REVA ಇಲೆಕ್ಟ್ರಿಕ್ ಕಾರ್ ಕಂಪನಿ
ಹಿಂದೆ REVA ಇಲೆಕ್ಟ್ರಿಕ್ ಕಾರ್ ಕಂಪನಿ [೧] ಎಂಬುದಾಗಿ ಕರೆಯಲ್ಪಡುತ್ತಿದ್ದ ಮಹೀಂದ್ರ ರೇವಾ ಇಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ , ಬೆಂಗಳೂರು ಮೂಲದ ಒಂದು ಭಾರತೀಯ ಕಂಪನಿಯಾಗಿದ್ದು, ವಿದ್ಯುತ್ ಚಾಲಿತ ವಾಹನಗಳನ್ನು ಅದು ವಿನ್ಯಾಸಗೊಳಿಸುತ್ತಿದೆ ಮತ್ತು ತಯಾರಿಸುತ್ತಿದೆ. ವಿಶ್ವದ ಅತ್ಯುತ್ತಮ ಮಾರಾಟವಾಗುತ್ತಿರುವ ವಿದ್ಯುತ್ ಚಾಲಿತ ವಾಹನ ಎನಿಸಿಕೊಂಡಿರುವ REVAi ಕಾರಿನ ತಯಾರಿಕೆಗೆ ಸಂಬಂಧಿಸಿದಂತೆ ಇದು ಪ್ರಧಾನವಾಗಿ ಗಮನ ಸೆಳೆದಿದೆ.[೨][೩]
ಸ್ಥಾಪನೆ | 1994 |
---|---|
ಮುಖ್ಯ ಕಾರ್ಯಾಲಯ | ಬೆಂಗಳೂರು, India |
ಉದ್ಯಮ | Automotive |
ಉತ್ಪನ್ನ | REVAi REVA NXR |
ಪೋಷಕ ಸಂಸ್ಥೆ | Mahindra & Mahindra Limited |
ಜಾಲತಾಣ | http://www.revaindia.com/ |
ಕಂಪನಿಯ ರಚನೆ
ಬದಲಾಯಿಸಿREVA ಇಲೆಕ್ಟ್ರಿಕ್ ಕಾರ್ ಕಂಪನಿಯು ಭಾರತದ ಮೈನಿ ಗ್ರೂಪ್ ಹಾಗೂ ಕ್ಯಾಲಿಫೋರ್ನಿಯಾದ AEV LLC ನಡುವಿನ ಒಂದು ಜಂಟಿ ಉದ್ಯಮವಾಗಿದೆ; ಅಷ್ಟೇ ಅಲ್ಲ, ಗ್ಲೋಬಲ್ ಎನ್ವಿರಾನ್ಮೆಂಟ್ ಫಂಡ್ ಮತ್ತು ಡ್ರೇಪರ್ ಫಿಷರ್ ಜುರ್ವೆಸ್ಟನ್ ಎಂಬ USನ ಅಗ್ರಗಣ್ಯ ಹೂಡಿಕೆದಾರರ ಆಸರೆಯೂ ಈ ಉದ್ಯಮಕ್ಕೆ ದೊರಕಿದೆ.[೪]
REVA ಮತ್ತು REVAi
ಬದಲಾಯಿಸಿREVAi ಕಾರಿನ ಎರಡು ಆವೃತ್ತಿಗಳನ್ನು RECC ಪ್ರಸಕ್ತವಾಗಿ ತಯಾರಿಸುತ್ತಿದೆ. REVAi ಕಾರು ನಗರ ಪ್ರದೇಶದಲ್ಲಿ ಬಳಕೆಯಲ್ಲಿರುವ ವಿದ್ಯುತ್ ಚಾಲಿತ ಪುಟ್ಟ-ಕಾರಾಗಿದ್ದು, ಇಬ್ಬರು ವಯಸ್ಕರು ಮತ್ತು ಇಬ್ಬರು ಮಕ್ಕಳು ಅದರಲ್ಲಿ ಆಸೀನರಾಗಬಹುದಾಗಿದೆ:
- ಸೀಸದ-ಆಮ್ಲದ ಬ್ಯಾಟರಿಗಳೊಂದಿಗೆ REVAi ಕಾರು ಸಜ್ಜುಗೊಂಡಿದ್ದು, ಇದು ಪ್ರತಿ ವಿದ್ಯುತ್ ಪೂರಣಕ್ಕೆ 80 km (50 mi)ನಷ್ಟಿರುವ ಒಂದು ನಾಮಮಾತ್ರದ ವ್ಯಾಪ್ತಿಯನ್ನು ಹಾಗೂ 80 km/h (50 mph)ನಷ್ಟಿರುವ ಒಂದು ಉನ್ನತ ವೇಗವನ್ನು ಹೊಂದಿದೆ.
- ಲಿಥಿಯಂ-ಅಯಾನು ಬ್ಯಾಟರಿಗಳೊಂದಿಗೆ REVA L-ಅಯಾನ್ ಕಾರು ಸಜ್ಜುಗೊಂಡಿದ್ದು, ಇದು ಪ್ರತಿ ವಿದ್ಯುತ್ ಪೂರಣಕ್ಕೆ 120 km (75 mi)ನಷ್ಟಿರುವ ಒಂದು ನಾಮಮಾತ್ರದ ವ್ಯಾಪ್ತಿಯನ್ನು ಹಾಗೂ ಕ್ಷಿಪ್ರವಾದ ವೇಗೋತ್ಕರ್ಷವನ್ನು ಹೊಂದಿದೆ.[೫]
REVA ಕಾರು ಭಾರತದಲ್ಲಿ ೨೦೦೧ರಿಂದಲೂ ಮತ್ತು UKಯಲ್ಲಿ ೨೦೦೩ರಿಂದಲೂ ಮಾರಾಟವಾಗುತ್ತಿದೆ. ಇದು ಈಗ ಇತರ ಅನೇಕ ದೇಶಗಳಲ್ಲಿಯೂ ಲಭ್ಯವಿದೆ. ೨೦೦೫ರಲ್ಲಿ REVA-NXG ಎಂಬ ಮಾದರಿಯನ್ನೂ RECC ನಿರ್ಮಿಸಿತು. ಹಿಂಬದಿಯ ಆಸನಗಳಿಲ್ಲದೆ ಎರಡು-ಆಸನಗಳನ್ನಷ್ಟೇ ಹೊಂದಿರುವ, ತೆರೆದ ವಿನ್ಯಾಸದ ಪರಿಕಲ್ಪನೆಯ ಈ ಕಾರು, ಪ್ರತಿ ವಿದ್ಯುತ್ ಪೂರಣಕ್ಕೆ 200 km (124 mi)ನಷ್ಟಿರುವ ಒಂದು ನಾಮಮಾತ್ರದ ವ್ಯಾಪ್ತಿಯನ್ನು ಹಾಗೂ 120 km/h (75 mph)ನಷ್ಟಿರುವ ಒಂದು ಉನ್ನತ ವೇಗವನ್ನು ಹೊಂದಿತ್ತು.[೬] ೨೦೦೯ರ ವರ್ಷಾಂತ್ಯದೊಳಗಾಗಿ, ಸಾಕಷ್ಟು ಸ್ಥಳಾವಕಾಶವಿರುವ ನಾಲ್ಕು-ಆಸನದ ಕಾರು ಮಾದರಿಯೊಂದನ್ನು ಬಿಡುಗಡೆಮಾಡಲು ಅದು ಯೋಜಿಸುತ್ತಿತ್ತು.[೭] FERI ಎಂದು ಕರೆಯಲ್ಪಡುವ ಒಂದು ಗಾಲ್ಫ್ ಗಾಡಿಯನ್ನೂ ಸಹ RECC ತಯಾರಿಸುತ್ತದೆ.
ರೇವಾ NXR
ಬದಲಾಯಿಸಿ೨೦೦೯ರ ಫ್ರಾಂಕ್‌ಫರ್ಟ್ ಮೋಟಾರು ವಾಹನ ಪ್ರದರ್ಶನದಲ್ಲಿ NXR ಎಂದು ಕರೆಯಲ್ಪಡುವ, M೧ ವರ್ಗದ ಒಂದು ಹೊಸ ವಾಹನವು ಅನಾವರಣಗೊಂಡಿತು. ಇದರ ರಫ್ತು ಉತ್ಪಾದನೆಯನ್ನು ೨೦೧೦ರ ದ್ವಿತೀಯ ತ್ರೈಮಾಸಿಕಕ್ಕೆ ನಿಗದಿಪಡಿಸಲಾಗಿದೆ. ಸೀಸದ-ಆಮ್ಲದ ಬ್ಯಾಟರಿಗಳು ಅಥವಾ ಲಿಥಿಯಂ-ಅಯಾನು ಬ್ಯಾಟರಿಗಳೊಂದಿಗೆ NXR ಮಾದರಿಯು ಲಭ್ಯವಾಗಲಿದೆ. ಸುಪರಿಚಿತ ಭಾರತೀಯ ಕಾರು ವಿನ್ಯಾಸಕಾರನಾದ ದಿಲೀಪ್ ಛಾಬ್ರಿಯಾ ಎಂಬಾತ ಇದರ ಶೈಲಿರಚನೆಗೆ ಹೊಣೆಗಾರನಾಗಿದ್ದಾನೆ. ವ್ಯಾಪ್ತಿ, ವೇಗ, ಸುರಕ್ಷತೆ ಮತ್ತು ಒಳಾಂಗಣದ ನಿಷ್ಕೃಷ್ಟ ನಿರೂಪಣೆಗಳು ಇವೆಲ್ಲವೂ ಸಹ ಬ್ಯಾಟರಿ ವಿದ್ಯುತ್ ಚಾಲಿತ ವಾಹನಗಳ ಹೊಸ ಪೀಳಿಗೆಯೊಂದರ ಶ್ರೇಣಿಗಳ ಉದಕ್ಕೂ ನೆಲೆಯನ್ನು ಕಂಡುಕೊಂಡಿವೆ. ಯುರೋಪ್‌ನಲ್ಲಿ, NCAP ಅಪ್ಪಳಿಸುವಿಕೆ ಪರೀಕ್ಷೆಯ ಕಟ್ಟುಪಾಡುಗಳ ಅಡಿಯಲ್ಲಿ ಕಾರು ಬರುತ್ತದೆ. IC (ಅಂತರ-ನಗರ) ಮಾದರಿಯು 104 km/h (65 mph)ನಷ್ಟಿರುವ ಒಂದು ಉನ್ನತ ವೇಗ ಮತ್ತು 160 km (99 mi)ನಷ್ಟಿರುವ ಒಂದು ವ್ಯಾಪ್ತಿಯನ್ನು ಹೊಂದಿದೆ. ಹಿಂದಿನ REVA ಕ್ವಾಡ್ರಾಸೈಕಲ್ ಮಾದರಿಗೆ ಹೋಲಿಸಿದಾಗ ಇದರ ಒಳಾಂಗಣವು ಬಹಳಷ್ಟು ಉನ್ನತ ದರ್ಜೆಯಿಂದ ಕೂಡಿದೆ ಮತ್ತು ಹಿಂಬದಿಯ ಆಸನಗಳು ಈಗ ೨ ವಯಸ್ಕರಿಗೆ ಅನುಕೂಲಕರವಾಗಿ ಸ್ಥಳಾವಕಾಶ ನೀಡಬಲ್ಲವಾಗಿವೆ. NXR ಮಾದರಿಯು ಕೆಲವೊಂದು ಅಸಾಮಾನ್ಯವಾದ ಲಕ್ಷಣಗಳನ್ನು ಹೊಂದಿದ್ದು, ಇದರ REVive ಬ್ಯಾಟರಿ ವಿದ್ಯುತ್ ಪೂರಣದ ವ್ಯವಸ್ಥೆಯು ಅವುಗಳಲ್ಲೊಂದಾಗಿದೆ. ಕಾರಿನ ಮೇಲಿರುವ ಶಕ್ತಿ ನಿರ್ವಹಣಾ ವ್ಯವಸ್ಥೆಗೆ ಒದಗಿಸಲಾಗಿರುವ ಟೆಲಿಮ್ಯಾಟಿಕ್ ದೂರಸ್ಥ ಸಂಪರ್ಕವು, ಬರಿದಾಗುತ್ತಿರುವ ಬ್ಯಾಟರಿಯೊಂದರ ಕುರಿತು ಮನವಿಯ ಮೇರೆಗೆ ವಿಶ್ಲೇಷಿಸಲು REVAಗೆ ಅನುವು ಮಾಡಿಕೊಡುತ್ತದೆ. REVAದ ಬೆಂಬಲ ಕೇಂದ್ರವು ಕೆಲವೇ ಸೆಕೆಂಡುಗಳಲ್ಲಿ ಬ್ಯಾಟರಿಯ ಸ್ಥಿತಿಗತಿಯನ್ನು ಪ್ರತ್ಯೇಕವಾಗಿ ನಿರ್ಣಯಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಹಾಗೂ ಉಳಿದಿರುವ ವಿದ್ಯುತ್ ಪೂರಣಕ್ಕೆ ಸಂಪರ್ಕವನ್ನು ಕಲ್ಪಿಸಲು ಅವಕಾಶ ಮಾಡಿಕೊಡುತ್ತದೆ. ಇದು ಕಾರ್ಯತಃ ಒಂದು ಮೀಸಲು (ಬ್ಯಾಕ್-ಅಪ್) ಬ್ಯಾಟರಿಯ ರೀತಿಯಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೇ, ಬರಿದಾಗುವಿಕೆಯ ಕಾರಣದಿಂದಾಗಿ ವಿದ್ಯುತ್ ಸಂಪುಟಕ್ಕೆ ಒದಗುವ ಹಾನಿಯ ಅಪಾಯವನ್ನೂ ತಗ್ಗಿಸುತ್ತದೆ.
REVA NXG
ಬದಲಾಯಿಸಿಫ್ರಾಂಕ್ಫರ್ಟ್ ಮೋಟಾರು ವಾಹನ ಪ್ರದರ್ಶನದಲ್ಲಿ NXG ಎಂದು ಸುಪರಿಚಿತವಾಗಿರುವ ಪ್ರದರ್ಶನ ಕಾರೊಂದು ಅನಾವರಣಗೊಂಡಿತು. ಇದರ ಉತ್ಪಾದನೆಯನ್ನು ೨೦೧೨ರ ವೇಳೆಗೆ ನಿಗದಿಪಡಿಸಲಾಗಿದೆ. REVAದ ಪೇಟೆಂಟು ಪಡೆದ ಡ್ರೈವ್-ಟ್ರೇನ್ ತಂತ್ರಜ್ಞಾನ ಮತ್ತು REVive ವ್ಯವಸ್ಥೆಯನ್ನೂ ಸಹ NXG ಮಾದರಿಯು ಒಳಗೊಳ್ಳಲಿದೆ. ಎರಡು-ಆಸನವನ್ನು ಹೊಂದಿರುವ ಈ ಕ್ರೀಡಾ ಕಾರು, ತನ್ನ ಕಾರ್ಯಕ್ಷಮತೆ ಮತ್ತು ವೇಗದಿಂದಾಗಿ ಪ್ರತ್ಯೇಕವಾಗಿ ತನ್ನದೇ ಆದ ಸ್ಥಾನವನ್ನು ಕಂಡುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಭವಿಷ್ಯ
ಬದಲಾಯಿಸಿಬೆಂಗಳೂರಿನಲ್ಲಿನ ೩೦,೦೦೦ದಷ್ಟು ಸಾಮರ್ಥ್ಯದ ಒಂದು ಹೊಸ ಜೋಡಣಾ ಘಟಕವು ಸಮಾಪ್ತಿಯ ಹಂತವನ್ನು ತಲುಪಿದೆ. ಬ್ಯಾಟರಿ ವಿದ್ಯುತ್ ಚಾಲಿತ ವಾಹನಗಳ ಜೋಡಣೆಗೆ ವಿಶೇಷವಾಗಿ ಸಮರ್ಪಿಸಿಕೊಂಡಿರುವ ಘಟಕವೊಂದಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಇದು ಪ್ರಸಕ್ತವಾಗಿ ವಿಶ್ವದ ಅತಿದೊಡ್ಡ ಕಾರ್ಯಾತ್ಮಕ ಉದಾಹರಣೆ ಎನಿಸಿಕೊಂಡಿದೆ. ಸಮಗ್ರ ಕಟ್ಟಡವು LEED (ಲೀಡರ್‌ಷಿಪ್ ಇನ್ ಎನರ್ಜಿ ಅಂಡ್ ಎನ್ವಿರಾನ್ಮೆಂಟಲ್ ಡಿಸೈನ್) ಮಾನ್ಯತೆಯನ್ನು ಪಡೆದಿದ್ದು, ಮೋಟಾರು ವಾಹನಗಳಿಗೆ ಸಂಬಂಧಿಸಿದ ಪ್ರಪಂಚದಲ್ಲಿ ಕೊಳೆಯಿಂದ ಧೂಳಿನವರೆಗಿನ ಅತಿ ಕಡಿಮೆ ಮಟ್ಟದ ಇಂಗಾಲದ ಹೆಜ್ಜೆಗುರುತುಗಳ ಪೈಕಿ ಒಂದೆಂದು ಕಂಪನಿಯು ಹೆಮ್ಮೆಪಡುವುದಕ್ಕೆ ಇದು ತನ್ಮೂಲಕ ಅವಕಾಶ ಕಲ್ಪಿಸಿದೆ ಎನ್ನಬಹುದು. ವಿದ್ಯುತ್ ಚಾಲಿತ ವಾಹನಗಳನ್ನು ಭಾರತೀಯ ಮಾರುಕಟ್ಟೆಗೆ ತರುವ ಉದ್ದೇಶದಿಂದ, RECC ಮತ್ತು ಜನರಲ್ ಮೋಟಾರ್ಸ್ ಇಂಡಿಯಾ ಕಂಪನಿಗಳು ೨೦೦೯ರ ಸೆಪ್ಟೆಂಬರ್ ೨೪ರಂದು ಒಂದು ಸಹಯೋಗದ ಪಾಲುದಾರಿಕೆಯನ್ನು ಪ್ರಕಟಿಸಿದವು. ಆದಾಗ್ಯೂ, ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಕಂಪನಿಯಿಂದ REVA ಖರೀದಿಸಲ್ಪಟ್ಟ ಕಾರಣದಿಂದಾಗಿ ಈ ಯೋಜನೆಯನ್ನು ನಂತರದಲ್ಲಿ ರದ್ದುಪಡಿಸಲಾಯಿತು. NXR ಮಾದರಿಯನ್ನು ತಯಾರಿಸುವುದಕ್ಕಾಗಿ ನ್ಯೂಯಾರ್ಕ್‌ನ ಉತ್ತರಭಾಗದಲ್ಲಿ ಒಂದು ತಯಾರಿಕಾ ನೆಲೆಯನ್ನು ಸ್ಥಾಪಿಸುವ ಉದ್ದೇಶದೊಂದಿಗೆ RECC ಕಂಪನಿಯು ಬೊನ್ನಾನ್ ಆಟೊಮೋಟಿವ್ ಜೊತೆಗೆ ಕೈಜೋಡಿಸುತ್ತಿದೆ.
ಮಹೀಂದ್ರಾಗೆ ಮಾಡಲಾದ ಹೂಡಿಕೆ ಪಾಲಿನ ಮಾರಾಟ
ಬದಲಾಯಿಸಿ೨೦೧೦ರ ಮೇ ತಿಂಗಳ ೨೬ರಂದು, ಭಾರತದ ಕ್ರೀಡಾ ಬಳಕೆಯ ವಾಹನಗಳು ಮತ್ತು ಟ್ರಾಕ್ಟರ್‌ಗಳ ವಲಯದ ಅತಿದೊಡ್ಡ ತಯಾರಕನಾದ ಮಹೀಂದ್ರಾ & ಮಹೀಂದ್ರಾ ಕಂಪನಿಯು ರೇವಾದಲ್ಲಿನ ೫೫.೨%ನಷ್ಟು ಹತೋಟಿಯ ಹೂಡಿಕಾ ಪಾಲನ್ನು ತಾನು ಖರೀದಿಸುತ್ತಿರುವುದಾಗಿ ಪ್ರಕಟಿಸಿತು.[೮] ಸದರಿ ವ್ಯವಹಾರವನ್ನು ಅನುಸರಿಸಿಕೊಂಡು, ಬೆಂಗಳೂರು-ಮೂಲದ ಈ ಕಂಪನಿಯು ಮಹೀಂದ್ರಾ ರೇವಾ ಇಲೆಕ್ಟ್ರಿಕ್ ವೆಹಿಕಲ್ ಕಂಪನಿ ಲಿಮಿಟೆಡ್ ಎಂಬುದಾಗಿ ಮರುನಾಮಕರಣಗೊಳ್ಳಲಿದ್ದು, ಮಹೀಂದ್ರಾ ಕಂಪನಿಯ ಮೋಟಾರು ವಾಹನಗಳಿಗೆ ಸಂಬಂಧಿಸಿದ ವ್ಯವಹಾರ ವಿಭಾಗದ ಅಧ್ಯಕ್ಷನಾದ ಪವನ್ ಗೋಯೆಂಕಾ ಹೊಸ ಕಂಪನಿಯ ಸಭಾಪತಿಯ ಸ್ಥಾನವನ್ನು ಅಲಂಕರಿಸಲಿದ್ದಾನೆ. ಈ ವ್ಯವಹಾರದಿಂದಾಗಿ ಇ-ಸ್ಪಾರ್ಕ್ ವಾಹನದ ಉತ್ಪಾದನೆಗೆ ಸಂಬಂಧಿಸಿದಂತೆ GM ಕಂಪನಿಯೊಂದಿಗಿನ ರೇವಾದ ಒಪ್ಪಂದಗಳು ಕೈಗೂಡುವುದು ಅನಿಶ್ಚಿತವಾಗಿವೆ. ಉದ್ಯಮ ಪರಿಣಿತರ ಅಭಿಪ್ರಾಯದ ಅನುಸಾರ, ರೇವಾದ ಉದ್ದಿಮೆ ಮೌಲ್ಯವು ಸರಿಸುಮಾರಾಗಿ ೫೦೦ ಕೋಟಿ ರೂಪಾಯಿಗಳಷ್ಟಿದ್ದು, ಸ್ಥೂಲವಾಗಿ ಇದು ೧೧೦ ದಶಲಕ್ಷ US ಡಾಲರುಗಳಿಗೆ ಸಮನಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ "About US". Revaglobal.com. 2010-05-26. Archived from the original on 2010-07-08. Retrieved 2010-07-28.
- ↑ "G-Wiz". Green Car Guide. 2008-05-14. Archived from the original on 2009-09-26. Retrieved 2010-12-23.
- ↑ "In The Slow Lane". Newsweek:para 3. 2008-02-16. Archived from the original on 2008-03-24. Retrieved 2008-02-28.
- ↑ ಎಬೌಟ್ ಅಸ್ Archived 2007-06-17 ವೇಬ್ಯಾಕ್ ಮೆಷಿನ್ ನಲ್ಲಿ., REVA ಇಂಡಿಯಾ ವೆಬ್‌ಸೈಟ್
- ↑ Yoney, Domenick (2009-01-04). "Reva Electric Car Company offering lithium ion option". Autobloggreen.com. Retrieved 2010-10-15.
- ↑ "Reva NXG Electric Car". Tomw.net.au. Retrieved 2010-10-15.
- ↑ "Electric car co revs up to launch two models". Livemint.com. 2009-01-08. Retrieved 2010-10-15.
- ↑ "India's Mahindra buys majority stake in Reva". AFP. 2010-05-26. Archived from the original on 2010-05-28.
ಬಾಹ್ಯ ಕೊಂಡಿಗಳು
ಬದಲಾಯಿಸಿcommons:Category:Reva vehicles
ಈ ಲೇಖನ about an automotive industry corporation or company ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |