ಅಂತಾರಾಷ್ಟ್ರೀಯ ವ್ಯಾಪಾರ

ಅಂತಾರಾಷೀ
(ಅಂತರಾಷ್ಟ್ರೀಯ ವ್ಯಾಪರ ಇಂದ ಪುನರ್ನಿರ್ದೇಶಿತ)


ಅಂತರಾಷ್ಟ್ರೀಯ ವ್ಯಾಪಾರವು ಪ್ರಪಂಚದ ರಾಷ್ಟ್ರ-ರಾಷ್ಟ್ರಗಳ ನಡುವೆ ನಡೆಯುವ ವ್ಯಾಪಾರವಾಗಿರುತ್ತದೆ. ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರಕ್ಕೆ ಸರಕು-ಸೇವೆಗಳನ್ನು ರಫ್ತು ಮತ್ತು ಆಮದು ಮಾಡಿಕೊಳ್ಳುತ್ತವೆ. ಬೇರೆ ರಾಷ್ಟ್ರಗಳು ಉತ್ಪಾದಿಸಿದ ಸರಕು-ಸೇವೆಗಳನ್ನು ನಮ್ಮ ದೇಶಕ್ಕೆ, ನಮ್ಮ ದೇಶದಲ್ಲಿ ಉತ್ಪಾದಿಸಿದ ಸರಕು-ಸೇವೆಗಳನ್ನು ಹೊರದೇಶಗಳಿಗೆ ಕಳಿಸುವಾ ಅಥವಾ ತರಿಸಿಕೊಳ್ಳುವ ಅಂತರಾಷ್ಟ್ರಿಯ ವ್ಯಾಪಾರದಿಂದ ದೇಶದ ಅಥವಾ ಪ್ರಪಂಚದ ರಾಷ್ಟ್ರಗಳ ಆರ್ಥಿಕ ಪ್ರಗತಿ ತ್ವರಿತಗೊಳ್ಳುತ್ತದೆ. ಅಂತರಾಷ್ಟ್ರೀಯ ವ್ಯಾಪಾರ ರಾಷ್ಟ್ರ-ರಾಷ್ಟ್ರಗಳ ನಡುವಿನ ಆರ್ಥಿಕ ಪ್ರಗತಿಯ ಗತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ಪುರಾತನ ಕಾಲದ ಅರ್ಥಶಾಸ್ತ್ರಙ್ನರಾದ ಆಡಮ್ ಸ್ಮಿತ್, ಜೆ.ಎಸ್.ಮಿಲ್ ರವರು ಅಂತರಾಷ್ಟ್ರೀಯ ವ್ಯಾಪಾರದಿಂದಾಗುವ ಉಪಯುಕ್ತತೆಗಳನ್ನು ವಿವರಿಸಿ "ವ್ಯಾಪಾರವು ಆರ್ಥಿಕ ಪ್ರಗತಿಯ ಎಂಜಿನ್ನಾಗಿದೆ " ಎಂದು ಹೇಳಿದ್ದಾರೆ.

ಅಂತರಾಷ್ಟ್ರೀಯ ವ್ಯಾಪಾರದ ಪ್ರಾಮುಖ್ಯತೆ

ಬದಲಾಯಿಸಿ

ಅಂತರಾಷ್ಟ್ರೀಯ ವ್ಯಾಪಾರದಿಂದ ಬೇಕಾದ ಸರಕುಗಳನ್ನು, ಸೇವೆಗಳನ್ನು, ಬಂಡವಾಳವನ್ನು, ತಂತ್ರಜ್ನಾನವನ್ನು ತರಿಸಿಕೊಳ್ಳಬಹುದು. ಇವೆಲ್ಲ ವಸ್ತುಗಳನ್ನು ವಿದೇಶಗಳಿಗೆ ಕಳಿಸಿಕೊಡಬಹುದು. ಪ್ರಪಂಚದ ಎಲ್ಲಾ ರಾಷ್ಟ್ರಗಳು ಒಂದನ್ನೊಂದು ಪರಸ್ಪರ ಅವಲಂಬಿಸಿವೆ. ಒಂದು ರಾಷ್ಟ್ರ ಆರ್ಥಿಕವಾಗಿ, ತಾಂತ್ರಿಕವಾಗಿ, ರಾಜಕೀಯವಾಗಿ, ಭೌಗೋಳಿಕವಾಗಿ ಎಷ್ಟೇ ಮುಂದುವರಿದಿದ್ದರೂ ಅದು ತನ್ನಷ್ಟಕ್ಕೆ ತಾನು ಇರಲಿಕ್ಕಾಗದು. ಒಂದಿಲ್ಲ ಒಂದು ಕಾರಣಕ್ಕಾಗಿ ಇತರ ರಾಷ್ಟ್ರಗಳನ್ನು ಅವಲಂಬಿಸಬೇಕಾಗುತ್ತದೆ. ಪ್ರತಿಯೊಂದು ರಾಷ್ಟ್ರವು ಕೆಲವೊಂದು ಸರಕು ಸೇವೆಗಳನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡಿ, ಇತರ ರಾಷ್ಟ್ರಗಳಿಂದ ತನಗೆ ಬೇಕಾದ ಸರಕು ಸೇವೆಗಳನ್ನು ಆಮದು ಮಾಡಿಕೊಳ್ಳುವುದದರಿಂದ ಪ್ರಪಂಚದ ಎಲ್ಲ ರಾಷ್ಟ್ರಗಳಿಗೂ ಲಾಭವಾಗುತ್ತದೆ.

ಭೌಗೋಳಿಕ ಶ್ರಮವಿಭಜನೆ ಮತ್ತು ವಿಶಿಷ್ಟತೆ ನಿಯಮದ ಪ್ರಕಾರ ವಿವಿಧ ರಾಷ್ಟ್ರಗಳು ವಿವಿಧ ಸರಕು-ಸೇವೆಗಳ ಉತ್ಪಾದನೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದು ವಿನಿಮಯ ಮಾಡಿಕೊಳ್ಳವುದರಿಂದ ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಭಾಗವಹಿಸಿದ ಎಲ್ಲ ರಾಷ್ಟ್ರಗಳಿಗೂ ಲಾಭವಾಗುತ್ತದೆ.

ಅಂತರಾಷ್ಟ್ರೀಯ ಮತ್ತು ಆಂತರಿಕ ವ್ಯಾಪಾರಗಳಲ್ಲಿನ ವ್ಯತ್ಯಾಸಗಳು

ಬದಲಾಯಿಸಿ

ಶ್ರಮ ಮತ್ತು ಬಂಡವಾಳ ಹೊಂದಿರುವುದರಲ್ಲಿ ವ್ಯತ್ಯಾಸ

ಬದಲಾಯಿಸಿ

ಆಂತರಿಕವಾಗಿ ಶ್ರಮ ಮತ್ತು ಬಂಡವಾಳದ ವಸ್ತುಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಥವಾ ಒಂದು ಉದ್ದಿಮೆಯಿಂದ ಇನ್ನೊಂದು ಉದ್ದಿಮೆಗೆ ಸುಲಭವಾಗಿ ಚಲ್ಲಿಸುತ್ತವೆ. ಆದರೆ ರಾಷ್ಟ್ರ-ರಾಷ್ಟ್ರಗಳ ನಡುವೆ ಇವುಗಳು ಸುಲಭವಾಗಿ ಚಲ್ಲಿಸುವುದಿಲ್ಲ. ಏಕೆಂದರೆ ವಿದೇಶಗಳಲ್ಲಿ ಬಂಡವಾಳ ತೊಡಗಿಸುವಲ್ಲಿ ಎದುರಿಸಬೇಕಾದ ತೊಂದರೆಗಳು, ಹಿಂದಿರುಗಿ ಪಡೆಯುವಾಗ ಎದುರಿಸಬೇಕಾದ ಅನಾನುಕೂಲತೆಗಳು, ಮೊದಲಾದ ಅಂಶಗಳಿಂದ ಬಂಡವಾಳ ತೊಡಗಿಸುವವರು ವಿದೇಶಗಳಲ್ಲಿ ತೊಡಗಿಸಲು ಹಿಂಜರಿಯುತ್ತಾರೆ.

ನೈಸರ್ಗಿಕ ಸಂಪನ್ಮೂಲ ಹೊಂದುವುದರಲ್ಲಿ ವ್ಯತ್ಯಾಸ

ಬದಲಾಯಿಸಿ

ವಿವಿಧ ರಾಷ್ಟ್ರಗಳ ನಡುವೆ ನಿಸರ್ಗ ಸಂಪನ್ಮೂಲ ವಿವಿಧ ಪ್ರಮಾಣದಲ್ಲಿ ಹಂಚಲ್ಪಟ್ಟಿರುತ್ತದೆ. ಈ ರೀತಿಯಾಗಿ ವಿವಿಧ ರಾಷ್ಟ್ರಗಳಲ್ಲಿನ ಭೂಮಿಯ ಗುಣ-ಧರ್ಮ, ಹವಾಗುಣ ಬೇರೆ ಬೇರೆಯಾಗಿರುವುದರಿಂದ ವಿವಿಧ ರಾಷ್ಟ್ರಗಳು ವಿವಿಧ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸಬಹುದಾಗಿದೆ.

ಆರ್ಥಿಕ ನೀತಿಗಳಲ್ಲಿ ವ್ಯತ್ಯಾಸ

ಬದಲಾಯಿಸಿ

ಅಂತರಾಷ್ಟ್ರೀಯ ವ್ಯಾಪಾರವು ಅನೇಕ ನಿಯಂತ್ರಣಗಳಿಗೊಳಪಟ್ಟಿರುತ್ತದೆ. ಯಾವುದೇ ಸರಕನ್ನು ಬೇಕಾದ ಪ್ರಮಾಣದಲ್ಲಿ ಬೇಕಾದ ರಾಷ್ಟ್ರದಿಂದ ಪಡೆಯುವ ಸ್ವಾತಂತ್ರ್ಯ ಹೊಂದಿರುವುದಿಲ್ಲ. ಆದರೆ ಆಂತರಿಕ ವ್ಯಾಪಾರದಲ್ಲಿ ಕೊಳ್ಳುವವರು ಮತ್ತು ಮಾರುವವರು ಸ್ವತಂತ್ರರಾಗಿರುತ್ತಾರೆ. ಯಾವುದೇ ನಿರ್ಬಂಧಗಳಿಗೆ ಒಳಗಾಗಿರುವುದಿಲ್ಲ.

ವಿದೇಶಿ ವಿನಿಮಯ ದರದಲ್ಲಿನ ವ್ಯತ್ಯಾಸ

ಬದಲಾಯಿಸಿ

ಪ್ರತಿಯೊಂದು ದೇಶವು ತನ್ನದೇ ಆದ ಹಣ ಚಲಾವಣೆಯನ್ನು ಹೊಂದಿರುವುದರಿಂದ ಪ್ರಪಂಚದ ವಿವಿಧ ರಾಷ್ಟ್ರಗಳು ವಿವಿಧ ಕರೆನ್ಸಿ ಪದ್ಧತಿ ಅಥವಾ ಚಲಾವಣೆಯನ್ನು ಹೊಂದಿರುತ್ತದೆ. ಭಾರತದ ವ್ಯಾಪಾರಿಯು ತನ್ನ ರೂಪಾಯಿಯನ್ನು ಡಾಲರಿಗೆ ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ರಿಸರ್ವ್ ಬ್ಯಾಂಕಿನ ಸಹಾಯ ಮತ್ತು ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ.

ವ್ಯಾಪಾರ ಪದ್ಧತಿಗಳಲ್ಲಿನ ವ್ಯತ್ಯಾಸಗಳು

ಬದಲಾಯಿಸಿ

ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆ ವ್ಯಾಪಾರ ಪದ್ಧತಿಗಳಿರುತ್ತದೆ. ಅವುಗಳ ಪರಿಚಯವಿಲ್ಲದೆ ಇತರ ರಾಷ್ಟ್ರಗಳೊಡನೆ ವ್ಯಾಪಾರ ಮಾಡುವುದು ಸಾಧ್ಯವಾಗುವುದಿಲ್ಲ. ಇಂತಹ ತೊಂದರೆಗಳು ಆಂತರಿಕ ವ್ಯಾಪಾರದಲ್ಲಿ ಉದ್ಭವಿಸುವುದಿಲ್ಲ.

ವಿದೇಶಿ ವ್ಯಾಪಾರದ ಸ್ವರೂಪದಲ್ಲಿ ವ್ಯತ್ಯಾಸ

ಬದಲಾಯಿಸಿ

ರಾಷ್ಟ್ರ-ರಾಷ್ಟ್ರಗಳು ಆಮದು ಉದ್ದಿಮೆಗಳ ಉತ್ಪಾದನೆಯು ವಿದೇಶಗಳ ಬೇಡಿಕೆಗನುಗುಣವಾಗಿ ಬದಲಾಗುತ್ತದೆ. ಬೇಡಿಕೆ ಕಡಿಮೆಯಾದರೆ ಆಮದು ಕಡಿಮೆಯಾಗಿ, ಉತ್ಪಾದನೆಯು ಹೆಚ್ಚಾಗುತ್ತದೆ. ಕೆಲವು ಉದ್ದಿಮೆಗಳು ವಿದೇಶಿ ಬಂಡವಾಳ ಮತ್ತು ಅರೆಸಿದ್ದ ವಸ್ತುಗಳ ಮೇಲೆ ಅವಲಂಬನೆಯಾಗಿರುತ್ತವೆ. ಆದರೆ ಇಂತಹ ಪರಿಸ್ಥಿತಿ ಆಂತರಿಕ ವ್ಯಾಪಾರದಿಂದ ಉದ್ಬವಿಸುವುದಿಲ್ಲ.

ಅಂತರಾಷ್ಟ್ರೀಯ ವ್ಯಾಪಾರದ ಸಿದ್ಧಾಂತಗಳು

ಬದಲಾಯಿಸಿ

ತುಲನಾತ್ಮಕ ವೆಚ್ಚದ ಸಿದ್ಧಾಂತ ಸಾಂಪ್ರದಾಯಿಕ ಸಿದ್ಧಾಂತದ ಪ್ರಕಾರ ಪ್ರತಿಯೊಂದು ರಾಷ್ಟ್ರವು ತನ್ನಲ್ಲಿರುವ ನೈಸರ್ಗಿಕ ಸಂಪನ್ಮೂಲಗಳಿಂದ, ಜನರ ದಕ್ಷತೆಯಿಂದ ಮತ್ತು ವೈಶಿಷ್ಟ್ಯತೆಯ ಪ್ರಭಾವದಿಂದ ಕೆಲವೇ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸಿ ಹೆಚ್ಚಾದ ವಸ್ತುಗಳನ್ನು ಇತರ ರಾಷ್ಟ್ರಗಳಿಂದ ಮಾರಾಟ ಮಾಡಿ ಆ ರಾಷ್ಟ್ರಗಳಿಂದ ತನಗೆ ಬೇಕಾದ ತಾನು ಉತ್ಪಾದಿಸಲಾಗದ ವಸ್ತುಗಳನ್ನು ಕೊಂಡುಕೊಳ್ಳುತ್ತದೆ. ಇದರಿಂದ ಎಲ್ಲ ರಾಷ್ಟ್ರಗಳಿಗೂ ಲಾಭವಾಗುತ್ತದೆ.

ಟೀಕೆಗಳು

ಬದಲಾಯಿಸಿ

ತುಲನಾತ್ಮಕ ವೆಚ್ಚದ ಸಿದ್ಧಾಂತವು ಅನೇಕ ಟೀಕೆಗಳಿಗೆ ಗುರಿಯಾಗಿದೆ:

  • ಶ್ರಮದ ಮೌಲ್ಯ ಆಧಾರಿತ ಸಿದ್ಧಾಂತ.
  • ಸ್ಥಿರ ವೆಚ್ಚದ ಕಲ್ಪನೆ.
  • ಸಾರಿಗೆ ವೆಚ್ಚಗಳಿಲ್ಲ ಎನ್ನುವುದನ್ನು ಒಪ್ಪಲಿಕ್ಕಾಗದು.
  • ಉತ್ಪಾದನಾಂಗಗಳು ಚಲಿಸುವುದಿಲ್ಲ ಎನ್ನುವುದೂ ತಪ್ಪು ಗ್ರಹಿಕೆಯಾಗಿದೆ.
  • ಎರಡು ರಾಷ್ಟ್ರ ಮತ್ತು ಎರಡು ವಸ್ತುಗಳು ನಡುವಿನ ಸಿದ್ಧಾಂತವಾಗಿದೆ.
  • ಸಂಪೂರ್ಣ ವಿಶಿಷ್ಟ್ಯತೆ ಸಾಧ್ಯವಿಲ್ಲ .

ವ್ಯಾಪಾರದ ಕರಾರುಗಳ ಪ್ರಕಾರಗಳು

ಬದಲಾಯಿಸಿ
  1. ನಿವ್ವಳ ವಸ್ತು ವಿನಿಮಯ ಕರಾರುಗಳು.
  2. ಒಟ್ಟು ವಸ್ತು ವಿನಿಮಯ ವ್ಯಾಪಾರದ ಕರಾರುಗಳು.
  3. ಆದಾಯದ ವ್ಯಾಪಾರದ ಕರಾರುಗಳು.

ವ್ಯಾಪಾರದ ಕರಾರುಗಳನ್ನು ನಿರ್ಧರಿಸುವ ಅಂಶಗಳು

ಬದಲಾಯಿಸಿ
  • ಆಮದು ಮತ್ತು ವಸ್ತುಗಳ ಬೇಡಿಕೆಯ ಸ್ವರೂಪ.
  • ಉತ್ಪಾದನ ಪ್ರಮಾಣ.
  • ರಾಷ್ಟ್ರದ ಗಾತ್ರ.

ವ್ಯಾಪಾರ ಬಾಕಿ ಮತ್ತು ಸಂದಾಯಬಾಕಿ

ಬದಲಾಯಿಸಿ

ವ್ಯಾಪಾರ ಬಾಕಿ ಎಂದರೆ ಒಂದು ದೇಶದ ರಫ್ತು ಮತ್ತು ಆಮದು ವ್ಯಾಪಾರವನ್ನೊಳಗೊಂಡಿರುತ್ತದೆ. ಸಂದಾಯ ಬಾಕಿಯನ್ನು ಚಾಲ್ತಿ ಖಾತೆ ಮತ್ತು ಬಂಡವಾಳ ಖಾತೆ ಎಂದು ಕರೆಯುತ್ತಾರೆ.

ಸಂದಾಯ ಬಾಕಿಯಲ್ಲಿನ ಅಸತೋಲನವನ್ನು ಸರಿಪಡಿಸುವ ವಿಧಾನಗಳು

ಬದಲಾಯಿಸಿ
  1. ಹಣ ಕುಗ್ಗುವಿಕೆ ಮತ್ತು ಬೆಲೆಗಳ ಇಳಿಕೆ.
  2. ವಿದೇಶಿ ವಿನಿಮಯ ದರವನ್ನು ತಗ್ಗಿಸುವುದು.
  3. ಹಣದ ಅಪಮೌಲ್ಯ.
  4. ವಿದೇಶಿ ವಿನಿಮಯ ನಿಯಂತ್ರಣ.
  5. ರಫ್ತುಗಳ ಉತ್ತೇಜನ ಮತ್ತು ಆಮದುಗಳ ನಿಯಂತ್ರಣ.

ಮೌಲ್ಯ ವಿಚ್ಚೇದನ ಯಶಸ್ಸಿಗೆ ಅವಶ್ಯಕತೆಗಳು

ಬದಲಾಯಿಸಿ
  1. ಸ್ಥಿತಿ ಸ್ಥಾಪಕತ್ವವಿರುವ ಬೇಡಿಕೆ.
  2. ಬೆಲೆ-ವೆಚ್ಚಗಳ ಪ್ರಮಾಣ.
  3. ಅಂತರಾಷ್ಟ್ರಿಯ ಸಹಕಾರ.
  4. ವಿದೇಶಿ ವಿನಿಮಯ ನಿಯಂತ್ರಣ.
  5. ರಫ್ತುಗಳಿಗೆ ಉತ್ತೇಜನ ಮತ್ತು ಆಮದುಗಳ ನಿಯಂತ್ರಣ.

ಇದನ್ನೂ ನೋಡಿ

ಬದಲಾಯಿಸಿ

ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿನ ಲೇಖನ