ಸಂಭೋಗ

(ಅಂಗಸಂಗ ಇಂದ ಪುನರ್ನಿರ್ದೇಶಿತ)

ಗಂಡು ಮತ್ತು ಹೆಣ್ಣುಗಳು ಕೂಡಿ ಸೃಷ್ಟಿಕಾರ್ಯದಲ್ಲಿ ತೊಡಗುವುದೇ ಲೈಂಗಿಕ ಕ್ರಿಯೆಯ ಮುಖಾಂತರ. ಮಗುವಿಗೆ ಜನ್ಮವೀಯುವುದು ಸಾಧ್ಯವಾಗುವುದು ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ. ಗಂಡು ಹೆಣ್ಣುಗಳು ಸಂಗಾತಿಗಳಾಗಿ ಜೊತೆಯಾಗಿ ಏಕಾಂತದಲ್ಲಿರುವಾಗ ಇಬ್ಬರಲ್ಲೂ ಕಾಮಾಸಕ್ತಿ ಕೆರಳುತ್ತದೆ. ಇದರಿಂದಾಗಿ ಗಂಡು ಹೆಣ್ಣುಗಳು ಕಾಮ ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಾರೆ. ಒಬ್ಬರ ಮೈಯನ್ನು ಮತ್ತೊಬ್ಬರು ನಯವಾಗಿ ಉಜ್ಜುವುದು, ಮುತ್ತಿಡುವುದು, ನಾಲಿಗೆಯಲ್ಲಿ ನೆಕ್ಕುವುದು ಮಾಡುತ್ತಾ ಒಬ್ಬರ ಬಟ್ಟೆಗಳನ್ನು ಒಬ್ಬರು ಕಳಚಿಕೊಳ್ಳುತ್ತಾ ಬೆತ್ತಲಾಗಿ ನಿಲ್ಲುತ್ತಾರೆ. ಈ ಸಮಯದಲ್ಲಿ ಗಂಡು ಹೆಣ್ಣುಗಳಿಬ್ಬರ ದೇಹದಲ್ಲೂ ವಿವಿಧ ಗ್ರಂಥಿಗಳು ಸ್ರವಿಸಿ ದೇಹದಾದ್ಯಂತ ಹಲವಾರು ಹಾರ್ಮೋನ್ ಗಳ ಸಂಚಾರ ಆರಂಭವಾಗುತ್ತದೆ. ಈ ಕಾರಣದಿಂದ ದೇಹದಲ್ಲಿ ರಕ್ತಸಂಚಾರ ಅಧಿಕವಾಗುತ್ತದೆ ಹಾಗು ಇತರ ದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಗಂಡಿನ ಶಿಶ್ನ ಗಡುಸಾಗಿ ಎದ್ದು ನಿಲ್ಲುತ್ತದೆ, ಹಾಗು ಹೆಣ್ಣಿಗೆ ಯೋನಿಯಲ್ಲಿ ಎಣ್ಣೆಯಂತಹ ದ್ರವ ಒಸರಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಗಂಡಿನ ಶಿಶ್ನ ಕಬ್ಬಿಣದ ರಾಡಿನಂತೆ ಗಟ್ಟಿಯಾಗಿರುವುದರಿಂದ ಹೆಣ್ಣಿನ ಯೋನಿಯೊಳಗೆ ಸುಲಭವಾಗಿ ನುಗ್ಗಲು ಅನುವಾಗುತ್ತದೆ. ಆನಂತರ ಗಂಡು ತನ್ನ ಶಿಶ್ನವನ್ನು ಹೆಣ್ಣಿನ ಯೋನಿಯೊಳಗೆ ಹಾಕಿ ಹಿಂದೆ ಮುಂದೆ ಆಡಿಸಲು ಶುರು ಮಾಡುತ್ತಾನೆ ಹಲವು ನಿಮಿಷಗಳ ಕಾಲ ಇದೆ ಕ್ರಿಯೆ ಮುಂದುವರೆದು ಗಂಡು ಹಾಗು ಹೆಣ್ಣು ಕಾಮದ ಪರಾಕಾಷ್ಠೆಯನ್ನು ತಲುಪಿ ಗಂಡು ತನ್ನ ವೀರ್ಯವನ್ನು ಹೆಣ್ಣಿನ ಯೋನಿಯೊಳಗೆ ಬಿಡುತ್ತಾನೆ. ಗಂಡು ತಾನು ಬಿಡುವ ವೀರ್ಯದಲ್ಲಿ ಮಗುವಿನ ಜನ್ಮಕ್ಕೆ ಕಾರಣವಾಗುವ ಜೀವಕೋಶಗಳು ಇರುತ್ತವೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಇರುವ ಈ ಕೋಶಗಳು ಹೆಣ್ಣಿನ ಗರ್ಭನಾಳಗಳ ಮೂಲಕ ಹೆಣ್ಣಿನ ಅಂಡಾಶಯ ತಲುಪುತ್ತವೆ. ಇದೆ ಮಗುವಿನ ಜನ್ಮಕ್ಕೆ ಕಾರಣವಾಗುತ್ತದೆ. ಮಗುವಿನ ಜನ್ಮವೊಂದೇ ಅಲ್ಲದೆ ಸಂಗಾತಿಗಳ ದೈಹಿಕ ತೃಪ್ತಿಗೂ ಕಾರಣವಾಗುತ್ತದೆ. ಸಾಮಾನ್ಯವಾಗಿ ಮದುವೆಯಾದ ನವ ದಂಪತಿಗಳು ಪ್ರತೀದಿನ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಆದರೆ ಹೆಣ್ಣು ಗರ್ಭವತಿಯಾದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಆತಂಕಭರಿತವಾಗಿದ್ದು ವೈದ್ಯರ ಸೂಕ್ತ ಸಲಹೆ ಮೇರೆಗೆ ಲೈಂಗಿಕ ಕ್ರಿಯೆ ನಡೆಸಬಹುದು.

ಸ್ತ್ರೀಯ ಮೇಲೆ ಪುರುಷ ಮಲಗಿ ಮಾಡುವ ಸಂಭೋಗವನ್ನು ಆಂಗ್ಲದಲ್ಲಿ ಮಿಶಿನರಿ ಪೊಜಿಶನ್ ಅನ್ನುತ್ತಾರೆ. ಆ ರೀತಿಅಲ್ಲಿ ಸಂಭೋಗ ಮಾಡುತ್ತಿರುವ ಜಂಟೆ. ಚಿತ್ರಕಾರ ಎಡುಆರ್ಡ್ ಹೆನ್ರಿ
ಸ್ತ್ರೀಯ ಯೋನಿಯೊಳಗೆ ಶಿಶ್ನವನ್ನು ತೂರಿಸುವ ಮೂಲಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಪುರುಷ.

ಲೈಂಗಿಕ ತೃಪ್ತಿಗಾಗಿಯಷ್ಟೇ ಲೈಂಗಿಕ ಕ್ರಿಯೆ ನಡೆಸುವ ದಂಪತಿಗಳು ಮಗುವಾಗುವುದನ್ನು ತಡೆಯಲು ಹಲವಾರು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಗಂಡು ನಿರೋಧ್/ಕಾಂಡೊಮ್ ಬಳಸುವ ಮೂಲಕ ಲೈಂಗಿಕ ಕ್ರಿಯೆಯಾದ ನಂತರವೂ ತಾಣ ವೀರ್ಯವು ಹೆಣ್ಣಿನ ಗರ್ಭಕೋಶದೊಳಕ್ಕೆ ಹರಿಯುವುದನ್ನು ತಪ್ಪಿಸುವ ಮುಖಾಂತರ ಬೇಡದ ಗರ್ಭದಾರಣೆ ತಡೆಯಬಹುದು.ಮಹಿಳೆಯರು ಬಳಸುವ ಕಾಂಡೊಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬರೀ ಪುರುಷರಷ್ಟೇ ಅಲ್ಲದೆ ಮಹಿಳೆಯರೂ ಕೂಡ ಲೈಂಗಿಕ ಸಂಪರ್ಕ ನಡೆಯುವುದಕ್ಕೂ ಮನ್ನವೇ ಎಚ್ಚರ ವಹಿಸಬಹುದು.

ಸ್ತ್ರೀಯ ಯೋನಿಯೊಳಗೆ ಪುರುಷ ಶಿಶ್ನವನ್ನು ದೂಡುವ ರೀತಿ

ಅಸುರಕ್ಷಿತ ಲೈಂಗಿಕ ಕ್ರಿಯೆ

ಬದಲಾಯಿಸಿ

ಇತ್ತೀಚಿನ ದಿನಗಳಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ಹಲವಾರು ಅರಿವಿನ ಕಾರ್ಯಕ್ರಮಗಳ ಆಯೋಜನೆಯಾಗುತ್ತಿದ್ದು ಜನರಲ್ಲೂ ಈ ಬಗ್ಗೆ ಉತ್ತಮ ಅರಿವು ಮೂಡಿದೆ. ಒಂದಕ್ಕಿಂತಲೂ ಹೆಚ್ಚಿನ ಸಂಗಾತಿಗಳೊಂದಿಗೆ ಯಾವುದೇ ಮುನ್ನೆಚ್ಚರಿಕಾ ಕ್ರಮವಿಲ್ಲದೆ ನೇರ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದನ್ನು ಅಸುರಕ್ಷಿತ ಲೈಂಗಿಕ ಕ್ರಿಯೆ ಎನ್ನಲಾಗುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಬೇಡದ ಗರ್ಭ ಧರಿಸುವಿಕೆ, ಲೈಂಗಿಕ ರೋಗಗಳು, ಏಡ್ಸ್ ನಂತಹ ಮಾರಣಾಂತಿಕ ಖಾಯಿಲೆಗಳು ಹರಡುತ್ತವೆ.

ಲೈಂಗಿಕ ಕ್ರಿಯೆಯ ಅರಿವು ಮೂಡಿಸುವ ಚಿತ್ರ ಮಾಹಿತಿ

ಬದಲಾಯಿಸಿ

ಹೆಚ್ಚಿನ ಮಾಹಿತಿ

ಬದಲಾಯಿಸಿ

ಹೊರಗಡೆ ಲಿಂಕುಗಳು

ಬದಲಾಯಿಸಿ
"https://kn.wikipedia.org/w/index.php?title=ಸಂಭೋಗ&oldid=1249127" ಇಂದ ಪಡೆಯಲ್ಪಟ್ಟಿದೆ