ಅಕ್ಕೇಡಿಯನ್ ಭಾಷೆ

ಅಕ್ಕೇಡಿಯನ್ ಭಾಷೆ ಯೂಪ್ರೆಟಿಸ್, ಟೈಗ್ರಿಸ್ ನದಿಗಳ ನಡುವಣ ಪ್ರದೇಶದ ಉತ್ತರ ಭಾಗಕ್ಕೆ ರಾಜಧಾನಿಯಾಗಿದ್ದ ಅಕ್ಕಾಡ್ ನಗರದ ಸುತ್ತಮುತ್ತ ಪ್ರಚಲಿತವಾಗಿತ್ತು. ಇದು ಹೀಬ್ರೂ, ಅರಬ್ಬಿ ಮುಂತಾದ ಭಾಷೆಗಳಂತೆ ಸೆಮಿಟಿಕ್ ಭಾಷಾವರ್ಗಕ್ಕೆ ಸೇರಿದ್ದು; ಆ ಭಾಷಾವರ್ಗದ ಪುರ್ವದಿಕ್ಕಿನ ಶಾಖೆ, ಸೆಮಿಟಿಕ್ ಭಾಷೆಯೊಂದನ್ನು ಆಡುತ್ತಿದ್ದ ಜನ ಅರೇಬಿಯದಿಂದ ವಲಸೆ ಹೊರಟು ಪ್ರ.ಶ.ಪು. 2000ದ ಸುಮಾರಿನಲ್ಲಿ ಅಕ್ಕಡ ಪ್ರದೇಶದಲ್ಲಿ ಬಂದು ನೆಲೆಸಿದರು; ಅವರ ಭಾಷೆ ಇಲ್ಲಿ ಬೆಳೆದು ಅಕ್ಕೇಡಿಯನ್ ಆಯಿತು.

ಅಕ್ಕೇಡಿಯನ್
akkadû
ಬಳಕೆಯಲ್ಲಿರುವ 
ಪ್ರದೇಶಗಳು:
Assur and Babylon 
ಪ್ರದೇಶ: ಮೆಸಪಟೋಮಿಯ
ಒಟ್ಟು 
ಮಾತನಾಡುವವರು:
ಭಾಷಾ ಕುಟುಂಬ: Afro-Asiatic
 ಸೆಮಿಟಿಕ್
  ಪೂರ್ವ ಸೆಮಿಟೆಕ್
   ಅಕ್ಕೇಡಿಯನ್ 
ಬರವಣಿಗೆ: Sumero-Akkadian cuneiform 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: initially Akkad (central Mesopotamia); lingua franca of the Middle East and ಈಜಿಪ್ಟ್ in the late Bronze and early Iron Ages.
ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: akk
ISO/FDIS 639-3: akk

ಬಳಕೆಸಂಪಾದಿಸಿ

 
An Akkadian inscription

ಇದರಲ್ಲಿ ವಿಪುಲವಾದ ಸಾಹಿತ್ಯವಿದೆ; ಶಾಸನಗಳು, ಬರಹವನ್ನುಳ್ಳ ಸುಟ್ಟಮಣ್ಣಿನ ಚದರ ಬಿಲ್ಲೆಗಳು ಹೇರಳವಾಗಿ ದೊರೆತಿವೆ. ಚರಿತ್ರೆಯ ಅಂಶಗಳು, ನ್ಯಾಯಶಾಸನಗಳು, ವಾಣಿಜ್ಯ ವ್ಯವಹಾರದ ಲೆಕ್ಕಪತ್ರಗಳು, ಪ್ರಾರ್ಥನಾ ಪದ್ಯಗಳು, ಪುರಾತನ ಕಟ್ಟುಕಥೆಗಳು, ಖಗೋಳಶಾಸ್ತ್ರ, ಜ್ಯೋತಿಷ್ಯ, ವೈದ್ಯ ಮುಂತಾದ ಅನೇಕ ವಿಷಯಗಳು ಇವುಗಳಲ್ಲಿವೆ. ಹಳೆ ಅಕ್ಕೇಡಿಯನ್ (ಪ್ರ.ಶ.ಪು. 2800-650), ಹೊಸ ಅಕ್ಕೇಡಿಯನ್ (ಪ್ರ.ಶ.ಪು. 650 ರಿಂದ ಈಚೆಗೆ) ಎಂಬೆರಡು ಭಾಷಾವಸ್ಥೆಗಳಿವೆ. ಈ ಭಾಷೆಗೆ ಬೇರೊಂದು ಬುಡಕಟ್ಟಿಗೆ ಸೇರಿದ್ದ ಸುಮೇರಿಯನ್ ಭಾಷೆಯ ಸಂಪರ್ಕವುಂಟಾಗಿತ್ತು. ಪ್ರ.ಶ.ಪು. 800ರಲ್ಲಿ ಈ ಭಾಷೆ ಆರೈಮೈಕ್ ಭಾಷೆಗೆ ಎಡೆಗೊಟ್ಟಿತು. ಅಲೆಗ್ಸಾಂಡರನ ಕಾಲಕ್ಕೆ ಇದು ವ್ಯವಹಾರದಲ್ಲೂ ಇಲ್ಲವಾಯಿತು. ಆದರೂ ಪ್ರ.ಶ.ಪು. 1ನೆಯ ಶತಮಾನದವರೆಗೆ ಇದು ಗ್ರಾಂಥಿಕ ಭಾಷೆಯಾಗಿ ಬಳಕೆಯಲ್ಲಿತ್ತು. ನುಜಿ ಎಂಬುದು ಇದರ ಒಂದು ಉಪಭಾಷೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: