ಅಕ್ಯಾಂತೊಟೆರಿಜಿಯೈ
ಅಕ್ಯಾಂತೊಟೆರಿಜಿಯೈಮೂಳೆಯ ಮೀನುಗಳಲ್ಲಿ ಇವು ವಿಕಾಸದ ದೃಷ್ಟಿಯಿಂದ ಮುಂದುವರಿದ ಉಪವರ್ಗಕ್ಕೆ ಸೇರಿವೆ.
ಅಕ್ಯಾಂತೊಟೆರಿಜಿಯೈ | |
---|---|
Labidesthes sicculus | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಆ್ಯಕ್ಟಿನೋಟೆರಿಜೀ |
(ಶ್ರೇಣಿಯಿಲ್ಲದ್ದು): | ಅಕ್ಯಾಂತೊಮೊರ್ಫ಼ಾ |
ಮೇಲ್ಗಣ: | ಅಕ್ಯಾಂತೊಪ್ಟೆರಿಜಿಯಿ |
Orders | |
See text. |
ಲಕ್ಷಣಗಳು
ಬದಲಾಯಿಸಿಮುಂದಿನ ಈಜುರೆಕ್ಕೆಯ ಕಿರಣಗಳು ಬಿಡುವಾಗಿದ್ದು ಮೊದಲನೆಯದು ಮುಳ್ಳಾಗಿ ಪರಿವರ್ತನೆಹೊಂದಿದೆ. ಮೈಮೇಲಿನ ಹುರುಪೆಗಳು ಸಾಧಾರಣವಾಗಿ ಟೀನಾಯಿಡ್ ರೀತಿಯವು. ಪ್ರೌಢಜೀವಿಗಳಲ್ಲಿ ಅನ್ನನಾಳಕ್ಕೂ ಗಾಳಿ[ಯ ಕೋಶಕ್ಕೂ ಸಂಬಂಧವಿರುವುದಿಲ್ಲ. ಸೊಂಟದ ಈಜುರೆಕ್ಕೆಗಳು ಮುಂದೆ ಸರಿದು ಎದೆಯ, ಕೊರಳಿನ ಅಥವಾ ಕೆಳದವಡೆಯ ತಳದಲ್ಲಿ ಇರುತ್ತವೆ. ನಡುಕಟ್ಟು ಕ್ಲೈತ್ರಂ ಮೂಳೆಗೆ ಅಂಟಿಕೊಂಡಿರುತ್ತದೆ. ಮೇಲ್ದವಡೆಯ ಮ್ಯಾಕ್ಸಿಲ್ಲ ಮೂಳೆಗಳಲ್ಲಿ ಹಲ್ಲುಗಳಿಲ್ಲ ಮತ್ತು ಅವು ಬಾಯಿಯ ಅಂಚಿಗೆ ಸೇರಿರುವುದಿಲ್ಲ.
ವಾಸ
ಬದಲಾಯಿಸಿಇವು ಸಾಧಾರಣವಾಗಿ ಸಮುದ್ರವಾಸಿಗಳು.
ಪ್ರಬೇಧಗಳು
ಬದಲಾಯಿಸಿಇವುಗಳಲ್ಲಿ ಸುಮಾರು 36 ಕುಟುಂಬಗಳಿವೆ. ಹಾರುಮೀನು, ಬಾಸ್, ಗೋಬಿ, ಫ್ಲೌಂಡರ್, ಬಾಂಗಡಮೀನು, ಉಬ್ಬು ಮೀನು, ಮೂರ್ಖಮೀನು, ಸಂದೂಕಮೀನು, ಮುಳ್ಳುಹಂದಿ ಮೀನು, ತಲೆಮೀನು, ಅಳಿಮೀನು ಮುಂತಾದುವು ಈ ಉಪವರ್ಗಕ್ಕೆ ಸೇರಿವೆ. ಇವುಗಳ ಕೆಲವು ಜಾತಿಗಳು ಕ್ರಿಟೇಷಿಯಸ್ ಯುಗದಲ್ಲಿ ಹುಟ್ಟಿ ಟರ್ಷಿಯರಿ ಯುಗದಲ್ಲಿ ಅಧಿಕವಾಗಿದ್ದುವು.