ಅಂಕೋಲೆ (ಸಸ್ಯ)
ಅಂಕೋಲೆ | |
---|---|
Illustration | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | A. salviifolium
|
Binomial name | |
Alangium salviifolium (L. f.) Wangerin | |
Synonyms | |
|
ಅಂಕೋಲೆ ಒಂದು ಔಷಧ ಸಸ್ಯ. ಅಲಾಂಜಿಯೇಸೀ ಕುಟುಂಬಕ್ಕೆ ಸೇರಿದ ಒಂದು ಹೂ ಬಿಡುವ ಸಸ್ಯ.
ವೈಜ್ಞಾನಿಕ ಹೆಸರು
ಬದಲಾಯಿಸಿಅಲಾಂಜಿಯಮ್ ಸಾಲ್ವಿಫೋಲಿಯಮ್ ಇದರ ವೈಜ್ಞಾನಿಕ ಹೆಸರು. ಇದಕ್ಕೆ ಅಂಕೋತವೆಂಬ ಹೆಸರೂ ಇದೆ.ಅಲಾಂಜಿಯೇಸೀ ಕುಟುಂಬಕ್ಕೆ ಸೇರಿದ ಒಂದು ಹೂ ಬಿಡುವ ಸಸ್ಯ. ಅಂಕೋಲಮ್ ಎಂದು ಮಲೆಯಾಳಮ್ ಭಾಷೆಯಲ್ಲಿ,ಅಕೋಲ ಎಂದು ಹಿಂದಿಯಲ್ಲಿ,ಅಲಂಜಿ ಎಂದು ತಮಿಳು ಭಾಷೆಯಲ್ಲಿ ಕರೆಯಲ್ಪಡುತ್ತದೆ.[೧]
ಲಕ್ಷಣಗಳು
ಬದಲಾಯಿಸಿಗಿಡವು ಬೇಸಗೆಯಲ್ಲಿ ಎಲೆ ಉದುರುವ ಬಗೆಯದು (ಡೆಸಿಡ್ಯುವಸ್). ಆದರೆ ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ಎಲೆಗಳನ್ನು ಹೊಂದಿರುತ್ತದೆ. ಹಳೆ ಎಲೆಗಳು ಉದುರುವುದಕ್ಕಿಂತ ಮುಂಚಿತವಾಗಿಯೇ ಹೊಸ ಚಿಗುರು ಕಾಣಿಸಿಕೊಳ್ಳುತ್ತದೆ. ಅನೇಕ ವೇಳೆ ಎಲೆಗಳ ಕಕ್ಷಗಳಲ್ಲಿ ಮುಳ್ಳುಗಳಿರುತ್ತವೆ. ಇವು ಚೂಪು, ಮತ್ತು ಬಹು ಗಟ್ಟಿ. ಚಕ್ಕೆ ತುಂಬ ತೆಳು: ಕಾಂಡದಿಂದ ಸುಲಭವಾಗಿ ಬೇರ್ಪಡಿಸಬಹುದು. ಹೂಗಳು ಬಿಳ್ಳಿಬಣ್ಣದವು; ಸುವಾಸನಾಯುಕ್ತ, ಹಣ್ಣುಗಳು ಆಲದಹಣ್ಣಿನ ಗಾತ್ರದವಾಗಿದ್ದು ಕೆಂಪುಬಣ್ಣಕ್ಕಿರುತ್ತವೆ. ಚಳ್ಳೆಹಣ್ಣಿನಂತೆ ಒಳಗಡೆ ತಿರುಳು ಬಹು ನುಣುಪು. ಬೀಜ ಕಾಫಿ ಬೀಜದಂತೆ ಗಟ್ಟಿ.
ಬೆಳವಣಿಗೆ
ಬದಲಾಯಿಸಿಇದು ಒಂದು ಪೊದೆ ಸಸ್ಯ. ಎಲ್ಲ ಬಗೆಯ ಹವೆಯಲ್ಲೂ ಮಣ್ಣಿನಲ್ಲೂ ಬೆಳೆಯುತ್ತದೆ.
ಉಪಯೋಗಗಳು
ಬದಲಾಯಿಸಿಬೀಜದಿಂದ ಎಣ್ಣೆಯನ್ನು ತೆಗೆದು ಔಷಧಿಗೆ ಮತ್ತು ದೀಪ ಉರಿಸುವುದಕ್ಕೆ ಉಪಯೋಗಿಸುತ್ತಾರೆ. ಬೇರಿನಿಂದ ಬಟ್ಟಿ ಇಳಿಸಿ ಪಡೆಯುವ ಆಸವವನ್ನು ಔಷಧಿಗೆ ಉಪಯೋಗಿಸುವುದೂ ಉಂಟು. ಗಿಡಕ್ಕೆ ಮುಳ್ಳಿರುವುದರಿಂದ ಬೇಲಿಯಲ್ಲಿ ಬೆಳೆಸಲು ಉಪಯುಕ್ತ. ಮರ ವ್ಯವಸಾಯದ ಮುಟ್ಟುಗಳನ್ನು ತಯಾರಿಸಲು ಬರುತ್ತದೆ.
ಔಷಧೀಯ ಗುಣಗಳು
ಬದಲಾಯಿಸಿಈ ಸಸ್ಯವು ಆಯುರ್ವೇದ,ಸಿದ್ಧ ಮತ್ತು ಟೆಬೇಟಿಯನ್ ವೈದ್ಯ ಪದ್ಧತಿಗಳಲ್ಲಿ ಬಳಕೆಯಲ್ಲಿದೆ.[೨]
ನಂಬಿಕೆಗಳು
ಬದಲಾಯಿಸಿಅಂಕೋಲೆಯ ಕೋಲನ್ನು ಹಿಡಿದು ತಿರುಗಾಡಿದಲ್ಲಿ ಪೀಡೆ ಪಿಶಾಚಿಗಳ ಭಯವಿರುವುದಿಲ್ಲವೆಂಬುದು ಹಿಂದಿನಿಂದ ಕೆಲವು ವರ್ಗದ ಜನರಲ್ಲಿರುವ ಒಂದು ನಂಬಿಕೆ.
ಉಲ್ಲೇಖಗಳು
ಬದಲಾಯಿಸಿ- ↑ Umberto Quattrocchi. 2000. CRC World Dictionary of Plant Names volume I. CRC Press: Boca Raton; New York; Washington,DC;, USA. London, UK. ISBN 978-0-8493-2675-2 (vol. I). (see External links below).
- ↑ "Alangium salvifolium".[permanent dead link]
ಬಾಹ್ಯ ಸಂಪರ್ಕಗಳು
ಬದಲಾಯಿಸಿ- http://ayurvedicmedicinalplants.com/index.php?option=com_zoom&Itemid=26&page=view&catid=1&key=26[permanent dead link]
- http://www.flowersofindia.net/catalog/slides/Lobed-leaf%20Alangium.html Archived 2014-08-24 ವೇಬ್ಯಾಕ್ ಮೆಷಿನ್ ನಲ್ಲಿ.