ಅಜೋರ್ಸ್ ದ್ವೀಪಗಳು

ಅಟ್ಲಾಂಟಿಕ್ ಮಹಾಸಾಗರಲ್ಲಿ ೩೦(-೪೦( ಉ, ಅ; ೨೫(-೩೧( ಪ.ರೇ.ಗಳವರೆಗೆ ಹರಡಿವೆ. ಸಾವೋ ಮಿಗಲ್ ದೊಡ್ಡ ದ್ವೀಪ. ಇತರ ದ್ವೀಪಗಳೆಂದರೆ-ಸಾಂತಾ ಮೇರಿಯಾ, ಫಾರ್ಮಿಗಸ್, ರಾಕ್ಸ್, ಟೆರಿಸೀರಾ, ಗ್ರೇಷಿಯಸಾ, ಸಾವೊ, ಜೋರ್ಗಾ, ಪಿಕೊ, ಫಯಾಲ ಮತ್ತು ಫ್ಲೋರ್ಸ್ ಕಾರ್ವೊ. ಈ ದ್ವೀಪಗಳ ಒಟ್ಟು ವಿಸ್ತೀರ್ಣ ೯೦೦. ಚ. ಮೈಲಿಗಳು.

ಪೋರ್ಚುಗಲ್ ನ ಪಳಮೆಯರಿಗ ನುನೊ ರಿಬೈರೊ ಈ ದ್ವೀಪದಲ್ಲಿ ಅಂತ್ಯಕ್ರಿಯೆಗೆ ಬಲಸುವ ಇಟ್ಟಿಗೆಗಳನ್ನು ಕಂಡ ನಂತರ ಇಲ್ಲಿ ಪೋರ್ಚುಗೀಸರಿಗಿಂತಲೂ ೨೦೦೦ ವರ್ಷಗಳಷ್ಟು ಮುಂಚೆಯೇ ಇಲ್ಲಿ ಮಾನವರು ವಾಸಿಸಿರಬಹುದು ಎಂದು ಊಹಿಸಿದ್ದಾರೆ.

ಇತಿಹಾಸ

ಬದಲಾಯಿಸಿ

೧೪೪೫ ರಲ್ಲಿ ದ್ವೀಪಗಳನ್ನು ಪೋರ್ಚುಗೀಸರು ಕಂಡುಹಿಡಿದರು. ೧೫೮೦ ರಿಂದ ೧೬೪೦ ರವರೆಗೆ ಈ ದ್ವೀಪಗಳು ಸ್ಪೇನಿನ ವಶದಲ್ಲಿದ್ದವು. ೧೮೨೩ ರಿಂದ ೧೯೩೩ ರವರೆಗೆ ಪೋರ್ಚುಗೀಸರಿಗೂ ಸ್ಪೇನಿನವರಿಗೂ ಹೋರಾಟ ನಡೆದು, ಪೋರ್ಚುಗೀಸರು ಪುನಃ ಈ ದ್ವೀಪಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈಗಲೂ ಇವು ಪೋರ್ಚುಗಲ್ ಸಾಮ್ರಾಜ್ಯಕ್ಕೆ ಸೇರಿವೆ. ಇಲ್ಲಿನ ಜನಸಂಖ್ಯೆಯಲ್ಲಿ ಅವರದೇ ಮೇಲುಗೈ.

ಭೌಗೋಳಿಕತೆ

ಬದಲಾಯಿಸಿ

ಈ ದ್ವೀಪಗಳು ಹೆಚ್ಚು ಮಲೆಸೀಮೆಯಾಗಿದ್ದು, ಇಲ್ಲಿ ಅನೇಕ ಜ್ವಾಲಾಮುಖಿಗಳಿವೆ. ಆದ್ದರಿಂದ ಆಗಾಗ್ಗೆ ಭೂಕಂಪಗಳುಂಟಾಗುತ್ತವೆ. ಬಿಸಿನೀರಿನ ಅನೇಕ ಬುಗ್ಗೆಗಳಿವೆ.[] ಹವಾಮಾನ ಸಮಶೀತೋಷ್ಣವಾಗಿದೆ. ಜವರ ಮುಖ್ಯ ಉದ್ಯೋಗ ಬೇಸಾಯ ಮತ್ತು ಪಶುಪಾಲನೆ. ಇಲ್ಲಿಯ ಮುಖ್ಯ ಹುಟ್ಟುವಳಿಗಳೆಂದರೆ-ಗೋಧಿ, ದ್ವಿದಳ ಧಾನ್ಯಗಳು, ತಂಬಾಕು, ಆಲೂಗಡ್ಡೆ, ಅನಾನಸ್, ಕಿತ್ತಳೆ ಮತ್ತು ಬಾಳೆ. ಮದ್ಯ, ಹಣ್ಣು ಹಂಪಲು, ಗಿಣ್ಣು, ಬೆಣ್ಣೆ, ದನ ಮತ್ತು ಹಂದಿಗಳ ಮಾಂಸ-ಇವು ರಫ್ತಾಗುತ್ತವೆ. ಫಯಾಲ ದ್ವೀಪದಲ್ಲಿ ಹೋರ್ಟಾ ಎಂಬುದು ಉತ್ತಮ ಬಂದರು. ಟರ್ಸೀರ ದ್ವೀಪಗಳಲ್ಲಿ ಅಂಗ್ರಾ ಎಂಬುದು ದೇಶದ ರಾಜಧಾನಿ. ಈ ದ್ವೀಪದಲ್ಲಿ ವಾಸಿಸುವವರಲ್ಲಿ ಪೋರ್ಚುಗೀಸರ ಸಂಖ್ಯೆಯೇ ಹೆಚ್ಚು.[]

ಜನಗಣತಿ

ಬದಲಾಯಿಸಿ

೨೦೧೧ ಜನಗಣತಿಯ ಪ್ರಕಾರ, ಅಜೋರ್ಸ್ ದ್ವೀಪದಲ್ಲಿ ಜನಸಂಖ್ಯೆಯು ಪ್ರತಿ ಚದರ ಕಿಲೋಮೀಟರ್ (೨೭೦ / ಚ ಮೈ) ಗೆ ೧೦೬ ನಿವಾಸಿಗಳಂತೆ ಒಟ್ಟು ೨೪೬,೭೪೬ ಆಗಿತ್ತು.

೧೫ ನೇ ಶತಮಾನದಲ್ಲಿ ಪೋರ್ಚುಗೀಸ್ ನಾವಿಕರು ಅಝೋರ್ಸ್ ದ್ವೀಪವನ್ನು ನಿರ್ಜನ ಸ್ಥಳವನ್ನಾಗಿಸಿದರು. ನಂತರ ೧೪೩೯ರಲ್ಲಿ ಪೋರ್ಚುಗಲ್ ನ ವಿವಿಧ ಪ್ರದೇಶಗಳ ಮತ್ತು ಮಡೈರಾದ ವ್ಯಕ್ತಿಗಳ ಜೊತೆ ವಸಾಹತು ಪ್ರಕ್ರಿಯೆ ಆರಂಭವಾಯಿತು. ದ್ವೀಪಗಳು ಮುಖ್ಯವಾಗಿ ಪೋರ್ಚುಗಲ್ ನ ಅಲಗಾರ್ವ್, ಅಲೆಂಟೆಜೊ ಮತ್ತು ಮಿನ್ಹೊ ವಲಸಿಗರಿಂದ; ಪೋರ್ಚುಗೀಸ್ ಶೋಧನೆಯ ಒತ್ತಡಗಳು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅನೇಕ ಸಿಫಾರ್ಡಿ ಯಹೂದಿಗಳು ಇವರನ್ನು 'ನ್ಯೂ ಕ್ರಿಶ್ಚಿಯನ್ನರು' ಎಂದು ಕರೆಯಲಾಗುತ್ತದೆ, (ಪೋರ್ಚುಗೀಸ್ ಶೋಧನೆಯ ಸಮಯದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರು) ದೊಡ್ಡ ಸಂಖ್ಯೆಯಲ್ಲಿ ದ್ವೀಪದಲ್ಲಿ ನೆಲೆಸಿದರು . ಅಜೋರಿಯನ್ ಯಹೂದಿಗಳಿಗೆ ರೊಡ್ರಿಗಸ್, ಒಲಿವಿಯೇರ, ಪೆರೇರಾ, ಪೈಮೆಂಟೆಲ್, ಕಾರ್ಡೊಜೊ, ಟೀಕ್ಸೀರಾ, ಇತ್ಯಾದಿ ಉಪನಾಮಗಳಿದ್ದವು; ದ್ವೀಪದಲ್ಲಿ ಮೂರಿಶ್ ಖೈದಿಗಳು, ಗಿನಿ, ಕೇಪ್ ವರ್ಡೆ ಹಾಗೂ ಸಾವೊ ಟೋಮೆಯ ಆಫ್ರಿಕನ್ ಗುಲಾಮರನ್ನು ಇತ್ಯರ್ಥಗೊಳಿಸಲಾಯಿತು, ಫ್ಲೆಮಿಷ್, ಫ್ರೆಂಚ್ ಮತ್ತು ಗೆಲಿಸಿಯನ್ನರೂ ಸಹ ಇಲ್ಲಿ ಆರಂಭಿಕ ಹಂತದ ವಸಾಹತಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೀಗಾಗಿ ಇಲ್ಲಿನ ಜನಕ್ಕೆ ಪೋರ್ಚುಗೀಸ್ ಅಲ್ಲದೇ ಬೇರೆ ಆನುವಂಶಿಕ ಹಿನ್ನೆಲೆಯನ್ನು ಹೊಂದಿದ್ದಾರೆ. ಆಫ್ರಿಕಾದ ಗುಲಾಮರನ್ನು ಬ್ರೆಜಿಲ್ ಮತ್ತು ಕೆರಿಬಿಯನ್ ದೇಶಗಳಿಗೆ ಕಳುಹಿಸಿದ ನಂತರ ಇಲ್ಲಿನ ಆರ್ಥಿಕ ಸ್ವರೂಪವು ಆಫ್ರಿಕನ್ ಗುಲಾಮಗಿರಿಯನ್ನು ನಿಷೇಧಿಸಿ ಆದೇಶಿಸಿತು.

ಅಂತಾರಾಷ್ಟ್ರೀಯ ವ್ಯವಹಾರಗಳು

ಬದಲಾಯಿಸಿ

೨೦೦೩ ರಲ್ಲಿ ಇರಾಕ್ ಯದ್ದಕ್ಕೂ ಮುಂಚೆ ನಡೆದ ಜಂಟಿ ಸಮಾವೇಷದಲ್ಲಿ ಪೋರ್ಚುಗೀಸ್ ಪ್ರಧಾನಿ ಜೋಸ್ ಮ್ಯಾನುಯೆಲ್ ಜೊತೆ ಅಮೇರಿಕಾದ ಅಧ್ಯಕ್ಷ ಜಾರ್ಜ್.ಡಬ್ಲ್ಯೂ. ಬುಷ್, ಬ್ರಿಟಿಷ್ ಪ್ರಧಾನಮಂತ್ರಿ ಟೋನಿ ಬ್ಲೇರ್, ಸ್ಪ್ಯಾನಿಷ್ ಪ್ರಧಾನಿ ಜೋಸ್ ಮರಿಯಾ ಪಾಲ್ಗೊಂಡಾಗ ದ್ಬೀಪವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಗಮನ ಸೆಳೆಯಿತು.

ಸಾರಿಗೆ

ಬದಲಾಯಿಸಿ

ಇಲ್ಲಿ ಬಹುತೇಕವಾಗಿ ಜಲ ಸಾರಿಗೆಯನ್ನೇ ಬಳಸುತ್ತಾರಾದರೂ ; ಕೆಲವರು ವಿಮಾನಯಾನ ವನ್ನು ನೆಚ್ಚಿಕೊಳ್ಳುವುದರಿಂದ ಇಲ್ಲಿನ ಒಂಬತ್ತು ದ್ವೀಪಗಳಲ್ಲಿಯೂ ಒಂದೊಂದು ವಿಮಾನ ನಿಲ್ದಾಣಗಳಿವೆ.

ಉಲ್ಲೇಖನಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-12-01. Retrieved 2016-11-27.
  2. https://portugal.com/portugal/places/azores