ಅಗಸೆ ಬೀಜ
ಅಗಸೆ ಬೀಜಗಳು ಕಂದುಬಣ್ಣದ ಬೆಳೆಯಾಗಿದ್ದು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಒಮೆಗಾ – 3 ಕೊಬ್ಬಿನಾಮ್ಲಗಳು, ಫೈಬರ್ ಉತ್ತಮ ಪ್ರಮಾಣದಲ್ಲಿ ಇದೆ. ಎಲ್ಲಾ ಪೋಷಕಾಂಶಗಳು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. [೧]
ಅಗಸೆ ಬೀಜಗಳು ಔಷಧಗಳೊಂದಿಗೆ ಸಂಯೋಜಿಸಿದಾಗ ಏನಾಗುತ್ತದೆ?
ಬದಲಾಯಿಸಿಅಗಸೆ ಬೀಜಗಳು ಕೆಲವು ಔಷಧಗಳೊಂದಿಗೆ ಪ್ರತಿಕೂಲ ರೀತಿಯಲ್ಲಿ ಪ್ರತಿಕ್ರಿಯಿಸಬಹುದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಅಗಸೆ ಬೀಜಗಳು ದೇಹದಲ್ಲಿ ಔಷಧಿಗಳನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತವೆ.ಇದು ಔಷಧದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ವಿಭಿನ್ನ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಅಡ್ಡಪರಿಣಾಮಗಳು ನೀವು ತೆಗೆದುಕೊಂಡ ಔಷಧಿಗಳ ಪ್ರಕಾರವನ್ನು ಅವಲಂಬಿಸಿರುತ್ತದೆ. ಅಗಸೆ ಬೀಜದ ಎಣ್ಣೆಯು ಕೆಲವು ವೈದ್ಯಕೀಯ ಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಔಷಧಿಗಳು ಕೆಲಸ ಮಾಡಲು ಬಿಡುವುದಿಲ್ಲ.ಡಾಕ್ಟರ್ ಶ್ವೇತಾ ಸಿಂಗ್ ಅವರ ಪ್ರಕಾರ ನೀವು ಔಷಧಿಗಳನ್ನು ಅಥವಾ ಔಷಧಿ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಗಸೆ ಬೀಜಗಳನ್ನು ತೆಗೆದುಕೊಳ್ಳಬಾರದು.
ಯಾವ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುವವರು ಇದನ್ನು ಸೇವಿಸಬಾರದು ?
ಬದಲಾಯಿಸಿಅಗಸೆ ಬೀಜಗಳನ್ನು ಯಾರು ಸೇವಿಸಬಾರದು?
ಬದಲಾಯಿಸಿ- ಕರುಳಿನ ಸಮಸ್ಯೆಗಳಿಂದ ಬಳಲುತ್ತಿರುವ ಜನರು
- ಮಗುವಿನ ನಿರೀಕ್ಷೆಯಲ್ಲಿರುವ ತಾಯಂದಿರು
- ಸ್ಕ್ಲೇರೋಡರ್ಮ ರೋಗಿಗಳು
- ಅಲರ್ಜಿಯ ಪ್ರತಿಕ್ರಿಯೆಗಳನ್ನು ಹೊಂದಿರುವವರು
ಉಲ್ಲೇಖಗಳು
ಬದಲಾಯಿಸಿ- ↑ "ಅಗಸೆ ಬೀಜವನ್ನು ಯಾರೆಲ್ಲಾ ಸೇವಿಸಬಾರದು?".
- ↑ "Flax Seeds: ಅಗಸೆ ಬೀಜಗಳನ್ನು ಹುರಿದು ತಿನ್ನಿ ಸಾಕು.. ಅತಿಯಾದ ತೂಕ, ನಿದ್ರೆ ಸಮಸ್ಯೆ ಮಾಯವಾಗುತ್ತೆ!". News18 ಕನ್ನಡ. 26 February 2022. Retrieved 31 August 2024.