ಅಂತರಪಟವು ಭಾರತೀಯ ಕನ್ನಡ ಭಾಷೆಯ ದೈನಂದಿನ ದೂರದರ್ಶನ ಸರಣಿಯಾಗಿದ್ದು, ಇದು 24 ಏಪ್ರಿಲ್ 2023 ರಂದು ಕಲರ್ಸ್ ಕನ್ನಡದಲ್ಲಿ ಪ್ರಥಮ ಪ್ರದರ್ಶನಗೊಂಡಿತು. [೧]

ಅಂತರಪಟ
ನಿರ್ದೇಶಕರುಸ್ವಪ್ನ ಕೃಷ್ಣ
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ಸ್ವಪ್ನ ಕೃಷ್ಣ
ಕ್ಯಾಮೆರಾ ಏರ್ಪಾಡುಮಲ್ಟೀಕ್ಯಾಮೆರಾ
ಸಮಯ22 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)RRR ಪ್ರೊಡಕ್ಷನ್
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ
ಮೂಲ ಪ್ರಸಾರಣಾ ಸಮಯ24 ಏಪ್ರಿಲ್ 2023 – ಪ್ರಸ್ತುತ



ಕಥಾವಸ್ತು ಬದಲಾಯಿಸಿ

ಕಥಾ ನಾಯಕಿ ಆರಾಧನಾ ಬಡ ಕುಟುಂಬಕ್ಕೆ ಸೇರಿದ ಅತ್ಯಂತ ಸರಳ ವ್ಯಕ್ತಿತ್ವದ ಹುಡುಗಿಯಾಗಿದ್ದಾಳೆ. ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ತನ್ನ ಸಂಸಾರವನ್ನು ಸುಖವಾಗಿಡಲು ಅರೆಕಾಲಿಕ ಉದ್ಯೋಗದ ಕನಸು ಕಾಣುತ್ತಾಳೆ. ಅವಳು ತನ್ನ ಕುಡುಕ ಮಲ ತಂದೆ ಮಹೇಶ್ ಮತ್ತು ಅವಳ ತಾಯಿ ರೇವತಿ ಜೊತೆ ವಾಸ ಮಾಡುತ್ತ ಇರುತ್ತಾಳೆ. ಬೇಜವಬ್ದಾರಿ ಹುಡುಗ ಸುಶಾಂತ್‌ನನ್ನು ಅವನ ತಂದೆ ಮನೆಯಿಂದ ಹೊರಹಾಕುತ್ತಾನೆ. ತಂದೆಯ ಆಸ್ತಿಯನ್ನು ಆನಂದಿಸುವ ಬದಲು ಸ್ವತಃ ಕೆಲಸ ಮಾಡಿ ಹಣ ಸಂಪಾದಿಸುವಂತೆ ಹೇಳುತ್ತಾನೆ. .

ಸುಶಾಂತ್ ಆರಾಧನಾಳನ್ನು ಭೇಟಿಯಾಗುತ್ತಾನೆ . ಅವಳಿಗೆ ಕೆಲಸ ಹುಡುಕಲು ಸಹಾಯ ಮಾಡಲು ಪ್ರಯತ್ನಿಸುತ್ತಾನೆ. ಆರಾಧನಾಳ ಮದುವೆಯನ್ನು ಸುಶಾಂತ್ ಕಳ್ಳನೆಂದು ತಿಳಿದ ಒಬ್ಬ ಕುಡುಕನೊಂದಿಗೆ ಅವಳ ತಂದೆ ಏರ್ಪಡಿಸುತ್ತಾನೆ. ಆರಾಧನಾ ಮದುವೆಯಿಂದ ತಪ್ಪಿಸಿಕೊಳ್ಳಲು ಬಯಸುತ್ತಾಳೆ, ಆದರೆ ಅವಳು ಸಿಕ್ಕಿಬಿದ್ದಿದ್ದಾಳೆ. ಜ್ಯೋತಿಷಿಯೊಬ್ಬರು ಮದುವೆಯನ್ನು ಮುಂದುವರಿಸಲು ಸಲಹೆ ನೀಡುತ್ತಾರೆ. ಮದುವೆಯ ಮಂಟಪದಲ್ಲಿ, ಆರಾಧನಾ ಮತ್ತು ಸುಶಾಂತ್ ಅವರ ಜೀವನವನ್ನು ಅಂತರಪಟವು ಹೇಗೆ ಬದಲಾಯಿಸುತ್ತದೆ ಎಂಬುದು ಕಥಾ ಹಂದರ ಆಗಿದೆ [೨]

ಪಾತ್ರವರ್ಗ ಬದಲಾಯಿಸಿ

  • ತನ್ವಿ ಬಾಲರಾಜ್: ಆರಾಧನಾಳಾಗಿ, ಸುಶಾಂತ್ ಸ್ನೇಹಿತೆ, ಮಹೇಶ್ ಮತ್ತು ರೇವತಿ ಮಗಳು
  • ಚಂದನ್ ಗೌಡ: ಸುಶಾಂತ್ ಆಗಿ,
  • ಆರಾಧನಾ ಸ್ನೇಹಿತ
  • ಮಂಜಣ್ಣ: ಮಹೇಶ್‌ನಾಗಿ, ಆರಾಧನಾಳ ಮಲ ತಂದೆಯಾಗಿ
  • ಜ್ಯೋತಿ ಕಿರಣ್ರೇ, ರೇವತಿಯಾಗಿ, ಆರಾಧನಾಳ ತಾಯಿಯಾಗಿ
  • ಅಮಲಾ ಅವರ ಪತಿಯಾಗಿ ವಿಟ್ಲಕಾಮಠ
  • ಅಮಲಾ
  • ಮಂಜು ಪಾವಗಡ [೩]

ನಿರ್ಮಾಣ ಬದಲಾಯಿಸಿ

ಈ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ಸ್ವಪ್ನಾ ಕೃಷ್ಣ ಅವರ ಮೊದಲ ನಿರ್ಮಾಣವಗಿದೆ. ಮೊದಲ ಪ್ರೋಮೋವನ್ನು 14 ಜನವರಿ 2023 ರಂದು ಪ್ರಸಾರ ಮಾಡಲಾಯಿತು. 24 ಏಪ್ರಿಲ್ 2023 ರಂದು ಪ್ರಾರಂಭವಾಯಿತು [೪]

ಉಲ್ಲೇಖಗಳು ಬದಲಾಯಿಸಿ

  1. "Colors Kannada launches socio-family drama Antarapata". Indian Television.
  2. "ಕಲರ್ಸ್ ಕನ್ನಡದಲ್ಲಿ ಶುರುವಾಗಲಿದೆ ಹೊಸ ಧಾರಾವಾಹಿ: ಇದು ಬೆಂಕಿಯಲ್ಲಿ ಅರಳಿದ ಹೂವಿನ ಕತೆ". Filmibeat Kannada.
  3. "Bigg Boss Kannada 8 Winner Manju Pavagada To Appear On Antarapata Next". News18.
  4. "Colors Kannada launches new show focusing on women entrepreneurs". Adgully.

ಬಾಹ್ಯ ಕೊಂಡಿಗಳು ಬದಲಾಯಿಸಿ

"https://kn.wikipedia.org/w/index.php?title=ಅಂತರಪಟ&oldid=1182812" ಇಂದ ಪಡೆಯಲ್ಪಟ್ಟಿದೆ