ಅಚ್ಯುತರಾಯ (೧೫೩೦-೧೫೪೨) ಸುಪ್ರಸಿದ್ಧ ಕೃಷ್ಣದೇವರಾಯನ ಮರಣಾನಂತರ ವಿಜಯನಗರ ಸಾಮ್ರಾಜ್ಯವನ್ನಾಳಿದ ದೊರೆ. ಕೃಷ್ಣದೇವರಾಯನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಮಧುರೆಯ ಮಂಡಲಾಧಿಪತಿ ದಂಗೆಯೆದ್ದು ಸ್ವತಂತ್ರನಾಗಲು ಯತ್ನಿಸಿದ್ದ. ಅಚ್ಯುತರಾಯನು ಸಿಂಹಾಸನಕ್ಕೆ ಬಂದಕೂಡಲೆ ಅವನನ್ನು ಅಡಗಿಸಿ, ಅವನಿಗೆ ಸಹಾಯ ನೀಡಿದ್ದ ತಿರುವಾಂಕೂರು ದೊರೆಯನ್ನು ದಂಡಿಸಿದ. ಅನಂತರ ವಿಷಯಲೋಲುಪನಾಗಿ ಆಡಳಿತಕ್ಕೆ ಗಮನ ಕೊಡಲಿಲ್ಲ. ರಾಜ್ಯಭಾರ ಸಂಬಂಧಿಗಳಾಗಿದ್ದ ತಿರುಮಲ ಸಹೋದರರ ಕೈಸೇರಿತು. ಅವರ ಉತ್ಕರ್ಷ, ದರ್ಪಗಳನ್ನು ಸೈರಿಸದೆ ಅರವೀಡು ಮನೆತನಕ್ಕೆ ಸೇರಿದ ಮಂಡಾಲಾಧಿಪತಿಗಳು ವಿರೋಧಪಕ್ಷವನ್ನು ಕಟ್ಟಿದರು. ಅತ್ತ ಬಿಜಾಪುರದ ಸುಲ್ತಾನ ದಂಡೆತ್ತಿಬಂದು ನಾಗಲಾಪುರವನ್ನು (ಈಗಿನ ಹೊಸಪೇಟೆ) ವಶಪಡಿಸಿಕೊಂಡು ವಿಜಯನಗರಕ್ಕೆ ಮುತ್ತಿಗೆ ಹಾಕಿದ ಅವನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಕೃಷ್ಣದೇವರಾಯ ಅಷ್ಟೊಂದು ಸಾಹಸ ದಕ್ಷತೆಗಳಿಂದ ಕಟ್ಟಿದ್ದ ಸಾಮ್ರಾಜ್ಯದ ಬಿಗಿ ಸಡಿಲವಾಯಿತು. ಮುಂದೆ ಬಂದ ರಕ್ಕಸತಂಗಡಿ ಅನಾಹುತಕ್ಕೆ ಮಂಡಲಾಧಿಪತಿಗಳ ಈ ವೈಮನಸ್ಯ ನಾಂದಿಯಾಯಿತು.

ಅಚ್ಯುತರಾಯನ ಆಳ್ವಿಕೆಯಲ್ಲಿ ಕ್ರಿ.ಶ. ೧೫೩೯ ರಲ್ಲಿ ತಿಮ್ಮಲಾಪುರದಲ್ಲಿ ನಿರ್ಮಾಣವಾದ ಶಿವದೇವಾಲಯ
ತಿಮ್ಮಲಾಪುರದ ಶಿವಮಂದಿರದಲ್ಲಿರುವ ಕ್ರಿ.ಶ ೧೫೩೯ ರ ಅಚ್ಯುತರಾಯನ ಕನ್ನಡ ಶಾಸನ
ಹಂಪೆಯ ವಿಟ್ಠಲ ದೆವಸ್ಥಾನದಲ್ಲಿರುವ ದೊರೆ ಅಚ್ಯುತದೇವರಾಯನ ಕಾಲದ ( ಕ್ರಿ.ಶ. ೧೫೩೬) ಕನ್ನಡ ಶಾಸನ
ಹಂಪೆಯ ವಿಟ್ಠಲ ದೆವಸ್ಥಾನದಲ್ಲಿರುವ ದೊರೆ ಅಚ್ಯುತದೇವರಾಯನ ಕಾಲದ ( ಕ್ರಿ.ಶ. ೧೫೩೬) ಕನ್ನಡ ಶಾಸನ
ಹಂಪೆಯ ಹತ್ತಿರ ತಿಮ್ಮಲಾಪುರದಲ್ಲಿ ದೊರೆ ಅಚ್ಯುತರಾಯನು ಕಟ್ಟಿಸಿದ ಶಿವದೇವಾಲಯ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: