ಅಖಿಲೇಶ್ ಯಾದವ್

(ಅಖಿಲೇಶ್ ಸಿಂಗ್ ಯಾದವ್ ಇಂದ ಪುನರ್ನಿರ್ದೇಶಿತ)

ರಾಷ್ಟ್ರದ ಅತಿ ದೊಡ್ಡ ರಾಜ್ಯವಾದ 'ಉತ್ತರ ಪ್ರದೇಶ'ದ ವಿಧಾನ ಸಭಾ ಚುನಾವಣೆಯಲ್ಲಿ 'ಸಮಾಜವಾದಿ ಪಕ್ಷ' ಕ್ಕೆ 'ಪವಾಡ ಸದೃಶ ಗೆಲವ'ನ್ನು ದೊರಕಿಸುವ ಮೂಲಕ, ೩೮ ವರ್ಷ ಪ್ರಾಯದ 'ಅತಿ ಚಿಕ್ಕ ವಯಸ್ಸಿನ ರಾಜಕಾರಣಿ', ಅಖಿಲೇಶ್ ಸಿಂಗ್ ಯಾದವ್ ರವರು, 'ರಾಜ್ಯದ ಮುಖ್ಯ ಮಂತ್ರಿಯ ಪದವಿ'ಯನ್ನು ಪಡೆಯಲಿದ್ದಾರೆ.

ಅಖಿಲೇಶ್ ಯಾದವ್

ಹಾಲಿ
ಅಧಿಕಾರ ಸ್ವೀಕಾರ 
೧೫ ಮಾರ್ಚ್ ೨೦೧೨
ಪೂರ್ವಾಧಿಕಾರಿ ಮಾಯಾವತಿ
ಪೂರ್ವಾಧಿಕಾರಿ ಪ್ರದೀಪ್ ಕುಮಾರ್ ಯಾದವ್
ವೈಯಕ್ತಿಕ ಮಾಹಿತಿ
ಜನನ (1973-07-01) ೧ ಜುಲೈ ೧೯೭೩ (ವಯಸ್ಸು ೫೧)
ಸೈಫ಼ೈ, ಇತಾವಹ್, ಉತ್ತರ ಪ್ರದೇಶ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಸಮಾಜವಾದಿ ಪಕ್ಷ
ಸಂಗಾತಿ(ಗಳು) ಡಿಂಪಲ್ ಯಾದವ್
ಸಂಬಂಧಿಕರು ಮುಲಾಯಂ ಸಿಂಗ್ ಯಾದವ್ (ತಂದೆ)
ಮಕ್ಕಳು ಅದಿತಿ ಯಾದವ್, ಟೀನಾ ಯಾದವ್ ಮತ್ತು ಅರ್ಜುನ್ ಯಾದವ್
ವಾಸಸ್ಥಾನ ಸೈಫ಼ೈ, ಇತಾವಹ್, ಉತ್ತರ ಪ್ರದೇಶ
ಅಭ್ಯಸಿಸಿದ ವಿದ್ಯಾಪೀಠ ಮೈಸೂರು ವಿಶ್ವವಿದ್ಯಾಲಯ
ಸಿಡ್ನಿ ವಿಶ್ವವಿದ್ಯಾಲಯ
ಉದ್ಯೋಗ ಪರಿಸರವಾದಿ, ರಾಜಕಾರಣಿ
ಧರ್ಮ ಹಿಂದೂ
ಜಾಲತಾಣ www.akhileshyadav.com

ಜನನ, ಬಾಲ್ಯ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

'ಅಖಿಲೇಶ್ ಸಿಂಗ್ ಯಾದವ್' ೧೯೭೩ ರ ಜುಲೈ, ೧ ರಂದು ಜನಿಸಿದರು. ರಾಜಾಸ್ಥಾನದ ಧೋಲ್ಪುರದಲ್ಲಿ 'ಮಿಲಿಟರಿ ಸ್ಕೂಲ್' ನಲ್ಲಿ ಅಭ್ಯಾಸನಡೆಸಿ, ಮುಂದೆ 'ಮೈಸೂರು ವಿಶ್ವವಿದ್ಯಾಲಯ'ದಿಂದ 'ಸಿವಿಲ್ ಇಂಜಿನಿಯರಿಂಗ್ ಪದವಿ' ಗಳಿಸಿದರು. ಸನ್,೧೯೯೮ ರಲ್ಲಿ 'ಆಸ್ಟ್ರೇಲಿಯದ ಸಿಡ್ನಿ ವಿಶ್ವವಿದ್ಯಾಲಯ'ದಿಂದ 'ಇಂಜಿನಿಯರಿಂಗ್ ಪದವಿ' ಗಳಿಸಿ ಭಾರತಕ್ಕೆ ಬಂದು ತಮ್ಮ ತಂದೆ ಮುಲಾಯಂ ಸಿಂಗ್ ಯಾದವರ ಜೊತೆ ರಾಜಕೀಯ ವಲಯದಲ್ಲಿ ನುಗ್ಗಿ, ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ರಾಜಕೀಯದಲ್ಲಿ ಆಸಕ್ತಿ

ಬದಲಾಯಿಸಿ

'ಮಾಯಾವತಿ ನೇತೃತ್ವದ ಸರಕಾರ' ವನ್ನು ಕಿತ್ತೊಗೆಯುವ ಗುರಿಯಿಂದ ಸುಮಾರು ೬ ತಿಂಗಳಿಂದ ಉತ್ತರ ಪ್ರದೇಶದಾದ್ಯಂತ ೧೦ ಸಾವಿರ ಕಿ.ಮೀ.ಪಾದಯಾತ್ರೆ ನಡೆಸಿ, ೮೦೦ ರ್ಯಾಲಿಗಳನ್ನು ಆಯೋಜಿಸಿ, ಉತ್ತರ ಪ್ರದೇಶದಲ್ಲಿ ಗತಕಾಲದ ವೈಭವವನ್ನು ಮತ್ತೆ ತಂದುಕೊಟ್ಟಿದ್ದಾರೆ. ಕೆಂಪು ಟೋಪಿ, ಬಿಳಿ ಕುರ್ತಾ ಪೈಜಾಮ, ಮತ್ತು ಕಪ್ಪು ಜಾಕೆಟ್, ಅವರ ಉಡುಪಿನ ವೈಶಿಷ್ಟ್ಯತೆ. ಯುವಜನತೆಯ ಒಡಗೂಡಿ, ರಾಜ್ಯದಾದ್ಯಂತ ಬಿರುಸಿನ 'ಕ್ಯಾಂಪೇನ್ 'ನಡೆಸಿ ಜನಪ್ರಿಯರಾದರು. ಸನ್ ೨೦೦೦ ದಲ್ಲಿ ಮೊಟ್ಟಮೊದಲಬಾರಿಗೆ ರಾಜಕೀಯದಲ್ಲಿ ಕನ್ನೌಜ್ ಕ್ಷೇತ್ರದಿಂದ ಪಾದಾರ್ಪಣೆ ಮಾಡಿದರು. ತಂದೆ, 'ಮುಲಾಯಂ ಸಿಂಗ್ ಯಾದವ್, ಮೈನ್ ಪುರಿ ಮತ್ತು ಕನ್ನೌಜ್ ಎರಡು 'ಲೋಕಸಭಾಕ್ಷೇತ್ರ'ಗಳಿಂದ ವಿಜಯಿಯಾದಾಗ, ಮಗನಿಗಾಗಿ 'ಕನ್ನೌಜ್ ಕ್ಷೇತ್ರ' ವನ್ನು ತೆರವುಗೊಳಿಸಿದರು. ೨೦೧೨ ರ 'ವಿಧಾನಸಭಾ ಕ್ಷೇತ್ರ ಚುನಾವಣೆ'ಯ ಪ್ರಚಾರದ ಸಮಸ್ತ ಜವಾಬ್ದಾರಿಯನ್ನು 'ಟಿಕೆಟ್ ವಿತರಣೆ'ಯಿಂದ ಆರಂಭಿಸಿ 'ಪಕ್ಷದ ಪ್ರಚಾರ ನಿಯಂತ್ರಣ' ಅವರೇ ನಿಭಾಯಿಸಿದರು. 'ಅಖಿಲೇಶ್' ರವರ ಮೊದಲ ಕಾರ್ಯವೈಖರಿಯೆಂದರೆ, ಕ್ರಿಮಿನಲ್ ಹಿನ್ನೆಲೆಯ ಡಿ.ಪಿ.ಯಾದವ್ ರಂತಹ ನಾಯಕರನ್ನು ಪಕ್ಷದಿಂದ ದುರತಳ್ಳಿದ್ದು. '೩೦೦ ಮಂದಿ ಸದಸ್ಯ ಬಲದ ರಾಜ್ಯ ವಿಧಾನ ಸಭೆ'ಯಲ್ಲಿ, ೨೨೪ ಸ್ಥಾನಗಳನ್ನು ಜಯಿಸಿ, ಬಹುಮತ ಸಾಧಿಸುವಲ್ಲಿ ಸಮಾಜವಾದಿ ಪಕ್ಷಕ್ಕೆ ನೆರವಾದರು.'ಬಿ.ಎಸ್.ಪಿ.ಪಕ್ಷ'ದ ಜೊತೆಯಲ್ಲಿದ್ದ 'ಯುವ ಸಮುದಾಯ'ವನ್ನು ತಮ್ಮ ಪಕ್ಷದ ತೆಕ್ಕೆಯೊಳಗೆ ಹಿಡಿದಿಡುವ ಕೆಲಸ ಅತ್ಯಂತ ಮಹತ್ವದ್ದು.ಚುನಾವಣಾ ಪ್ರಚಾರ ಸಮಯದಲ್ಲಿ ಅವರು ನುಡಿದ ಕೆಲವು ಭರವಸೆಯ ಮಾತುಗಳು :

ಉತ್ತರ ಪ್ರದೇಶಕ್ಕೆ ಉತ್ತಮ ಆಡಳಿತ ವ್ಯವಸ್ಥೆ

ಬದಲಾಯಿಸಿ
  • 'ಉತ್ತರ ಪ್ರದೇಶದ ಸರಕಾರದ ಕಾನೂನು ಸುವ್ಯವಸ್ಥೆ' ಮತ್ತು 'ಸುಧಾರಣೆ,' ಪ್ರಪ್ರಥಮ ಆದ್ಯತೆಗಳಲ್ಲೊಂದು.
  • 'ಕೆಲಸವಿಲ್ಲದ ಯುವ ಜನತೆಗೆ,'ನಿರುದ್ಯೋಗ ಭತ್ತೆ'ಯಂತಹ 'ಭರೋಸೆಮನ್ ಮಾತುಗಳ ಕಾರ್ಯಾನ್ವಯನ'
  • 'ಲ್ಯಾಪ್ ಟಾಪ್' ಮತ್ತು 'ಟ್ಯಾಬ್ಲೆಟ್' ಗಳನ್ನು 'ಹೈಸ್ಕೂಲ್ ಮಟ್ಟ'ದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸುವಿಕೆ,
  • 'ಉತ್ತರ ಪ್ರದೇಶಕ್ಕೆ ಉತ್ತಮ ಆಡಳಿತದ ಸರಕಾರ' ಒದಗಿಸುವ ಗುರುತರ ಜವಾಬ್ದಾರಿ ಕೆಲಸ,

ತಂದೆ 'ಮುಲಾಯಮ್ ಸಿಂಗ್ ಯಾದವ್' ರವರ 'ರಾಜಕೀಯ ವಾರಸುದಾರ'ನಾಗಿ

ಬದಲಾಯಿಸಿ

'ಮುಲಾಯಮ್ ಸಿಂಗ್ ಯಾದವ್' ರವರು, ೨೦೦೯ ರ ಚುನಾವಣೆಯ ಬಳಿಕ, ತಮ್ಮ ಮಗ 'ಅಖಿಲೇಶ್ ಸಿಂಗ್' ರವರಿಗೆ, ಮುಂಬರುವ 'ಉತ್ತರ ಪ್ರದೇಶದ ರಾಜಕೀಯ ವಾರಸುದಾರನ ಪಟ್ಟ' ದೊರಕಿಸಿಕೊಡಬೇಕೆಂದು ರಾಜ್ಯದ ಓಟುಗರಿಗೆ ಬಿನ್ನವಿಸುತ್ತಾ ಬಂದಿದ್ದಾರೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ