ಅಂಗರಕ್ಷಕನು (ಅಥವಾ ನಿಕಟ ರಕ್ಷಣಾಧಿಕಾರಿ) ಅಪಾಯದಿಂದ (ಸಾಮಾನ್ಯವಾಗಿ ಕಳ್ಳತನ, ದಾಳಿ, ಅಪಹರಣ, ನರಹತ್ಯೆ, ಕಿರುಕುಳ, ರಹಸ್ಯ ಮಾಹಿತಿಯ ನಾಶ, ಬೆದರಿಕೆಗಳು ಅಥವಾ ಇತರ ಅನೈತಿಕ ಅಪರಾಧಗಳು) ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳನ್ನು (ಸಾಮಾನ್ಯವಾಗಿ ಸಾರ್ವಜನಿಕ, ಶ್ರೀಮಂತ, ಅಥವಾ ರಾಜಕೀಯವಾಗಿ ಪ್ರಮುಖ ವ್ಯಕ್ತಿಗಳು) ರಕ್ಷಿಸುವ ಒಂದು ಬಗೆಯ ಭದ್ರತಾ ಕಾರ್ಯಕಾರಿ ಅಥವಾ ಸರ್ಕಾರಿ ಪ್ರತಿನಿಧಿ. ರಾಜ್ಯದ ಮುಖ್ಯಸ್ಥರು, ಸರ್ಕಾರದ ಮುಖ್ಯಸ್ಥರು, ಗವರ್ನರ್‍ಗಳಂತಹ ಅತ್ಯಂತ ಪ್ರಮುಖ ಸಾರ್ವಜನಿಕ ವ್ಯಕ್ತಿಗಳು ಒಂದು ಸಂಸ್ಥೆಯ, ಭದ್ರತಾ ಪಡೆಗಳು, ಅಥವಾ ಪೋಲಿಸ್ ಪಡೆಗಳಿಂದ ಪಡೆದ ಹಲವು ಅಂಗರಕ್ಷಕರು ಅಥವಾ ಅಂಗರಕ್ಷಕರ ತಂಡದಿಂದ ರಕ್ಷಿಸಲ್ಪಡುತ್ತಾರೆ. ರಾಜ್ಯದ ಮುಖ್ಯಸ್ಥನು ಸೇನಾ ನಾಯಕನಾಗಿರುವ ಅಥವಾ ಯಾವಾಗಲೂ ಆಗಿದ್ದ ಬಹುತೇಕ ದೇಶಗಳಲ್ಲಿ, ನಾಯಕನ ಅಂಗರಕ್ಷಕರು ಸಾಂಪ್ರದಾಯಿಕವಾಗಿ ರಾಯಲ್ ಗಾರ್ಡ್‍ಗಳು, ರಿಪಬ್ಲಿಕನ್ ಗಾರ್ಡ್‍ಗಳು ಮತ್ತು ಇತರ ಉತ್ಕೃಷ್ಟ ಸೇನಾ ಘಟಕಗಳಾಗಿರುತ್ತಾರೆ.[೧],[೨]

Viktor Yuschenko bodyguards.jpg
ರಾಣಿ ಎಲಿಜಬೆತ್ II, ಐರ್ಲೆಂಡ್ನ ನ ವಿಶೇಷ ಡಿಟೆಕ್ಟಿವ್ ಘಟಕದ ರಕ್ಷಣಾ ಅಧಿಕಾರಿಯಿಂದ ರಕ್ಷಿಸಲ್ಪಡುತ್ತಿರುವುದು.

ಉಲ್ಲೇಖಗಳುಸಂಪಾದಿಸಿ

  1. "The Machine Pistol - Why Does It Even Exist? (permalink)". Archived from the original on 2016-12-27. Retrieved 2017-02-19.
  2. What's it like being a bodyguard?