ಅಗರ ಶಿಲಾಶಾಸನಗಳು
ಬೆಂಗಳೂರಿನ ಅಗರ ಪ್ರದೇಶದಲ್ಲಿ ನಾಲ್ಕು ಶಿಲಾಶಾಸನಗಳು ದಾಖಲಾಗಿವೆ.[೧] ಅವೆಲ್ಲವೂ ಕೂಡ ಹಳೆಗನ್ನಡ ಲಿಪಿಯಲ್ಲಿರುವ ಶಾಸನಗಳಾಗಿವೆ. ಈ ನಾಲ್ಕರಲ್ಲಿ ಒಂದು ಶಾಸನವನ್ನು ಬೆಂಗಳೂರಿನ ಮ್ಯೂಸಿಯಂನಲ್ಲಿ ಇಡಲಾಗಿವೆ. ಎಪಿಗ್ರಾಫಿಯ ಕರ್ನಾಟಿಕ ಗ್ರಂಥದಲ್ಲಿ BN 79, 80, 81 ಕ್ರಮಸಂಖ್ಯೆಯಡಿ ದಾಖಲಾಗಿರುವ ಇವುಗಳಲ್ಲಿ 79 ಮತ್ತು 80 ಸಂಖ್ಯೆಯ ಶಾಸನಗಳು ಪ್ರಸ್ತುತ ಪತ್ತೆಯಾಗಿಲ್ಲ.
ಶಾಸನ ೧: ಅಗರ ಕೆರೆ ಶಿಲಾಶಾಸನ
ಬದಲಾಯಿಸಿಅಗರ ಕೆರೆ ಶಾಸನ | |
---|---|
ಸ್ಥಳ | ಅಗರ, ಬೆಂಗಳೂರು (ಪ್ರಸಕ್ತ ಕರ್ನಾಟಕ ಸರ್ಕಾರಿ ವಸ್ತುಸಂಗ್ರಹಾಲಯ (ಬೆಂಗಳೂರು)) |
Coordinates | 12°55′05″N 77°38′37″E / 12.9180101°N 77.6435162°E |
ಎತ್ತರ | 4.3 feet (1.3 m) |
ನಿರ್ಮಾಣ | 1363 ಕ್ರಿಸ್ತಶಕೆ |
ಇದು ೧೩೬೩ನೇ ಇಸವಿಯ ವಿಜಯನಗರ ಸಾಮ್ರಾಜ್ಯದ ಕೆಂಪಣ್ಣ ಒಡೆಯರ್ ಆಳ್ವಿಕೆಯ ಕಾಲದ ಶಿಲಾಶಾಸನವಾಗಿದೆ. ಈ ಶಾಸನದ ಕಲ್ಲಿನ ಗಾತ್ರ 4’3” x 3’ 4”. ಇದು ಸುಸ್ಥಿತಿಯಲ್ಲಿದ್ದು ಬೆಂಗಳೂರಿನ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿಡಲಾಗಿದೆ. ಬಿ. ಎಲ್. ರೈಸ್ ಅವರು ಸಂಪಾದಿಸಿರುವ "ಎಪಿಗ್ರಾಫಿಯ ಕರ್ನಾಟಿಕ" ಗ್ರಂಥದ ೯ನೇ ಸಂಪುಟದಲ್ಲಿ BN81 ಸಂಖ್ಯೆಯಡಿ ದಾಖಲಾದ ಈ ಶಾಸನದ ಪಠ್ಯ ಈ ಕೆಳಕಂಡಂತಿದೆ.[೧]
1 ಸ್ವಸ್ತಿಶ್ರೀಶಕಾಬ್ದ೧೨v೬
2 ನೆಯಶೋಭಕೃತುನಂ|ಜ್ಯೇಷ್ಟಕು11
3 ಬು|ಶ್ರೀಮನುಮಹಾಮಂಡಳೇಶ್ವರಂಅರಿರಾ
4 ಯವಿಭಾಡಭಾವೆಗೆತಪ್ಪುವರಾಯರಗಂಡ
5 ಶ್ರೀವೀರಬುಕ್ಕಣ್ಣವೊಡೆಯರಕುಮಾರಕಂಪ
6 ವೊಡೆಯರುಮುಳುಬಾಗಿಲಪಟ್ಟಣದಲುಪ್ರು
7 ಥ್ಯೀರಾಜ್ಯಂಗೆಯುತ್ತಿರೆಅಕಂಪ, ವೊಡೆಯರ
8 ಕುಮಾರಕಾಮೈಯನಾಯ್ಕರುಯೀರಾಜ್ಯದಗವು
9 ಂಡುಗಳಮುಂದಿಟುಎಲಹಕನಾಡಅಲ್ಲಾ
10 ಳಜೀಯನಮಗತಣ್ಣಿಯಪ್ಪಂಗೆಶಿಲಾಶಾಸನವ
11 ಮಾಡಿಕೊಟ್ಟಕ್ರಮವೆಂತೆಂದಡೆ. . ಸ್ತಿನಾಡತೆ
12 ಂಕಣಬಾಗೆಯತೋಹವಳಿನಾಡಬೆಳತ್ರ್ತ
13 ಐಮೂಳಗದ್ದೆಬೆದ್ದಲುಚತುಸ್ಸೀಮೆಯನು
14 ಳ್ಳದನುಸರ್ವಮಾನ್ಯದಕೊಡೆಗೆಯಾಗಿ
15 ಚಂದ್ರಾದಿತ್ಯರುಳ್ಳಂನಬರಸಲುವಂ
16 ತಾ ಗಿಶಿಲಾಶಾಸನವಮಾಡಿಕೊ
17 ಟ್ಟೆವುಮಂಗಳಮಹಾಶ್ರೀ||
ಅರ್ಥ ವಿವರಣೆ
ಬದಲಾಯಿಸಿBe it well. (On the date specified), when (with usual titles) vira Bukkana- Vodeyar’s son Kampanna-Vodeyar was in the city of Mulubagil, ruling the kingdom of the world:- that Kampanna-Vodeyar’s son Kamiya-Nayaka, in the presence of the farmers this kingdom, granted to Elahaka-nad Allala-jiya’s son Tanniyappa, lands in Belartta of the Torevali-nad of the south of the ……………nti-nad, as a sarvamany- kodage.3
ಶಾಸನ ೨
ಬದಲಾಯಿಸಿಇದರ ಕಾಲ ಕ್ರಿ.ಶ. ೮೭೦. ಗಂಗರ ಕಾಲದ 'ಸತ್ಯವಾಕ್ಯ ಪೆರ್ಮಡಿ' ಎಂಬ ಅರಸನ ಆಳ್ವಿಕೆಯ ಅವಧಿಯದ್ದಾಗಿದೆ. ಗಾತ್ರ 3’ x 2’6” ಎಪಿಗ್ರಾಫಿಯ ಕರ್ನಾಟಿಕ ಗ್ರಂಥದ BN79 ಸಂಖ್ಯೆಯಡಿ ದಾಖಲಾಗಿರುವ ಪಠ್ಯ:[೧]
ಅಗರದ ಕೆರೆ ಕಟ್ಟೇ ಕೆಳಗೆ ಪಶ್ಚಿಮ ತೂಬಿನ ಬಳಿ ಗದ್ದೇಲಿ ಬಿದ್ದಿರುವದು.
1 ಸ್ವಸ್ತಿಶ್ರೀರಾಜ್ಯವಿಜಯಸಂವ
2 ತ್ಸರಸತ್ಯವಾಖ್ಯಪೆಮ್ರ್ಮಡಿಯಕ
3 ಲಿಯುಗದಣುವನಾಗತರನೊಳ್
4 ಇವ್ಯುಲಿಯೂರೊಡೆಇರುಗ
5 ಮಯ್ಯನಮಗಂಸಿರಿಯಮ
6 ಯ್ಯನೆರಡುಕೆಲಿಯಂತೂಂಬನಿ
7 ಕ್ಕಿಮೂಡಣಕೆಱೆಯಂಕಟ್ಟಿಸಿ
8 ಮೂಱುಕೆಱೆಯಯಬಿತ್ತುಪಟ್ಟವಂ
9 ಪಡೆದಂಬಿತ್ತುವಟವಂಸಲಿ
10 ಸದನುನಿಕ್ಕದುಣ್ಬನುಕವಿಲೆ
11 ಯನೞುದಂ
ಅರ್ಥ ವಿವರಣೆ
ಬದಲಾಯಿಸಿBe it well. In the victorious year of the Srirajya, under Satyavakya-Permmadi’s Kali-yugs Hanuman, Nagattara, - the Iruvvuliyur odeya, Irugamayya’s son Sriyamayya, fixed sluices to the two tanks, had the eastern tank built, and obtained the bittuvatta of the three tanks. Imprecation.
ಶಾಸನ ೩
ಬದಲಾಯಿಸಿಈ ಶಾಸನದ ಕಾಲ ಕ್ರಿ.ಶ. ೧೫೧೫. ಇದು ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಳ್ವಿಕೆಯ ಕಾಲದ್ದಾಗಿದೆ. 'ಎಪಿಗ್ರಾಫಿಯ ಕರ್ನಾಟಿಕ' ಗ್ರಂಥದ BN80 ಸಂಖ್ಯೆಯಡಿ ದಾಖಲಾಗಿರುವ ಪಠ್ಯ:[೧]
ಅದೇ ಗ್ರಾಮದ ಊರು ಮುಂದೆ ಬಾಗಲು ಬಳಿ ದಕ್ಷಿಣ ಕಡೆ ಇರುವದು. ಪ್ರಮಾಣ 2’6” x 3’
1ಶುಭಮಸ್ತುಸ್ವಸ್ತಿಶ್ರೀಜಯಾಭ್ಯುದಯಶಾಲಿವಾ
2ಹನಶಕ(ವ)ರುಪಸಾವಿರದನಾನೂಹಯಿಪ್ಪತ್ತುಏ
3ಳನೆಯಯುವಸಂವತ್ಸರದಭಾದ್ರಪದಕು
4ಧ15ಲೂಸೋಮೋಪರಾಗಪುಂಣ್ಯಕಾಲದಲ್ಲುಕ್ರುಷ್ಣ
5ರಾಯಮಹಾರಾಯರುಪೃತ್ವೀಗೈಉತಯಿರಲು
6ಸಿವಂಣಪನಾಯಕರುತಂಮತಂದೆಗೆಧರ್ಮವಾಗಬೇಕೆಂ
7ದುಅಗರದಕೆಱೆಗೆಭಂಡಿನಡಉದಕ್ಕೆಕೊಟ್ಟಹೊಲ
ಅರ್ಥ ವಿವರಣೆ
ಬದಲಾಯಿಸಿMay it be prosperous. Be it well (On the date specified), at the time of and eclipse of the moon, - when Krishna-Raya-maharaya was ruling the kingdom of the world :- Sivannappa-Nayaka, in order that dharma might be to his father, granted a field to provide for keeping up a cart for the Agara tank.
ಶಾಸನ ೪: ಅಗರ ಛತ್ರ ಶಿಲಾಶಾಸನ
ಬದಲಾಯಿಸಿಆಕರಗಳು/ಉಲ್ಲೇಖಗಳು
ಬದಲಾಯಿಸಿ
ಹೊರಕೊಂಡಿಗಳು
ಬದಲಾಯಿಸಿ- ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
- Inscription stones of city now on Google Maps, K.Sarumathi, The Hindu, 19May2018