ಅಗ್ನಾಥ ಎಂಬುವುದು ಜಲವಾಸಿ. ಈ ಗುಂಪಿನಲ್ಲಿ ಇರುವ ವಾಸಿಗಳಿಗೆ ದವಡೆಗಳು ಇರುವುದಿಲ್ಲ ಅದಕ್ಕಾಗಿ ಅವುಗಳನ್ನು ಅಗ್ನಾಥ ಎಂದು ಕರೆಯಲ್ಪಡುತ್ತದೆ. ಈ ವಾಸಿಗಳ ರೂಪ ಮೀನಿನ ಹಾಗೆ ಕಂಡುಬರುತ್ತದೆ.ಅಗ್ನಾಥ ಬಹು ಪ್ರಾಚೀನ ಕಾಲದ ಕಶೇರುಕಗಳು. ಇವುಗಳ ಪಳೆಯುಳಿಕೆಗಳು ಇವರು ಅತಿ ಪ್ರಾಚೀನವುಗಳು ಎಂದು ವ್ಯಕ್ತಪಡಿಸುತ್ತವೆ. ಅಗ್ನಾಥ ವರ್ಗವೇ ಮೊದಲು ಕಂಡು ಬಂದ ಕಶೇರುಕಗಳು ಎಂದು ಗುರುತ್ತಿಸಲ್ಪಟ್ಟಿದೆ.<[೧]

ಅಗ್ನಾಥ
ಅಗ್ನಾಥ

ವಾಸ ಸ್ತಳಸಂಪಾದಿಸಿ

ಅಗ್ನಾಥ ಗುಂಪಿನಲ್ಲಿ ಕಂಡು ಬರುವ ಅನೇಕ ಜೀವಿಗಳು ಗತಿಸಿವೆ. ಉಳಿದಿರುವ ಜೀವಿಗಳು ಜಲವಾಸಿಗಳು ಹಾಗೂ ಫ಼ಿಶ್ ಮತ್ತು ಈಲ್ ಅಥವಾ ಲಾಮ್ಪ್ ರೇ. ಅವು ಕೆರೆ ಮತ್ತು ಸಾಗರಗಳಲ್ಲಿ ವಾಸವಾಗಿದೆ. ಇವೆರಡು ಪರಲಾವಂಬಿಗಳು.

ಸಾಮಾನ್ಯ ಗುಣಲಕ್ಷಣಗಳುಸಂಪಾದಿಸಿ

ಅಗ್ನಾಥದ ದೇಹವು ಉದ್ದವಾಗಿ ಮೀನಿನ ಹಾಗೆ ಕಾಣುತ್ತದೆ. ಚರ್ಮವು ಲೋಳಯ ಗ್ರಂಥಿಯಿಂದ ಬಹಳ ಹೇಯವಾಗಿರುತ್ತದೆ. ಇವುಗಳ ದೇಹದ ಮೇಲೆ ಯಾವ ಮಾಪಕಗಳು ಇಲ್ಲ. ಅಗ್ನಾಥದ ದೇಹವು ತಲೆ,ಕಾಂಡದ ಮತ್ತು ಬಾಲವೇಂದು ಬಾಗಗೊಂಡಿದೆ. ತಲೆ ಬಾಗದಲ್ಲಿ ಒಂದು ಜೋಡಿಯ ಕಣ್ಣುಗಳು,ಮೂಗು ಮತ್ತು ಒಂದು ದವಡೆಗಳಿಲ್ಲದ ಬಾಯಿಯಿದೆ. ಇದರ ಬಾಯಿಯು ಹೀರುವುದಕ್ಕೆ ಉಪಯೋಗಕರವಾಗಿದೆ ಇದಕ್ಕಾಗಿ ಇವುಗಳನ್ನು ಸೈಲ್ಕೊಸ್ಟೊನ್ಗಳೆಂದು ಕರೆಯುತ್ತಾರೆ. ಮತ್ತು ಇವುಗಳಿಗೆ ದವಡೆಗಳಿಲ್ಲದ ಕಾರಣ ಅಗ್ನಥ ವರ್ಗದಲ್ಲಿ ಗ್ರಹಿಸಲಾಗಿದೆ.ಇದಕ್ಕೆ ಸ್ನಾಯುವಿನ ದೇಹ ಮತ್ತು ಬಾಲವುಳ್ಳವುದ್ದಾಗಿದೆ. ಇದಕ್ಕೆ ಐದರಿಂದ ಹದಿನಾರು ಕಿವಿರುಗಳು ಕಾಣಬಹುದು. ಜೋಡಿಯಾಗದ ರೆಕ್ಕೆಗಳು ದೇಹದಲ್ಲಿ ಮೇಲೆ ಕಂಡುಬರುತ್ತದೆ. ಚರ್ಮದ ಒಳ ಕವಚವು ನಾರಿನದ್ದು. ಬೆನ್ನುಹುರಿಯ ಪೂರ್ವ ರೂಪ ಜೀವನವಿಡಿ ಕಾಣಬಹುದು. ಈ ಜಲವಾಸಿಗಳು ಪರಲಾವಂಬಿಗಳಾದ ಕಾರಣ ಜೀರ್ಣಾಂಗಗಳದಲ್ಲಿ ಹೊಟ್ಟೆ,ಕರಳು ಅನುಪಸ್ಥಿತಿಯಾಗಿದೆ. ಜೀರ್ಣಾಂಗ ಶಕ್ತಿ ತುಂಬ ಕಡಿಮೆ.ಇವುಗಳ ಆಹಾರ ಸೇವನೇ ಬೇರೆ ಜಲವಾಸಿಗಳಿಗೆ ಹೊಲಿಸಿದರೆ ತುಂಬ ಕಡಿಮೆ. ಇದರ ಹೃದಯದಲ್ಲಿ ಎರಡು ಚೇಂಬರ್ ಇದೆ. ಇವು ಪರಲಾವಂಬಿಗಳಾದ ಕಾರಣ,ಬೇರೆ ಜಲವಾಸಿಗಳ ರಕ್ತ ಅಥವಾ ಮೀನುಗಳ ಹೆಣ್ಣಗಳನ್ನು ಆಹಾರವನಾಗಿ ಸೇವಿಸುತ್ತವೆ. ಅಗ್ನಾಥ ಗುಂಪಿನಲ್ಲಿ ಇನ್ನು ಬದುಕಿರುವುದು ಎರಡೇ ಜೀವಿಗಳು, ಲಾಂಪ್ ರೇ ಮತ್ತು ಹಾಗ್ ಫ಼ಿಶ್.

ಲಾಂಪ್ ರೇಸಂಪಾದಿಸಿ

ಲಾಂಪ್ ರೇ
 

ಲಾಂಪ್ ರೇ ಎಂಬ ಜಲವಾಸಿಗಳನ್ನು ಲಾಂಪ್ ಈಲ್ ರೇ ಎಂದೂ ಕರೆಯುತ್ತಾರೆ.ಇದರ ದೇಹವು ಉದ್ದವಾಗಿದ್ದು ತಲೆ,ಕಾಂಡ ಮತ್ತು ಬಾಲವೆಂದು ಬಗಗೊಂಡಿದೆ.ಇದರ ದೆಹವನ್ನು ಹಾಗ್ ಫ಼ಿಶ್ ಗೆ ಹೋಲಿಸಿದರೆ ಅಷ್ಟು ಹೇಯವಾಗಿಲ್ಲ. ತಲೆಯ ಬಾಗದಲ್ಲಿ ಇವುಗಳಿಗೆ ಉತ್ತಮವಾದ ಮತ್ತು ದೊಡ್ಡದಾದ ಒಂದು ಜೋತೆಯ ಕಣ್ಣುಗಳು,ಉದ್ದವಾದ ಮೂಗು ಮತ್ತು ಬಾಯಿ ಇದೆ.ಉತ್ತಮವಾದ ಮೆದುಳು ಉಂಟು.ದೇಹದ ಮೇಲೆ ಇಜ್ಜುರೆಕ್ಕೆಗಳುಂಟು. ಇವು ಕೆರೆ ಮತ್ತು ಸಾಗರದಲ್ಲಿಯೂ ವಾಸಿಸುತ್ತದೆ.ಈ ಜಲವಾಸಿ ಬಾಹ್ಯ ಪರಲಾವಂಬಿಗಳಾಗಿದ್ದು ಬೇರೆ ಮೀನಿನ ರಕ್ತವನ್ನು ಆಹಾರವನಾಗಿ ಸೇವಿಸುತ್ತವೆ ಇದಕ್ಕಾಗಿ ಇವುಗಳಿಗೆ ಕೆನ್ನೆಯ ಕೊಳವೆಯುಂಟು.ಇದು ಈ ವಾಸಿಗೆ ರಕ್ತವನ್ನು ಹೆಪ್ಪುಗಟ್ಟದಂತೆ ಸುಲಬವಾಗಿ ರಕ್ತವನ್ನು ಹೀರಲು ಸಹಾಯ ಮಾಡುತ್ತದೆ. ಏಳು ಜೋಡಿಯ ಕಿವಿರುಗಳನ್ನು ಹೊಂದಿದೆ. ತಳಿ ಕಾಲದಲ್ಲಿ ಇವು ಕೆರೆಗಳಿಂದ ಸಮುದ್ರಕ್ಕೆ ಚಲಿಸುತ್ತವೆ.ಇದರ ಮೋಟ್ಟೆ ಚಿಕ್ಕದಾಗಿದೆ.ಇದರ ಮೊಟ್ಟೆಗೆ ಚಿಪ್ಪೆ ಇರುವುದಿಲ್ಲ. ಸಮುದ್ರದಲ್ಲಿ ತಮ್ಮ ಮೋಟ್ಟೆಯನಿಟ್ಟು ನಂತರ ಮರಿಯಾದ ಮೇಲೆ ಪುನಃ ತಮ್ಮ ತಮ್ಮ ಕೆರೆಗಳಿಗೆ ಆ ಮರಿಗಳು ಹಿಂತಿರುಗುತ್ತವೆ.<[೨]

ಹಾಗ್ ಫ಼ಿಶ್ಸಂಪಾದಿಸಿ

ಹಾಗ್ ಫ಼ಿಶ್
 
ಹಾಗ್ ಫ಼ಿಶ್

ಹಾಗ್ ಫ಼ಿಶ್ ಗತಿಸಿ ಹೋಗದ ಜಲವಾಸಿ.ಇದರ ಚರ್ಮ ಲೋಳಯ ಗ್ರಂಥಿಯಿಂದ ಬಹಳ ಹೇಯವಾಗಿ ಕಾಣುತ್ತದೆ.ಇದರ ದೇಹವು ತಲೆ,ಉದ್ದವಾದ ಕಾಂಡ ಮತ್ತು ಬಾಲ ಎಂದು ಬಾಗವಾಗಿದೆ. ದೇಹದಲ್ಲಿ ಯಾವ ಮಾಪಕಗಳು ಕಾಣುವುದಿಲ್ಲ.ಇವುಗಳಿಗೆ ಕಣ್ಣು ಇರುವುದಿಲ್ಲ.ಇದರ ಕಣ್ಣುಗಳು ಚಮದಿಂದ ಅಡಗಿಹೊಗಿರುತ್ತದೆ ಮತ್ತು ಮೂಗು ತಲೆಯ ಬಾಗದಲ್ಲಿ ಕಾಣಬಹುದು.ಇದಕೆ ಒಳ್ಳೆ ಬೆಳವಣಿಕೆಗೊಳದ ಮೆದುಳುಂಟು.ಇವುಗಳಿಗೆ ಯಾವ ರೆಕ್ಕೆಗಳು ಇಲ್ಲ.ಇದಕ್ಕೆ ಸುಮಾರು ಹದಿನಾರು ಕಿವಿರುಗಳು ಉಂಟು.ಹಾಗ್ ಫ಼ಿಶ್ ಸಮುದ್ರದ ನಿವಾಸಿಗಳು. ಇವು ಕೆರೆ,ಬಾವಿ ಅಥವಾ ಬೇರೆ ಯಾವುದರಲ್ಲಿಯು ವಾಸಿಸುವುದಿಲ್ಲ.ಇವು ಬರೀ ಸತ್ತ ಜಲವಾಸಿಗಳನ್ನು ಆಹಾರವನಾಗಿ ಸೇವಿಸುವ ಕಾರಣ ಯಾವ ಕೆನ್ನೆಯ ಕೊಳವೆಯು ಇರುವುದಿಲ್ಲ.ತಳಿ ಕಾಲದಲ್ಲಿ ಇವು ಸಮುದ್ರದಲ್ಲಿಯೇ ಉಳಿದಿರುತ್ತದೆ.ಇದರ ಮೊಟ್ಟೆ ತುಂಬಾ ದೊಡ್ಡದ್ದು ಮತ್ತು ಗಟ್ಟಿಮುಟಾದ ಮೊಟ್ಟೆ ಚಿಪ್ಪೆ ಉಂಟು. ಇವುಗಳ ಚರ್ಮ ಆಧಿಕ ಲೋಳಯ ಗ್ರಂಥಿಯಿಂದ ಹೇಯವಾದ ಕಾರಣ,ಈ ಜಲ ವಾಸಿಯನ್ನು ಹಿಡಿಯಲು ಬಹಳ ಕಷ್ಟವಾದ ಕೆಲಸ.ಕೋರಿಯ ಎಂಬ ಜಾಪನ್ ಊರಿನಲ್ಲಿ ಈ ಜಲ ನಿವಾಸಿಯನ್ನು ಬಹುಪ್ರಿಯ ಆಹಾರವನಾಗಿ ಸೇವಿಸುತ್ತಾರೆ.

ಉಲ್ಲೇಖಗಳುಸಂಪಾದಿಸಿ

  1. "agnatha".[permanent dead link]
  2. "agnatha".[permanent dead link]

ಹೊರಗಿನ ಸಂಪರ್ಕಸಂಪಾದಿಸಿ

  • www.britannica.com/animal/agnathan
  • fsc.fernbank.edu/STT/VertBio/agnatha.htm
  • www.newworldencyclopedia.org/entry/Agnatha
  • www.encyclopedia.com/topic/Agnathans.aspx
  • petrifiedwoodmuseum.org/SOAgnatha.htm
"https://kn.wikipedia.org/w/index.php?title=ಅಗ್ನಾಥ&oldid=1062593" ಇಂದ ಪಡೆಯಲ್ಪಟ್ಟಿದೆ