ಅಜ್ಞಾನ ಎಂದರೆ ಜ್ಞಾನದ ಕೊರತೆ. ಅಜ್ಞಾನಿ ಶಬ್ದವು ಅರಿವಿಲ್ಲದ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ವರ್ಣಿಸುತ್ತದೆ, ಮತ್ತು ಹಲವುವೇಳೆ (ತಪ್ಪಾಗಿ) ಉದ್ದೇಶಪೂರ್ವಕವಾಗಿ ಮುಖ್ಯ ಮಾಹಿತಿ ಅಥವಾ ವಾಸ್ತವಾಂಶಗಳನ್ನು ನಿರ್ಲಕ್ಷಿಸುವ ಅಥವಾ ಕಡೆಗಣಿಸುವ ವ್ಯಕ್ತಿಗಳನ್ನು ವರ್ಣಿಸಲು ಬಳಸಲ್ಪಡುತ್ತದೆ. ಅಜ್ಞಾನವು ಮೂರ್ಖತನದಿಂದ ಭಿನ್ನವಾಗಿದೆ, ಆದರೂ ಎರಡೂ ಅವಿವೇಕದ ಕ್ರಿಯೆಗಳಿಗೆ ಕಾರಣವಾಗಬಲ್ಲವು.

ಒಬ್ಬರ ಅಜ್ಞಾನದ ವ್ಯಾಪ್ತಿ ಮತ್ತು ರಚನೆ ಬಗ್ಗೆ: "ಅಜ್ಞಾನವು ಒಬ್ಬ ವ್ಯಕ್ತಿಯ ಮಾನಸಿಕ ನಕ್ಷೆ ಮೇಲಿನ ಖಾಲಿ ಜಾಗ ಮಾತ್ರವಲ್ಲ. ಅದು ಬಾಹ್ಯರೇಖೆಗಳು ಮತ್ತು ಸುಸಂಬದ್ಧತೆ ಹೊಂದಿದೆ, ಮತ್ತು ನನಗೆ ತಿಳಿದಂತೆ ಕಾರ್ಯಕ್ರಿಯೆಯ ನಿಯಮಗಳನ್ನು ಕೂಡ. ಹಾಗಾಗಿ ನಮಗೆ ತಿಳಿದಿರುವ ಬಗ್ಗೆ ಬರವಣಿಗೆಗೆ ಉಪಸಿದ್ಧಾಂತವಾಗಿ, ಬಹುಶಃ ನಾವು ನಮ್ಮ ಅಜ್ಞಾನಕ್ಕೆ ಪರಿಚಿತರಾಗುವುದನ್ನು, ಮತ್ತು ಒಂದು ಉತ್ತಮ ಕಥೆ ಬರೆಯಲು ಅದರಲ್ಲಿನ ಸಂಭಾವ್ಯತೆಗಳನ್ನು ಸೇರಿಸಬೇಕಾಗಬಹುದು", ಎಂದು ಬರಹಗಾರ ಪಿಂಚನ್ ಸ್ಪಷ್ಟವಾಗಿ ತಿಳಿಸಿದರು.[]

ಒಂದು ವಿಷಯದ ಬಗ್ಗೆ ಬಾಹ್ಯ ಜ್ಞಾನವಿರುವ ವ್ಯಕ್ತಿಗಳ ಸ್ಥಿತಿ ಸಂಪೂರ್ಣವಾಗಿ ಏನೂ ಗೊತ್ತಿರದ ಜನರಿಗಿಂತ ಕೆಟ್ಟದಾಗಿರಬಹುದು. ಚಾರ್ಲ್ಸ್ ಡಾರ್ವಿನ್ ಗಮನಿಸಿದಂತೆ, "ಅಜ್ಞಾನವು ಜ್ಞಾನಕ್ಕಿಂತ ಹೆಚ್ಚು ಆಗಾಗ್ಗೆ ಆತ್ಮವಿಶ್ವಾಸವನ್ನು ಉತ್ಪನ್ನ ಮಾಡುತ್ತದೆ."

ಅಜ್ಞಾನವು ಕಲಿಕೆಯನ್ನು ಹತ್ತಿಕ್ಕಬಹುದು, ವಿಶೇಷವಾಗಿ ಅಜ್ಞಾನಿ ವ್ಯಕ್ತಿಯು ತಾನು ಅಜ್ಞಾನಿಯಲ್ಲ ಎಂದು ನಂಬಿದರೆ. ತಾನು ಜ್ಞಾನಿ ಎಂದು ತಪ್ಪಾಗಿ ನಂಬುವ ವ್ಯಕ್ತಿ ತನ್ನ ನಂಬಿಕೆಗಳ ಸ್ಪಷ್ಟೀಕರಣವನ್ನು ಹುಡುಕುವುದಿಲ್ಲ, ಬದಲಾಗಿ ತನ್ನ ಅಜ್ಞಾನದ ಸ್ಥಿತಿ ಮೇಲೆ ಅವಲಂಬಿಸುತ್ತಾನೆ. ಅವನು ಅಥವಾ ಅವಳು ಸಮಂಜಸ ಆದರೆ ವಿರುದ್ಧ ಮಾಹಿತಿಯನ್ನೂ ತಿರಸ್ಕರಿಸಬಹುದು, ಮತ್ತು ಅದರ ಪ್ರಾಮುಖ್ಯವನ್ನು ಅರಿತುಕೊಳ್ಳುವುದಿಲ್ಲ ಅಥವಾ ಅದನ್ನು ತಿಳಿದುಕೊಳ್ಳುವುದಿಲ್ಲ.

ಅವಿದ್ಯೆ

ಉಲ್ಲೇಖಗಳು

ಬದಲಾಯಿಸಿ
  1. Pynchon, Thomas (1984). "Introduction". Slow learner : early stories. Boston: Little, Brown. pp. 15–16. ISBN 0-316-72442-4.


"https://kn.wikipedia.org/w/index.php?title=ಅಜ್ಞಾನ&oldid=1210588" ಇಂದ ಪಡೆಯಲ್ಪಟ್ಟಿದೆ