ಸಾಮಾನ್ಯ ಬಳಕೆಯಲ್ಲಿ, ಕಳ್ಳತನ ಎಂದರೆ ಹಕ್ಕುಳ್ಳ ಮಾಲೀಕನಿಂದ ಕಿತ್ತುಕೊಳ್ಳುವ ಉದ್ದೇಶದಿಂದ ಮತ್ತೊಬ್ಬ ವ್ಯಕ್ತಿಯ ಸ್ವತ್ತು ಅಥವಾ ಸೇವೆಗಳನ್ನು ಆ ವ್ಯಕ್ತಿಯ ಅನುಮತಿ ಅಥವಾ ಸಮ್ಮತಿಯಿಲ್ಲದೇ ತೆಗೆದುಕೊಳ್ಳುವುದು.[೧] ಈ ಶಬ್ದವನ್ನು ಕನ್ನಗಳವು, ಹಣ ಲಪಟಾಯಿಸುವುದು, ಅಪಹಾರ, ಲೂಟಿ, ದರೋಡೆ, ಅಂಗಡಿ ಕಳ್ಳತನ, ಗ್ರಂಥಾಲಯ ಕಳ್ಳತನ ಮತ್ತು ವಂಚನೆಯಂತಹ (ಸುಳ್ಳು ಸೋಗುಗಳನ್ನು ಹಾಕಿ ಹಣ ಪಡೆಯುವುದು) ಆಸ್ತಿಗಳ ವಿರುದ್ಧದ ಕೆಲವು ಅಪರಾಧಗಳಿಗೆ ಅನೌಪಚಾರಿಕ ಸಂಕ್ಷಿಪ್ತ ರೂಪದ ಪದವಾಗಿ ಕೂಡ ಬಳಸಲಾಗುತ್ತದೆ. ಕೆಲವು ನ್ಯಾಯವ್ಯಾಪ್ತಿಗಳಲ್ಲಿ, ಕಳ್ಳತನವನ್ನು ಅಪಹಾರದ ಸಮಾನಾರ್ಥಕ ಪದವೆಂದು ಪರಿಗಣಿಸಲಾಗುತ್ತದೆ; ಇತರ ನ್ಯಾಯವ್ಯಾಪ್ತಿಗಳಲ್ಲಿ ಕಳ್ಳತನವು ಅಪಹಾರದ ಬದಲಾಗಿ ಬಂದಿದೆ. ಕಳ್ಳತನದ ಕ್ರಿಯೆಯನ್ನು ನಡೆಸುವವನು ಅಥವಾ ಕಳ್ಳತನವನ್ನು ವೃತ್ತಿಯಾಗಿ ಮಾಡಿಕೊಂಡಿರುವವನನ್ನು ಕಳ್ಳ ಎಂದು ಕರೆಯಲಾಗುತ್ತದೆ.

Paul-Charles Chocarne-Moreau, The Cunning Thief, 1931

ಉದಾಹರಣೆಗೆ, ಕ ನು ಉಪಾಹಾರ ಗೃಹಕ್ಕೆ ಹೋಗಿ, ತಪ್ಪಾಗಿ ತನ್ನ ಶಿರೋವಸ್ತ್ರವನ್ನು ತೆಗೆದುಕೊಳ್ಳುವ ಬದಲು ಗ ನ ಶಿರೋವಸ್ತ್ರವನ್ನು ತೆಗೆದುಕೊಂಡರೆ, ಅವನು ಭೌತಿಕವಾಗಿ ಗ ನಿಂದ ಆ ಸ್ವತ್ತಿನ ಬಳಕೆಯನ್ನು ಕಿತ್ತುಕೊಂಡಿದ್ದಾನೆ, ಆದರೆ ಅದು ತಪ್ಪಾಗಿ ಆಗಿರುವುದರಿಂದ ಕ ನು ಅಪರಾದೋದ್ದೇಶದಿಂದ ಇದನ್ನು ಮಾಡಿಲ್ಲ (ಅಂದರೆ, ಕ ನು ತಾನು ಮಾಲೀಕನೆಂದು ನಂಬಿರುವುದರಿಂದ, ಅವನು ಅಪ್ರಾಮಾಣಿಕನಲ್ಲ ಮತ್ತು ಅದನ್ನು ಅದರ ಮಾಲೀಕನಿಂದ ಕಿತ್ತುಕೊಳ್ಳುವ ಉದ್ದೇಶ ಹೊಂದಿಲ್ಲ), ಹಾಗಾಗಿ ಈ ಸಮಯದಲ್ಲಿ ಯಾವುದೇ ಅಪರಾಧವನ್ನು ಮಾಡಲಾಗಿಲ್ಲ. ಆದರೆ ಅವನು ಮನೆಗೆ ಹೋದಮೇಲೆ ತನ್ನ ತಪ್ಪನ್ನು ಅರಿತುಕೊಂಡು ಶಿರೋವಸ್ತ್ರವನ್ನು ಗ ಗೆ ಹಿಂದಿರುಗಿಸಬಹುದಾಗಿದ್ದು, ಕ ನು ಅಪ್ರಾಮಾಣಿಕವಾಗಿ ಅದನ್ನು ಇಟ್ಟುಕೊಂಡರೆ ಅವಳು ಶಿರೋವಸ್ತ್ರವನ್ನು ಕದ್ದಂತಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Criminal Law – Cases and Materials, 7th ed. 2012, Wolters Kluwer Law & Business; John Kaplan, Robert Weisberg, Guyora Binder, ISBN 978-1-4548-0698-1, [೧]
"https://kn.wikipedia.org/w/index.php?title=ಕಳ್ಳತನ&oldid=920304" ಇಂದ ಪಡೆಯಲ್ಪಟ್ಟಿದೆ