ಅಂತರ್ಕೀಲಕ ಬದಲಾಯಿಸಿ

ರೈಲಿನ ಕೈಮರ ಬೀಳಿಸಲು ಕೊಡುವ ಸಂಜ್ಞೆಯಲ್ಲಿ ತಪ್ಪು ಕಲ್ಪನೆಗೆ ಅವಕಾಶವಿಲ್ಲದಂತೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವ ವಿಧಾನ (ಪರಸ್ಪರ ತೊಡರಿಕೆ) ಮಾರ್ಗವನ್ನು ನಿರ್ಧರಿಸುವುದಕ್ಕೆ ಮೊದಲೇ ಕೈಮರ ಬೀಳದಂತೆ ಸಂಜ್ಞೆಯ ಉಪಕರಣವಿರುವ ಪೆಟ್ಟಿಗೆಯಲ್ಲಿ ಸನ್ನೆಗೋಲನ್ನು (ಲೀವರ್) ಅಳವಡಿಸಲಾಗಿರುತ್ತದೆ. ಸಂಜ್ಞೆಯಲ್ಲಿ ವಿರೋಧಾಭಾಸವುಂಟಾಗುವುದನ್ನು ಈ ಕ್ರಮದಿಂದ ತಡೆಗಟ್ಟಬಹುದು. ಕೈಮರ ಬೀಳಿಸಿ, ಸಂಜ್ಞೆಕೊಟ್ಟು, ಮಾರ್ಗ ನಿಗದಿಯಾದ ಮೇಲೆ ಮತ್ತೆ ಅದನ್ನು ಬದಲಾಯಿಸುವುದಕ್ಕೆ ಆಗದಂತೆ ಈ ಪರಸ್ಪರ ತೊಡರಿಕೆ ಕ್ರಮ ಸಹಾಯಕವಾಗಿದೆ.