕೃತವಾಯಿತು; ಅವರ ೫ ವರ್ಷಗಳ ಒಪ್ಪಂದಕ್ಕೆ ಅವರಿಗೆ ನೀಡಿದ ಮೊಬಲಗು $೨೪.೫ಮಿಲಿಯನ್ ಎಂದು ವರದಿಯಾಗಿದೆ.[೨೦] ಅಡೀಡಸ್ ಪ್ರಾಯೋಜಿಸಿದ ಆಟಗಾರರು ಅಡೀಡಸ್ ಆಟಗಾರರ ಅಭಿವೃದ್ಧಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದು; ಈ ಕಂಪನಿಯು ಆಟಗಾರರಿಗೆ ತರಬೇತಿದಾರರು, ದೈಹಿಕ ಯುಕ್ತತೆ ಕಾಪಾಡಿಕೊಳ್ಳುವುದನ್ನು ಹೇಳಿಕೊಡುವ ತರಬೇತುದಾರರು, ಮತ್ತು ಕ್ರೀಡಾ ಮಾನಸಿಕತಜ್ಞರ ಸೇವೆಯನ್ನು ತಾನು ಪ್ರಾಯೋಜಿಸಿದ ಆಟಗಾರರಿಗೆ ಒದಗಿಸಿ ಅವರ ವೃತ್ತಿಪರ ಬದುಕು ಮತ್ತಷ್ಟು ಉತ್ತಮಗೊಳ್ಳಲು ನೆರವಾಗುತ್ತದೆ. ಈ ಯೋಜನೆಯಡಿಯಲ್ಲಿ ದಂತಕಥೆಗಳೇ ಆದ ತರಬೇತಿದಾರರಾದ ಡ್ಯಾರ್ರೆನ್ ಕಾಹಿಲ್ ಮತ್ತು ಸ್ವೆನ್ ಗ್ರೋಯೆನ್ವೆಲ್ಡ್ ಸಹ ಇದ್ದಾರೆ. ಸಿಂಸಿನಾಟಿಯಲ್ಲಿ, ಮೇಸನ್ ನಲ್ಲಿ ನಡೆದ ATP ಟೆನಿಸ್ ಪಂದ್ಯಾವಳಿಯಲ್ಲಿ, ಈ ಕಂಪನಿಯು ಬಾಲ್-ಬಾಯ್ ಮತ್ತು ಬಾಲ್-ಗರ್ಲ್ ಸಮವಸ್ತ್ರಗಳನ್ನು ಸಹ ಪ್ರಾಯೋಜಿಸಿದೆ.
ಗಾಲ್ಫ್
ಬದಲಾಯಿಸಿಅಡೀಡಸ್ ಗಾಲ್ಫ್ ಅಡೀಡಸ್, ಒಂದು ಜರ್ಮನ್-ಮೂಲದ ಕ್ರೀಡಾ ವಸ್ತ್ರಗಳನ್ನು ತಯಾರಿಸುವ ಗುಂಪು, ಮತ್ತು ಅಡೀಡಸ್ ಗುಂಪಿನ ಒಂದು ಭಾಗವಾಗಿದ್ದು ಇದರಲ್ಲಿ ರೀಬಕ್ ಕ್ರೀಡಾ ಉಡುಗೆತೊಡುಗೆಗಳ ಕಂಪನಿ,ಟೈಲರ್ ಮೇಡ್ ಅಡೀಡಸ್ ಗಾಲ್ಫ್ ಕಂಪನಿ ಮತ್ತು ರಾಕ್ ಪೋರ್ಟ್ ಗಳು ಸೇರಿವೆ. ಅಡೀಡಸ್ ಗುಂಪು ಕ್ರೀಡಾ ವಸ್ತುಗಳ ಕೈಗಾರಿಕೆಯಲ್ಲಿ ಜಾಗತಿಕ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ ಹಾಗೂ ಅಡೀಡಸ್ ನ ಮೂರು ಮೂಲ ವಿಭಾಗಗಳಾದ ರೀಬಕ್, ಟೈಲರ್ ಮೇಡ್-ಅಡೀಡಸ್ ಗಾಲ್ಫ್, ಮತ್ತು ಅಡೀಡಸ್ ಗಾಲ್ಫ್ ಮೂಲಕ ವ್ಯಾಪಕವಾದ ಉತ್ಪನ್ನಗಳ ಸಾಲುಗಳನ್ನು ತಯಾರಿಸಿ ಮಾರುತ್ತದೆ ಮತ್ತು ಅಡೀಡಸ್-ಬ್ರ್ಯಾಂಡ್ ಗಾಲ್ಫ್ ವಸ್ತ್ರಗಳು, ಪಾದತೊಡುಗೆಗಳು ಮತ್ತು ಉಪಕರಣಗಳನ್ನು ಉತ್ಪಾದಿಸುತ್ತದೆ. ಕಂಪನಿಯ ಕಾಲಾನುಕ್ರಮಣಿಕೆ: ೧೯೯೭ರಲ್ಲಿ ಅಡೀಡಸ್ AG ಆಲ್ಪೈನ್ ಸ್ಕೀ ತೊಡುಗೆಗಳನ್ನು ತಯಾರಿಸುವಲ್ಲಿ ವಿಶೇಷತೆ ಹೊಂದಿದ್ದ ಸಾಲ್ಮನ್ ಗ್ರೂಪ್ ಅನ್ನು ತನ್ನದಾಗಿಸಿಕೊಂಡು ಅದರ ಸಂಯುಕ್ತ ಅಧಿಕೃತ ಹೆಸರನ್ನು ಅಡೀಡಸ್-ಸಾಲ್ಮನ್ AG ಎಂದು ಬದಲಾಯಿಸಿತು; ಏಕೆಂದರೆ ಈ ಕೊಳ್ಳುವಿಕೆಯ ಜೊತೆಜೊತೆಗೇ ಅಡೀಡಸ್ ಟೈಲರ್ ಮೇಡ್ ಗಾಲ್ಫ್ ಕಂಪನಿ ಮತ್ತು ಮ್ಯಾಕ್ಸ್ ಫೀ ಗಳನ್ನೂ ಕೊಂಡಿತಾದ್ದರಿಂದ ನೈಕ್ ಗಾಲ್ಫ್ ನ ಪ್ರತಿಸ್ಪರ್ಧಿಯಾಗಲು ಇದು ಪೂರಕವಾಯಿತು. ಸಾಲ್ಮನ್ ಟೈಲರ್ ಮೇಡ್ ನಲ್ಲಿದ್ದ ತನ್ನ ಹತೋಟಿಯ ಹಕ್ಕನ್ನು ಹಾಗೂ ಇತರ ಕ್ರೀಡಾ ಉಪಕರಣಗಳ ಕಂಪನಿಗಳನ್ನು ಜಾಗತಿಕ ದೈತ್ಯವಾದ ಅಡೀಡಸ್ AGಗೆ ಮಾರಿಬಿಟ್ಟಿತು. ೧೯೯೮ರಲ್ಲಿ ಅಡೀಡಸ್ ಗಾಲ್ಫ್ USA ತನ್ನ ವ್ಯವಹಾರದ ಚಟುವಟಿಕೆಗಳನ್ನು ಟುವಾಲಾಟಿನ್, ಒರೆಗಾನ್,ನಿಂದ ಕಾಲ್ಸ್ ಬಾಡ್, ಕ್ಯಾಲಿಫೋರ್ನಿಯಾದ ಅಡೀಡಸ್-ಸಾಲ್ಮನ್ ಈ ಕಂಪನಿಯನ್ನು ತೆಗೆದುಕೊಂಡ ಟೈಲರ್ ಮೇಡ್ ನ ಕೇಂದ್ರಕಚೇರಿಗೆ ವರ್ಗಾಯಿಸಿತು; ಅಡೀಡಸ್ ಗಾಲ್ಫ್ USAಯಲ್ಲಿನ ೩೦ ನೌಕರರಿಗೆ ಬದಲಿ ಹುದ್ದೆ ನೀಡಬೇಕಾಗಿತ್ತು. ಕಾರ್ಲ್ಸ್ ಬಾಡ್ ಅದರ ಮೂಲ ಸ್ಪರ್ಧಿಗಳಾದ ಕಾಲವೇ ಗಾಲ್ಫ್ ಕಂಪನಿಯ ಮೂಲಕಚೇರಿಯೂ ಆಗಿದೆ. ೧೯೯೯ರಲ್ಲಿ ಟೈಲರ್ ಮೇಡ್ ಮತ್ತು ಅಡೀಡಸ್ ಗಾಲ್ಫ್ ಉಸ ಎರಡೂ ಒಂದಾಗಿ ಟೈಲರ್ ಮೇಡಅಡೀಡಸ್ ಗಾಲ್ಫ್ ಎಂಬ ನೂತನ ಕಂಪನಿಯು ಆರಂಭವಾಯಿತು; ಅದರ ಕೇಂದ್ರಕಚೇರಿಯು ಕಾರ್ಲ್ಸ್ ಬಾಡ್ ನಲ್ಲಿ ಸ್ಥಾಪಿಸವಾಯಿತು. ಮಾರ್ಕ್ ಕಿಂಗ್ ಅನ್ನು ತಾವು ಮಾರಾಟ ಪ್ರತಿನಿಧಿಯಾಗಿ ತಮ್ಮ ವೃತ್ತಿಜೀವನವನ್ನು ೧೯೮೧ರಲ್ಲಿ ಆರಂಭಿಸಿದ್ದ ಕಂಪನಿಗೇ ಅಧ್ಯಕ್ಷರನ್ನಾಗಿ ನೇಮಿಸಲಾಯಿತು; ಏತನ್ಮಧ್ಯೆ ಅವರು ಸ್ವಲ್ಪ ಕಾಲ ಕಾಲವೇ ಗಾಲ್ಫ್ ಬಾಲ್ ಕಂಪನಿಯಲ್ಲಿ ೧೯೯೮ರಲ್ಲಿ ಮಾರಾಟ ಮತ್ತು ವ್ಯಾಪಾರಕ್ಷೇತ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನವೆಂಬರ್ ೨೦೦೮ರಲ್ಲಿ ಆಷ್ ವರ್ಥ್ (ವಸ್ತ್ರಗಳು) ಟೈಲರ್ ಮೇಡ್ ಅಡೀಡಸ್ ಗಾಲ್ಫ್ ನ ಸಂಪೂರ್ಣ ಮಾಲಿಕತ್ವದ ಉಪಾಂಗವಾಯಿತು ಹಾಗೂ ಇದು ಅಡೀಡಸ್ ಗಾಲ್ಫ್ ನ ಸಂಯೋಜಿತ ಪ್ರದರ್ಶನಯೋಗ್ಯ ಉಡುಗೆಗಳಿಗೆ ಸರಿತೂಗುವಂತೆ ಹೊಂದಾಣಿಕೆಯಾಯಿತುb. ಉತ್ಪನ್ನ ಅಡೀಡಸ್ ಗಾಲ್ಫ್ ವಸ್ತ್ರಗಳು, ಪಾದತೊಡುಗೆಗಳು ಹಾಗೂ ಪುರುಷರು, ಮಹಿಳೆಯರು ಮತ್ತು ಯುವಕರಿಗೆ ಬೇಕಾದ ಉಪಕರಣಗಳನ್ನು ಮಾರಾಟ ಮಾಡುತ್ತದೆ. ಪುರುಷರ ಉತ್ಪನ್ನಗಳಲ್ಲಿ ಪಾದರಕ್ಷೆಗಳು, ಷರ್ಟ್ ಗಳು, ಪ್ಯಾಂಟ್ ಗಳು, ಹೊರ ಉಡುಪುಗಳು, ಒಳ ಉಡುಪುಗಳು ಮತ್ತು ನೇತ್ರತೊಡುಗೆಗಳು ಸೇರಿವೆ. ಸ್ತ್ರೀಯರ ವಸ್ತುಗಳು ಪಾದರಕ್ಷೆಗಳು, ಷರ್ಟ್ ಗಳು, ಚಡ್ಡಿಗಳು, ಸ್ಕರ್ಟ್ ಗಳು, ಪ್ಯಾಂಟ್ ಗಳು, ಹೊರ ಉಡುಪುಗಳು, ಒಳ ಉಡುಪುಗಳು ಮತ್ತು ನೇತ್ರತೊಡುಗೆಗಳನ್ನು ಒಳಗೊಂಡಿದೆ. ಯುವಕರ ವಸ್ತುಗಳು ಹುಡುಗ ಮತ್ತು ಹುಡುಗಿಯರ ಪಾದರಕ್ಷೆಗಳು, ವಸಸ್ತ್ರಗಳು, ಮತ್ತು ನೇತ್ರತೊಡುಗೆಗಳನ್ನೊಳಗೊಂಡಿದೆ.
ಕ್ರಿಕೆಟ್
ಬದಲಾಯಿಸಿ೧೯೯೦ರ ದಶಕದಲ್ಲಿ ಅಡೀಡಸ್ ಖ್ಯಾತ ಭಾರತೀಯ ಬ್ಯಾಟ್ಸ್ ಮನ್ ಸಚಿನ್ ತೆಂಡುಲ್ಕರ್ ರನ್ನು ತಮ್ಮ ಕಂಪನಿಯ ಪ್ರಾತಿನಿಧ್ಯಕ್ಕಾಗಿ ಸಹಿ ಹಾಕಿಸಿಕೊಂಡಿತು ಮತ್ತು ಅವರಿಗಾಗಿ ಷೂಗಳನ್ನು ತಯಾರಿಸಿತು.[೨೧] ಪಂದ್ಯಗಳನ್ನು ಆಡುವಾಗ ತೆಂಡುಲ್ಕರ್ ಅಡೀಡಸ್ ಷೂಗಳನ್ನೇ ಧರಿಸುತ್ತಿದ್ದಾರೆ. ಅಡೀಡಸ್ ಸಚಿನ್ ತೆಂಡುಲ್ಕರ್ ಕ್ರೀಡೆಯಲ್ಲಿ ತೊಡಗಿರುವ ಭಂಗಿಗಳ ಚಿತ್ರಗಳನ್ನೂ ನಿರ್ಮಿಸಿತು. ೨೦೦೮ರಲ್ಲಿ ಅಡೀಡಸ್ ಇಂಗ್ಲಿಷ್ ಕ್ರಿಕೆಟ್ ಮಾರುಕಟ್ಟೆಗೆ ಲಗ್ಗೆ ಹಾಕಿ. ಇಂಗ್ಲಿಷ್ ಬ್ಯಾಟಿಂಗ್ ತಾರೆ ಕೆವಿನ್ ಪಿಯೆಟರ್ಸನ್ ರನ್ನು, ವುಡ್ ವರ್ಮ್ ನೊಂದಿಗೆ ಅವರು ಹೊಂದಿದ್ದ ಆಜೀವ ಒಪ್ಪಂದ ರದ್ದಾದ ನಂತರ, ಪ್ರಾಯೋಜಿಸಿತು. ವುಡ್ ವರ್ಮ್ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದುದರಿಂದ ಈ ಅವಕಾಶ ಒದಗಿಬಂದಿತು.[೨೨] ನಂತರದ ವರ್ಷದಲ್ಲಿ ಕಂಪನಿಯು ಪಿಯೆಟರ್ಸನ್ ರ ಜೊತೆ ಆಡುವ ಇಂಗ್ಲೆಂಡ್ ಆಟಗಾರ ಇಯಾನ್ ಬೆಲ್, ಪಾಕಿಸ್ತಾನಿ ಆಟಗಾರ ಸಲ್ಮಾನ್ ಬಟ್ ಮತ್ತು ಭಾರತದ ಆಟಗಾರ ರವೀಂದ್ರ ಜಡೇಜಾರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಕ್ರಿಕೆಟ್ ಪಾದತೊಡುಗೆಗಳನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದ ಈ ಕಂಪನಿಯು ಕಡೆಗೆ ೨೦೦೮ರಲ್ಲಿ ಬ್ಯಾಟ್ ತಯಾರಿಕಾ ಕ್ಷೇತ್ರಕ್ಕೆ ಕಾಲಿಟ್ಟಿತು ಮತ್ತು ಅದರ ಉತ್ಪನ್ನಗಳು ಇಂಕರ್ಝಾ, ಪೆಲ್ಲಾರಾ ಮತ್ತು ಲೈಬ್ರೋ ಸರಣಿಗಳಲ್ಲಿ ಲಭ್ಯವಿದೆ. ಅಡೀಡಸ್ ಇಂಗ್ಲೆಂಡ್ ಕ್ರಿಕೆಟ್ ತಂಡ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳೆರಡೂ ತೊಡುವ ಸಮವಸ್ತ್ರಗಳನ್ನು ತಯಾರಿಸುತ್ತದೆ. ಅಡೀಡಸ್ ೨೦೧೧ರಲ್ಲಿ ಕ್ರಿಕೆಟ್ ಸೌತ್ ಆಫ್ರಿಕಾ ದೊಡನೆ ಒಂದು ಪಾಲುದಾರಿಕೆ/ಸಹಭಾಗಿತ್ವಕ್ಕೆ ಸಹಿ ಹಾಕಿತು ಮತ್ತು ಈ ಒಪ್ಪಂದದ ಮೇರೆಗೆ ಕ್ರಿಕೆಟ್ ವರ್ಲ್ಡ್ ಕಪ್ ೨೦೧೧ರಲ್ಲಿ ಮತ್ತು ನಂತರದ ದಿನಗಳಲ್ಲಿ ಸೌತ್ ಆಫ್ರಿಕದ ಕ್ರಿಕೆಟ್ ತಂಡದ ಆಟಗಾರರು ಧರಿಸುವ ಎಲ್ಲಾ ಸಮವಸ್ತ್ರಗಳನ್ನು ಅಡೀಡಸ್ ಉತ್ಪಾದಿಸುತ್ತದೆ. ಈ ಕಂಪನಿಯು ದಕ್ಷಿಣ ಕೊರಿಯ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವವನ್ನೂ ವಹಿಸಿಕೊಂಡಿತ್ತು. ೨೦೦೮ ಮತ್ತು ೨೦೦೯ರ ಎರಡೂ ಇಂಡಿಯನ್ ಪ್ರೀಮಿಯರ್ ಲೀಗ್(IPL)ಕ್ರಿಕೆಟ್ ಋತುಗಳಲ್ಲಿ, ಅಡೀಡಸ್ ಮುಂಬಯಿ ಇಂಡಿಯನ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳನ್ನು ಪ್ರಾಯೋಜಿಸಿತ್ತು. ೨೦೦೯ರಿಂದ ಅಡೀಡಸ್ ಸಚಿನ್ ತೆಂಡುಲ್ಕರ್ ಬಳಸುವ ಬ್ಯಾಟನ್ನೂ ಪ್ರಾಯೋಜಿಸುತ್ತಿದೆ. ಈ ಕಂಪನಿಯು 'ಅಡೀಡಸ್ ಮಾಸ್ಟರ್ ಬ್ಲ್ಯಾಸ್ಟರ್' ಎಂಬ, ಸಚಿನ್ ಗೆಂದೇ ತಯಾರಿಸಲ್ಪಟ್ಟ ಬ್ಯಾಟೊಂದನ್ನು ಸೃಷ್ಟಿಸಿತು.
ಬ್ಯಾಸ್ಕೆಟ್‌ಬಾಲ್
ಬದಲಾಯಿಸಿಅಡೀಡಸ್ ಬಹಳ ಕಾಲದಿಂದ ಬ್ಯಾಸ್ಕೆಟ್ ಬಾಲ್ ಷೂ ತಯಾರಿಕೆಯಲ್ಲಿ ತೊಡಗಿದೆ ಹಾಗೂ ಜದ ಪ್ರಮುಖ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ಈ ಕಂಪನಿಯ ಸೂಪರ್ ಸ್ಟಾರ್ ಮತ್ತು ಪ್ರೋ ಮಾಡೆಲ್ ಷೂಗಳು ಪೂಜಾರ್ಹ/ಗೌರವಾರ್ಹ ಮಟ್ಟಗಳನ್ನು ತಲುಪಿದ್ದು, ಶೈಲೀಕೃತ ಗಟ್ಟಿಯಾದ ರಬ್ಬರ್ ಮುಂಗಾಲಿನ ಭಾಗವನ್ನು ಹೊಂದಿರುವ ಆ ಷೂಗಳನ್ನು ಜನರು ಪ್ರೀತಿಯಿಂದ "ಷೆಲ್ ಟೋಸ್" ಎಂದು ಕರೆಯುತ್ತಾರೆ ಹಾಗೂ ಈ ವಿನ್ಯಾಸಗಳು ಕಂಪನಿಗೆ ಬಹಳ ಖ್ಯಾತಿಯನ್ನು ತಂದಿವೆ. ಈ ಷೂಗಳನ್ನು ೧೯೮೦ರ ದಶಕದಲ್ಲಿ ಅಡೀಡಸ್ ನ ಗೆರೆಗಳುಳ್ಳ-ಪಕ್ಕಗಳುಳ್ಳ ಪಾಲಿಯೆಸ್ಟರ್ ಸೂಟ್ ಗಳೊಡನೆ ಹಿಪ್ ಹಾಪ್ ಸ್ಟ್ರೀಟ್ ವೇರ್ ದೃಶ್ಯಗಳು ಬಹಳವೇ ಜನಪ್ರಿಯಗೊಳಿಸಿದವು. ಅಡೀಡಸ್ ಈಗ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ನ ಎಲ್ಲಾ ವಿಶೇಷ ಹಕ್ಕು ಪಡೆದ ಅಂಗಗಳ ಆಟಗಾರರ ಉಡುಗೆತೊಡುಗೆಗಳ ಸರಬರಾಜು ಮಾಡುತ್ತಿದೆ(ಸೇರ್ಪಡೆಯಾದ ನಂತರ ರೀಬಕ್ ಬ್ರ್ಯಾಂಡ್ ನ ಜಾಗವನ್ನು ಇದು ಆಕ್ರಮಿಸಿತು) ಹಾಗೂ ಹಳೆಯ ಮತ್ತ ಹೊಸ ತಲಮಾರಿನ ಹಲವಾರು ಆಟಗಾರರಿಗೆ ಇದು ಪ್ರಾಯೋಜಕ ಸಂಸ್ಥೆಯಾಗಿದ್ದು ಆ ಪ್ರಾಯೋಜಕತ್ವ ಪಡೆದವರಲ್ಲಿ ಕೆಲವರೆಂದರೆ ಕರೀಂ ಅಬ್ದುಲ್-ಜಬ್ಬಾರ್ ಮತ್ತು ಟ್ರೇಸಿ ಮೆಕ್ ಗ್ರಾಡಿ, ಹಾಗೂ ಡ್ವೈಟ್ ಹೊವಾರ್ಡ್, ಚಾನ್ಸೀ ಬಿಲ್ಲಪ್ಸ್, ಡೆರಿಕ್ ರೋಸ್, ಎರಿಕ್ ಗಾರ್ಡನ್, ಮೈಕಲ್ ಬೀಸ್ಲಿ, ಜೋಷ್ ಸ್ಮಿತ್ ಮತ್ತು ಟಿಮ್ ಡಂಕನ್. ಅಡೀಡಸ್ ಕೋಬ್ ಬ್ರಯಾಂಟ್ ರಿಗೆ ಅಡೀಡಸ್ ಉಪಕರಣಗಳನ್ನು KB೮ ಛಾಪಿನೊಡನೆ ಅವರ ಮೊದಲ ನಾಮಾಂಕಿತ ಷೂ ಆಗಿ ಪ್ರಾಯೋಜಿಸಲು ಕೈ ಜೋಡಿಸಿತ್ತು ಹಾಗೂ ೨೦೦೩ರಲ್ಲಿ ತಮ್ಮ ಛಾಪನ್ನು ಅವರಿಗೆ ಬಳಸಲು ನೀಡುವುದನ್ನು ನಿಲ್ಲಿಸಿತು. ಕಂಪನಿಯು ಕೆವಿನ್ ಗಾರ್ನೆಟ್ ರನ್ನೂ, ಅವರು ಕರಾರಿನಿಂದ ೨೦೧೦ರಲ್ಲಿ ಹೊರನಡೆಯುವವರೆಗೆ, ಬೆಂಬಲಿಸಿತ್ತು; ಅವರು ಈಗ ಆಂಟಾವನ್ನು ಬೆಂಬಲಿಸುತ್ತಿದ್ದಾರೆ. ಲೆಬ್ರಾನ್ ಜೇಮ್ಸ್ ಸಹ ಅವರು ಪ್ರೌಢಶಾಲೆಯಲ್ಲಿದ್ದಾಗ ಅಡೀಡಸ್ ಧರಿಸುತ್ತಿದ್ದರು. ಇಂದಿನ ದಿನಗಳಲ್ಲಿ ಅವರು ನೈಕ್ ನ ಪ್ರಚಾರ ಮಾಡುತ್ತಿದ್ದಾರೆ. ಹೋದ ಋತುವಿನಲ್ಲಿ ಸಂಭವಿಸಿ ಕುಖ್ಯಾತಿ ಪಡೆದ ಗನ್ ಪ್ರಕರಣ ನಡೆಯುವವರೆಗೆ ಗಿಲ್ಬರ್ಟ್ ಅರೇನಾಸ್ ಅಡೀಡಸ್ ನ ಪ್ರಚಾರಕರಾಗಿದ್ದರಯ; ಈಗ ಅವರು ಯಾವುದೇ ಕಂಪನಿಗೂ ಪ್ರಚಾರಕರಾಗಿಲ್ಲ.
ಲಾಕ್ರೋಸ್
ಬದಲಾಯಿಸಿ೨೦೦೭ರಲ್ಲಿ ಅಡೀಡಸ್ ಲಾಕ್ರೋಸ್ ಉಪಕರಣಗಳನ್ನು ತಾವು ಇನ್ನ ಮುಂದೆ ತಯಾರಿಸಲಿರುವುದಾಗಿ ಘೋಷಿಸಿತು ಹಾಗೂ ಜುಲೈ ೨೦೦೮ರಲ್ಲಿ ನಡೆಯುವ ಅಡೀಡಸ್ ನ್ಯಾಷನಲ್ ಲಾಕ್ರೋಸ್ ಕ್ಲಾಸಿಕ್ ಅನ್ನು ಪ್ರಾಯೋಜಿಸಲಿದೆ; ಈ ಪ್ರಾಯೋಜಕತ್ವವು ಯುನೈಟೆಡ್ ಸ್ಟೇಟ್ಸ್ ನ ೬೦೦ ಶ್ರೇಷ್ಠ ಹೈ ಸ್ಕೂಲ್ ಅಂಡರ್ ಕ್ಲಾಸ್ ಮೆನ್ ಲಾಕ್ರೋಸ್ ಆಟಗಾರರಿಗೆ ದೊರೆಯಲಿದೆ.[೨೩]
ರಗ್ಬಿ
ಬದಲಾಯಿಸಿಅಡೀಡಸ್ ರಗ್ಬಿ ಚೆಂಡು ಮತ್ತು ಇತರ ರಗ್ಬಿ ವಸ್ತುಗಳನ್ನು ತಯಾರಿಸುತ್ತದೆ. ಈ ಕಂಪನಿಯು ಈಗ ಕಿಟ್ ಮತ್ತು ಚೆಂಡುಗಳನ್ನು ಸರಬರಾಜು ಮಾಡುತ್ತಿರುವ ತಂಡಗಳೆಂದರೆ ನ್ಯೂಝಿಲೆಂಡ್ ಆಲ್ ಬ್ಲ್ಯಾಕ್ಸ್, Iಐರಿಷ್ ಮಂಸ್ಟರ್ ರಗ್ಬಿ, ಅರ್ಜೆಂಟೀನಿಯನ್ ಪೂಮಾಸ್, ಮತ್ತು ಸೌತ್ ಆಫ್ರಿಕನ್ ಸ್ಟಾರ್ಮರ್ಸ್ ಹಾಗೂ ವೆಸ್ಟ್ರನ್ ಪ್ರಾವಿನ್ಸ್ ರಗ್ಬಿ ಯೂನಿಯನ್ ತಂಡಗಳು ಮತ್ತು ಇತರವು. ಅಡೀಡಸ್ ಹೀನೆಕೆನ್ ಕಪ್ ನ ಅಧಿಕೃತ ಪಂದ್ಯದ ಚೆಂಡಿನ ಸರಬರಾಜುದಾರ ಕಂಪನಿಯೂ ಆಗಿದೆ.
ಅಂಗಸಾಧನೆ
ಬದಲಾಯಿಸಿ೨೦೦೦ದಿಂದ ಅಡೀಡಸ್ ಯುಎಸ್ಎ ಜಿಮ್ನಾಸ್ಟಿಕ್ಸ್ ಮೂಲಕ ಟೀಮ್ ಯುಎಸ್ಎ ತಂಡದ ಪುರುಷರ ಮತ್ತು ಮಹಿಳೆಯರ ಅಂಗಸಾಧನಾ ಪೋಷಾಕುಗಳನ್ನು ಒದಗಿಸುತ್ತಿದೆ. ೨೦೦೬ರಲ್ಲಿ ಅಡೀಡಸ್ ಸ್ತ್ರೀಯರಿಗಾಗಿ ಅಂಗಸಾಧನೆಯ ವೇಳೆಯಲ್ಲಿ ಧರಿಸಲು ಅನುಕೂಲವಾಗುವ ಬಿಗಿಯುಡುಪುಗಳಾದ ಲೆಯೋಟಾರ್ಡ್ ಗಳನ್ನೂ, ಅಡೀಡಸ್ ಪುರುಷರ ಕಾಂಪ್ ಷರ್ಟ್ ಗಳನ್ನೂ, ಜಿಮ್ನಾಸ್ಟಿಕ್ ಪ್ಯಾಂಟ್ ಗಳು ಮತ್ತು ಜಿಮ್ನಾಸ್ಟಿಕ್ ಚಡ್ಡಿಗಳನ್ನೂ ಅಮೆರಿಕದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು; ವಸಂತ, ಬೇಸಿಗೆ, ಶಿಶಿರಗಳಿಗೆ ಹಾಗೂ ರಜಾದಿನಗಳಿಗೆ ತಕ್ಕಂತಹ ಲಿಯೋಟಾರ್ಡ್ ಪೋಷಾಕುಗಳನ್ನೂ ಸಹ ಈ ಕಂಪನಿಯು ತಯಾರಿಸಿದ್ದು, ಈಗ ಅವು ಆ ಮಾರುಕಟ್ಟೆಯಲ್ಲಿ ಲಭ್ಯವಿವೆ. ೨೦೦೯ರಿಂದ ಅಡೀಡಸ್ ಅಂಗಸಾಧನಾ ಪೋಷಾಕುಗಳು ಮತ್ತು ಪರಿಕರಗಳು ಜಿಕೆ ಎಲೈಟ್ ಸ್ಪೋರ್ಟ್ಸ್ ವೇರ್ ಮೂಲಕ ಜಗತ್ತಿನಾದ್ಯಂತ ಲಭ್ಯವಿದೆ.[೨೪]
ಸ್ಕೇಟ್‌ಬೋರ್ಡಿಂಗ್
ಬದಲಾಯಿಸಿಅಡೀಡಸ್ SB (ಸ್ಕೇಟ್ ಬೋರ್ಡಿಂಗ್) ಷೂಗಳು ಸ್ಕೇಟ್ ಬೋರ್ಡಿಂಗ್ ಗೆಂದೇ ವಿಶೇಷವಾಗಿ ತಯಾರಿಸಿದ ಷೂಗಳಾಗಿವೆ. ಅಡೀಡಸ್ ಹಿಂದೆ ತಯಾರಿಸಿದ್ದ ಹಲವಾರು ಷೂಗಳನ್ನು ಸ್ಕೇಟ್ ಬೋರ್ಡಿಂಗ್ ಗಾಗಿ ಮರುವಿನ್ಯಾಸಗೊಳಿಸಲಾಗಿದೆ. ಅಡೀಡಸ್ ಸ್ಕೇಟ್ ಬೋರ್ಡಿಂಗ್ ನದೇ ಆದ ಸ್ಕೇಟ್ ಬೋರ್ಡಿಂಗ್ ತಂಡವೊಂದಿದೆ. ಆ ತಂಡದಲ್ಲಿರುವ ಸದಸ್ಯರು: ಮಾರ್ಕ್ ಗೊಂಝಾಲೆಸ್, ಡೆನಿಸ್ ಬುಸೆನಿಟ್ಝ್, ಟಿಮ್ ಒಕಾನರ್, ಸಿಲಾಸ್ ಬಾಕ್ಸ್ಟರ್-ನಿಯಲ್, ಪೀಟೆ ಎಲ್ಡ್ರಿಡ್ಜ್, ಬೆನ್ನೀ ಫೇಯ್ರ್ ಫಾಕ್ಸ್, ನೆಸ್ಟರ್ ಜಡ್ಕಿನ್ಸ್, ಲೆಮ್ ವಿಲ್ಲೆಮಿನ್,ವಿನ್ಸ್ ಡೆಲ್ ವಲ್ಲೆ ಮತ್ತು ಜೇಕ್ ಬ್ರೌನ್.
ಪರಿಕರಗಳು
ಬದಲಾಯಿಸಿಅಡೀಡಸ್ ಸ್ಯಾಂಡಲ್ ಗಳು, ಕೈಗಡಿಯಾರಗಳು, ನೇತ್ರತೊಡುಗೆಗಳು,ಬ್ಯಾಗ್ ಗಳು, ಬೇಸ್ ಬಾಲ್ ಟೋಪಿಗಳು ಮತ್ತು ಕಾಲುಚೀಲಗಳ ವಿನ್ಯಾಸ ಮತ್ತು ತಯಾರಿಕೆಯಲ್ಲೂ ತೊಡಗಿದೆ.
ಅಷ್ಟೇ ಅಲ್ಲದೆ, +ಅಡೀಡಸ್ನಲ್ಲಿ ಬ್ರ್ಯಾಂಡ್ ಆಗಿರುವಂತಹ ಪುರುಷರ ಮತ್ತು ಸ್ತ್ರೀಯರ ದುರ್ಗಂಧನಿವಾರಕಗಳು, ಸುಗಂಧಗಳು, ಆಫ್ಟರ್ ಷೇವ್ ಮತ್ತು ಲೋಷನ್ ಗಳೂ ಇವೆ.
ಮಾರಾಟ
ಬದಲಾಯಿಸಿಇತರ ಕ್ರೀಡಾ ಪೋಷಾಕುಗಳ ಬ್ರ್ಯಾಂಡ್ ಗಳಂತೆಯೇ ಅಡೀಡಸ್ ಸಹ ತನ್ನ ಬ್ರ್ಯಾಂಡ್ ಗೆ ಉನ್ನತ ಮಟ್ಟದ ಗ್ರಾಹಕಬದ್ಧತೆಯನ್ನು ಹೊಂದಿರುವುದೆಂದು ನಂಬಲಾಗಿದೆ. ಅಡೀಡಸ್, ನೈಕ್, ಇಂಕ್., ಪೂಮಾ AG ಮತ್ತು ಇತರ ಹಲವಾರು ಬ್ರ್ಯಾಂಡ್ ಗಳ ಬಗ್ಗೆ ಗ್ರಾಹಕರಿಗೆ ಇರುವ ನಿಷ್ಠೆ/ಬದ್ಧತೆಯನ್ನು ಅರಿಯಲು ಇತ್ತೀಚೆಗೆ ಒಂದು ಸಮೀಕ್ಷೆ ನಡೆಸಲಾಯಿತು.[೨೫] ಈ ಸಮೀಕ್ಷೆಯು ಗ್ರಾಹಕರು ಮಾಮೂಲಿಗಿಂತಲೂ ಹೆಚ್ಚಿನ ಬದ್ಧತೆಯನ್ನೂ ಈ ಯಾವ ಬ್ರ್ಯಾಂಡ್ ಗಳೊಡನೆಯೂ ಹೊಂದಿಲ್ಲವೆಂದು ವರದಿಮಾಡಿತು. ೧೯೯೦ರ ದಶಕದ ಮಧ್ಯಭಾಗ ಹಾಗೂ ಕೊನೆಯ ಭಾಗಗಳಲ್ಲಿ, ಅಡೀಡಸ್ ತನ್ನ ಬ್ರ್ಯಾಂಡನ್ನು ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸಿ ಪ್ರತಿ ವಿಭಾಗಕ್ಕೂ ಒಂದೊಂದು ವಿಶೇಷ ಉದ್ದೇಶವನ್ನು ಆರೋಪಿಸಿಕೊಂಡಿತು: ಅಡೀಡಸ್ ಪರ್ಫಾರ್ಮೆನ್ಸ್ ಅಂಗಸಾಧನಾ ಪಟುಗಳು ತಮ್ಮ ಧ್ಯೇಯವನ್ನು ಸಂರಕ್ಷಿಸಿಕೊಳ್ಳಲು ಸಹಾಯಕಾರಿಯಾಗುವಂತೆ ವಿನ್ಯಾಸಗೊಳಿಸಲಾಯಿತು; ಅಡೀಡಸ್ ಒರಿಜಿನಲ್ಸ್ ಫ್ಯಾಷನ್ ಹಾಗೂ ಜೀವನಶೈಲಿಯನ್ನು ತನ್ನ ಕೇಂದ್ರಬಿಂದುವಾಗಿಸಿಕೊಂಡಿತು; ಮತ್ತು ಸ್ಟೈಲ್ ಎಸೆನ್ಷಿಯಲ್ಸ್ ,ಇದರಲ್ಲಿನ ಪ್ರಮುಖ ತಂಡವೇ Y-೩ . "ಇಂಪಾಸಿಬಲ್ ಈಸ್ ನಥಿಂಗ್" ಎಂಬುದು ಈಗಿನ ಅಡೀಡಸ್ ನ ಮುಖ್ಯವಾಹಿನಿ ವಿಕ್ರಯತಂತ್ರದ ಘೋಷಣೆಯಾಗಿದೆ. ಈ ಪ್ರಚಾರಕಾರ್ಯವನ್ನು ಆಂಸ್ಟರ್ಡ್ಯಾಂ ಮೂಲದ ೧೮೦/TBWA ಅಭಿವೃದ್ಧಿಗೊಳಿಸಿತಾದರೂ ಇದರ ಬಗ್ಗೆ ಸಾಕಷ್ಟು ಕೆಲಸವನ್ನು ಸ್ಯಾನ್ ಫ್ರ್ಯಾನ್ಸಿಸ್ಕೋ ಮೂಲದ TBWA/ಚಿಯಾಟ್/ಡೇ ಸಹ ಮಾಡಿತ್ತು– ಅದರಲ್ಲಿಯೂ ವಿಶೇಷವಾಗಿ ತನ್ನ ಬ್ಯಾಸ್ಕೆಟ್ ಬಾಲ್ ಪ್ರಚಾರಕಾರ್ಯವಾದ "ಬಿಲೀವ್ ಇನ್ ಫೈವ್".TBWA\ಚಿಯಾಟ್\ಡೇ ಝೇನ್ ಪೀಚ್[೨೬] ಅನ್ನು ೨೦೦೭ರ ಅಂತರರಾಷ್ಟ್ರೀಯ ಜಾಹಿರಾತು ಪ್ರಚಾರಕ್ಕಾಗಿ ದೃಶ್ಯಾವಳಿ/ಚಿತ್ರಾವಳಿಗಳನ್ನು ತಯಾಗಿಸಿಕೊಡಲು ನಿಯಮಿಸಿತು.
ಕ್ರೀಡಾ ಜಾಹಿರಾತು
ಬದಲಾಯಿಸಿಈ ಬ್ರ್ಯಾಂಡ್ ಹಲವಾರು ಆಟಗಳಲ್ಲಿ ಕಾಣಿಸಿಕೊಂಡಿದೆ. ಅಮಿಗಾ|ಕಮೋಡೋರ್ ಅಮಿಗಾ: ಡೇಲಿ ಥಾಂಪ್ಸನ್ ರ ಒಲಿಂಪಿಕ್ ಪಂಥಾಹ್ವಾನ ಸೋನಿ ಪ್ಲೇಸ್ಟೇಷನ್: ಅಡೀಡಸ್ ಪವರ್ ಸಾಕರ್ ಕಮೋಡೋರ್ ೬೪, ZX ಸ್ಪೆಕ್ಟ್ರಂ, ಆಂಸ್ಟ್ರಾಡ್ CPC: ಅಡೀಡಸ್ ಚಾಂಪಿಯನ್ ಷಿಪ್ ಫುಟ್ ಬಾಲ್
ಪ್ರಾಯೋಜಕತ್ವ
ಬದಲಾಯಿಸಿಈ sectionಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (November 2010) |
ಅಡೀಡಸ್ ಒಂದು ಪ್ರಮುಖ ಸ್ಥಳೀಯ (ಜರ್ಮನಿಯಲ್ಲಿ) ಮತ್ತು ಜಾಗತಿಕ ಮಟ್ಟದ ಕ್ರೀಡಾ ಮತ್ತು ವಿಶೇಷ ಪ್ರಸಕ್ತಿಗಳ ಪ್ರಾಯೋಜಕ ಸಂಸ್ಥೆಯಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಕಂಪನಿಯು ತನ್ನು ಮಾರಾಟತಂತ್ರ ಮತ್ತು ಪ್ರಾಯೋಜಕತ್ವಕ್ಕೆ ಮೀಸಲಿರಿಸುವ ಹಣದ ಪ್ರಮಾಣವನ್ನು ಹೆಚ್ಚಿಸುತ್ತಲೇ ಬಂದಿದೆ.[೨೭] ಅಡೀಡಸ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ (NBA)ನ ಮುಖ್ಯ ಪ್ರಾಯೋಜಕ ಮತ್ತು ಸರಬರಾಜುದಾರನಾಗಿದೆ. ೨೦೧೦–೨೦೧೧ ಸಾಲಿನಲ್ಲಿ ನಡೆಯುವ ಪಂದ್ಯಗಳಲ್ಲಿ NBA ಆಟಗಾರರು ಧರಿಸಲೆಂದೇ ಈ ಕಂಪನಿಯು ಒಂದು ನೂತನ ಜರ್ಸಿಯನ್ನು ಹೊರತಂದಿದೆ. ಅಡೀಡಸ್ ಅತ್ಯಂತ ಯಶಸ್ವಿ ರಗ್ಬಿ ತಂಡವಾದ ಆಲ್ ಬ್ಲ್ಯಾಕ್ಸ್ ಎಂಬ ನ್ಯೂಝಿಲೆಂಡ್ ರಾಷ್ಟ್ರೀಯ ರಗ್ಬಿ ತಂಡದ ಪ್ರಮುಖ ಕಿಟ್ ಒದಗಿಸುವ ಮತ್ತು ಪ್ರಾಯೋಜಿಸುವ ಕಂಪನಿಯಾಗಿದೆ. ಅಡೀಡಸ್ ಈ ಕೆಳಕಂಡ ತಂಡಗಳಿಗೂ ಕಿಟ್ ಒದಗಿಸುತ್ತದೆ: ಲಾಸ್ ಪೂಮಾಸ್, ದ ಈಗಲ್ಸ್, ದ ಐರಿಷ್ಪ್ರೊಫೆಷನಲ್ ರಗ್ಬಿ ಯೂನಿಯನ್ ತಂಡ, ಮಂಸ್ಟರ್ ರಗ್ಬಿ ಮತ್ತು ದ ಫ್ರೆಂಚ್ ಪ್ರೊಫೆಷನಲ್ ರಗ್ಬಿ ಯೂನಿಯನ್ ಕ್ಲಬ್, ಸ್ಟೇಡ್ ಫ್ರಾಂಕಾಯಿಸ್. ಅಡೀಡಸ್ ಆಸ್ಟ್ರೇಲಿಯಾದ ನ್ಯಾಷನಲ್ ರಗ್ಬಿ ಲೀಗ್ (NRL) ಸ್ಪರ್ಧೆಯಲ್ಲಿ ಭಾಗವಹಿಸುವ ರಗ್ಬಿ ಲೀಗ್ ಕ್ಲಬ್ ಆದ ಗೋಲ್ಡ್ ಕೋಸ್ಟ್ ಟೈಟಾನ್ಸ್ ತಂಡದ ಪೋಷಾಕುಗಳನ್ನು ಒದಗಿಸಿ, ತಂಡವನ್ನು ಪ್ರಾಯೋಜಿಸುತ್ತದೆ. ಕ್ರಿಕೆಟ್ ನಲ್ಲಿ ಈ ಕಂಪನಿಯು ಯಶಸ್ವಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳಿಗೆ ಕಿಟ್ ಪ್ರಾಯೋಜಿಸುವುದಲ್ಲದೆ, ಮುಖ್ಯ ಪ್ರಾಯೋಜಕ ಸಂಸ್ಥೆಯೂ ಆಗಿದೆ. ಭಾರತೀಯ ಕ್ರಿಕೆಟ್‌ಆಟಗಾರರಾದ ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಮತ್ತು ಇಂಗ್ಲಿಷ್ ಕ್ರಿಕೆಟ್ ಆಟಗಾರರಾದ ಕೆವಿನ್ ಪಿಯೆಟರ್ಸನ್ ಮತ್ತು ಇಯಾನ್ ಬೆಲ್ ರಿಗೂ ಈ ಕಂಪನಿ ಪ್ರಮುಖ ಪ್ರಾಯೋಜಕತ್ವ ನೀಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನ ತಂಡಗಳಾದ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಮುಂಬಯಿ ಇಂಡಿಯನ್ಸ್ ಗಳಿಗೂ ಈ ಕಂಪನಿ ಪ್ರಾಯೋಜಕತ್ವ ನೀಡುತ್ತಿದೆ. ಅಡೀಡಸ್ ಬಹಳ ಕಾಲದಿಂದಲೂ ಜರ್ಮನಿ ನ್ಯಾಷನಲ್ ಫುಟ್ ಬಾಲ್ ಟೀಂ ಗೆ ಕಿಟ್ ಗಳನ್ನು ಒದಗಿಸುತ್ತಿದೆ, ಈ ಪ್ರಾಯೋಜತ್ವವು ೧೯೫೪ರಲ್ಲಿ ಆರಂಭವಾಯಿತು ಹಾಗೂ ಕನಿಷ್ಠ ೨೦೧೮ರವರೆಗೆ ಮುಂದುವರಿಸಲು ಒಪ್ಪಂದವಾಗಿದೆ. ಅಡೀಡಸ್ ಅರ್ಜೆಂಟೀನ್, ಜಪಾನಿ, ಮೆಕ್ಸಿಕನ್, ಸ್ಕಾಟಿಷ್ ಮತ್ತು ಸ್ಪ್ಯಾನಿಷ್ ರಾಷ್ಟ್ರೀಯ ಫುಟ್ ಬಾಲ್ ತಂಡಗಳನ್ನೂ, ಹಾಗೂ ಇನ್ನೂ ಇತರ ತಂಡಗಳನ್ನೂ ತನ್ನ ಪ್ರಾಯೋಜಕತ್ವದ ನೆರಳಲ್ಲಿ ಸೇರಿಸಿಕೊಂಡಿದೆ.[೨೮] ಅಡೀಡಸ್ ಕ್ರಿಯಾಶೀಲವಾಗಿ ಪ್ರಮುಖ ಫುಟ್ ಬಾಲ್ ತಂಡಗಳ ಪ್ರಾಯೋಜನೆಗಳನ್ನು ಕೈಗೊಂಡಿರುವ ತಂಡಗಳೆಂದರೆ: R.S.C. ಆಂಡರ್ಲೆಕ್ಟ್, ರಾಪಿಡ್ ವಿಯೆನ್ನಾ, ರಿಯಲ್ ಮ್ಯಾಡ್ರಿಡ್, ಲಿವರ್ ಪೂಲ್, AC ಮಿಲಾನ್, ಡೈನಮೋ ಕೈಯಿವ್, ಮೆಟಲಿಸ್ಟ್, ಪಾರ್ಟಿಝಾನ್ ಬೆಲ್ ಗ್ರೇಡ್, ಫ್ಲೂಮಿನೆನ್ಸ್, ಪಾಮೀರಾಸ್, ಬಾಯೆರ್ನ್ ಮ್ಯುನಿಕ್, ಚೆಲೆಸಾ, ಸ್ಟೋಕ್ ಸಿಟಿ F.C., ಲಿಯಾನ್, ಮಾರ್ಸಿಯೆಲ್ಲೆ, AFC ಅಜಾಕ್ಸ್, ಸ್ಖಾಲ್ಕೆ ೦೪, ಗಲಟಸರಯ್, ಬೆನ್ ಫಿಕಾ, ರಿವರ್ ಪ್ಲೇಟ್, ಬೆಸಿಕ್ತಾಸ್, ಫೆನೆರ್ಬಾಹ್ಸಿ, UANL ಟೈಗರ್ಸ್, ಪಾನಾಥಿನಾಯ್ಕೋಸ್, ಸೌತ್ ಮೆಲ್ಬೋರ್ನ್ FC, IFK ಗೊಟೆಬೋರ್ಗ್, ಆಲ್-ಆಹ್ಲಿ, ಆಲ್-ಹಿಲಾಲ್, ಆಹ್ಲಿ ಜೆದ್ದಾ, ಕಾರಾಕಾಸ್, ಯೂನಿವರ್ಸಿದಾದ್ ದೆ ಚಿಲಿ, ಲಾಸ್ ಮಿಲೋನಾರಿಯೋಸ್, ಸೆಲಂಗಾರ್, ಬೀಯ್ತರ್ ಜೆರೂಸೆಲಂ F.C.ಆಲ್ಬಿರೆಕ್ಸ್ ನಿಲ್ಗಾತಾ ಮತ್ತು ಅಟ್ಲೆಟಿಕೋ ನಾಸಿಯೋನಲ್. ಅಡೀಡಸ್ ಆಸ್ಟ್ರೇಲಿಯನ್ ಫುಟ್ ಬಾಲ್ ಲೀಗ್ ನಲ್ಲಿರುವ ಕಾಲಿಂಗ್ ವುಡ್ ಫುಟ್ ಬಾಲ್ ಕ್ಲಬ್ ಮತ್ತು ಎಸ್ಸೆಂಡನ್ ಫುಟ್ ಬಾಲ್ ಕ್ಲಬ್ ಗಳ ಪೋಷಾಕುಗಳ ಪಾಲುದಾರ ಸಂಸ್ಥೆಯಾಗಿದೆ. ಅಡೀಡಸ್ ಮತ್ತು ಮೇಜರ್ ಲೀಗ್ ಸಾಕರ್ (MLS) ೮-ವರ್ಷಗಳ ಒಪ್ಪಂದದ ಕರಾರೊಂದನ್ನು ಆಗಸ್ಟ್ ೨೦೧೦ರಲ್ಲಿ ಘೋಷಿಸಿದರು; ಕರಾರಿನ ಪ್ರಕಾರ ಅಡೀಡಸ್ ಈ ಲೀಗ್ ನ ಅಧಿಕೃತ ಅಥ್ಲೆಟಿಕ್ ಪ್ರಾಯೋಜಕ ಹಾಗೂ ಪರವಾನಗಿ ಪಡೆದ ಉತ್ಪಾದನೆಗಳ ಸರಬರಾಜುದಾರ ಆಗಿ ಮುಂದುವರಿಯುತ್ತದೆ ಹಾಗೂ ೨೦೧೮ರವರೆಗೆ ಅಭಿವೃದ್ಧಿಶೀಲ ಲೀಗ್ ಗಳನ್ನು ವಿಸ್ತರಿಸುವಲ್ಲಿ MLSಗೆ ಸಹಾಯಕವಾಗಿರುತ್ತದೆ.[೨೯] ++ ಲಂಡನ್ ಮ್ಯಾರಥಾನ್ ನಂತಹ ಘಟನೆಗಳನ್ನೂ ಪ್ರಾಯೋಜಿಸುತ್ತದೆ. ೧೯೮೦ರ ದಶಕದಲ್ಲಿ ++ ರಾಪ್ ತಂಡವಾದ ರನ್-D.M.C.ಯ ಪ್ರಾಯೋಜಕತ್ವವನ್ನು ಪಡೆದಿತ್ತು, ಇದು ಒಂದು ನೂತನಮಾರ್ಗವನ್ನೇ ತೆರೆದಂತಹ ಆಲೋಚನೆಯಾಗಿತ್ತು. 2008 ಬೇಸಿಗೆ ಒಲಿಂಪಿಕ್ಸ್ {1ಚೀನಾದ ಬೀಜಿಂಗ್{/1} ನಲ್ಲಿ ನಡೆದಾಗ, ++ , ಟೀಕೆಗಳನ್ನೂ ಲೆಕ್ಕಿಸದೆ, ಅ ಘಟನೆಯ ಪ್ರಾಯೋಜಕತ್ವಕ್ಕೆಂದು €೭೦ ಮಿಲಿಯನ್ ಖರ್ಚು ಮಾಡಿತು.[೩೦] ++ NASCARಅನ್ನೂ ವಿಕ್ರಯಿಸುತ್ತಲಿದ್ದ, ಖ್ಯಾತ ಚಾಲಕರಾದ ಡೇಲ್ ಅರ್ನ್ ಹಾರ್ಡ್ಟ್ ಜೂನಿಯರ್ ಮತ್ತು ಟೋನಿ ಸ್ಟುವರ್ಟ್ ರಂತಹವರ ಪ್ರಾಯೋಜಕತೆಯನ್ನೂ ಕೈಗೊಂಡಿದೆ.
ಕಂಪನಿಯ ಬಗ್ಗೆ ಸಾಂಫಿಕ ಮಾಹಿತಿ
ಬದಲಾಯಿಸಿಈಗಿನ ಕಾರ್ಯಕಾರಿ ಮಂಡಳಿ
ಬದಲಾಯಿಸಿ- CEO ಅಡೀಡಸ್-ತಂಡ: ಹರ್ಬರ್ಟ್ ಹೇಯ್ನರ್
- ಆರ್ಥಿಕ ಅಡೀಡಸ್-ತಂಡ: ರಾಬಿನ್ ಜೆ. ಸ್ಟಾಕರ್
- CEO ಅಡೀಡಸ್ ಬ್ರ್ಯಾಂಡ್: ಎರಿಕ್ ಸ್ಟ್ಯಾಮಿಂಗರ್
- ಜಾಗತಿಕ ಕಾರ್ಯಾಚರಣೆಗಳು ಅಡೀಡಸ್-ತಂಡ: ಗ್ಲೆನ್ ಎಸ್. ಬೆನೆಟ್
ಮಾಜಿ ವ್ಯವಸ್ಥಾಪಕ ಮಂಡಳಿ
ಬದಲಾಯಿಸಿ- CEO (೧೯೯೩–೨೦೦೨): ರಾಬರ್ಟ್ ಲೂಯಿಸ್-ಡ್ರೇಫಸ್s.
ವರಮಾನದ ಮಾಹಿತಿ
ಬದಲಾಯಿಸಿವರಮಾನದ ಮಾಹಿತಿ ಮಿಲಿಯನ್ ಯೂರೋಗಳಲ್ಲಿ [೩೧] | |||||
ವರ್ಷ | ೨೦೦೫ | ೨೦೦೬ | ೨೦೦೭ | ೨೦೦೮ | ೨೦೦೯ |
---|---|---|---|---|---|
ಮಾರಾಟ | ೧೦.೦೮೪ | ೧೦.೨೬೬ | ೧೨.೪೭೮ | [14] ^ [13] | ೧೬,೯೭೮ |
EBITDA | ೫೩೨ | ೬೨೭ | ೭೨೫ | ೮೧೮ | ೧,೦೮೨ |
ಒಟ್ಟಾರೆ ಫಲಿತಾಂಶ | ೪೮೩ | ೪೯೯ | ೫೨೦ | ೫೬೦ | ೬೦೦ |
ಒಟ್ಟು ಸಾಲ | ೧೪೯೮ | ೯೪೬ | ೫೯೪ | ೫೫೧ | ೨೨೩೧ |
ಟೀಕೆಗಳು
ಬದಲಾಯಿಸಿಬಹುತೇಕ ಯಶಸ್ವಿ ಬ್ರ್ಯಾಂಡ್-ಮೂಲಗಳುಳ್ಳ ವಿವಿಧದೇಶೋದ್ಯಮಿಗಳು ಎದುರಿಸುವಂತೆಯೇ ++ ನ ವ್ಯಾಪಾರಿ ಕಾರ್ಯಾಚರಣೆಗಳು/ತತ್ವಗಳು ಮತ್ತು ನೌಕರರ ಹಿತಾಸಕ್ತಿಗಳನ್ನು ಸಹ ಸೂಕ್ಷ್ಮವಾಗಿ ಅವಲೋಕಿಸಿ ಆಗಾಗ್ಗೆ ಟೀಕಿಸಲಾಗಿದೆ.[೩೨][೩೩]
ಇವನ್ನೂ ನೋಡಿ
ಬದಲಾಯಿಸಿಟಿಪ್ಪಣಿಗಳು
ಬದಲಾಯಿಸಿ- ↑ ೧.೦ ೧.೧ ೧.೨ "Adidas Group History". Adidas-group.com. Archived from the original on 2011-07-07. Retrieved 2010-09-26. ಉಲ್ಲೇಖ ದೋಷ: Invalid
<ref>
tag; name "history" defined multiple times with different content - ↑ ೨.೦ ೨.೧ ೨.೨ ೨.೩ "Annual Report 2009" (PDF). Adidas. Archived from the original (PDF) on 2010-02-16. Retrieved 2010-03-23.
- ↑ "Adidas, Deutsche Telekom, Infineon: German Equity Preview". Bloomberg L.P. 16 January 2008. Retrieved 2008-01-26.
- ↑ Smit, Barbara (2007). Pitch Invasion, Adidas, Puma and the making of modern sport. Penguin. p. 44. ISBN 0-14-102368-6.
- ↑ Simon Chadwick, Dave Arthur (2007). International cases in the business of sport. Butterworth-Heinemann. p. 438. ISBN 0-7506-8543-3.
- ↑ Smit, Barbara (2009). Sneaker Wars. New York: Harper Perennial. ISBN 978-0-06-124658-6.
- ↑ ೭.೦ ೭.೧ James, Kyle. "The Town that Sibling Rivalry Built, and Divided | Business | Deutsche Welle | 03.07.2006". Dw-world.de. Archived from the original on 2008-10-22. Retrieved 2010-09-26.
- ↑ "How Adidas and PUMA were born". In.rediff.com. 2005-11-08. Archived from the original on 2008-01-17. Retrieved 2010-09-26.
- ↑ "The Prehistory of Adidas and Puma; ''Spiegel''". Spiegel.de. Retrieved 2010-09-26.
- ↑ Esterl, Mike (2008-03-21). "Review of "Sneaker Wars: The Enemy Brothers Who Founded Adidas and PUMA and the Family Feud That Forever Changed the Business of Sport", Barbara Smit, March 2008, ISBN 978-0-06-124657-9". Online.wsj.com. Retrieved 2010-09-26.
- ↑ Esterl, Mike (2008-03-21). "Review of "Sneaker Wars: The Enemy Brothers Who Founded adidas and Puma and the Family Feud That Forever Changed the Business of Sport", Barbara Smit, March 2008, ISBN 978-0-06-124657-9". Online.wsj.com. Retrieved 2010-09-26.
- ↑ ಅಡೀಡಸ್ ಟೋಲ್ಡ್ ಇಟ್ಸ್ ತ್ರೀ ಸ್ಟ್ರೈಪ್ಸ್ ಡೋಂಟ್ ಕಾಂಸ್ಟಿಟ್ಯೂಟ್ ಎ ಟ್ರೇಡ್ ಮಾರ್ಕ್ ದ ಗಾರ್ಡಿಯನ್ ನಲ್ಲಿ
- ↑ "– Stella McCartney collection". Adidas.com. Archived from the original on 2010-11-11. Retrieved 2010-09-26.
- ↑ ಸ್ಟೆಲ್ಲಾ ಮೆಕಾರ್ಟ್ನಿ ಬಯಾಗ್ರಫಿ ಜಾಲತಾಣ ಚಲಚಿತ್ರ ದತ್ತಸಂಚಯದಲ್ಲಿ
- ↑ "AOL.com". Aolsvc.news.aol.com. Archived from the original on 2006-06-03. Retrieved 2010-09-26.
- ↑ "SaveTheKangaroo.com" (PDF). Archived from the original (PDF) on 2011-07-16. Retrieved 2010-09-26.
- ↑ “”. "YouTube.com". YouTube.com. Retrieved 2010-09-26.
{{cite web}}
:|author=
has numeric name (help) - ↑ ಟೆನಿಸ್-ವೇರ್ ಹೌಸ್.com/
- ↑ "adidas tennis". Adidas.com. Retrieved 2010-04-10.
- ↑ "Andy Murray signs head-to-toe deal with Adidas". SportsProMedia. Retrieved 2010-10-10.
- ↑ "'Brand Tendulkar will never lose value'". Indianexpress.com. 2006-05-05. Retrieved 2010-04-10.
- ↑ Pringle, Derek (October 16, 2008). "Kevin Pietersen snaps up lucrative bat deal after the demise of Woodworm". London: The Daily Telegraph. Retrieved 2009-05-14.
- ↑ "Level 2 Sports – Home". Adidasnationallacrosseclassic.com. Archived from the original on 2017-10-02. Retrieved 2010-04-10.
- ↑ "adidas gymnastics". Gkelite.com. Retrieved 2010-04-10.
- ↑ ಡಾಸ್, ಜೆ. "ಬ್ರ್ಯಾಂಡ್ ಲಾಯಲ್ಟಿ ಇನ್ ದ ಯುಕೆ ಸ್ಪೋರ್ಟ್ಸ್ ವೇರ್ ಮಾರ್ಕೆಟ್." ಇಂಟರ್ನ್ಯಾಷನಲ್ ಜರ್ನಲ್ ಆಫ್ ಮಾರ್ಕೆಟ್ ರಿಸರ್ಚ್, ಸಂಪುಟ ೫೧, ಸಂಖ್ಯೆ. ೧ ೨೦೦೯.
- ↑ ":: Mark Wolfe Contemporary Art ::". Wolfecontemporary.com. Archived from the original on 2011-07-18. Retrieved 2010-04-10.
- ↑ "adidas Group 2010 Outlook". Adidas Group. 2010. Archived from the original on 1 ಡಿಸೆಂಬರ್ 2010. Retrieved 8 November 2010.
- ↑ "Islam Feruz called up to U17 squad". ScottishFA.co.uk. 2009-10-12. Retrieved 2009-10-12.
- ↑ "adidas, MLS strike long-term agreement". MLSnet.com. 2004-11-10. Archived from the original on 2010-01-19. Retrieved 2008-08-06.
- ↑ "Adidas Chief Criticizes Anti-China Protestors". Der Spiegel. 2008-05-03. Retrieved 2008-05-03.
- ↑ OpesC (French)
- ↑ "Tyee – Homepage". Thetyee.ca. 2008-06-11. Retrieved 2010-09-26.
- ↑ "News & Views". Common Dreams. 2002-03-08. Archived from the original on 2013-08-07. Retrieved 2010-09-26.
ಉಲ್ಲೇಖಗಳು
ಬದಲಾಯಿಸಿ- "ADIDAS GOLF USA MOVES TO CARLSBAD; ADIDAS FACES LEGAL SUIT". Sports Business Daily. August 19, 1998. Retrieved 22 October 2010.
- "Taylor Made Golf Co". FundingUniverse. Retrieved 22 October 2010.
- Freeman, Mike (August 19, 1999). "Taylor, Adidas merge, reshuffle". The San Diego Union-Tribune. p. C.1. Archived from the original on 23 ಮೇ 2011. Retrieved 22 October 2010.
{{cite news}}
: Text "Hiring of Callaway official for key post could trigger lawsuit" ignored (help) - Ward, Denise T. (May 14, 2001). "Profile: Mark King, Taylor Made For His Job". San Diego Business Journal. Archived from the original on 10 ಸೆಪ್ಟೆಂಬರ್ 2017. Retrieved 22 October 2010.
{{cite news}}
: CS1 maint: bot: original URL status unknown (link)