ಅಂಗವಿಕಾರವು ದೇಹದ ಒಂದು ಭಾಗದ ಸಾಮಾನ್ಯ ಆಕಾರಕ್ಕೆ ಹೋಲಿಸಿದರೆ ಆ ಭಾಗ ಅಥವಾ ಅಂಗದ ಆಕಾರದಲ್ಲಿ ಒಂದು ಪ್ರಮುಖ ವಿಕೃತಿ.

ಅಂಗವಿಕಾರದ ಉದಾಹರಣೆ

ಅನೇಕ ಕಾರಣಗಳಿಂದ ಅಂಗವಿಕಾರವಾಗಬಹುದು: ಆನುವಂಶಿಕ ನವವಿಕೃತಿ; ಭ್ರೂಣ ಅಥವಾ ಗರ್ಭಾಶಯಕ್ಕೆ ಹಾನಿ; ಜನನದ ವೇಳೆಯ ತೊಡಕುಗಳು; ಬೆಳವಣಿಗೆ ಅಥವಾ ಹಾರ್ಮೋನ್ ಅಸ್ತವ್ಯಸ್ತತೆ; ತೀವ್ರ ಗಾಯದ ನಂತರದ ಪುನಾರಚನೆ ಶಸ್ತ್ರಚಿಕಿತ್ಸೆ, ಉದಾ. ಸುಟ್ಟ ಗಾಯ; ಸಂಧಿವಾತ ಮತ್ತು ಇತರ ಸಂಬಂಧಿತ ಕಾಯಿಲೆಗಳು; ಸರಿಯಾಗಿ ಜೋಡಿಸದೆ ವಾಸಿಯಾಗಲು ಬಿಡಲಾದ ಮುರಿದ ಮೂಳೆಗಳು; ಬಾಹ್ಯ ಬಲಗಳ ದೀರ್ಘಕಾಲದ ಪ್ರಯೋಗ, ಉದಾ. ಕೃತಕ ಕಪಾಲ ವಿಕೃತಿ; ದೀರ್ಘಕಾಲದ ಪರೇಸಿಸ್, ಪಾರ್ಶ್ವವಾಯು ಅಥವಾ ಸ್ನಾಯು ಅಸಮತೋಲನ, ವಿಶೇಷವಾಗಿ ಮಕ್ಕಳಲ್ಲಿ.

ಮಾನವೇತರ ಪ್ರಾಣಿಗಳಲ್ಲೂ ಅಂಗವಿಕಾರ ಉಂಟಾಗಬಹುದು. ಕಪ್ಪೆಗಳು ರೈಬೀರಿಯಾ ಸೋಂಕಿನಿಂದ ರೂಪಾಂತರಗೊಳ್ಳಬಹುದು.

ಜನನದ ವೇಳೆ ಒಂದು ಪ್ರಮುಖ ವಿಕೃತಿಯಿರುವ ಅನೇಕ ಸಂದರ್ಭಗಳಲ್ಲಿ, ಅದು ಸಾಕಷ್ಟು ತೀವ್ರವಿರುವ ಮೂಲ ಪರಿಸ್ಥಿತಿಯ ಪರಿಣಾಮವಾಗಿರುತ್ತದೆ ಮತ್ತು ಅದರಿಂದ ಶಿಶುವು ಬಹಳ ಕಾಲ ಬಾಳುವುದಿಲ್ಲ. ತೀವ್ರವಾಗಿ ವಿಕಾರಗೊಂಡ ಜನನಗಳಲ್ಲಿ ಮರಣವು ಕಾಣೆಯಾದ ಅಥವಾ ಕಾರ್ಯಮಾಡದ ಪ್ರಮುಖ ಅಂಗಗಳು, ಉಸಿರಾಟ ಅಥವಾ ತಿನ್ನಾಟಕ್ಕೆ ತಡೆಯೊಡ್ಡುವ ರಾಚನಿಕ ದೋಷಗಳು, ಗಾಯಗಳಿಗೆ ಹೆಚ್ಚಾಗಿ ಒಳಗಾಗುವುದು, ಅಸಹಜ ಮುಖನೋಟ, ಅಥವಾ ಸಾವನ್ನು ಉಂಟುಮಾಡುವ ಸೋಂಕುಗಳು ಸೇರಿದಂತೆ ತೊಡಕುಗಳ ವ್ಯಾಪ್ತಿಯ ಕಾರಣವಿರಬಹುದು.

ಉಲ್ಲೇಖಗಳು

ಬದಲಾಯಿಸಿ