ಅಡಿಕೆ

ಅಡಿಕೆ ಒಂದು ತೋಟಗಾರಿಕ ಬೆಳೆ.
(ಅಡಕೆ ಇಂದ ಪುನರ್ನಿರ್ದೇಶಿತ)
ಅಡಿಕೆ
Fruiting specimen
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
A. catechu
Binomial name
ಅರೆಕಾ ಕಾಟೇಚು
ಹಣ್ಣಡಿಕೆ.
19th century drawing of Areca catechu
ಕೆಂಪಡಿಕೆ
ಅಡಿಕೆ ಕಾಂಡ

ಅಡಿಕೆ (ಸಂಸ್ಕೃತ:ಪೂಗ, ಮರಾಠಿ ಮತ್ತು ಗುಜರಾತಿ: ಸುಪಾರಿ) ಒಂದು ತೋಟಗಾರಿಕ ಬೆಳೆ. ಇದರ ಮೂಲ ಮಲೇಷ್ಯಾ ದೇಶ. ದಕ್ಷಿಣ ಏಷಿಯಾ ಮತ್ತು ಆಫ್ರಿಕದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಗುಜರಾತ್ ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. ಅರಕಾಸಿಯೆಸಿ ಕುಟುಂಬಕ್ಕೆ ಸೇರಿದ ಸಸ್ಯ. ತಾಳೆ ಜಾತಿಗೆ ಸೇರಿದೆ. ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ. ಭಾರತದಲ್ಲಿ ಮೊಟ್ಟ ಮೊದಲು ಶಿವಮೊಗ್ಗದ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಅಡಿಕೆಯನ್ನ ಕಾಳು ಮೆಣಸು ಬೆಳೆಯಲು ಬೆಳೆಸಲಾಯಿತು. ಇಲ್ಲಿ ಅಡಿಕೆ ಬಹಳ ಪ್ರಸಿದ್ಧವಾದ ಉತ್ತಮ ತಳಿ ಹಾಗೂ ಅಧಿಕ ಇಳುವರಿ ಬರುವ ಮರಗಳು ಇಲ್ಲಿವೆ.[ಮಲೆನಾಡು ಅಡಿಕೆ ೧]

ಅಡಿಕೆ ಮರ

ಬದಲಾಯಿಸಿ
  • ಅಡಿಕೆಯ ಮೂರು / ನಾಲ್ಕು ಅಡಿ ಎತ್ತರದ ಎರಡು ವರ್ಷದ ಸಸಿಯನ್ನು ।½×।½×।½ ಗುಂಡಿತೆಗೆದು ಎಂಟು ಅಡಿಗಳ ದೂರದಲ್ಲಿ 14,16 ಅಡಿ ಅಗಲದ ಪಾತಿ(ಬಣ್ಣ)ಗಳಲ್ಲಿ ಎರಡು ಸಾಲಿನಲ್ಲಿ ನೆಡಲಾಗುವುದು. ಅದು ಸುಮಾರು 5-6 ವರ್ಷಗಳಲ್ಲಿ 14-16 ಅಡಿಗಳ ಎತ್ತರ ಬೆಳೆದು ಚಿಕ್ಕ ಗೊನೆಯ ಫಸಲು ಕೊಡುವುದು; 10–12ವರ್ಷಗಳ ನಂತರ ಉತ್ತಮ ಫಸಲು ಬರುವುದು. ಅಡಿಕೆ ಮರವು ಸುಮಾರು 40–60ಅಡಿಗಳಷ್ಟು ಎತ್ತರ ಬೆಳೆಯುವುದು. ಅದು ಗಟ್ಟಿಯಾದ ನಾರಿನ ಎಳೆಗಳಿಂದ ಆಗಿದ್ದು ।½ ಅಡಿಯಿಂದ 2ಅಡಿ ಸುತ್ತಳತೆಯ ವರೆಗೂ ಇರುವುದು. ಅಡಿಕೆ ಕೊಯಿದು ಇಳಿಸುವುದು ಕಷ್ಟ; ಕೊಯ್ಯುವವರು ಮರ ಹತ್ತಿ ಹತ್ತಿರದ ಮರದ ತುದಿಯನ್ನು ದೋಟಿಯಿಂದ ಎಳೆದು, ಕತ್ತಿಯಿಂದ ಕೊನೆಯ ಕಿವುರು(ತೊಟ್ಟು) ಕತ್ತರಿಸಿ ಕೈಯಿಂದ ಕೊನೆಯನ್ನು ಕಿತ್ತು ತೆಗೆದು ತಮ್ಮ ಸೊಂಟಕ್ಕೆ ಕಟ್ಟಿಕೊಂಡ ಹಗ್ಗದ ಮೇಲಿಂದ ಜಾರಿಸಿ ಕೆಳಕ್ಕೆ ಬಿಡುವರು. ಅದನ್ನು ಕೆಳಗೆ ಹಗ್ಗವನ್ನು ಹಿಡಿದುನಿಂತಿರುವವರು, ಎಚ್ಚರಿಕೆಯಿಂದ ಹಿಡಿದು ರಾಶಿ ಹಾಕುವರು. ಕೆಲವುಕಡೆ ಹಾಗೆಯೇ ಕೊನೆಯನ್ನು ನೆಲಕ್ಕೆ ಹಾಕುವರು.
  • ಅಡಿಕೆ ಮರವು ತುಂಬಾ ಗಟ್ಟಿಯಾಗಿದ್ದು ಹಲವು ಉಪಯೋಗಗಳಿಗೆ ಬರುವುದು. ಮನೆ ಕಟ್ಟಲು ಹಿಂದೆ(ಈಗಲೂ)ಎರಡು ಹೋಳುಮಾಡಿದ ತುಂಡನ್ನು ಮನೆಯ ಮಾಡಿಗೆ(roof) ಪಕಾಶಿಯ(ರ್ಯಾಫ್ಟರ್-rafter) ಬದಲಿಗೆ ಬಳಸುವರು ಅದರ ಎರಡು ಇಂಚು ಸಿಗಿದ ಪಟ್ಟಿಯನ್ನು ಹಂಚುಹಾಕುವ ಅಥವಾ ಹುಲ್ಲು ಹೊದೆಸುವ ರೀಪು ಪಟ್ಟಿಗೆ ಬಳಸುವರು ; ಬೇಲಿಗೆ ಅಡ್ಡ ಪಟ್ಟಿಗೆ ಬಳಸುವರು. ಚಪ್ಪರ ಹಾಕಲು ಅಡಿಕೆ ಒಣಗಿಸುವ ಪಟ್ಟಿಗಳನ್ನು ಹತ್ತಿರ ಹತ್ತಿರ ಜೋಡಿಸಿದ ಚಪ್ಪರ(ಅಟ್ಟ) ಹಾಕಲು ಉಪಯೋಗಿಸುವರು. ಒಣಗಿ ಲಡ್ಡಾದರೆ ಸೌದೆ.

ಅಡಿಕೆಯಲ್ಲಿ ವಿಧಗಳು

ಬದಲಾಯಿಸಿ
  • ಕ್ಯಾಸನೂರು ಅಡಿಕೆ ತಳಿ ಬಹಳ ಪ್ರಸಿದ್ಧ. ಇಲ್ಲಿಯ ಸಸಿಗಳನ್ನ ಕೊಂಡು ಬೆಳೆದವರು ಬಹಳ ಬೇಗ ಶ್ರೀಮಂತರಾಗಿದ್ದಾರೆ. ರಾಶಿಗೆ, ಚಾಲಿಗೆ, ಚಿಕಣಿ ಅಡಿಕೆಗೆ ಹೇಳಿ ಮಾಡಿಸಿದಂತ ತಳಿ. ಯಾವ ರೋಗ ಬಾದೆಗೂ ಸುಲಭಕ್ಕೆ ತುತ್ತಾಗದ ಅಧಿಕ ರೋಗನಿರೋಧಕ ಶಕ್ತಿ ಇರುವ ಎಲ್ಲ ಪ್ರದೇಶದಲ್ಲೂ ಅಧಿಕ ಶಾಖ ಮಳೆ ಚಳಿ ಬರಕ್ಕೂ ಜಗ್ಗದ ಈ ತಳಿ ಸಾಮಾನ್ಯ ಕೃಷಿಗೂ ಅಧಿಕ ಇಳುವರಿ ಕೊಡುವ ಜಾತಿ ಅಂದ್ರೆ ಅದು ಕ್ಯಾಸನೂರು ಅಡಿಕೆ.

[]

  • ತಾಂಬೂಲದಲ್ಲಿ ಸೇವಿಸುವ ಅಡಿಕೆ ತಯಾರಿಸಲು ಅದಕ್ಕೆ ಅನೇಕ ಬಗೆಯ ಸಂಸ್ಕರಣೆ ಮಾಡಬೇಕಾಗುವುದು. ಒಂದು ಮರದಿಂದ ಕೊಯಿದ ಸಿಪ್ಪೆ ಸಹಿತ ಅಡಿಕೆ ಸುಮಾರು 2 -4 ಸೆಂ ಮೀ.ಉದ್ದ 3-4/5ಸೆಂ.ಮೀ. ಸುತ್ತಳತೆ ಇರುವುದು. ಮರದಿಂದ ಕೊಯಿದು ತಂದ ಹಸಿರು ಅಡಿಕೆಯನ್ನು ಸುಲಿದು ಬೇಯಿಸಿ 8-10 ದಿನ ಬಿಸಿಲಲ್ಲಿ ಒಣಗಿಸಿದರೆ ಕೆಂಪು ಅಡಿಕೆ ಸಿದ್ಧವಾಗುತ್ತದೆ. ಇದು ರಾಶಿ ಅಡಿಕೆ. ಅದರಲ್ಲಿ ಬೆಳೆದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ = ಬೆಟ್ಟೆ ಸಿಪ್ಪೆ ಪೂರ್ಣ ಬಿಡದ ಅಡಿಕೆ = ಕೆಂಪುಗೋಟು, ನೆರಿ-ನೆರಿ ಇರುವ ಬೆಳೆದ ಅಡಿಕೆ = ನುರಿಅಡಿಕೆ, ಸುರಿಟಿಕೊಂಡ ಎಳೆಯ ಅಡಿಕೆ = ಚಿಕಣಿ, ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ = ಆಪಿಅಡಿಕೆ, ಹೀಗೆ ಬೇರೆ ಬೇರೆ ವಿಧಗಳ ಅಡಿಕೆಯನ್ನು ಆಯ್ದು ಬೇರ್ಪಡಿಸಲಾಗುವುದು. ಶಿವಮೊಗ್ಗ ಮತ್ತು ಕೆಲವು ಕಡೆ ಎಳೆಹಸಿ ಅಡಿಕೆಯನ್ನು ಎರಡು ಅಥವಾ ನಾಲ್ಕೈದು ಸೀಳು ಮಾಡಿ ಬೇಯಿಸಿ ಒಣಗಿಸಲಾಗುವುದು; ಇದಕ್ಕೆ 'ಸರಕು' ಅಥವಾ ಹೋಳು ಅಡಿಕೆ ಎನ್ನುವರು. ಇದರಲ್ಲೂ ಬೇರೆ ಬೇರೆ ವಿಧಗಳನ್ನು ವಿಂಗಡಿಸಲಾಗುವುದು ಇದಕ್ಕೆ ಬೆಲೆ ಎಲ್ಲದಕ್ಕಿಂತ ಹೆಚ್ಚು.[]

(ಉದಾ:2014ಜೂನ್ ಬೆಲೆ-ಪ್ರಥಮ ದರ್ಜೆ ಸರಕು ,ಕ್ವಿಂಟಲ್ 1 ಕ್ಕೆ=ರೂ.42,000-48,000)

  • 2014ಜೂನ್ ಬೆಲೆ-)ಕೆಂಪು ದುಂಡು ಅಡಿಕೆ;
  1. ಸುರಿಟಿಕೊಂಡ ಎಳೆಯ ಅಡಿಕೆ =ಚಿಕಣಿ :ಮೊದಲ ದರ್ಜೆ;
  2. ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ=ಆಪಿ :ಮೊದಲ ದರ್ಜೆ;
  3. ಚಿಕಣಿ +ಆಪಿ+ಬೆಟ್ಟೆ = ಸೇರಿರುವುದು =ರಾಶಿ :ಎರಡನೇ ದರ್ಜೆ(ರೂ.೩೫,೦೦೦-೪೪,೦೦೦)
  4. ಬೆಳದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ =ಬೆಟ್ಟೆ :ಮೂರನೇ ದರ್ಜೆ (೩೫೦೦೦ -೪೪,೦೦೦)
  5. ನೆರಿ-ನೆರಿ ಇರುವ ಬೆಳೆದ ಅಡಿಕೆ=ನುರಿಅಡಿಕೆ,:ನಾಲ್ಕನೇ ದರ್ಜೆ
  6. ಸಿಪ್ಪೆ ಪೂರ್ಣ ಬಿಡದ ಅಡಿಕೆ =ಕೆಂಪುಗೋಟು :ಐದನೇ ದರ್ಜೆ(೨೦,೦೦೦–೨೭,೦೦೦/20000-27,000)
ಚಾಲಿ
  • ಬೇಯಿಸದ ಹಣ್ಣು ಅಡಿಕೆಯನ್ನು ಸುಮಾರು ನಲವತ್ತು ದಿನ ಒಣಗಿಸಿದರೆ ಸಿಪ್ಪೆಕಳಚಿ ಕೊಬ್ಬರಿಯಂತಾಗುವುದು; ಅದನ್ನು ಸುಲಿದರೆ 'ಚಾಲಿ' ಅನ್ನುವ ಬಿಳಿ ಅಡಿಕೆ ಸಿಗುವುದು. ಅದನ್ನು ಮತ್ತೆ ಗುಣಕ್ಕೆ ತಕ್ಕಂತೆ ವಿಂಗಡಿಸಲಾಗುವುದು. ಇದಕ್ಕೆ ಕೆಂಪು ಅಡಿಕೆಗಿಂತ ಬೆಲೆ ಸಾಮಾನ್ಯವಾಗಿ ಸ್ವಲ್ಪ ಕಡಿಮೆ ಇರುವುದು. ಉದಾಹರಣೆಗೆ ಚಾಲಿ ರಾಶಿ=2014ಜೂನ್ 1ಕ್ವಿಂಟಲ್ ಗೆ ರೂ.20000-22,000.
    • 2014 ಜುಲೈನಲ್ಲಿ ಅಡಿಕೆಯ ಬೆಲೆ ಎಂದೂ ಕಾಣದಷ್ಟು ಏರಿದೆ : ಶಿರಸಿಯಲ್ಲಿ 8-7-2014ರ ಬೆಲೆ : ಒಂದು ಟ್ವಿಂಟಲಿಗೆ :ಬಿಳಿ ಗೋಟು-16,690- 31200;ಹೊಸ ಚಾಲಿ 34000-40000; ರಾಶಿ-688000-80600;ಕೋಕಾ (ಕೆಟ್ಟಿರುವ ಅಡಿಕೆ) 12090-31219; ಬೆಟ್ಟೆ- 40099-69400 ಕೆಂಪು ಗೋಟು 27089-36೦00.

ಅಡಿಕೆ ಉತ್ಪಾದನೆ ಮತ್ತು ದರ/ಧಾರಣೆ

ಬದಲಾಯಿಸಿ
  • ಕರ್ನಾಟಕ ರಾಜ್ಯದ್ದೇ ಸಿಂಹಪಾಲು.
  • ದೇಶದಲ್ಲಿ ಸುಮಾರು 4 (3.81) ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಸರಾಸರಿ ಸುಮಾರು 6 ಲಕ್ಷ ಟನ್‌ (ಟನ್ =10 ಕ್ವಿಂಟಲ್) ಉತ್ಪಾದನೆಯಾಗುತ್ತದೆ. ಇದರಲ್ಲಿ ಎರಡು(2.24) ಲಕ್ಷ ಹೆಕ್ಟೇರ್‌ಗೂ (1 ಹೆಕ್ಟೇರ್ = 2.5 =2 1/2ಎಕರೆ) ಹೆಚ್ಚು ಪ್ರದೇಶ ಕರ್ನಾಟಕದಲ್ಲಿಯೇ ಇದೆ. ಇಲ್ಲಿ ಶೇ೪೦.೬(40.6) 2.24 ಲಕ್ಷ ಮೆಟ್ರಿಕ್ ಟನ್‍ನಷ್ಟು ಉತ್ಪಾದನೆಯಾಗುತ್ತದೆ.(ಶಿವಮೊಗ್ಗ ಮ್ಯಾಮ್ಕೋಸ್/MAMCOS ವರದಿ) ಹಾಗಾಗಿ, ಅಡಿಕೆ ಮಾರುಕಟ್ಟೆಯ ಪ್ರತಿ ಏರಿಳಿತಗಳೂ ಇಲ್ಲಿನ ರೈತರಲ್ಲಿ ತಲ್ಲಣ ಮೂಡಿಸುತ್ತವೆ.
  • ಮಲೇಷಿಯಾ ಸೇರಿದಂತೆ ಕೆಲವು ದೇಶಗಳ ಅಡಿಕೆ ಕ್ವಿಂಟಲ್‌ಗೆ ರೂ. 7 ಸಾವಿರಕ್ಕೆ ಸಿಗುತ್ತಿತ್ತು. ಆ ದರವನ್ನು 11 ಸಾವಿರಕ್ಕೆ ಹೆಚ್ಚಳ ಮಾಡಿ, ಅದರ ಮೇಲೆ ಶೇ 50ರಷ್ಟು ಆಮದು ಸುಂಕ ವಿಧಿಸಿದ ಕಾರಣ ಅಲ್ಲಿನ ಅಡಿಕೆ ಬೆಲೆ ಈಗ ರೂ. 13,500 ತಲುಪಿದೆ.
  • ೨೦೧೪/2014 ,ಜೂನ್ - ಇತಿಹಾಸದಲ್ಲೇ ಇದೇ ಮೊದಲ ಬಾರಿ ಅಡಿಕೆಗೆ ಚಿನ್ನದ ಬೆಲೆ ಬಂದಿದ್ದು, ಎರಡು ತಿಂಗಳಿನಿಂದ ನಾಗಾಲೋಟದಲ್ಲಿ ಮೇಲೇರುತ್ತಾ ಸಾಗಿರುವ ಅಡಿಕೆ ಧಾರಣೆ ಪ್ರಸಕ್ತ ತಿಂಗಳು ಕೆಂಪು ಅಡಿಕೆ, (ಬೇಯಿಸಿ ಒಣಗಿಸಿದ ಪ್ರಥಮ ದರ್ಜೆ ಅಡಿಕೆ) ಕ್ವಿಂಟಲ್ ಗೆ ರೂ. 50 ಸಾವಿರದ ಗಡಿ ಸಮೀಪಿಸುತ್ತಿದೆ. ಅದೇ 2013 ಜೂನ್`ನಲ್ಲಿ ಉತ್ತಮ ಅಡಿಕೆ ಕ್ವಿಂಟಲ್`ಗೆ ರೂ.14,000-ದಿಂದ 20,000 ಇತ್ತು.
  • 2014 ಜುಲೈನಲ್ಲಿ ಅಡಿಕೆಯ ಬೆಲೆ ಎಂದೂ ಕಾಣದಷ್ಟು ಏರಿದೆ : ಪ್ರಮುಖ ಮಾರುಕಟ್ಟೆ ಶಿರಸಿಯಲ್ಲಿ 8-7-2014ರ ಬೆಲೆ : ಒಂದು ಕ್ವಿಂಟಲಿಗೆ :ಬಿಳಿ ಗೋಟು-16,690- 31200;ಹೊಸ ಚಾಲಿ 34000-40000; ರಾಶಿ-688000-80600;ಕೋಕಾ (ಕೆಟ್ಟಿರುವ ಅಡಿಕೆ) 12090-31219; ಬೆಟ್ಟೆ- 40099-69400 ಕೆಂಪು ಗೋಟು 27089-36೦00.(ಪ್ರಜಾವಾಣಿ ೯-೭-೨೦೧೪)
  • (ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 32,582 ಹೆಕ್ಟೇರ್ ವಿಸ್ತೀರ್ಣದಲ್ಲಿ ಅಡಿಕೆ ಬೆಳೆಯಿದೆ. ವಾರ್ಷಿಕ 33,155 ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ, ಇದು ತೋಟಗಾರಿಕಾ ಇಲಾಖೆಯ ಅಂಕಿಅಂಶ. ಕ್ಯಾಂಪ್ಕೋ ಮತ್ತು ಬೆಳೆಗಾರರ ಲೆಕ್ಕಾಚಾರದಂತೆ ಅಡಿಕೆ ಉತ್ಪಾದನೆ ಐವತ್ತು (ಸಾವಿರ?) ಮೆಟ್ರಿಕ್ ಟನ್, ವಿಸ್ತೀರ್ಣ ನಲವತ್ತೈದು ಸಾವಿರ ಹೆಕ್ಟೇರ್ ಮೀರಬಹುದು![೧])

ಅಡಿಕೆ ಧಾರಣೆ

ಬದಲಾಯಿಸಿ

ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲು ಇದ್ದ ೨೦,೦೦೦ ಹೆಕ್ಟೇರ್ ಪ್ರದೇಶ ಈಗ ೪೭ ಹೆಕ್ಟೇರ್` ಪ್ರದೇಶಕ್ಕೆ ವಿಸ್ತಾರಗೊಂಡಿದೆ. ಈ ಜಿಲ್ಲೆಯ ವಾರ್ಷಿಕ ಸರಾಸರಿ ಉತ್ಪಾದನೆ ಒಂದು ಲಕ್ಷ ಟನ್ ದಾಟಿದೆ. ರಾಜ್ಯದ ಅಡಿಕೆ ಉತ್ಪಾದನೆಯಲ್ಲಿ ಈ ಜಿಲ್ಲೆಯ ಉತ್ಪಾದನೆ ಶೇ.೨೮ ಕ್ಕೂ ಮೀರುತ್ತದೆ. ಇಲ್ಲಿ ಕ್ಯಾಸನೂರು ಎಂಬ ಗ್ರಾಮದ ಅಡಿಕೆ ತಳಿ ತುಂಬಾ ಪುರಾತನ ಇತಿಹಾಸ ಇರುವುದು. ಅಧಿಕ ಇಳುವರಿ ಮತ್ತು ಭಾರ ಹೆಚ್ಚು ಎಲ್ಲ ಅಡಿಕೆ ತಳಿಗಿಂತ ಇದು ಉತ್ತಮ ತಳಿ.

10 ವರ್ಷದ ಅಡಿಕೆ ಧಾರಣೆ-
ಕ್ವಿಂಟಲ್‍ಗೆ -ರೂ.
ವರ್ಷ ಕನಿಷ್ಠ ಗರಿಷ್ಠ
2004-05 7009 15639
2005-06 7669 18400
2006-07 10942 25054
2007-08 0700 21369
2008-09 7815 12719
2009-10 8159 24339
2010-11 10009 26739
2011-12 9999 28340
2012-13 11261 21906
2013-14 15000 37500
2014-15 18209, 90000

(ಅಂಕೆ ಅಂಶ ಸಂಗ್ರಹ:ಚಂದ್ರಕಾಂತ ಹಿರೇಮಳಲಿ ಮತ್ತು ನಂದಪ್ಪರ ರಮೇಶ-ವರದಿ- ಪ್ರಜಾವಾಣಿ:೧೩-೭-೨೦೧೪)

ತಳಿಗಳು

ಬದಲಾಯಿಸಿ
  • ಕ್ಯಾಸನೂರು ಸೀಮೆ ನಾಟಿ ಅಡಿಕೆ
  • ಸುಮಂಗಳಾ
  • ಸ್ವರ್ಣ ಮಂಗಳ
  • ಪಾಂಡವರ ಅಡಿಕೆ.
  • ಇಂಟರ್ ಮಂಗಳ.
  • ಮೋಹಿತ್ ನಗರ.

ಉಲ್ಲೇಖಗಳು

ಬದಲಾಯಿಸಿ
  1. |url=http://www.ars-grin.gov/cgi-bin/npgs/html/taxon.pl?3903 |title=Areca catechu information from NPGS/GRIN |publisher=www.ars-grin.gov |accessdate=2008-03-02
  2. "ಆರ್ಕೈವ್ ನಕಲು". Archived from the original on 2021-12-30. Retrieved 2021-12-30.
  3. http://economictimes.indiatimes.com/topic/arecanut


ಉಲ್ಲೇಖ ದೋಷ: <ref> tags exist for a group named "ಮಲೆನಾಡು ಅಡಿಕೆ", but no corresponding <references group="ಮಲೆನಾಡು ಅಡಿಕೆ"/> tag was found

"https://kn.wikipedia.org/w/index.php?title=ಅಡಿಕೆ&oldid=1201393" ಇಂದ ಪಡೆಯಲ್ಪಟ್ಟಿದೆ