ಅಖ್ಲಾಕ್ ಮೊಹಮ್ಮದ್ ಖಾನ್ (ಶಹರ್ಯಾರ್)

ಅಖ್ಲಾಕ್ ಮೊಹಮ್ಮದ್ ಖಾನ್ (16 ಜೂನ್ 1936 - 13 ಫೆಬ್ರವರಿ 2012), (ಅವರ ಕಾವ್ಯನಾಮ ಶಹರ್ಯಾರ್ ದಿಂದ ಹೆಚ್ಚು ಪರಿಚಿತರು), ಭಾರತೀಯ ಶಿಕ್ಷಣತಜ್ಞ ಮತ್ತು ಭಾರತದಲ್ಲಿ ಉರ್ದು ಕಾವ್ಯದ ಹಿರಿಯವ್ಯಕ್ತಿ. [] [] ಹಿಂದಿ ಚಲನಚಿತ್ರ ಗೀತರಚನೆಕಾರರಾಗಿ, ಅವರು ಮುಜಫರ್ ಅಲಿ ನಿರ್ದೇಶಿಸಿದ ಗಮನ್ (1978) ಮತ್ತು ಉಮ್ರಾವ್ ಜಾನ್ (1981) ನಲ್ಲಿನ ಸಾಹಿತ್ಯಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಉರ್ದು ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು ಮತ್ತು ನಂತರ ಅವರು ಮುಷೈರಾಗಳು ಅಥವಾ ಕವಿಗೋಷ್ಠಿಗಳಲ್ಲಿ ಪ್ರಸಿದ್ಧರಾದರು ಮತ್ತು ಸಾಹಿತ್ಯ ಪತ್ರಿಕೆ ಶೇರ್-ಒ-ಹಿಕ್ಮತ್ ಸಹ-ಸಂಪಾದಿಸಿದರು. []

ಅವರು ಖ್ವಾಬ್ ಕಾ ದರ್ ಬಂದ್ ಹೈ (1987) ಗಾಗಿ ಉರ್ದುವಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು, ಮತ್ತು 2008 ರಲ್ಲಿ ಅವರು ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿಯನ್ನು ಪಡೆದ ನಾಲ್ಕನೇ ಉರ್ದು ಕವಿ ಅವರು. [] ಅವರು ಆಧುನಿಕ ಉರ್ದು ಕಾವ್ಯದ ಅತ್ಯುತ್ತಮ ಪ್ರತಿಪಾದಕ ಎಂದು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಇವರು ಓನಲಾ, ಬರೇಲಿಯಲ್ಲಿ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದರು. [] ಅವರ ತಂದೆ ಅಬು ಮೊಹಮ್ಮದ್ ಖಾನ್ ಅವರನ್ನು ಪೊಲೀಸ್ ಅಧಿಕಾರಿಯಾಗಿದ್ದರು. ಅವರ ಕುಟುಂಬವು ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಚೌಂಧೇರಾ ಗ್ರಾಮದಿಂದ ಬಂದಿದೆ. [] [] ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಬುಲಂದ್‌ಶಹರ್‌ನಲ್ಲಿ ಪಡೆದರು. [] ಅವರ ಬಾಲ್ಯದ ದಿನಗಳಲ್ಲಿ, ಕ್ರೀಡಾಪಟುವಾಗಲು ಬಯಸಿದ್ದರು ಆದರೆ ಅವರ ತಂದೆ ಅವರು ಪೊಲೀಸ್ ಪಡೆಯನ್ನು ಸೇರಲಿ ಎಂದು ಬಯಸಿದ್ದರು. ಆಗ ಅವರು ಮನೆಯಿಂದ ಓಡಿಹೋಗಿ ಪ್ರಖ್ಯಾತ ಉರ್ದು ವಿಮರ್ಶಕ ಮತ್ತು ಕವಿ ಖಲೀಲ್-ಉರ್-ರೆಹಮಾನ್ ಅಜ್ಮಿ ಅವರಿಂದ ಮಾರ್ಗದರ್ಶನ ಪಡೆದರು. ನಂತರ ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದರು ಮತ್ತು 1958 ರಲ್ಲಿ ಮನೋವಿಜ್ಞಾನದಲ್ಲಿ ಬಿ.ಎ. ಉತ್ತೀರ್ಣರಾದರು. ಅವರು ಮನೋವಿಜ್ಞಾನದಲ್ಲಿ ಎಂ.ಎ.ಗೆ ಸೇರಿದರು ಆದರೆ ಒಂದು ವರ್ಷದ ನಂತರ ಅದನ್ನು ತೊರೆದರು ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಉರ್ದು ವಿಭಾಗದಲ್ಲಿ ಪ್ರವೇಶ ಪಡೆದರು. 1961ರಲ್ಲಿ ಉರ್ದುವಿನಲ್ಲಿ ಎಂಎ ಪಾಸಾದರು. [] ಅವರು ತಮ್ಮ ಪಿಎಚ್‌ಡಿಯನ್ನು ಅಲಿಗಢದಲ್ಲಿ ಪೂರ್ಣಗೊಳಿಸಿದರು. []

ಶಹರ್ಯಾರ್ ಅವರು 1961 ರಲ್ಲಿ ಅಂಜುಮನ್ ತರ್ರಾಕಿ-ಎ-ಉರ್ದು ವಾರಪತ್ರಿಕೆ ಹಮಾರಿ ಜುಬಾನ್‌ನಲ್ಲಿ ಬರಹಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 1966 ರವರೆಗೆ ಅಲ್ಲಿ ಕೆಲಸ ಮಾಡಿದರು. [] ನಂತರ 1966 ರಲ್ಲಿ ಅವರು ಉರ್ದು ಉಪನ್ಯಾಸಕರಾಗಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಸೇರಿದರು. [] ಅವರು 1986 ರಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು ಮತ್ತು 1996 ರಲ್ಲಿ ಅವರು ಉರ್ದು ವಿಭಾಗದ ಅಧ್ಯಕ್ಷರಾಗಿ ನಿವೃತ್ತರಾದರು. ಅವರು ಸಾಹಿತ್ಯ ನಿಯತಕಾಲಿಕ ಶೇರ್-ಒ-ಹಿಕ್ಮತ್ (ಕವಿತೆ ಮತ್ತು ತತ್ವಶಾಸ್ತ್ರ) ಸಹ-ಸಂಪಾದಿಸಿದ್ದಾರೆ. []

ಸಾಹಿತ್ಯ ವೃತ್ತಿ

ಬದಲಾಯಿಸಿ

ಅವರ ಮೊದಲ ಕವನ ಸಂಕಲನ ಇಸ್ಮ್-ಎ-ಅಜಮ್ ಅನ್ನು 1965 ರಲ್ಲಿ ಪ್ರಕಟಿಸಲಾಯಿತು, ಎರಡನೆಯ ಸಂಗ್ರಹ, ಸತ್ವನ್ ದಾರ್ 1969 ರಲ್ಲಿ ಕಾಣಿಸಿಕೊಂಡಿತು ಮತ್ತು ಮೂರನೇ ಸಂಗ್ರಹವಾದ ಹಿಜ್ರ್ ಕೆ ಮೌಸಂ 1978 ರಲ್ಲಿ ಬಿಡುಗಡೆಯಾಯಿತು. ಅವರ ಅತ್ಯಂತ ಪ್ರಸಿದ್ಧ ಕೃತಿ, ಖ್ವಾಬ್ ಕೆ ದಾರ್ ಬಂದ್ ಹೈ, 1987 ರಲ್ಲಿ ಬಂದಿತು, ಇದು ಅವರಿಗೆ ಆ ವರ್ಷ ಉರ್ದು ಭಾಷೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದು ಕೊಟ್ಟಿತು. ಅವರು ಉರ್ದು ಲಿಪಿಯಲ್ಲಿ ತಮ್ಮ ಐದು ಕವನ ಸಂಕಲನಗಳನ್ನು ಪ್ರಕಟಿಸಿದರು. [೧೦] 2008 ರಲ್ಲಿ, ಫಿರಾಕ್, ಅಲಿ ಸರ್ದಾರ್ ಜಾಫ್ರಿ ಮತ್ತು ಖುರಾತುಲೈನ್ ಹೈದರ್ ನಂತರ ಜ್ಞಾನಪೀಠ ಪ್ರಶಸ್ತಿಯನ್ನು ಗೆದ್ದ ನಾಲ್ಕನೇ ಉರ್ದು ಬರಹಗಾರರಾದರು. [೧೧] [೧೨]

ಗೀತರಚನೆಕಾರ

ಬದಲಾಯಿಸಿ

ಶಹರ್ಯಾರ್ ಕೆಲವು ಚಲನಚಿತ್ರಗೀತೆಗಳಿಗೆ ಸಾಹಿತ್ಯವನ್ನು ಬರೆದರು, ಅಲಿಘರ್‌ನಿಂದ ಅವರನ್ನು ಚಲನಚಿತ್ರ ನಿರ್ಮಾಪಕರು ಸಂಪರ್ಕಿಸಿದರು. ಮುಜಾಫರ್ ಅಲಿ ಮತ್ತು ಶಹರ್ಯಾರ್ ತಮ್ಮ ವಿದ್ಯಾರ್ಥಿ ದಿನಗಳಿಂದ ಸ್ನೇಹಿತರಾಗಿದ್ದರು ಮತ್ತು ಶಹರ್ಯಾರ್ ಅವರೊಂದಿಗೆ ಕೆಲವು ಗಜಲ್‌ಗಳನ್ನು ಹಂಚಿಕೊಂಡಿದ್ದರು. ನಂತರ ಅಲಿ 1978 ರಲ್ಲಿ ಗಮನ್ ಚಿತ್ರದ ಮೂಲಕ ನಿರ್ದೇಶನವನ್ನು ಪ್ರಾರಂಭಿಸಿದಾಗ, ಅವರು ತಮ್ಮ ಎರಡು ಗಜಲ್‌ಗಳಾದ ಸೀನೆ ಮೇ ಜಲನ್ ಆಂಖೋನ್ ಮೇ ತೂಫಾನ್ ಸಾ ಕ್ಯೂನ್ ಹೈ ಮತ್ತು ಅಜೀಬ್ ಸನೇಹಾ ಮುಜ್ಪರ್ ಗುಜಾರ್ ಗಯಾ ಯಾರೋನ್ ಅನ್ನು ಚಿತ್ರದಲ್ಲಿ ಬಳಸಿದರು ಮತ್ತು ಅವುಗಳನ್ನು ಇನ್ನೂ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಉಮ್ರಾವ್ ಜಾನ್ ಚಿತ್ರದ ಅವರ ಎಲ್ಲಾ ಗಝಲ್ ಗಳು- 'ದಿಲ್ ಚೀಝ್ ಕ್ಯಾ ಹೈ ಆಪ್ ಮೇರಿ ಜಾನ್ ಲೀಜಿಯೇ', 'ಯೆ ಕಾ ಜಗಃ ಹೈ ದೋಸ್ತೋಸೆ', ' ಇನ್ ಆಂಕೋ ಕಿ ಮಸ್ತಿ ಕೆ ' ಇತ್ಯಾದಿ ಬಾಲಿವುಡ್ ಅತ್ಯುತ್ತಮ ಸಾಹಿತ್ಯ ಕೃತಿಗಳ ಸಾಲಿಗೆ ಸೇರಿವೆ. ಅವರು ಯಶ್ ಚೋಪ್ರಾ ಅವರ ಫಾಸ್ಲೆ (1985) ಗಾಗಿ ಸಹ ಹಾಡು ಬರೆದರು, ಅದರ ನಂತರ ಚೋಪ್ರಾ ಅವರಿಗೆ ಇನ್ನೂ ಮೂರು ಚಲನಚಿತ್ರಗಳಿಗಾಗಿ ಹಾಡು ಬರೆಯಲು ಪ್ರಸ್ತಾಪಿಸಿದರು, ಆದರೆ ಅವರು "ಹಾಡುಗಳ ಅಂಗಡಿ" ಆಗಲು ಇಷ್ಟಪಡದ ಕಾರಣ ನಿರಾಕರಿಸಿದರು. [೧೩] ಆದರೂ ಅವರು ಮುಜಾಫರ್ ಅಲಿಯವರ ಅಂಜುಮನ್ (1986) ಗಾಗಿ ಹಾಡು ಬರೆದರು. ಅವರು ಅಲಿಯವರ <i id="mwaw">ಝೂನಿ</i> ಮತ್ತು ದಮನ್‌ಗೆ ಅಪೂರ್ಣ ಕೊಡುಗೆಗಳನ್ನು ನೀಡಿದ್ದಾರೆ.

ವೈಯಕ್ತಿಕ ಜೀವನ

ಬದಲಾಯಿಸಿ

ಶಹರ್ಯಾರ್ ಅವರು 1968 ರಲ್ಲಿ ಅಲಿಗಢದ ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಶಿಕ್ಷಕಿ ನಜ್ಮಾ ಮಹಮೂದ್ ಅವರನ್ನು ವಿವಾಹವಾದರು. ಅವರಿಗೆ ಹುಮಾಯೂನ್ ಶಹರ್ಯಾರ್, ಸೈಮಾ ಶಹರ್ಯಾರ್ ಮತ್ತು ಫರಿದೂನ್ ಶಹರ್ಯಾರ್ ಎಂಬ ಮೂವರು ಮಕ್ಕಳಿದ್ದರು. []

ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ ದೀರ್ಘಕಾಲದ ಅನಾರೋಗ್ಯದ ನಂತರ ಅವರು 13 ಫೆಬ್ರವರಿ 2012 ರಂದು ಉತ್ತರ ಪ್ರದೇಶದ ಅಲಿಗಢದಲ್ಲಿ ನಿಧನರಾದರು. [೧೩] [೧೪]

ಪ್ರಶಸ್ತಿಗಳು

ಬದಲಾಯಿಸಿ
  • ಅವರ ಕವನ ಸಂಕಲನ ಖ್ವಾಬ್ ಕಾ ದರ್ ಬಂದ್ ಹೈ (1987) ಗಾಗಿ ಉರ್ದುವಿನಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • ಜ್ಞಾನಪೀಠ ಪ್ರಶಸ್ತಿ - 2008.
  • ಫಿರಾಕ್ ಸಮ್ಮಾನ್
  • ಬಹದ್ದೂರ್ ಶಾ ಜಾಫರ್ ಪ್ರಶಸ್ತಿ.

ಶಹರ್ಯಾರ್ ಅವರ ಕೃತಿಗಳ ಮೇಲೆ ನಾಲ್ಕು ಪ್ರಬಂಧಗಳನ್ನು ಬರೆಯಲಾಗಿದೆ.

ಆಯ್ದ ಗ್ರಂಥಸೂಚಿ

ಬದಲಾಯಿಸಿ
  • ಇಸ್ಮ್-ಎ-ಅಜಮ್, 1965.
  • ಸತ್ವನ್ ದಾರ್, 1969.
  • ಹಿಜ್ರ್ ಕೆ ಮೌಸಮ್, 1978.
  • ಖ್ವಾಬ್ ಕೆ ದಾರ್ ಬಂದ್ ಹೈ, 1987.
  • ನೀಂದ್ ಕಿ ಕಿರ್ಚೆನ್ - (ಇಂಗ್ಲಿಷ್: ಚೂರುಚೂರು ನಿದ್ರೆಯ ಚೂರುಗಳು ) .
  • ಥ್ರೂ ದಿ ಕ್ಲೋಸ್ಡ್ ಡೋರ್‌ವೇ: ಎ ಕಲೆಕ್ಷನ್ ಆಫ್ ನಾಜ್ಮ್ಸ್ ಅವರಿಂದ ಶಹರ್ಯಾರ್, tr. ರಕ್ಷಂದ ಜಲೀಲ್. 2004, ರೂಪಾ & ಕಂ.,ISBN 81-291-0458-X.  .
  • ಶಹರ್ಯಾರ್, ಅಖ್ಲಾಕ್ ಮೊಹಮ್ಮದ್ ಖಾನ್ : ಉರ್ದು ವಿಮರ್ಶೆಯ ಮೇಲೆ ಪಾಶ್ಚಿಮಾತ್ಯ ಟೀಕೆಗಳ ಪ್ರಭಾವ, ಅಲಿಘರ್.
  • ಧುಂದ್ ಕಿ ರೋಶ್ನಿ (ಇಂಗ್ಲಿಷ್: ದಿ ಲೈಟ್ ಆಫ್ ಡಸ್ಕ್ ): ಶಹರ್ಯಾರ್‌ನ ಆಯ್ದ ಕವನಗಳು, 2003, ಸಾಹಿತ್ಯ ಅಕಾಡೆಮಿ ,ISBN 81-260-1615-9  .

ಉಲ್ಲೇಖಗಳು

ಬದಲಾಯಿಸಿ
  1. Shahryar, Faraz recite at mushaira The Hindu, 5 August 2007.
  2. Renowned Urdu Poet.. .milligazette.com. 16–30 September 2004.
  3. ೩.೦ ೩.೧ ೩.೨ "Umraao Jaan lyricist passes away". The Times of India. 14 February 2012. Retrieved 13 March 2014. ಉಲ್ಲೇಖ ದೋಷ: Invalid <ref> tag; name "toi12" defined multiple times with different content
  4. "Jnanpith for Malayalam poet Kurup, Urdu scholar Shahryar". The Times of India. 25 September 2010. Archived from the original on 26 September 2012.
  5. "Malayalam, Urdu writers claim Jnanpith awards". The Hindu. Chennai, India. 24 September 2010.
  6. Shahryar Encyclopaedia of Indian literature vol. 5. Page 3950.
  7. ೭.೦ ೭.೧ ೭.೨ ೭.೩ Jalil 2018.
  8. Salam, Ziya Us (14 February 2012). "Shahryar (1936–2012): The poet who gave Umrao Jaan her voice". The Hindu. Chennai, India. Retrieved 19 February 2012.
  9. Professor Shahryar, one of India’s most critically acclaimed poets.. Arab News 1 October 2005.
  10. "Author info". Shahryar biography. Urdustudies.com. Retrieved 19 February 2012.
  11. "Poet, lyricist, Jnanpith Winner". Outlook. Archived from the original on 22 May 2012. Retrieved 13 March 2014.
  12. "Jnanpith Laureates". Bharatiya Jnanpith. Archived from the original on 18 February 2012. Retrieved 13 March 2014.
  13. ೧೩.೦ ೧೩.೧ "Shahryar (1936–2012): The poet who gave Umrao Jaan her voice". The Hindu. 14 February 2012. Retrieved 13 March 2014. ಉಲ್ಲೇಖ ದೋಷ: Invalid <ref> tag; name "hindu12" defined multiple times with different content
  14. Noted poet Shahryar passes away The Times of India, 14 February 2012


ಉಲ್ಲೇಖಿಸಿದ ಮೂಲಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ