FA ಕಪ್
FA ಕಪ್ , ಎಂದು ಸಾಮಾನ್ಯವಾಗಿ ಕರೆಯಲ್ಪಡುವ ದ ಫುಟ್‌ಬಾಲ್ ಅಸೋಸಿಯೇಷನ್ ಚಾಲೆಂಜ್ ಕಪ್ , ದ ಫುಟ್‌ಬಾಲ್ ಅಸೋಸಿಯೇಷನ್‌ನ ಹೆಸರನ್ನೇ ಹೊಂದಿರುವ ಹಾಗೂ ಅದರಿಂದಲೇ ನಡೆಸಲ್ಪಡುವ ಆಂಗ್ಲ ಫುಟ್‌ಬಾಲ್‌ನ ನಾಕ್‌ಔಟ್ ಕಪ್ ಸ್ಪರ್ಧೆಯಾಗಿದೆ. "FA ಕಪ್" ಎಂಬ ಹೆಸರನ್ನು ಮಹಿಳೆಯರ' ಪಂದ್ಯಾವಳಿಯನ್ನು ಕೂಡಾ ಆಯೋಜಿಸಲಾಗುತ್ತಿದ್ದರೂ ಸಾಧಾರಣವಾಗಿ ಆಂಗ್ಲ ಪುರುಷರ' ಪಂದ್ಯಾವಳಿಗೆ ಇಡಲಾಗಿದೆ. ಅದರ ಪ್ರಸಕ್ತ ಪ್ರಾಯೋಜಿತ ಹೆಸರು E.ON ಪ್ರಾಯೋಜಿತ FA ಕಪ್ . FA ಕಪ್ ಅನ್ನು ಪ್ರಥಮ ಬಾರಿಗೆ 1871–72ರಲ್ಲಿ ಆಯೋಜಿಸಲಾಗಿತ್ತಾದುದರಿಂದ, ಇದು ವಿಶ್ವದ ಅತಿ ಹಳೆಯ ಅಸೋಸಿಯೇಷನ್ ಫುಟ್‌ಬಾಲ್ ಸ್ಪರ್ಧೆಯಾಗಿದೆ.[೧] ಇದು ಪರಸ್ಪರ ಎದುರಾಳಿಗಳಾಗಿ ಸೆಣಸುವ ಎಲ್ಲಾ ಮಟ್ಟದ ಕ್ಲಬ್‌ಗಳನ್ನು ಒಳಗೊಂಡಿರುವುದರಿಂದ ಕೆಳಮಟ್ಟದ ವಿಭಾಗಗಳ "ಕಿರುಮೀನುಗಳು" "ದೈತ್ಯ-ಸಂಹಾರಿಗಳಾಗಿ" ಪಂದ್ಯಾವಳಿಯಿಂದ ಅಗ್ರ ಕ್ಲಬ್‌ಗಳನ್ನು ಹೊರದೂಡುವಂತೆ ಮಾಡುವಂತಹಾ ಸಾಧ್ಯತೆ ಮಾತ್ರವಲ್ಲದೆ ತಾತ್ವಿಕವಾಗಿ ಕಪ್‌ಅನ್ನು ಗೆಲ್ಲುವ ಸಾಧ್ಯತೆ ಕೂಡಾ ಇದ್ದರೂ ಕೆಳ ವಿಭಾಗದ ತಂಡಗಳು ಅಪರೂಪವಾಗಿ ಮಾತ್ರವೇ ಫೈನಲ್ ಪಂದ್ಯವನ್ನು ತಲುಪಿವೆ. ಪ್ರಸ್ತುತ FA ಕಪ್‌ನ ವಿಜೇತ ತಂಡ ಚೆಲ್ಸಿಯಾ ಆಗಿದ್ದು, ಇವರು ವರ್ಗಾವಣೆಗೊಂಡ/ಹಿಂಬಡ್ತಿ ಪಡೆದ ಪ್ರೀಮಿಯರ್ ಲೀಗ್ ಕಡೆಯ ಪೋರ್ಟ್ಸ್‌ಮೌತ್‌ಅನ್ನು ೧೫ ಮೇ ೨೦೧೦ರಂದು ನಡೆದ 2010ರ ಫೈನಲ್ ಪಂದ್ಯದಲ್ಲಿ ಸೋಲಿಸಿದ್ದರು.
ಚಿತ್ರ:Facup.png | |
Founded | 1871 |
---|---|
Region | ಇಂಗ್ಲೆಂಡ್ Wales |
Number of teams | 762 |
Current champions | Chelsea (6th title) |
Most successful club(s) | Manchester United (11 titles) |
Website | FA Cup |
2009–10 FA Cup |
ಗೊತ್ತುವಳಿ
ಬದಲಾಯಿಸಿಈ ಸ್ಪರ್ಧೆಯು ಒಂದು ನಾಕ್‌ಔಟ್ ಪಂದ್ಯಾವಳಿಯಾಗಿದ್ದು ಇದರ ಪ್ರತಿ ಸುತ್ತಿನಲ್ಲಿ ಯಾದೃಚ್ಛಿಕವಾದ ಜೋಡಿಗಳಿದ್ದು – ಯಾವುದೇ ಕ್ರಮಾಂಕಗಳಿರುವುದಿಲ್ಲ, ಮಾತ್ರವಲ್ಲದೇ ಪ್ರತಿ ಸುತ್ತಿನ ಸರಿಸಮತೆಯನ್ನು ಹಿಂದಿನ ಸುತ್ತಿನ ನಿಗದಿತ ದಿನಾಂಕಗಳಿಗಿಂತ ಮುಂಚೆ ನಿಗದಿಪಡಿಸಲಾಗುವುದಿಲ್ಲ. ಈ ಸರಿಸಮತೆಯು ಯಾವ್ಯಾವ ತಂಡಗಳು ತಮ್ಮ ತವರಿನಲ್ಲಿ ಆಡಬಹುದು ಎಂಬುದನ್ನು ಕೂಡಾ ನಿರ್ಧರಿಸುತ್ತವೆ. ಪ್ರತಿ ಸರಿಸಮತೆಯ ಪಂದ್ಯವನ್ನು ಒಂದು ಪಾಳಿಯ ಆಟವನ್ನಾಗಿ ಆಡಲಾಗುತ್ತದೆ. ಪಂದ್ಯವೊಂದು ಸರಿಸಮವಾದರೆ, ಮರುಪಂದ್ಯವೊಂದನ್ನು ಆಡಿಸಲಾಗುತ್ತದಲ್ಲದೇ, ಸಾಧಾರಣವಾಗಿ ಪ್ರಥಮ ಪಂದ್ಯವನ್ನು ಬೇರೆಡೆ ಆಡಿದ ತಂಡದ ಮೈದಾನದಲ್ಲಿ ಆಡಲಾಗುತ್ತದೆ. ಸರಿಸಮವಾದ ಮರುಪಂದ್ಯಗಳನ್ನು ೧೯೯೦ರ ದಶಕದವರೆಗೆ ತಂಡವೊಂದು ಗೆಲ್ಲುವವರೆಗೆ ಮತ್ತಷ್ಟು ಮರುಪಂದ್ಯಗಳನ್ನು ಆಡಿಸಲಾಗುತ್ತಿತ್ತಾದರೂ ಪ್ರಸ್ತುತವಾಗಿ ಹೆಚ್ಚುವರಿ ಸಮಯ ಹಾಗೂ ಪೆನಾಲ್ಟಿ ಹೊಡೆತಗಳ ಮೂಲಕ ಬಗೆಹರಿಸಲಾಗುತ್ತದೆ. ಆಗ ಕೆಲ ಸರಿಸಮ ಪಂದ್ಯಗಳು ಪರಿಹಾರಗೊಳ್ಳಲು ಆರು ಪಂದ್ಯಗಳನ್ನು ತೆಗೆದುಕೊಂಡರೆ; ತಮ್ಮ ೧೯೭೫ರ ಪಂದ್ಯ/ಅಭಿಯಾನದಲ್ಲಿ, ಫುಲ್‌ಹಾಮ್ ಆರು ಸುತ್ತುಗಳ ಒಟ್ಟಾರೆ ೧೨ ಪಂದ್ಯಗಳನ್ನು ಆಡಿದ್ದು, ಅದು ಈಗಲೂ ಫೈನಲ್ ಪಂದ್ಯವನ್ನು ತಲುಪಲು ತಂಡವೊಂದು ಆಡಿದ ಅತಿ ಹೆಚ್ಚಿನ ಸಂಖ್ಯೆಯ ಪಂದ್ಯಗಳ ದಾಖಲೆಯಾಗಿ ಉಳಿದಿದೆ.[೨] ಮರುಪಂದ್ಯಗಳನ್ನು ಸಾಂಪ್ರದಾಯಿಕವಾಗಿ ಮೂಲ ಪಂದ್ಯವಾಡಿದ ಮೂರು ಅಥವಾ ನಾಲ್ಕು ದಿನದ ನಂತರ ಆಡಲಾಗುವುದಾದರೂ, 1991–92ರ ಸಾಲಿನಿಂದ ಆರಕ್ಷಕರ ಸಲಹೆಯನುಸಾರ ಕನಿಷ್ಟ ೧೦ ದಿನಗಳ ನಂತರ ನಡೆಸಲಾಗುತ್ತಿದೆ. ಇದರಿಂದಾಗಿಯೇ ಪೆನಾಲ್ಟಿ ಹೊಡೆತಗಳನ್ನು ಪರಿಚಯಿಸಲಾಯಿತು. ಸೆಮಿಫೈನಲ್ ಅಥವಾ ಫೈನಲ್ ಪಂದ್ಯಗಳಿಗೆ ಈಗ ಮರುಪಂದ್ಯಗಳನ್ನು ಆಡಿಸಲಾಗುತ್ತಿಲ್ಲ. ಸ್ಪರ್ಧೆಯಲ್ಲಿ ಒಟ್ಟಾರೆಯಾಗಿ ೧೪ ಸುತ್ತುಗಳಿದ್ದು — ಆರು ಅರ್ಹತಾ ಸುತ್ತುಗಳ ನಂತರ ಮತ್ತೂ ಆರು ಸುತ್ತುಗಳು ("ವಾಸ್ತವಿಕ" ಸುತ್ತುಗಳು), ಸೆಮಿಫೈನಲ್ ಪಂದ್ಯಗಳು, ಹಾಗೂ ಫೈನಲ್ ಪಂದ್ಯವನ್ನು ಹೊಂದಿರುತ್ತದೆ. ಸ್ಪರ್ಧೆಯು ಆಗಸ್ಟ್‌ನಲ್ಲಿ ಅತೀಕೆಳ-ಮಟ್ಟದ ಕ್ಲಬ್‌ಗಳು ಸ್ಪರ್ಧಿಸುವ ಹೆಚ್ಚುವರಿ ಪೂರ್ವಭಾವಿ ಸುತ್ತಿನಿಂದ ಆರಂಭವಾಗಿ, ನಂತರ ಪೂರ್ವಭಾವಿ ಸುತ್ತು ಹಾಗೂ ಪ್ರಥಮ ಅರ್ಹತಾ ಸುತ್ತುಗಳನ್ನು ಹೊಂದಿರುತ್ತದೆ. ಉತ್ತರ ಸಂಘ/ಕಾನ್‌ಫರೆನ್ಸ್ ನಾರ್ತ್ ಹಾಗೂ ದಕ್ಷಿಣ ಸಂಘ/ಕಾನ್‌ಫರೆನ್ಸ್ ಸೌತ್‌ಗಳಲ್ಲಿ ಆಡುವ ಕ್ಲಬ್‌ಗಳಿಗೆ ದ್ವಿತೀಯ ಅರ್ಹತಾ ಸುತ್ತಿಗೆ ವಿನಾಯಿತಿ ಇರುತ್ತದಲ್ಲದೇ, ಕಾನ್‌ಫರೆನ್ಸ್ ನ್ಯಾಷನಲ್/ರಾಷ್ಟ್ರೀಯ ಸಂಘ ತಂಡಗಳಿಗೆ ನಾಲ್ಕನೇ ಅರ್ಹತಾ ಸುತ್ತಿಗೆ ವಿನಾಯಿತಿ ಇರುತ್ತದೆ. ಆ ಸುತ್ತಿನ ೩೨ ವಿಜೇತರು ಪ್ರಥಮ ಲೀಗ್ ಹಾಗೂ ದ್ವಿತೀಯ ಲೀಗ್‌ಗಳಿಂದ ಬಂದ ೪೮ ಕ್ಲಬ್‌ಗಳೊಡನೆ ಪ್ರಥಮ ಸುತ್ತಿನಲ್ಲಿ ಭಾಗವಹಿಸುತ್ತಾರೆ (ಪ್ರಥಮ ವಾಸ್ತವಿಕ ಸುತ್ತು ಎಂದು ಅನೇಕವೇಳೆ ಕರೆಯಲಾಗುತ್ತದೆ). ಕೊನೆಗೆ, ಸ್ಪರ್ಧೆಯಲ್ಲಿ ೬೪ ತಂಡಗಳು ಉಳಿದಿರುವಂತಹಾ ಸಂದರ್ಭದಲ್ಲಿ ಪ್ರೀಮಿಯರ್ ಲೀಗ್ ಹಾಗೂ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ಗಳಿಂದ ಬಂದ ತಂಡಗಳು ತೃತೀಯ ವಾಸ್ತವಿಕ ಸುತ್ತನ್ನು ಪ್ರವೇಶಿಸುತ್ತವೆ. ಆರನೇ ವಾಸ್ತವಿಕ ಸುತ್ತು ಕ್ವಾರ್ಟರ್-ಫೈನಲ್ ಪಂದ್ಯ ಹಂತವಾಗಿದ್ದು, ಆ ಹಂತದಲ್ಲಿ ಕೇವಲ ಎಂಟು ತಂಡಗಳು ಉಳಿದಿರುತ್ತವೆ. ಸಣ್ಣ ಲೀಗ್‌ಅಲ್ಲದ ಕಡೆಯಿಂದ ಬಂದ ತಂಡಗಳ ಪ್ರಯಾಣ ವೆಚ್ಚ ಕಡಿಮೆಗೊಳಿಸಲು ಅರ್ಹತಾ ಸುತ್ತುಗಳನ್ನು ಪ್ರಾದೇಶೀಕರಿಸಲಾಗುತ್ತದೆ. ಪ್ರಥಮ ಹಾಗೂ ದ್ವಿತೀಯ ಸುತ್ತುಗಳನ್ನು ಕೂಡಾ ಈ ಹಿಂದೆ ಉತ್ತರ ಹಾಗೂ ದಕ್ಷಿಣ ವಿಭಾಗಗಳಾಗಿ ವಿಭಜಿಸಲಾಗುತ್ತಿತ್ತು, ಆದರೆ ೧೯೯೭–೯೮ರ ಸ್ಪರ್ಧೆಗಳಿಂದ ಈ ಪದ್ಧತಿಯನ್ನು ಕೊನೆಗೊಳಿಸಲಾಗಿದೆ. ಪ್ರತಿ ಸುತ್ತನ್ನು ಯಾವಾಗ ಆಡಬೇಕು ಎಂಬುದರ ಬಗ್ಗೆ ನಿದರ್ಶನಗಳನ್ನು FA ಕಪ್ ಹೊಂದಿದೆ. ಸಾಧಾರಣವಾಗಿ ಪ್ರಥಮ ಸುತ್ತನ್ನು ಮಧ್ಯ-ನವೆಂಬರ್‌ನಲ್ಲಿ, ದ್ವಿತೀಯ ಸುತ್ತನ್ನು ಡಿಸೆಂಬರ್‌ನ ಪ್ರಥಮ ಎರಡು ಶನಿವಾರಗಳಲ್ಲಿ ಒಂದರಲ್ಲಿ ಆಡಲಾಗುತ್ತದೆ. ತೃತೀಯ ಸುತ್ತನ್ನು ಜನವರಿಯ ಪ್ರಥಮ ವಾರಾಂತ್ಯದಲ್ಲಿ, ನಾಲ್ಕನೆಯ ಸುತ್ತನ್ನು ಅದೇ ತಿಂಗಳಿನಲ್ಲಿ ನಂತರ ಹಾಗೂ ಐದನೆಯ ಸುತ್ತನ್ನು ಫೆಬ್ರವರಿಯ ಮಧ್ಯದಲ್ಲಿ ಆಡಲಾಗುತ್ತದೆ. ಆರನೆಯ ಸುತ್ತನ್ನು (ಅಥವಾ ಕ್ವಾರ್ಟರ್-ಫೈನಲ್ ಪಂದ್ಯಗಳು) ಸಾಂಪ್ರದಾಯಿಕವಾಗಿ ಮಾರ್ಚ್‌ನ ಆದಿ ಅಥವಾ ಮಧ್ಯದಲ್ಲಿ ಹಾಗೂ ಸೆಮಿಫೈನಲ್ ಪಂದ್ಯಗಳನ್ನು ಒಂದು ತಿಂಗಳ ನಂತರ ನಡೆಸಲಾಗುತ್ತದೆ. ಫೈನಲ್ ಪಂದ್ಯವನ್ನು ಸಾಧಾರಣವಾಗಿ ಮೇನಲ್ಲಿ ಪ್ರೀಮಿಯರ್ ಲೀಗ್ ಕ್ರೀಡಾಋತು ಕೊನೆಗೊಂಡ ನಂತರದ ಶನಿವಾರ ನಡೆಸಲಾಗುತ್ತದೆ. ಇತ್ತೀಚಿನ ಕಾಲದಲ್ಲಿ ಈ ನಿದರ್ಶನವನ್ನು ಅನುಸರಿಸದ ಒಂದೇ ಒಂದು ಕ್ರೀಡಾಋತುವೆಂದರೆ ವಾಡಿಕೆಗಿಂತ ಕೆಲ ವಾರಗಳ ಮುಂಚೆ ಬಹುತೇಕ ಸುತ್ತುಗಳನ್ನು ಆಡಲಾದ 1999–2000ರದ್ದು. ಪ್ರಶಸ್ತಿಯನ್ನು ಪಡೆಯುವುದರೊಂದಿಗೆ, ವಿಜೇತ ತಂಡವು (ಹಿಂದೆ UEFA ಕಪ್ ಎಂದು ಕರೆಯಲಾಗುತ್ತಿದ್ದ) UEFA ಯೂರೋಪಾ ಲೀಗ್‌ಗೆ ಕೂಡಾ ಅರ್ಹತೆ ಪಡೆಯುತ್ತದೆ. ವಿಜೇತರು ಈಗಾಗಲೇ ಪ್ರೀಮಿಯರ್ ಲೀಗ್‌ನ ಮೂಲಕ UEFA ಚಾಂಪಿಯನ್ಸ್ ಲೀಗ್‌ಗೆ ಅರ್ಹತೆ ಪಡೆದಿದ್ದರೆ, UEFA ಯೂರೋಪಾ ಲೀಗ್ ಸ್ಥಾನವು FA ಕಪ್ ರನ್ನರ್-ಅಪ್ ತಂಡಕ್ಕೆ ಸಿಗುತ್ತದೆ.[೩] ಅವರು ಕೂಡಾ UEFA ಚಾಂಪಿಯನ್ಸ್ ಲೀಗ್‌ಗೆ ಅರ್ಹತೆ ಪಡೆದಿದ್ದರೆ ಅಥವಾ ಯಾವುದೇ ಕಾರಣದಿಂದಾಗಿ UEFA ಸ್ಪರ್ಧೆಗಳಲ್ಲಿ ಆಡಲಾರರಾದರೆ ಆ ಸ್ಥಾನವು ಲೀಗ್ ಪಟ್ಟಿಯಲ್ಲಿ ಅದರ ನಂತರದ ಸ್ಥಾನ ಪಡೆದ ತಂಡಕ್ಕೆ ಹೋಗುತ್ತದೆ.
ಡ್ರಾ ನಡೆಗಳು
ಬದಲಾಯಿಸಿಹಿಂದಿನ ಸುತ್ತಿನ ಪಂದ್ಯಗಳಲ್ಲೊಂದರ ಲೈವ್ ಪ್ರಸಾರವಾಗುವ ಕೊನೆಗೆ ನಡೆಯುವ ಇದನ್ನು ಕಿರುತೆರೆಯಲ್ಲಿ ಲೈವ್ ಆಗಿ ಪ್ರಸಾರಿಸಲಾಗುತ್ತದೆಯಲ್ಲದೇ ಪ್ರತಿ ಸುತ್ತಿನ ಡ್ರಾ ನಡೆಗಳಿಗೆ ಕ್ರಮಾಂಕವನ್ನು ನೀಡಲಾಗುವುದಿಲ್ಲ. ಅಗ್ರ-ಶ್ರೇಯಾಂಕಿತ ತಂಡಗಳನ್ನು ಡ್ರಾಗೆ ಸೇರಿಸಿಕೊಳ್ಳಲಾಗುವ ತೃತೀಯ ಸುತ್ತಿನಲ್ಲಿ ಸಾರ್ವಜನಿಕರ ಆಸಕ್ತಿ ಹೆಚ್ಚಿರುತ್ತದೆ. ಸಾಂಪ್ರದಾಯಿಕವಾಗಿ, ನೇರಳೆ ಬಣ್ಣದ ಮಕಮಲ್ ಬ್ಯಾಗ್/ಚೀಲದಿಂದ ತೆಗೆದುಕೊಳ್ಳುವ ಚೆಂಡುಗಳ ಮೂಲಕ ಡ್ರಾ ಅನ್ನು ನಡೆಸಲಾಗುವುದಾದರೂ, ಇತ್ತೀಚಿನ ವರ್ಷಗಳಲ್ಲಿ FIFA ವಿಧೇಯಕಗಳಿಗೆ ಒಳಪಡುವ ಉದ್ದೇಶದಿಂದ ಚೆಂಡುಗಳನ್ನು ಪಾರದರ್ಶಕವಾದ ಪರ್ಸ್‌ಪೆಕ್ಸ್ ಧಾರಕದಿಂದ ತೆಗೆಯಲಾಗುತ್ತದೆ. ಆದಾಗ್ಯೂ ಸಂಪ್ರದಾಯವನ್ನು ಮೀರದಿರಲು, ಪ್ರದರ್ಶಕರು ಹಳೆಯ ಮಕಮಲ್ ಚೀಲದಿಂದ ಪರ್ಸ್‌ಪೆಕ್ಸ್ ಧಾರಕಕ್ಕೆ ಡ್ರಾಗಿಂತ ಮುಂಚೆ ಚೆಂಡುಗಳನ್ನು ಹಾಕುವುದನ್ನು ತೋರಿಸಲಾಗುತ್ತದೆ.
ಅರ್ಹ ತಂಡಗಳು
ಬದಲಾಯಿಸಿಪ್ರೀಮಿಯರ್ ಲೀಗ್ ಹಾಗೂ ಫುಟ್‌ಬಾಲ್ ಲೀಗ್‌ಗಳಲ್ಲಿನ ಎಲ್ಲಾ ಕ್ಲಬ್‌ಗಳು ಸ್ವಾಭಾವಿಕವಾಗಿಯೇ ಅರ್ಹರಾಗಿರುತ್ತವೆಯಲ್ಲದೇ, ಆಂಗ್ಲ ಫುಟ್‌ಬಾಲ್ ಲೀಗ್ ವ್ಯವಸ್ಥೆಯ ಮುಂದಿನ ಆರು ಹಂತಗಳ ಕ್ಲಬ್‌ಗಳು ಕೂಡಾ ಹಿಂದಿನ ಕ್ರೀಡಾಋತುವಿನ FA ಕಪ್, FA ಪ್ರಶಸ್ತಿ ಅಥವಾ FA ವೇಸ್ ಸ್ಪರ್ಧೆಗಳಲ್ಲಿ ಯಾವುದಾದರೊಂದರಲ್ಲಿ ಪಾಲ್ಗೊಂಡಿದ್ದರೆ ಕೂಡಾ ಅರ್ಹರಾಗಿರುತ್ತವೆ. AFC ವಿಂಬಲ್ಡನ್ ಅಥವಾ ಮ್ಯಾಂಚೆಸ್ಟರ್‌ನ FC ಯುನೈಟೆಡ್‌ನಂತಹಾ ಉನ್ನತ ಲೀಗ್‌ನಲ್ಲಿ ಆಡಲು ಪ್ರಾರಂಭಿಸುತ್ತಿರುವ ಹೊಸದಾಗಿ ರೂಪುಗೊಂಡ ಕ್ಲಬ್‌ಗಳು ತಮ್ಮ ಪ್ರಥಮ ಕ್ರೀಡಾಋತುವಿನಲ್ಲಿ FA ಕಪ್‌ನಲ್ಲಿ ಆಡಲು ಸಾಧ್ಯವಿರುವುದಿಲ್ಲ. ಸ್ಪರ್ಧೆಯನ್ನು ಪ್ರವೇಶಿಸುವ ಎಲ್ಲಾ ಕ್ಲಬ್‌ಗಳು ಸೂಕ್ತವಾದ ಕ್ರೀಡಾಂಗಣವನ್ನು ಕೂಡಾ ಹೊಂದಿರಬೇಕಾಗುತ್ತದೆ. ಅಗ್ರ ಕ್ಲಬ್‌ಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಾಗದೇ ಇರುವುದು ಅಪರೂಪವಾದರೂ, ಅಪವಾದದ ಸಂದರ್ಭಗಳಲ್ಲಿ ಹೀಗಾಗಬಹುದಾಗಿದೆ. ಆ ಸಂದರ್ಭದಲ್ಲಿ ವಿವಾದಾಸ್ಪದವೆನಿಸಿದರೂ ತಾವು FIFA ಕ್ಲಬ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿರುವುದರಿಂದ ಮ್ಯಾಂಚೆಸ್ಟರ್ ಯುನೈಟೆಡ್ 1999–2000ರ ಸ್ಪರ್ಧೆಯಿಂದ ಹಿಂದೆಗೆದಿದ್ದರು.[೪] ಆಂಗ್ಲ ಲೀಗ್‌ಗಳಲ್ಲಿ ಆಡುವ ವೆಲ್ಷ್ ಕಡೆಯ ತಂಡಗಳು ಅರ್ಹರಾಗಿದ್ದವಾದರೂ, ವೇಲ್ಸ್ ಲೀಗ್‌ನ ರಚನೆಯ ನಂತರ ಇದುವರೆಗೆ ಕೇವಲ ಆರು ಅಂತಹಾ ಕ್ಲಬ್‌ಗಳು ಉಳಿದಿವೆ: ಅವುಗಳೆಂದರೆ ಕಾರ್ಡಿಫ್ ನಗರ/ಸಿಟಿ (1927ರಲ್ಲಿ ಪಂದ್ಯಾವಳಿಯನ್ನು ಗೆದ್ದ ಏಕೈಕ ಆಂಗ್ಲವಲ್ಲದ ತಂಡ), ಸ್ವಾನ್‌ಸೀ ನಗರ/ಸಿಟಿ, ರೆಕ್ಸ್‌ಹಾಮ್, ಮರ್ಥಿರ್ ಟಿಡ್‌ಫಿಲ್, ನ್ಯೂಪೋರ್ಟ್ ಕೌಂಟಿ ಹಾಗೂ ಕಾಲ್ವಿನ್ ಬೇ. ಹಿಂದಿನ ವರ್ಷಗಳಲ್ಲಿ ವೇಲ್ಸ್, ಐರ್‌ಲೆಂಡ್ ಹಾಗೂ ಸ್ಕಾಟ್‌ಲೆಂಡ್‌ಗಳಲ್ಲಿನ ಇತರೆ ತಂಡಗಳು ಕೂಡಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದವು, 1884 ಹಾಗೂ 1885ನೇ ಇಸವಿಗಳಲ್ಲಿ ಗ್ಲಾಸ್ಗೋ ಕಡೆಯ ಕ್ವೀನ್ಸ್ ಪಾರ್ಕ್ ತಂಡವು ಸ್ಕಾಟಿಷ್ ಫುಟ್‌ಬಾಲ್ ಅಸೋಸಿಯೇಷನ್‌ನಿಂದ ನಿಷೇಧಕ್ಕೊಳಗಾಗುವ ಮುನ್ನ ಫೈನಲ್ ಪಂದ್ಯವನ್ನು ತಲುಪಿತ್ತು. ಇತ್ತೀಚಿನ ವರ್ಷಗಳಲ್ಲಿ ಸ್ಪರ್ಧಾಳು ತಂಡಗಳ ಸಂಖ್ಯೆ ಬಹಳವಾಗಿ ಹೆಚ್ಚುತ್ತಿದೆ. 2004–05ರ ಸಾಲಿನ ಕ್ರೀಡಾಋತುವಿನಲ್ಲಿ ೧೯೨೧–೨೨ರ ಸಾಲಿನ ಕ್ರೀಡಾಋತುವಿನ ದೀರ್ಘಕಾಲದಿಂದ ಇದ್ದ ೬೫೬ ತಂಡಗಳ ದಾಖಲೆಯನ್ನು ಮುರಿದು ೬೬೦ ಕ್ಲಬ್‌ಗಳು ಸ್ಪರ್ಧೆಗೆ ಪ್ರವೇಶಿಸಿದ್ದವು. 2005–06ರ ಸಾಲಿನಲ್ಲಿ ಇದು ೬೭೪ ಸ್ಪರ್ಧಾಳುಗಳಿಗೆ ಹೆಚ್ಚಿದರೆ, 2006–07ರ ಸಾಲಿನಲ್ಲಿ ೬೮೭ ಸ್ಪರ್ಧಾಳುಗಳಿಗೆ ಹೆಚ್ಚಿದರೆ, 2007–08ರ ಸಾಲಿನಲ್ಲಿ ೭೩೧ ಕ್ಲಬ್‌ಗಳು ಇದ್ದವು ಹಾಗೂ 2008–09 ಹಾಗೂ 2009–10ರ ಸಾಲಿನ ಸ್ಪರ್ಧೆಗಳಲ್ಲಿ ಇದು ೭೬೨ಅನ್ನು ಮುಟ್ಟಿತು.[೫] ಇತರೆ ಪ್ರಮುಖ ಆಂಗ್ಲ ದೇಶೀಯ ಕಪ್‌ಗಳಿಗೆ ಹೋಲಿಸಿದರೆ ಲೀಗ್ ಕಪ್, ಪ್ರೀಮಿಯರ್ ಲೀಗ್ ಹಾಗೂ ಫುಟ್‌ಬಾಲ್ ಲೀಗ್‌ಗಳ ಕೇವಲ ೯೨ ಸದಸ್ಯರನ್ನು ಮಾತ್ರ ಹೊಂದಿರುತ್ತದೆ.
ಸ್ಥಳಗಳು
ಬದಲಾಯಿಸಿFA ಕಪ್‌ಗಳಲ್ಲಿನ ಪಂದ್ಯಗಳನ್ನು ಸಾಧಾರಣವಾಗಿ ಎರಡು ತಂಡಗಳಲ್ಲಿ ಒಂದರ ತವರು ಮೈದಾನದಲ್ಲಿ ಆಡಲಾಗುತ್ತದೆ. ಪಂದ್ಯಗಳ ಡ್ರಾನಡೆಗಳನ್ನು ನಡೆಸಿದಾಗ ಯಾವ ತಂಡವು ತಮ್ಮ ತವರಲ್ಲಿ ಆಡುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ತಂಡಗಳು ಸ್ಪರ್ಧೆಗೆ ಪ್ರವೇಶಿಸಿದಾಗಿನ ಸುತ್ತುಗಳನ್ನು ಹೊರತುಪಡಿಸಿದರೆ, ಕ್ರಮಾಂಕ ವ್ಯವಸ್ಥೆಯನ್ನು ಪಾಲಿಸಲಾಗುವುದಿಲ್ಲ ಆದ್ದರಿಂದ ಪ್ರತಿ ಪಂದ್ಯದ ದಿನದಲ್ಲಿ ತವರು ತಂಡವೇ ಕೇವಲ ಡ್ರಾ ನಡೆಗಳಿಗೆ ಈಡಾಗುವ ಪ್ರಥಮ ತಂಡವಾಗಿರುತ್ತದೆ. ಪ್ರಾಸಂಗಿಕವಾಗಿ ಪಂದ್ಯಗಳನ್ನು ಬೇರೆ ಕಾರ್ಯಕ್ರಮಗಳು ನಡೆಯುವ, ಸುರಕ್ಷತೆಯ ದೃಷ್ಟಿಯಿಂದ ಅಥವಾ ಜನಪ್ರಿಯ, ತಂಡಗಳ ಪಂದ್ಯಗಳನ್ನು ಆಯೋಜಿಸುವ ದೃಷ್ಟಿಯಿಂದ ಮೈದಾನವು ಸೂಕ್ತವಿಲ್ಲದ ರೀತಿಯ ಕಾರಣಗಳಿಂದ ಕೆಲವೊಮ್ಮೆ ಇತರೆ ಮೈದಾನಗಳಿಗೆ ಸ್ಥಳಾಂತರಿಸಲಾಗುತ್ತದೆ. ಸರಿಸಮ ಪಂದ್ಯದ ಸಂದರ್ಭದಲ್ಲಿ ಮರುಪಂದ್ಯವನ್ನು ತಂಡ ಮೊದಲಿಗೆ ತವರಿನಿಂದ ಹೊರಗಡೆ ಆಡಿದ ತಂಡದ ಮೈದಾನದಲ್ಲಿ ಆಡಲಾಗುತ್ತದೆ. ಅನೇಕ ಮರುಪಂದ್ಯಗಳು ನಡೆಸಲು ಸಾಧ್ಯವಿದ್ದ ದಿನಗಳಲ್ಲಿ ದ್ವಿತೀಯ ಮರುಪಂದ್ಯವನ್ನು (ಹಾಗೂ ನಂತರದ ಯಾವುದೇ ಮರುಪಂದ್ಯಗಳನ್ನು) ತಟಸ್ಥ ಮೈದಾನಗಳಲ್ಲಿ ಆಡಲಾಗುತ್ತಿತ್ತು. ಇದರ ಬದಲಾಗಿ ಸಂಬಂಧಪಟ್ಟ ಕ್ಲಬ್‌ಗಳು ದ್ವಿತೀಯ ಮರುಪಂದ್ಯದಲ್ಲಿ ನಾಣ್ಯವನ್ನು ಚಿಮ್ಮುವುದರ ಮೂಲಕ ತವರು ತಂಡವನ್ನು ನಿರ್ಧರಿಸುವುದಕ್ಕೆ ಒಪ್ಪಿಕೊಳ್ಳುತ್ತಿದ್ದವು. ಸಾಂಪ್ರದಾಯಿಕವಾಗಿ, FA ಕಪ್‌ನ ಫೈನಲ್ ಪಂದ್ಯವನ್ನು ಲಂಡನ್'ನ ವೆಂಬ್ಲೆ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿತ್ತು. ಹಿಂದೆ ಫೈನಲ್ ಪಂದ್ಯಗಳನ್ನು ಇತರೆ ಸ್ಥಳಗಳಲ್ಲಿ ಆಡಲಾಗುತ್ತಿತ್ತು ಹಾಗೂ, ವೆಂಬ್ಲೆಯ ಕ್ರೀಡಾಂಗಣದ ವ್ಯಾಪಕ ಪುನರ್‌ಅಭಿವೃದ್ಧಿ ಕಾರ್ಯಗಳ ಕಾರಣ, ೨೦೦೧ರಿಂದ ೨೦೦೬ರವರೆಗಿನ ಫೈನಲ್ ಪಂದ್ಯಗಳನ್ನು ಕಾರ್ಡಿಫ್‌ನ ಮಿಲೇನಿಯಮ್ ಕ್ರೀಡಾಂಗಣದಲ್ಲಿ ಆಡಲಾಯಿತು}. ಫೈನಲ್ ಪಂದ್ಯವು ಮೇ ೨೦೦೭ರಲ್ಲಿ ವೆಂಬ್ಲೆಗೆ ಮರಳಿತು.[೬] ಹಿಂದಿನ ಫೈನಲ್ ಪಂದ್ಯಗಳ ಸ್ಥಳಗಳೆಂದರೆ ೧೮೭೨ ಹಾಗೂ ೧೮೭೪–೯೨ನೇ ಇಸವಿಗಳಲ್ಲಿ ಕೆನ್ನಿಂಗ್‌ಟನ್ ಓವಲ್, ೧೮೮೬ರಲ್ಲಿ ಡರ್ಬಿ ನಗರದ ರೇಸ್‌ಕೋರ್ಸ್ ಮೈದಾನ, ಮ್ಯಾಂಚೆಸ್ಟರ್‌ನ ಫಾಲೋಫೀಲ್ಡ್ ಕ್ರೀಡಾಂಗಣದಲ್ಲಿ ೧೮೯೩ರಲ್ಲಿ, ೧೯೦೧ರ ಮರುಪಂದ್ಯವನ್ನು ಬರ್ನ್‌ಡೆನ್ ಪಾರ್ಕ್‌ನಲ್ಲಿ, ೧೯೧೨ರಲ್ಲಿ ಬ್ರಾಮಲ್ ಲೇನ್, ೧೮೯೫–೧೯೧೪ರವರೆಗೆ ಕ್ರಿಸ್ಟಲ್ ಪ್ಯಾಲೇಸ್ ಉದ್ಯಾನ, ೧೯೨೦–೨೨ರವರೆಗೆ ಸ್ಟ್ಯಾಮ್‌ಫರ್ಡ್ ಬ್ರಿಡ್ಜ್, ಹಾಗೂ ೧೮೭೩ರಲ್ಲಿ ಲಂಡನ್‌ನ ಫುಲ್ಹಾಮ್ನಲ್ಲಿನ ಲಿಲ್ಲೀ ಬ್ರಿಡ್ಜ್. ತೀರ ಇತ್ತೀಚಿನದಾದ ಕುಖ್ಯಾತ ೧೯೭೦ರ ಸಾಲಿನ ಲೀಡ್ಸ್ ಹಾಗೂ ಚೆಲ್ಸಿಯಾಗಳ ನಡುವಿನ ಫೈನಲ್ ಪಂದ್ಯದ ಮರುಪಂದ್ಯವನ್ನು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಸಲಾಗಿತ್ತು. ೧೯೨೩ರಿಂದ ೨೦೦೦ನೇ ಇಸವಿಯವರೆಗಿನ ಅವಧಿಯಲ್ಲಿ FA ಕಪ್ ಫೈನಲ್ ಪಂದ್ಯ ಅಥವಾ FA ಕಪ್ ಫೈನಲ್ ಪಂದ್ಯದ ಮರುಪಂದ್ಯವನ್ನು ವೆಂಬ್ಲೆಯನ್ನು ಹೊರತುಪಡಿಸಿದ ಇತರೆ ಕ್ರೀಡಾಂಗಣದಲ್ಲಿ ನಡೆಸಿದ್ದು ಇದೊಂದೇ ಬಾರಿ ಆಗಿದೆ. ಸೆಮಿಫೈನಲ್ ಪಂದ್ಯಗಳನ್ನು ಹಿಂದೆ ತಟಸ್ಥ ಸ್ಥಳಗಳಲ್ಲಿ ನಡೆಸಲಾಗುತ್ತಿತ್ತು; ಹಿಂದೆ ಇವುಗಳು ಆಯಾ ಸೆಮಿಫೈನಲ್ ಪಂದ್ಯದಲ್ಲಿ ಪಾಲ್ಗೊಳ್ಳದ ತಂಡಗಳ ತವರು ಮೈದಾನದಲ್ಲಿ ಆಗಿರುತ್ತಿತ್ತು. ೧೯೯೦ರಿಂದ ಅವುಗಳನ್ನು ನಡೆಸಲಾದ ಸ್ಥಳಗಳೆಂದರೆ ಮ್ಯಾಂಚೆಸ್ಟರ್ ಸಿಟಿ/ನಗರ ತಂಡದ ಈಗ ಧ್ವಂಸಗೊಳಿಸಲಾಗಿರುವ ಮೈನೆ ರೋಡ್/ರಸ್ತೆ ಕ್ರೀಡಾಂಗಣ; ಮ್ಯಾಂಚೆಸ್ಟರ್ ಯುನೈಟೆಡ್'ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣ ; ಷೆಫೀಲ್ಡ್ ವೆನಸ್‌ಡೇ/ವೆಡ್‌ನಸ್‌ಡೇ ತಂಡ'ದ ತವರು ಕ್ರೀಡಾಂಗಣ ಹಿಲ್ಸ್‌ಬರೋ: ಆರ್ಸೆನಲ್'ನ ಹಿಂದಿನ ತವರಾದ, ಹೈಬರಿ (ಅದಾದ ನಂತರ ವಸತಿಪ್ರದೇಶವಾಗಿ ಮರುಅಭಿವೃದ್ಧಿಪಡಿಸಲಾಗಿದೆ): ಲಂಡನ್‌ನ ವೆಂಬ್ಲೆ ಕ್ರೀಡಾಂಗಣ : ಕಾರ್ಡಿಫ್‌ನ ಮಿಲೇನಿಯಮ್ ಕ್ರೀಡಾಂಗಣ ಹಾಗೂ ಆಸ್ಟನ್ ವಿಲ್ಲಾದ, ತವರಾದ ಬರ್ಮಿಂಗ್‌ಹ್ಯಾಮ್‌ನಲ್ಲಿನ ವಿಲ್ಲಾ ಪಾರ್ಕ್. ವಿಲ್ಲಾ ಪಾರ್ಕ್ ಬಹುಬಳಕೆಯಲ್ಲಿರುವ ಕ್ರೀಡಾಂಗಣವಾಗಿದ್ದು, ೫೫ ಸೆಮಿಫೈನಲ್ ಪಂದ್ಯಗಳನ್ನು ಅಲ್ಲಿ ನಡೆಸಲಾಗಿದೆ. ಆರ್ಸೆನಲ್ ಹಾಗೂ ಟೋಟ್ಟೆನ್‌ಹ್ಯಾಮ್ ತಂಡಗಳ ನಡುವಿನ ೧೯೯೧ರ ಸೆಮಿಫೈನಲ್ ಪಂದ್ಯವು ವೆಂಬ್ಲೆಯಲ್ಲಿ ನಡೆದ ಅಲ್ಲಿ ನಡೆಸಿದ ಪ್ರಪ್ರಥಮ ಸೆಮಿಫೈನಲ್ ಪಂದ್ಯವಾಗಿದೆ. ಎರಡು ವರ್ಷಗಳ ನಂತರ ಎರಡೂ ಸೆಮಿಫೈನಲ್ ಪಂದ್ಯಗಳನ್ನು ವೆಂಬ್ಲೆಯಲ್ಲಿಯೇ ನಡೆಸಲಾಯಿತು, ಹಾಗೂ ೧೯೯೪ ಹಾಗೂ ೨೦೦೦ನೇ ಇಸವಿಗಳಲ್ಲಿ ಮತ್ತೆ ಎರಡೂ ಪಂದ್ಯಗಳನ್ನು ಅಲ್ಲಿ ನಡೆಸಲಾಯಿತು. ೨೦೦೫ರಲ್ಲಿ ಮಿಲೇನಿಯಮ್ ಕ್ರೀಡಾಂಗಣದಲ್ಲಿ ಎರಡನ್ನೂ ನಡೆಸಲಾಯಿತು. ಸೆಮಿಫೈನಲ್ ಪಂದ್ಯಗಳನ್ನು ಫೈನಲ್ ಪಂದ್ಯಗಳ ಸ್ಥಳಗಳಲ್ಲಿಯೇ ನಡೆಸುವ ನಿರ್ಧಾರವು ಅಭಿಮಾನಿಗಳ ಕಡೆಯಿಂದ ವಿವಾದವನ್ನೆಬ್ಬಿಸಬಹುದಾದರೂ [೭] ೨೦೦೮ರ ಕಪ್‌ನೊಂದಿಗೆ ಆರಂಭಿಸಿ ನಂತರದ ಎಲ್ಲಾ ಸೆಮಿ-ಫೈನಲ್ ಪಂದ್ಯಗಳನ್ನು ವೆಂಬ್ಲೆಯಲ್ಲಿಯೇ ಆಡಲಾಗುತ್ತದೆ; ೨೦೦೭ರ ಸೆಮಿಫೈನಲ್ ಪಂದ್ಯಗಳನ್ನು ನಡೆಸಲು ಕ್ರೀಡಾಂಗಣವು ಇನ್ನೂ ಸಿದ್ಧಗೊಂಡಿರಲಿಲ್ಲ. ಸೆಮಿಫೈನಲ್ ಪಂದ್ಯ ಫಲಿತಾಂಶಗಳು ಹಾಗೂ ನಡೆದ ಸ್ಥಳಗಳ ಪಟ್ಟಿಗಾಗಿ, FA ಕಪ್ ಸೆಮಿಫೈನಲ್ ಪಂದ್ಯಗಳು ಲೇಖನವನ್ನು ನೋಡಿ.
ಪ್ರಶಸ್ತಿಗಳು
ಬದಲಾಯಿಸಿಫೈನಲ್ ಪಂದ್ಯದ ಕೊನೆಯಲ್ಲಿ, ವಿಜೇತ ತಂಡಕ್ಕೆ ಮುಂದಿನ ವರ್ಷದ ಫೈನಲ್ ಪಂದ್ಯದವರೆಗೆ ಅವರದ್ದಾಗುವ "FA ಕಪ್" ಎಂದೂ ಕರೆಯಲಾಗುವ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಾಂಪ್ರದಾಯಿಕವಾಗಿ, ವೆಂಬ್ಲೆ ಫೈನಲ್ ಪಂದ್ಯಗಳಲ್ಲಿ ರಾಯಲ್ ಬಾಕ್ಸ್ ಎನ್ನಲಾಗುವ ಅಂಕಣದಲ್ಲಿ ಪ್ರಶಸ್ತಿಪ್ರದಾನವನ್ನು ಮಾಡಲಾಗುತ್ತದೆ, ನಾಯಕನ ನೇತೃತ್ವದಲ್ಲಿ ಆಟಗಾರರು ಮೆಟ್ಟಿಲುಗಳ ಮೂಲಕ ಎದುರಿನ ನಡುಹಾದಿಯನ್ನು ಹಾದು ಅಂಕಣವನ್ನು ಪ್ರವೇಶಿಸಿ ಅದರ ಮತ್ತೊಂದು ಬದಿಯಲ್ಲಿರುವ ಮೆಟ್ಟಿಲುಗಳ ಮೂಲಕ ಮರಳುತ್ತಾರೆ. ಕಾರ್ಡಿಫ್‌ನಲ್ಲಿ ಪ್ರಶಸ್ತಿ ಪ್ರದಾನವನ್ನು ಮೈದಾನ/ಪಿಚ್‌ನಲ್ಲಿಯೇ ಕಟ್ಟಲಾದ ವೇದಿಕೆಯಲ್ಲಿ ನಡೆಸಲಾಯಿತು. ಕಪ್‌ಅನ್ನು ವಿಜೇತ ತಂಡದ ಬಣ್ಣದ ಅಲಂಕಾರ ಪಟ್ಟಿ/ರಿಬ್ಬನ್ನುಗಳಿಂದ ಸಿಂಗರಿಸಲಾಗಿರುತ್ತದೆ; ಸರ್ವೇಸಾಮಾನ್ಯ ಒಗಟಿನಲ್ಲಿ ಹೀಗೆ ಕೇಳಲಾಗುತ್ತದೆ, "ಎಂದಿಗೂ ಬಳಸದಿದ್ದರೂ ಕಪ್‌ನ ಫೈನಲ್ ಪಂದ್ಯಕ್ಕೆ ಯಾವಾಗಲೂ ತೆಗೆದುಕೊಂಡು ಹೋಗುವ ವಸ್ತು ಯಾವುದು?" (ಉತ್ತರವೆಂದರೆ "ಸೋತ ತಂಡ'ದ ಅಲಂಕಾರ ಪಟ್ಟಿ/ರಿಬ್ಬನ್ನುಗಳು"). ಆದಾಗ್ಯೂ ಪಂದ್ಯ ನಡೆಯುತ್ತಿರುವ ಸಮಯದಲ್ಲಿ ಕಪ್‌ಗೆ ವಾಸ್ತವವಾಗಿ ಎರಡೂ ತಂಡಗಳ' ಅಲಂಕಾರ ಪಟ್ಟಿ/ರಿಬ್ಬನ್ನುಗಳ ಗೊಂಚಲನ್ನು ಕಟ್ಟಲಾಗಿದ್ದು ರನ್ನರ್-ಅಪ್ ತಂಡದ ಅಲಂಕಾರ ಪಟ್ಟಿ/ರಿಬ್ಬನ್ನುಗಳನ್ನು ಪ್ರಶಸ್ತಿ ಪ್ರದಾನಕ್ಕೆ ಮುನ್ನ ತೆಗೆಯಲಾಗುತ್ತದಾದ್ದರಿಂದ ಇದು ಸಂಪೂರ್ಣ ಸತ್ಯವೇನಲ್ಲ. ಫೈನಲ್ ಪಂದ್ಯದಲ್ಲಿ ಆಡುತ್ತಿರುವ ತಂಡಗಳ ಪ್ರತಿ ಸದಸ್ಯರಿಗೂ ವಿಜೇತರ' ಹಾಗೂ ರನ್ನರ್ಸ್-ಅಪ್ ಪದಕಗಳನ್ನು ನೀಡಲಾಗುತ್ತದೆ. ಪ್ರಸ್ತುತ FA ಕಪ್ ಪ್ರಶಸ್ತಿಯು ನಾಲ್ಕನೆಯದಾಗಿದೆ. ಪ್ರಥಮ ಪ್ರಶಸ್ತಿಯಾಗಿದ್ದ 'ತವರದ ಸಣ್ಣ ಪ್ರತಿಮೆ'ಯನ್ನು, ೧೮೭೧–೨ರಲ್ಲಿ ಕಪ್‌ನ ಉಪಕ್ರಮದಿಂದ ಆಸ್ಟನ್ ವಿಲ್ಲಾ ತಂಡದ ಸುಪರ್ದಿನಲ್ಲಿರುವಾಗ ೧೧ ಸೆಪ್ಟೆಂಬರ್ ೧೮೯೫ರಂದು ವಿಲಿಯಂ ಷಿಲ್ಲಾಕ್‌ರ ಬರ್ಮಿಂಗ್‌ಹ್ಯಾಮ್ ಪಾದರಕ್ಷೆಗಳ ಅಂಗಡಿಯ ಕಿಟಕಿಯಿಂದ ಕಳ್ಳತನವಾಗುವರೆಗೂ ಬಳಸಲಾಗುತ್ತಿತ್ತು, ನಂತರ ಎಂದಿಗೂ ಇದು ಕಾಣಸಿಕ್ಕಲಿಲ್ಲ. FA ವಿಲ್ಲಾ ತಂಡಕ್ಕೆ ಬದಲಿಯೊಂದನ್ನು ನೀಡಲು £೨೫ ದಂಡವನ್ನು ವಿಧಿಸಿತು. ಬಹುತೇಕ ೬೦ ವರ್ಷಗಳ ನಂತರ, ಕಳ್ಳನು ಕಪ್ ಅನ್ನು ಕರಗಿಸಿ ನಕಲಿ ಅರೆ-ಕ್ರೌನ್ ನಾಣ್ಯಗಳನ್ನು ತಯಾರಿಸಲಾಗಿತ್ತೆಂಬುದನ್ನು ಒಪ್ಪಿಕೊಂಡನು.[೮] ದ್ವಿತೀಯ ಪ್ರಶಸ್ತಿಯು ಪ್ರಥಮ ಪ್ರಶಸ್ತಿಯ ತದ್ರೂಪಾಗಿತ್ತು, ಹಾಗೂ ಅದನ್ನು FA'ನ ದೀರ್ಘ ಕಾಲದ ಅಧ್ಯಕ್ಷ ಲಾರ್ಡ್ ಕಿನ್ನೈರ್ಡ್‌ರಿಗೆ ಪ್ರದಾನ ಮಾಡುವುದಕ್ಕಿಂರ ಮುನ್ನ ೧೯೧೦ರಲ್ಲಿ ಕೊನೆಯದಾಗಿ ಬಳಸಲಾಗಿತ್ತು. ಅದನ್ನು ಕ್ರಿಸ್ಟೀಸ್ ಹರಾಜುಕೋಠಿಯಲ್ಲಿ ೧೯ ಮೇ ೨೦೦೫ರಂದು £೪೨೦,೦೦೦ ಮೊತ್ತಕ್ಕೆ (ಹರಾಜಿನ ಶುಲ್ಕ ಹಾಗೂ ತೆರಿಗೆಗಳು ಸೇರಿ £೪೭೮,೪೦೦) ವೆಸ್ಟ್ ಹ್ಯಾಮ್ ಯುನೈಟೆಡ್ FCನ ಜಂಟಿ ಅಧ್ಯಕ್ಷ ಡೇವಿಡ್ ಗೋಲ್ಡ್‌ರಿಗೆ ಮಾರಲಾಯಿತು. ಡೇವಿಡ್ ಗೋಲ್ಡ್ ಈ ಪ್ರಶಸ್ತಿಯನ್ನು ಪ್ರೆಸ್ಟನ್ ಉತ್ತರ ಕೊನೆ'ಯ ಡೀಪ್‌ಡೇಲ್ ಕ್ರೀಡಾಂಗಣದಲ್ಲಿ ಸ್ಥಾಪಿಸಲಾಗಿರುವ ನ್ಯಾಷನಲ್ /ರಾಷ್ಟ್ರೀಯ ಫುಟ್‌ಬಾಲ್ ವಸ್ತುಸಂಗ್ರಹಾಲಯಕ್ಕೆ ಎರವಲಾಗಿ ನೀಡಿದ್ದಾರೆ, ಅಲ್ಲಿ ಅದನ್ನು ಶಾಶ್ವತ ಸಾರ್ವಜನಿಕ ಪ್ರದರ್ಶನಕ್ಕಾಗಿ ಇಡಲಾಗಿದೆ. ಬ್ರಾಡ್‌ಫೋರ್ಡ್‌ನ ಫಾಟ್ಟೋರಿನಿ'ಸ್ ಸಂಸ್ಥೆಯಿಂದ ವಿನ್ಯಾಸಗೊಂಡು ತಯಾರಿಸಲ್ಪಟ್ಟ ದೊಡ್ಡದು ಹಾಗೂ ಹೊಸದಾದ, ಪ್ರಶಸ್ತಿಯನ್ನು ೧೯೧೧ರಲ್ಲಿ FA ಕೊಂಡುಕೊಂಡಿತು ಹಾಗೂ ಇದನ್ನು ಬ್ರಾಡ್‌ಫೋರ್ಡ್ ಸಿಟಿ/ನಗರ ತಂಡವು ತನ್ನ ಪ್ರಥಮ ಹೊರಾಂಗಣ ಸ್ಪರ್ಧೆಯಲ್ಲಿ ಗೆದ್ದುಕೊಂಡಿತು, ಇದರ ಮತ್ತೊಂದು ಸಾಧನೆಯೆಂದರೆ ಬ್ರಾಡ್‌ಫೋರ್ಡ್‌ನ ತಂಡವೊಂದು ಫೈನಲ್ ಪಂದ್ಯವನ್ನು ತಲುಪಿದ್ದು ಅದೊಂದು ಬಾರಿ ಮಾತ್ರವೇ. ಈ ಪ್ರಶಸ್ತಿಯು ಈಗಲೂ ಇದ್ದರೂ ಬಳಸಲಾರದಷ್ಟು ವಿಪರೀತ ದುರ್ಬಲವಾಗಿರುವುದರಿಂದ, ಅದರ ತದ್ವತ್ ಪ್ರತಿಕೃತಿಯನ್ನು ಟೋಯೆ, ಕೆನ್ನಿಂಗ್ ಅಂಡ್ ಸ್ಪೆನ್ಸರ್ [೯] ಸಂಸ್ಥೆಯು ತಯಾರಿಸಿದ್ದು ೧೯೯೨ರ ಫೈನಲ್ ಪಂದ್ಯದಿಂದ ಇದು ಬಳಕೆಯಲ್ಲಿದೆ. ಪ್ರಸ್ತುತ ಪ್ರಶಸ್ತಿಯೊಂದಿಗೆಯೇ ೧೯೯೨ರಲ್ಲಿ "ಮೀಸಲುಪ್ರತಿ" ಪ್ರಶಸ್ತಿಯನ್ನು ಕೂಡಾ ತಯಾರಿಸಲಾಗಿತ್ತಾದರೂ, ಇದುವರೆಗೆ ಅದನ್ನು ಬಳಸಲಾಗಿಲ್ಲ, ಹಾಗೂ ಕೇವಲ ಪ್ರಸಕ್ತ ಪ್ರಶಸ್ತಿಯು ಕಳೆದುಹೋದ, ನಷ್ಟಹೊಂದಿದ ಅಥವಾ ನಾಶವಾದ ಸಂದರ್ಭದಲ್ಲಿ ಮಾತ್ರವೇ ಅದನ್ನು ಬಳಸಲಾಗುತ್ತದೆ. ಸಣ್ಣದು ಎಂಬುದನ್ನು ಬಿಟ್ಟರೆ ಅದರ ಪ್ರತಿಕೃತಿಯಂತೆಯೇ ಇರುವ ಮತ್ತೊಂದನ್ನು ಕೂಡಾ ನಾರ್ತ್ ವೇಲ್ಸ್ ಕೋಸ್ಟ್ FA ಕಪ್ ಪ್ರಶಸ್ತಿಗಾಗಿ ಫಾಟ್ಟೋರಿನಿ ಸಂಸ್ಥೆಯು ತಯಾರಿಸಿತ್ತು, ವಾರ್ಷಿಕವಾಗಿ ನಡೆಯುವ ಆ ಪಂದ್ಯದಲ್ಲಿ ಅಲ್ಲಿನ ಪ್ರಾದೇಶಿಕ ಅಸೋಸಿಯೇಷನ್‌ನ ಸದಸ್ಯ ಕ್ಲಬ್‌ಗಳು ಸ್ಪರ್ಧಿಸುತ್ತವೆ. FA ಕಪ್ ವಿಶ್ವದ ಅತಿ ಹಳೆಯದಾದ ದೇಶೀಯ ಫುಟ್‌ಬಾಲ್ ಸ್ಪರ್ಧೆಯಾಗಿದ್ದರೂ, ಅದರ ಪ್ರಶಸ್ತಿ ಯು ಅತ್ಯಂತ ಹಳೆಯದೇನಲ್ಲ; ಆ ಕೀರ್ತಿಯನ್ನು ಯೌಡನ್ ಕಪ್ ಪಡೆದಿದೆ. ಅತಿ ಹಳೆಯದಾದ ರಾಷ್ಟ್ರೀಯ ಪ್ರಶಸ್ತಿಯೆಂದರೆ ಸ್ಕಾಟಿಷ್ ಕಪ್ ಆಗಿದೆ.
ಪ್ರಾಯೋಜಕತ್ವ
ಬದಲಾಯಿಸಿ೧೯೯೪–೯೫ರ ಕ್ರೀಡಾಋತುವಿನ ಆರಂಭದಿಂದ, FA ಕಪ್‌ಅನ್ನು ಪ್ರಾಯೋಜಿಸಲಾಗುತ್ತಿದೆ. ಆದಾಗ್ಯೂ, ಜನಪ್ರಿಯ ಸ್ಪರ್ಧೆಯ ಅನನ್ಯತೆಯನ್ನು ಉಳಿಸಿಕೊಳ್ಳಲು, ಲೀಗ್ ಕಪ್‌ಗಳ ಪ್ರಾಯೋಜಕತ್ವದ ವ್ಯವಹಾರಗಳ ಹಾಗಲ್ಲದೇ ಅದರ ಹೆಸರನ್ನು "ದ FA ಕಪ್"ನಿಂದ ಎಂದಿಗೂ ಬದಲಿಸಲಾಗಿಲ್ಲ. ಬದಲಿಗೆ, ಸ್ಪರ್ಧೆಯನ್ನು "ದ FA ಕಪ್ ಸ್ನಾನ್ಸರ್ಡ್ ಬೈ .../ ರಿಂದ ಪ್ರಾಯೋಜಿತ ದ FA ಕಪ್" ಎಂದು ಕರೆಯಲಾಗುತ್ತಿತ್ತು, ಆದರೆ ೧೯೯೯–೨೦೦೨ರ ಅವಧಿಯಲ್ಲಿ, ಸ್ಪರ್ಧೆಯನ್ನು "ದ AXA ಪ್ರಾಯೋಜಿತ FA ಕಪ್" ಎಂದು ಕರೆಯಲಾಗುತ್ತಿತ್ತು. E.ON ಕಂಪೆನಿಯು ೨೦೦೬ರಿಂದ ನಾಲ್ಕು ವರ್ಷಗಳ ಕಾಲ ಪ್ರಾಯೋಜಿಸುತ್ತಿರುವ ಪ್ರಯುಕ್ತ ಸ್ಪರ್ಧೆಯನ್ನು ಔಪಚಾರಿಕವಾಗಿ "ದ FA ಕಪ್ ಸ್ಪಾನ್ಸರ್ಡ್ ಬೈ E.ON" ಎಂದು ಕರೆಯಲಾಯಿತು.[೧೦] ಆಗಸ್ಟ್ ೨೦೦೬ರಿಂದ ೨೦೧೪ರವರೆಗೆ, ಅಂಬ್ರೋ ಕಂಪೆನಿಯು ಪಂದ್ಯದ ಚೆಂಡುಗಳನ್ನು ಎಲ್ಲಾ FA ಕಪ್ ಪಂದ್ಯಗಳಿಗೆ ಪೂರೈಸಲಿದೆ.
- ೧೯೯೫–೧೯೯೮ ಲಿಟಲ್ವುಡ್ಸ್
- ೧೯೯೯–೨೦೦೨ AXA
- ೨೦೦೩–೨೦೦೬ ನೇಷನ್ವೈಡ್
- ೨೦೦೬–೨೦೧೦ E.ON
ದೈತ್ಯ-ಸಂಹಾರಿಗಳು
ಬದಲಾಯಿಸಿಅಗ್ರ-ಪಟ್ಟಿಗೆ ಸೇರದ ಕೆಳಕಂಡ ವಿಜೇತರನ್ನು ಒತ್ತಟ್ಟಿಗೆ ಇಟ್ಟು ನೋಡುವುದಾದರೆ, FA ಕಪ್ ಕೆಳ-ಕ್ರಮಾಂಕದ ತಂಡಗಳು ಉನ್ನತ ವಿಭಾಗದ ಪ್ರತಿಸ್ಪರ್ಧಿಗಳನ್ನು ಸೋಲಿಸಿ "ದೈತ್ಯ-ಸಂಹಾರಿಗಳು" ಎಂದೆನಿಸಿಕೊಳ್ಳುವ ದೀರ್ಘಕಾಲೀನ ಸಂಪ್ರದಾಯವನ್ನು ಹೊಂದಿದೆ.[೧೧] ಹೀಗೆ ನಡೆಯುವುದು ಸಾಧಾರಣವೆನಿಸಿದರೂ (ನಾಲ್ಕು ವರ್ಷಗಳ ಫಲಿತಾಂಶಗಳ ಮೇಲೆ ಆಧರಿಸಿದ ಅಂಕಿಅಂಶವಾರು ವಿಶ್ಲೇಷಣೆಯೊಂದರ ಪ್ರಕಾರ ನಿರ್ದಿಷ್ಟ ವರ್ಷವೊಂದರಲ್ಲಿ ಉನ್ನತ ವಿಭಾಗದ ತಂಡವೊಂದನ್ನು ಕೆಳಕ್ರಮಾಂಕದ ತಂಡವೊಂದು ಸೋಲಿಸಬಹುದಾದ ಸಾಧ್ಯತೆ ೯೯.೮೫% ಇದ್ದು, ಎರಡು -ವಿಭಾಗಗಳ ಅಂತರದಲ್ಲಿ ಇದು ೪೮.೮%ಕ್ಕೆ ಇಳಿಕೆಯಾದರೆ ಮೂರು-ವಿಭಾಗಗಳ ಅಂತರದಲ್ಲಿ ೩೯.೨೮%ಕ್ಕೆ ಇಳಿದಿತ್ತು,[೧೨] "ಬಲಿಪಶುವು" ಅಗ್ರ ಪ್ರೀಮಿಯರ್ ಲೀಗ್ ತಂಡಗಳಲ್ಲಿ ಒಂದಾಗಿದ್ದರೆ, ಅಥವಾ ದೈತ್ಯ ಸಂಹಾರಿ ತಂಡವು ಲೀಗ್ ವಿಭಾಗಗಳ ಹೊರಗಿನ ತಂಡವಾಗಿದ್ದರೆ ನಿರ್ದಿಷ್ಟವಾಗಿ ಅದನ್ನು ಆಸಕ್ತಿದಾಯಕ/ಸುದ್ದಿಯಾಗಲು ಅರ್ಹವೆನಿಸಿಕೊಳ್ಳುತ್ತದೆ. ತೀರ ಇತ್ತೀಚಿನ ಅಗ್ರ-ಶ್ರೇಣಿಯ ಪ್ರತಿಸ್ಪರ್ಧಿಯನ್ನು ಮಣಿಸಿದ ಲೀಗ್-ಏತರ ತಂಡದ ಉದಾಹರಣೆಯೆಂದರೆ ಕೋವೆಂಟ್ರಿ ಸಿಟಿ/ನಗರ ವಿರುದ್ಧ 1988-89ರಲ್ಲಿ ಸುಟ್ಟಾನ್ ಯುನೈಟೆಡ್'ನ ವಿಜಯ. ವಿವಿಧ ಮಟ್ಟದ ದೈತ್ಯ-ಸಂಹಾರಗಳು ಪ್ರತಿ ವರ್ಷವೂ ನಡೆಯುತ್ತವೆ: ಲೀಗ್ ಪಿರಮಿಡ್/ಗೋಪುರಬಂಧದ ಬಹುತೇಕ ಪ್ರತಿ ಕ್ಲಬ್ ಕೂಡಾ ತನ್ನ ಇತಿಹಾಸದಲ್ಲಿ ಮೆಚ್ಚಿನಿಂದ-ಸ್ಮರಿಸುವ "ದೈತ್ಯ-ಸಂಹಾರ"ದ ಒಂದು ಪಂದ್ಯವನ್ನು ಹೊಂದಿದ್ದು ಕೆಲ ಸಣ್ಣ ಕ್ಲಬ್‌ಗಳು, ಆಕಸ್ಮಿಕವಾಗಿಯೋ ಅಥವಾ ಉದ್ದೇಶಪೂರ್ವಕವಾಗಿಯೋ, ಕೆಲವೇ ವರ್ಷಗಳಲ್ಲಿ ಎರಡು ಅಥವಾ ಹೆಚ್ಚಿನ ಬಾರಿ ಅಂತಹಾ ಗೆಲುವಿನ ನಂತರ "ಕಪ್ ವಿಶೇಷಜ್ಞ"ರೆಂಬ ಪ್ರಖ್ಯಾತಿ ಪಡೆದಿವೆ.[೧೨] ಒಟ್ಟಾರೆಯಾಗಿ, ಯಿಯೋವಿಲ್ ಟೌನ್ ತಂಡವು ಪ್ರಸ್ತುತ ಲೀಗ್ ಪ್ರತಿಸ್ಪರ್ಧಿಗಳ ಎದುರು ಇತರ ಯಾವುದೇ ಲೀಗ್-ಏತರ ತಂಡಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ದಾಖಲೆಯನ್ನು ಹೊಂದಿದೆ.[೧೩] ಈ ದೈತ್ಯ-ಸಂಹಾರಗಳೊಂದಿಗೆ ಸಂಬಂಧಿಸಿದ ಮತ್ತೊಂದು ಸಮಾಚಾರವೇನೆಂದರೆ ತಂಡಗಳು ಸಾಧಾರಣವಾಗಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಾಧನೆ ಮಾಡಿರುವುದು. ಅಗ್ರ ವಿಭಾಗದ ಹೊರಗಿರುವಾಗಲೇ, ಕೆಲ ತಂಡಗಳು FA ಕಪ್‌ಅನ್ನು ಗೆದ್ದಿದ್ದರೂ ಫುಟ್‌ಬಾಲ್ ಲೀಗ್‌ನ ತೃತೀಯ ಮಟ್ಟದ ಯಾವುದೇ ತಂಡವು ಫೈನಲ್ ಪಂದ್ಯದವರೆಗೆ ಪ್ರಗತಿ ಸಾಧಿಸಿಲ್ಲ. ಲೀಗ್-ಏತರ ತಂಡಗಳ ಮಟ್ಟಿಗೆ, ಎಲ್ಲಾ ಅಗ್ರಮಾನ್ಯ ವಿಭಾಗಗಳ ತಂಡಗಳು ಪ್ರವೇಶಿಸುವ ತೃತೀಯ ಸುತ್ತನ್ನು ಪ್ರವೇಶಿಸುವುದೇ ಪ್ರಮುಖ ಸಾಧನೆಯೆಂದು ಪರಿಗಣಿಸಲಾಗುತ್ತದೆ. 2008-09ನೇ ಸಾಲಿನ FA ಕಪ್‌ನ ಸಂದರ್ಭದಲ್ಲಿ, ದಾಖಲೆ ಪ್ರಮಾಣದ ಒಂಬತ್ತು ತಂಡಗಳು ಈ ಸಾಧನೆಯನ್ನು ಮಾಡಿದ್ದರೆ,[೧೪] ಟೋಟ್ಟೆನ್‌ಹ್ಯಾಮ್ ಹಾಟ್ಸ್‌ಪರ್ ದಕ್ಷಿಣ ಲೀಗ್ ಕ್ಲಬ್ ಆಗಿ 1901ರ FA ಕಪ್‌ಅನ್ನು, ಗೆದ್ದ ನಂತರ ಯಾವುದೇ ಲೀಗ್-ಏತರ ತಂಡವು ಐದನೆಯದನ್ನು ಸುತ್ತನ್ನು ದಾಟಿ ಪ್ರಗತಿಯನ್ನು ಪಡೆದಿಲ್ಲ, ಈ ಸಾಧನೆಯನ್ನು ಇತ್ತೀಚೆಗೆ ೧೯೯೪ರಲ್ಲಿ ಕಿಡ್ಡರ್‌ಮಿನ್‌ಸ್ಟರ್ ಹ್ಯಾರಿಯರ್ಸ್ ಮಾಡಿತ್ತು.[೧೫] ಚೇಸ್‌ಟೌನ್ ತಂಡವು ತೃತೀಯ ಸುತ್ತಿನಲ್ಲಿ ಆಡಿದ ಅತಿ ಕೆಳ-ಕ್ರಮಾಂಕದ ತಂಡವಾಗಿದ್ದು, ಕಾರ್ಡಿಫ್ ನಗರ/ಸಿಟಿಯು ೨೦೦೭–೦೮ರ ಸ್ಪರ್ಧೆಯಲ್ಲಿ ಅಂತಿಮ ರನ್ನರ್-ಅಪ್ ಆಗಿತ್ತು. ಪಂದ್ಯವು ೫ ಜನವರಿ ೨೦೦೮ರಂದು ನಡೆದರೆ ಚೇಸ್‌ಟೌನ್ ದಕ್ಷಿಣ ಲೀಗ್ ಪ್ರಥಮ ವಿಭಾಗದ ಮಿಡ್‌ಲ್ಯಾಂಡ್ಸ್ ತಂಡವು ಆಂಗ್ಲ ಫುಟ್‌ಬಾಲ್ ಪಿರಮಿಡ್/ಗೋಪುರಬಂಧದ ಎಂಟನೇ ಶ್ರೇಣಿಯಲ್ಲಿದ್ದುಕೊಂಡು ಆಡುತ್ತಿತ್ತು.[೧೬]
FA ಕಪ್ ವಿಜೇತರು ಹಾಗೂ ಫೈನಲ್ ಪಂದ್ಯಾರ್ಹರು
ಬದಲಾಯಿಸಿಮೂರು ಕ್ಲಬ್‌ಗಳು ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಸತತವಾಗಿ FA ಕಪ್‌ಗಳನ್ನು ಗೆದ್ದಿವೆ: ಅವುಗಳೆಂದರೆ ವಾಂಡರರ್ಸ್ (೧೮೭೨, ೧೮೭೩ ಹಾಗೂ ೧೮೭೬, ೧೮೭೭, ೧೮೭೮), ಬ್ಲಾಕ್‌ಬರ್ನ್ ರೋವರ್ಸ್ (೧೮೮೪, ೧೮೮೫, ೧೮೮೬ ಹಾಗೂ ೧೮೯೦, ೧೮೯೧), ಹಾಗೂ ಟೋಟ್ಟೆನ್‌ಹ್ಯಾಮ್ ಹಾಟ್ಸ್‌ಪರ್ (೧೯೬೧, ೧೯೬೨ ಹಾಗೂ ೧೯೮೧, ೧೯೮೨). ಏಳು ಕ್ಲಬ್‌ಗಳು FA ಕಪ್‌ಅನ್ನು ಲೀಗ್‌ನ ಭಾಗವಾಗಿ ಹಾಗೂ ಕಪ್ ಡಬಲ್ ಆಗಿ ಗೆದ್ದಿವೆ, ಅವುಗಳೆಂದರೆ ಪ್ರೆಸ್ಟನ್ ನಾರ್ತ್ ಎಂಡ್ (೧೮೮೯), ಆಸ್ಟನ್ ವಿಲ್ಲಾ (೧೮೯೭), ಟೋಟ್ಟೆನ್‌ಹ್ಯಾಮ್ ಹಾಟ್ಸ್‌ಪರ್ (೧೯೬೧), ಆರ್ಸೆನಲ್ (೧೯೭೧, ೧೯೯೮,೨೦೦೨), ಲಿವರ್‌ಪೂಲ್ (೧೯೮೬), ಮ್ಯಾಂಚೆಸ್ಟರ್ ಯುನೈಟೆಡ್ (೧೯೯೪, ೧೯೯೬, ೧೯೯೯) ಹಾಗೂ ಚೆಲ್ಸಿಯಾ (೨೦೧೦). ಆರ್ಸೆನಲ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ತಂಡಗಳು ಸತತ ಮೂರು ಡಬಲ್ಸ್‌ಗಳ ದಾಖಲೆಯನ್ನು ಹೊಂದಿವೆ. ಆರ್ಸೆನಲ್ ಮೂರು ಬೇರೆ ಬೇರೆ ದಶಕಗಳಲ್ಲಿ ಪ್ರತಿಯೊಂದರಲ್ಲಿ ಡಬಲ್ ಪಂದ್ಯವನ್ನು (೧೯೭೦ರ ದಶಕ, ೧೯೯೦ರ ದಶಕ, ೨೦೦೦ರ ದಶಕ) ಗೆದ್ದಿದೆ. ಮ್ಯಾಂಚೆಸ್ಟರ್ ಯುನೈಟೆಡ್'ನ ೧೯೯೦ರ ದಶಕದಲ್ಲಿನ ಮೂರು ಡಬಲ್ ಗೆಲುವು ಆ ಸಮಯದಲ್ಲಿ ಆಂಗ್ಲ ಫುಟ್‌ಬಾಲ್‌ನಲ್ಲಿ ಅದರ ಪ್ರಾಬಲ್ಯವನ್ನು ಸೂಚಿಸಿತ್ತು. ೧೯೯೩ರಲ್ಲಿ, ಆರ್ಸೆನಲ್ FA ಕಪ್ ಹಾಗೂ ಲೀಗ್ ಕಪ್‌ಗಳನ್ನು ಒಂದೇ ಕ್ರೀಡಾಋತುವಿನಲ್ಲಿ ಗೆದ್ದ ತಮ್ಮ ಕಡೆಯ ಪ್ರಥಮ ತಂಡವಾಗಿತ್ತು, ಷೆಫೀಲ್ಡ್ ವೆಡ್ನಸ್‌ಡೇ/ವೆನಸ್‌ಡೇ ತಂಡವನ್ನು ಎರಡೂ ಫೈನಲ್ ಪಂದ್ಯಗಳಲ್ಲಿ ೨–೧ ಅಂತರದಲ್ಲಿ ಸೋಲಿಸಿತು. ಲಿವರ್‌ಪೂಲ್ ೨೦೦೧ರಲ್ಲಿ ಇದೇ ಸಾಧನೆಯನ್ನು ಪುನರಾವರ್ತಿಸಿದರೆ, ಚೆಲ್ಸಿಯಾ ಕೂಡಾ ೨೦೦೭ರಲ್ಲಿ ಅದನ್ನೇ ಮಾಡಿತು. 1998–99ರ ಸಾಲಿನಲ್ಲಿ, ಮ್ಯಾಂಚೆಸ್ಟರ್ ಯುನೈಟೆಡ್ 1999ರ ಚಾಂಪಿಯನ್ಸ್ ಲೀಗ್ ಕಿರೀಟವನ್ನು ತಮ್ಮ ಡಬಲ್‌ನ ಸಾಧನೆಗೆ ಸೇರಿಸಿಕೊಂಡಿತು, ಐರೋಪ್ಯ ಟ್ರೆಬಲ್/ತ್ರಿವಳಿ ಎಂದು ಕರೆಯಲಾಗುವ ಸಾಧನೆ ಇದಾಗಿತ್ತು. ಎರಡು ವರ್ಷಗಳ ನಂತರ, 2000–01ರಲ್ಲಿ, ಲಿವರ್‌ಪೂಲ್ FA ಕಪ್, ಲೀಗ್ ಕಪ್ ಹಾಗೂ UEFA ಕಪ್‌ಗಳನ್ನು ಗೆದ್ದು ಕಪ್ ಟ್ರೆಬಲ್‌ಅನ್ನು ಪೂರ್ಣಗೊಳಿಸಿಕೊಂಡಿತು. ಪೋರ್ಟ್ಸ್‌ಮೌತ್ ತಂಡವು FA ಕಪ್‌ಅನ್ನು ಅಂತರವಿಲ್ಲದೇ ದೀರ್ಘಕಾಲದವರೆಗೆ ಮುಂದುವರೆಸಿಕೊಂಡ ಅಸಾಧಾರಣ ಸಾಧನೆಯನ್ನು ಮಾಡಿದ ಕಿರೀಟವನ್ನು ಮುಡಿಗೇರಿಸಿಕೊಂಡಿದೆ; ೧೯೩೯ರಲ್ಲಿ ಕಪ್‌ಅನ್ನು ಗೆದ್ದ ನಂತರ ದ್ವಿತೀಯ ವಿಶ್ವಸಮರದ ಕಾರಣದಿಂದ ೧೯೪೬ರವರೆಗೆ ಮುಂದಿನ ಫೈನಲ್ ಪಂದ್ಯವು ನಡೆಸಲೇ ಇಲ್ಲ. FA ಕಪ್‌ಅನ್ನು ಆಂಗ್ಲೇತರ ತಂಡವು ಒಮ್ಮೆ ಮಾತ್ರವೇ ಗೆಲ್ಲಲು ಸಾಧ್ಯವಾಗಿದೆ. ಕಾರ್ಡಿಫ್ ನಗರ/ಸಿಟಿ ತಂಡವು ಇದನ್ನು ೧೯೨೭ರಲ್ಲಿ ಅವರು ಆರ್ಸೆನಲ್ ತಂಡವನ್ನು ವೆಂಬ್ಲೆಯಲ್ಲಿನ ಫೈನಲ್ ಪಂದ್ಯದಲ್ಲಿ ಪರಾಜಯಗೊಳಿಸಿದಾಗ ಸಾಧಿಸಿದರು. ಅವರು ಈ ಹಿಂದೆ ೧೯೨೫ರಲ್ಲಿ ಫೈನಲ್ ಪಂದ್ಯಕ್ಕೆ ಪ್ರವೇಶಿಸಲು ಸಾಧ್ಯವಾಗಿದ್ದರೂ ಷೆಫೀಲ್ಡ್ ಯುನೈಟೆಡ್‌ನೆದುರಿಗೆ ಸೋತರಲ್ಲದೇ, ಪೋರ್ಟ್ಸ್‌ಮೌತ್‌ನೆದುರು ೨೦೦೮ರಲ್ಲಿ ಮತ್ತೊಂದು ಫೈನಲ್ ಪಂದ್ಯವನ್ನು ಸೋತಿದ್ದರು.
ಅಗ್ರ ಕ್ರಮಾಂಕದ ಹೊರಗಿನ ವಿಜೇತರು
ಬದಲಾಯಿಸಿಫುಟ್ಬಾಲ್ ಲೀಗ್‌ನ ಸ್ಥಾಪನೆಯ ನಂತರ, 1901ರಲ್ಲಿ ಪಡೆದ ಗೆಲುವೇ ಟೋಟ್ಟೆನ್‌ಹ್ಯಾಮ್ ಹಾಟ್ಸ್‌ಪರ್‌ಅನ್ನು ಏಕೈಕ ಲೀಗ್-ಏತರ FA ಕಪ್‌ನ ವಿಜೇತ ತಂಡವನ್ನಾಗಿ ಮಾಡಿತು. ಅವರು ಆಗ ದಕ್ಷಿಣ ಲೀಗ್‌ನಲ್ಲಿ ಆಡುತ್ತಿದ್ದರಲ್ಲದೇ ೧೯೦೮ರಲ್ಲಿ ಮಾತ್ರವೇ ಫುಟ್‌ಬಾಲ್ ಲೀಗ್‌ಗೆ ಆಯ್ಕೆಯಾಗಿದ್ದರು. ಆ ಸಮಯದಲ್ಲಿ ಫುಟ್‌ಬಾಲ್ ಲೀಗ್ ಕೇವಲ ಎರಡು ೧೮-ತಂಡಗಳ ವಿಭಾಗಗಳನ್ನು ಮಾತ್ರವೇ ಹೊಂದಿತ್ತು; ಆಗಿನ ಟೋಟ್ಟೆನ್‌ಹ್ಯಾಮ್'ನ ವಿಜಯವನ್ನು ಆಂಗ್ಲ ಫುಟ್‌ಬಾಲ್ ಪಿರಮಿಡ್/ಗೋಪುರಬಂಧದ (ಪ್ರಸ್ತುತ ಪ್ರಥಮ ಲೀಗ್) ತೃತೀಯ ಮಟ್ಟದಲ್ಲಿನ ತಂಡವು ಗೆಲ್ಲುವುದಕ್ಕೆ ಸಮನಾಗಿತ್ತು. FA ಕಪ್‌ನ ಇತಿಹಾಸದಲ್ಲಿ, ಆಂಗ್ಲ ಫುಟ್‌ಬಾಲ್‌ನ ಅಗ್ರ ಮಟ್ಟದ ಹೊರಗೆ ಆಡುತ್ತಿದ್ದ ಕೇವಲ ಎಂಟು ತಂಡಗಳು ಸ್ಪರ್ಧೆಯನ್ನು ಗೆದ್ದಿದ್ದು, ಅವುಗಳಲ್ಲಿ ತೀರ ಇತ್ತೀಚಿನದೆಂದರೆ ವೆಸ್ಟ್ ಹ್ಯಾಮ್ ಯುನೈಟೆಡ್ ಆಗಿದ್ದು ಅದು ಆರ್ಸೆನಲ್‌ಅನ್ನು ೧೯೮೦ರಲ್ಲಿ ಸೋಲಿಸಿತ್ತು. ೧೯೦೧ರಲ್ಲಿ ಟೋಟ್ಟೆನ್‌ಹ್ಯಾಮ್‌ಅನ್ನು ಹೊರತುಪಡಿಸಿ, ಇವೆಲ್ಲಾ ಕ್ಲಬ್‌ಗಳೆಲ್ಲವೂ ಹಳೆಯ ದ್ವಿತೀಯ ವಿಭಾಗದಲ್ಲಿ ಆಡುತ್ತಿದ್ದವಲ್ಲದೇ, ಇನ್ಯಾವುದೇ ಇತರ ತೃತೀಯ ವಿಭಾಗ ಅಥವಾ ಕೆಳ ಕ್ರಮಾಂಕದ ತಂಡವು ಫೈನಲ್ ಪಂದ್ಯವನ್ನುತಲುಪಿಲ್ಲ. ಅತಿ ಪ್ರಸಿದ್ಧವಾದ ತಲೆಕೆಳಗಾದ ಅಂದಾಜೆಂದರೆ ಸುಂಡರ್‌ಲ್ಯಾಂಡ್, ಲೀಡ್ಸ್ ಯುನೈಟೆಡ್ ತಂಡವನ್ನು ೧–೦ರ ಅಂತರದಿಂದ ೧೯೭೩ರಲ್ಲಿ ಸೋಲಿಸಿದ್ದು. ಲೀಡ್ಸ್ ತಂಡವು ಪ್ರಥಮ ವಿಭಾಗದಲ್ಲಿ ತೃತೀಯ ಸ್ಥಾನದಲ್ಲಿದ್ದರು ಹಾಗೂ ಸುಂಡರ್‌ಲ್ಯಾಂಡ್ ದ್ವಿತೀಯ ಸ್ಥಾನದಲ್ಲಿದ್ದರು.[೧೭] ಮೂರು ವರ್ಷಗಳ ನಂತರ ದ್ವಿತೀಯ ವಿಭಾಗದ ಸೌತಾಂಪ್ಟನ್ ಕೂಡಾ ಪ್ರಥಮ ವಿಭಾಗದ ಮ್ಯಾಂಚೆಸ್ಟರ್ ಯುನೈಟೆಡ್‌ನೆದುರು ಅದೇ ೧–೦ರ ಅಂತರದಲ್ಲಿ ಕಪ್‌ಅನ್ನು ಗೆದ್ದಿತ್ತು. FA ಕಪ್‌ನ ಮತ್ತುಳಿದ ಅಗ್ರೇತರ ವಿಜೇತರೆಂದರೆ ಲೀಗ್‌ನ ಉಪಕ್ರಮದ ನಂತರ FA ಕಪ್‌ಅನ್ನು ಗೆದ್ದ ಪ್ರಪ್ರಥಮ ಅಗ್ರೇತರ ತಂಡವಾದ ೧೮೯೪ರಲ್ಲಿ ಗೆದ್ದ ನಾಟ್ಸ್ ಕೌಂಟಿ; ೧೯೦೮ರಲ್ಲಿ ವಾಲ್ವರ್‌ಹ್ಯಾಂಪ್ಟನ್ ವಾಂಡರರ್ಸ್ ;೧೯೧೨ರಲ್ಲಿ ಬಾರ್ನ್‌ಸ್ಲೇ; ಹಾಗೂ ೧೯೩೧ರಲ್ಲಿ ಗೆದ್ದ ವೆಸ್ಟ್ ಬ್ರಾಮ್ವಿಚ್ ಆಲ್ಬಿಯನ್ ತಂಡಗಳು. ವೆಸ್ಟ್ ಬ್ರಾಮ್ವಿಚ್ ಆಲ್ಬಿಯನ್ FA ಕಪ್‌ಅನ್ನು ಗೆಲ್ಲುವಿಕೆಯನ್ನು ದ್ವಿತೀಯ ಕ್ರಮಾಂಕದಿಂದ ಬಡ್ತಿ ಪಡೆಯುವಿಕೆ ಎರಡನ್ನೂ ಒಂದೇ ಕ್ರೀಡಾಋತುವಿನಲ್ಲಿ ಸಾಧಿಸಿದ ಏಕೈಕ ತಂಡವೆಂಬ ಗರಿಯನ್ನ ಉಳಿಸಿಕೊಂಡಿದೆ. ಇದುವರೆಗೆ FA ಕಪ್ ಫೈನಲ್ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಹೊರಗಿನದ್ದಾಗಿರುವ ಎರಡೂ ತಂಡಗಳು ಸೆಣಸಿಲ್ಲ. ಅನನ್ಯವಾಗಿ, ೨೦೦೭–೦೮ರಲ್ಲಿ, ನಾಲ್ಕು ಸೆಮಿಫೈನಲ್ ತಲುಪಿದ ತಂಡಗಳಲ್ಲಿ ಮೂರು (ಬಾರ್ನ್‌ಸ್ಲೇ, ಕಾರ್ಡಿಫ್ ನಗರ/ಸಿಟಿ ಹಾಗೂ ವೆಸ್ಟ್ ಬ್ರಾಮ್ವಿಚ್ ಆಲ್ಬಿಯನ್), ಅಗ್ರ ಕ್ರಮಾಂಕದ ಹೊರಗಿನವಾಗಿದ್ದು, ಪೋರ್ಟ್ಸ್‌ಮೌತ್ ಅದನ್ನು ಗೆದ್ದಿತ್ತು.[೧೮]
ಮಾಧ್ಯಮ ಪ್ರಸಾರ
ಬದಲಾಯಿಸಿFA ಕಪ್ ಫೈನಲ್ ಪಂದ್ಯವು UKಯ ಭೌಮಿಕ ಕಿರುತೆರೆ ಪ್ರಸಾರದಲ್ಲಿ ಲೈವ್ ಪ್ರಸಾರಕ್ಕೆ ಮೀಸಲಿರಿಸಿದ ಹತ್ತು ITC ವಿಧೇಯಕದಡಿ ಕ್ರೀಡೆಗಳು ಹಾಗೂ ಇತರೆ ದಾಖಲಿತ ವಿದ್ಯಮಾನಗಳಲ್ಲಿ ಒಂದಾಗಿದೆ. ಆಗಸ್ಟ್ ೨೦೦೮ರಿಂದ ಜೂನ್ ೨೦೧೨ರವರೆಗೆ, FA ಕಪ್ ಪಂದ್ಯಗಳನ್ನು ITV1 ಸಂಸ್ಥೆಯು ಇಂಗ್ಲೆಂಡ್ ಹಾಗೂ ವೇಲ್ಸ್‌ಗಳಾದ್ಯಂತ ಲೈವ್ ಆಗಿ ಪ್ರಸಾರ ಮಾಡುತ್ತಿದ್ದರೆ, UTV ಉತ್ತರ ಐರ್‌ಲೆಂಡ್‌ನಲ್ಲಿ ಪ್ರಸಾರ ಮಾಡುತ್ತದೆ. ITV ಪ್ರತಿ ಕ್ರೀಡಾಋತುವಿಗೆ ಹದಿನಾರು FA ಕಪ್ ಪಂದ್ಯಗಳಂತೆ, ಪ್ರಥಮ ಪಿಕ್ ಲೈವ್ ಪಂದ್ಯಗಳು ಸೇರಿದಂತೆ ಸ್ಪರ್ಧೆಯ ೧ರಿಂದ ೬ರವರೆಗಿನ ಸುತ್ತುಗಳಲ್ಲಿ ಹಾಗೂ ಒಂದು ಸೆಮಿಫೈನಲ್ ಪಂದ್ಯಗಳ ಅನನ್ಯ ಲೈವ್ ಪ್ರಸಾರವನ್ನು ಪ್ರದರ್ಶಿಸುತ್ತದೆ. ಫೈನಲ್ ಪಂದ್ಯವನ್ನು ITV೧ರಲ್ಲಿ ಕೂಡಾ ಲೈವ್ ಆಗಿ ಪ್ರದರ್ಶಿಸಲಾಗುತ್ತದೆ. ಅದೇ ಒಪ್ಪಂದದಡಿಯಲ್ಲಿ, ಸೆಟಾಂಟಾ ಸ್ಪೋರ್ಟ್ಸ್ ವಾಹಿನಿಯು ಮೂರು ಪಂದ್ಯಗಳು ಹಾಗೂ ಒಂದು ಮರುಪಂದ್ಯವನ್ನು ಮೂರನೇ ಸುತ್ತಿನಿಂದ ಐದನೆಯದರವರೆಗೆ ಪ್ರತಿ ಸುತ್ತನ್ನು, ಎರಡು ಕ್ವಾರ್ಟರ್-ಫೈನಲ್ ಪಂದ್ಯ, ಒಂದು ಸೆಮಿಫೈನಲ್ ಪಂದ್ಯ ಹಾಗೂ ಫೈನಲ್ ಪಂದ್ಯಗಳನ್ನು ಪ್ರಸಾರ ಮಾಡುತ್ತದೆ. ಈ ವಾಹಿನಿಯು ITV'ಯ ಪಂದ್ಯಗಳನ್ನು ಸ್ಕಾಟ್‌ಲೆಂಡ್‌ಗೆ ಪ್ರತ್ಯೇಕವಾಗಿ, ITVಯ ಸ್ಕಾಟ್‌ಲೆಂಡ್‌ನಲ್ಲಿನ ಫ್ರಾಂಚೈಸಿ ಸಂಸ್ಥೆ, STVಯು FA ಕಪ್ ಪಂದ್ಯಗಳನ್ನು ಪ್ರದರ್ಶಿಸದಿರಲು ನಿರ್ಧರಿಸಿದ ನಂತರ ಪ್ರಸಾರ ಮಾಡಿತು. ಜೂನ್ ೨೦೦೯ರಲ್ಲಿ ಸೆಟಾಂಟಾ ವಾಹಿನಿಯು ಆಡಳಿತದ ವಿಚಾರದಲ್ಲಿ ಪ್ರವೇಶಿಸಿದುದರ ಪರಿಣಾಮವಾಗಿ FA ಸೆಟಾಂಟಾ'ದ FA ಕಪ್ ಹಾಗೂ ಇಂಗ್ಲೆಂಡ್ ಅಂತರರಾಷ್ಟ್ರೀಯ ಪಂದ್ಯಗಳನ್ನು ಪ್ರಸಾರದ ಒಪ್ಪಂದವನ್ನು ಕೊನೆ/ರದ್ದುಗೊಳಿಸಿತು.[೧೯] ಅಕ್ಟೋಬರ್ ೨೦೦೯ರಲ್ಲಿ, FA ಸಂಸ್ಥೆಯು ITV ಸಂಸ್ಥೆಯು ಪ್ರಥಮ ಹಾಗೂ ದ್ವಿತೀಯ ಸುತ್ತುಗಳಲ್ಲಿ ITV೧ ವಾಹಿನಿಯಲ್ಲಿ ಹೆಚ್ಚುವರಿ ಪಂದ್ಯವನ್ನು ಪ್ರದರ್ಶಿಸುತ್ತದೆಂದು, ಹಾಗೂ ಮರುಪಂದ್ಯವೊಂದನ್ನು ITV4ನಲ್ಲಿ ಪ್ರದರ್ಶಿಸಲಾಗುತ್ತದೆಂದು ಘೋಷಿಸಿತು. ಉಕ್ರೇನ್ ಹಾಗೂ ಇಂಗ್ಲೆಂಡ್‌ಗಳ ನಡುವಿನ 2010ರ ವಿಶ್ವ ಕಪ್ ಅರ್ಹತಾ ಪಂದ್ಯದ ಹಾಗೆ ಪ್ರಥಮ ಎರಡು ಸುತ್ತುಗಳ ಒಂದು ಪಂದ್ಯ ಹಾಗೂ ಮರುಪಂದ್ಯವೊಂದನ್ನು FA ಜಾಲತಾಣದಲ್ಲಿ ಉಚಿತವಾಗಿ ಪ್ರದರ್ಶಿಸಲಾಗುತ್ತದೆಂದು ಘೋಷಿಸಿತು.[೨೦] ಓಲ್ಡ್‌ಹ್ಯಾಮ್ ಅಥ್ಲೆಟಿಕ್ ಹಾಗೂ ಲೀಡ್ಸ್ ಯುನೈಟೆಡ್‌ಗಳ ನಡುವಿನ ೨೦೦೯-೧೦ರ ಸಾಲಿನಲ್ಲಿ ನಡೆದ ಪ್ರಥಮ ಸುತ್ತಿನ ಪಂದ್ಯವೇ ಆನ್‌ಲೈನ್‌ನಲ್ಲಿ ಲೈವ್ ಆಗಿ ಪ್ರದರ್ಶಿತವಾದ ಪ್ರಥಮ FA ಕಪ್ ಪಂದ್ಯವಾಗಿದೆ.[೨೧]
ಅನೇಕರು ಬಿಸ್ಕೈಬಿ/BSkyB ವಾಹಿನಿಯು ಉಳಿದ FA ಕಪ್ ಪಂದ್ಯಗಳಲ್ಲಿ ಕೆಲವನ್ನು ೨೦೦೯/೧೦ರ ಕ್ರೀಡಾಋತುವಿನ ಉಳಿದ ಭಾಗದಲ್ಲಿ ಪ್ರದರ್ಶಿಸಲು ಸೆಮಿಫೈನಲ್ ಪಂದ್ಯವೊಂದನ್ನು ಒಳಗೊಂಡ ಹಾಗೂ ಫೈನಲ್ ಪಂದ್ಯದ ಹಂಚಿದ ಪ್ರಸಾರ ಹಕ್ಕುಗಳನ್ನೊಳಗೊಂಡ ಒಪ್ಪಂದದಲ್ಲಿ ಭಾಗವಹಿಸಲು ಇಚ್ಛಿಸಬಹುದೆಂದು ಭಾವಿಸಿದ್ದರು.[೨೨] ಸೆಟಾಂಟಾ ಮೊದಲಿಗೆ ಹೊಂದಿದ್ದ FA ಕಪ್‌ನ ಪ್ರಸಾರದ ಪ್ಯಾಕೇಜ್‌ಅನ್ನು ೨೦೧೦/೧೧ನೇ ಸಾಲಿನ ಕ್ರೀಡಾಋತುವಿನಿಂದ ESPN ಮುಂದುವರೆಸಲಿದೆ.[೨೩] BBC ರೇಡಿಯೋ ಫೈವ್ ಲೈವ್ ವಾಹಿನಿಯು ಅನೇಕ ಸಂಪೂರ್ಣ ಲೈವ್ ವೀಕ್ಷಕವಿವರಣೆಯನ್ನು BBCಯ ಸ್ಥಳೀಯ ರೇಡಿಯೋ ಕೇಂದ್ರಗಳಲ್ಲಿ ಪ್ರಸಾರವಾಗುವ ಹೆಚ್ಚುವರಿ ವೀಕ್ಷಕವಿವರಣೆಗಳೊಂದಿಗೆ ರೇಡಿಯೋ ಪ್ರಸಾರವನ್ನು ಕೈಗೊಳ್ಳುತ್ತದೆ. ೨೦೦೮/೦೯ರ ಕ್ರೀಡಾಋತುವಿನವರೆಗೆ, BBC ಹಾಗೂ ಸ್ಕೈ ಸ್ಪೋರ್ಟ್ಸ್ ವಾಹಿನಿಗಳು ಕಿರುತೆರೆಯ ಪ್ರಸಾರದ ಹಕ್ಕನ್ನು ಹಂಚಿಕೊಂಡು ಪ್ರಸಾರ ಮಾಡುತ್ತವಲ್ಲದೇ, BBC ಮೊದಲಿನ ಸುತ್ತುಗಳ ಮೂರು ಪಂದ್ಯಗಳನ್ನು ಪ್ರಸಾರ ಮಾಡುತ್ತದೆ. ಸ್ಕೈ ವಾಹಿನಿಯಿಂದ ಬೇರೆ ವಾಹಿನಿಗೆ ಹೋಗುವ ನಿರ್ಧಾರವನ್ನು ಕೆಲ ವಿಶ್ಲೇಷಕರು ವಿರೋಧಿಸಿದರಲ್ಲದೇ, ನಿರ್ದಿಷ್ಟವಾಗಿ, BBCಯು ಸಾರ್ವಜನಿಕರ ದೃಷ್ಟಿಯಲ್ಲಿ FA ಕಪ್‌ಅನ್ನು ಶಿಥಿಲಗೊಳಿಸುತ್ತಿದೆ ಎಂದು ದೂರಿದ್ದಾರೆ.[೨೪] ೨೦೦೮–೦೯ರ ಸಾಲಿನ FA ಕಪ್‌ಗಳ ಮುಂಚಿನ ಸುತ್ತುಗಳನ್ನು ಪ್ರಥಮ ಬಾರಿ ITV'ಯ ಆನ್‌ಲೈನ್ ಪ್ರತಿನಿಧಿ ITV ಲೋಕಲ್ ವಾಹಿನಿಯಲ್ಲಿ ಪ್ರಸಾರ ಮಾಡಲಾಯಿತು. ವಾಂಟೇಜ್ ಟೌನ್ ಹಾಗೂ ಬ್ರಾಡಿಂಗ್ ಟೌನ್‌ಗಳ ನಡುವಿನ ಕ್ರೀಡಾಋತುವಿನ ಪ್ರಥಮ ಪಂದ್ಯವನ್ನು, ಲೈವ್ ಆಗಿ ಆನ್‌ಲೈನ್‌ನಲ್ಲಿ ಪ್ರಸಾರಿಸಲಾಗುತ್ತದೆ. ಪ್ರತಿ ಸುತ್ತಿನ ಎಂಟು ಪಂದ್ಯಗಳ ಪ್ರಮುಖ ಕ್ಷಣಗಳ ಪ್ರಸಾರವನ್ನು ITV ಲೋಕಲ್ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.[೨೫][೨೬] ITV ಲೋಕಲ್ ವಾಹಿನಿಯ ಸೇವೆಯ ಅಂತ್ಯವಾಗಿರುವುದರಿಂದ, ಈ ಪ್ರಸಾರವು ಮುಂದುವರೆಯುವುದೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. FA ಸಂಸ್ಥೆಯು ಸಾಗರೋತ್ತರ ಹಕ್ಕುಗಳನ್ನು ಸ್ಥಳೀಯ ಒಪ್ಪಂದಕ್ಕಿಂತ ಪ್ರತ್ಯೇಕವಾಗಿ ಮಾರಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ, FA ಕಪ್ ಪಂದ್ಯಗಳನ್ನು ಸೆಟಾಂಟಾ ಸ್ಪೋರ್ಟ್ಸ್ ಆಸ್ಟ್ರೇಲಿಯಾ ವಾಹಿನಿಯು ಪ್ರಸಾರ ಮಾಡುತ್ತವಲ್ಲದೇ, ಫೈನಲ್ ಪಂದ್ಯವನ್ನು SBS ವಾಹಿನಿಯಲ್ಲಿ ಕೂಡಾ ಪ್ರಸಾರಿಸಲಾಗುತ್ತದೆ. ಅದೇ ಸಂದರ್ಭದಲ್ಲಿ ಸೆಟಾಂಟಾ ಸ್ಪೋರ್ಟ್ಸ್ ಉತ್ತರ ಅಮೇರಿಕಾ ಹಾಗೂ ಫಾಕ್ಸ್ ಸಾಕರ್ ವಾಹಿನಿಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಸಾರ ಹಕ್ಕುಗಳನ್ನು ವಿಭಜಿಸಿಕೊಂಡಿದೆ. ಸೂಪರ್‌ಸ್ಪೋರ್ಟ್ ವಾಹಿನಿಯು ಪಂದ್ಯಾವಳಿಯನ್ನು ಆಫ್ರಿಕಾದಲ್ಲಿ, ಹಾಗೂ ಸೋನಿ ಪಿಕ್ಸ್‌ಗಳು ಭಾರತದಲ್ಲಿ ಪ್ರಸಾರಿಸುತ್ತವೆ.
ಇವನ್ನೂ ನೋಡಿ
ಬದಲಾಯಿಸಿ- FA ಕಪ್ ಫೈನಲ್ ಪಂದ್ಯ
- FA ಕಪ್ ಸೆಮಿಫೈನಲ್ ಪಂದ್ಯಗಳು
- FA ಕಪ್ ವಿಜೇತ ತಂಡಗಳ ನಿರ್ವಾಹಕರುಗಳ ಪಟ್ಟಿ
- FA ಕಪ್ ದಾಖಲೆಗಳು
ಆಕರಗಳು
ಬದಲಾಯಿಸಿ- ↑ ದ ಓಲ್ಡೆಸ್ಟ್ ಕಪ್ ಕಾಂಪೆಟಿಷನ್ [sic] ಇನ್ ದ ವರ್ಲ್ಡ್ ಈಸ್ ಅಟ್ ದ ಫೋರ್ತ್ ರೌಂಡ್ ಸ್ಟೇಜ್, ವೈಲ್ ಮ್ಯಾಂಚೆಸ್ಟರ್ ಯುನೈಟೆಡ್ ಆರ್ ಇನ್ ಪ್ರೀಮಿಯರ್ ಲೀಗ್ ಆಕ್ಷನ್. RTÉ. ಜನವರಿ ೨೨, ೨೦೧೦ರಂದು ಪಡೆದಿದ್ದು.
- ↑ "TheFA.com - Hammers nail Fulham". The FA. Retrieved 2005-03-05.
- ↑ "UEFA ಯೂರೋಪಾ ಲೀಗ್ 2009/10ರ ಸಾಲಿನ ಸ್ಪರ್ಧೆಯ ಮಾದರಿ". Archived from the original on 2010-01-23. Retrieved 2010-06-17.
- ↑ ಬೆಲ್‌ಫಾಸ್ಟ್ ಟೆಲಿಗ್ರಾಫ್ 3 ಡಿಸೆಂಬರ್ 2009
- ↑ 2008/9ರ ಸಾಲಿಗೆ ದಾಖಲೆ ಸಂಖ್ಯೆಯ ಸ್ಪರ್ಧಿಗಳು
- ↑ "Wembley Stadium to open next year". BBC. 2006-10-19. Retrieved 2007-03-17.
- ↑ "Football supporters hail FA Cup semi final decision". FSF. Archived from the original on 2007-02-08. Retrieved 2007-02-08.
{{cite web}}
: CS1 maint: bot: original URL status unknown (link) - ↑ ದ ಸಂಡೇ ಟೈಮ್ಸ್ ಇಲ್ಲಸ್ಟ್ರೇಟೆಡ್ ಹಿಸ್ಟರಿ ಆಫ್ ಫುಟ್‌ಬಾಲ್ ರೀಡ್ ಇಂಟರ್‌ನ್ಯಾಷನಲ್ ಬುಕ್ಸ್ ಲಿಮಿಟೆಡ್. ೧೯೯೬. p೧೧. ISBN ೧-೮೫೬೧೩-೩೪೧-೯
- ↑ "Toye trophies page". Archived from the original on 2010-05-22. Retrieved 2010-06-17.
- ↑ FA ಹೊಸ ಕಪ್ ಪ್ರಾಯೋಜಕತ್ವವನ್ನು ಘೋಷಿಸುತ್ತಿದೆ
- ↑ F.A. ಕಪ್ ಜಯಂಟ್ ಕಿಲ್ಲರ್ಸ್ ಟೈಗರ್, ಕೆರೋಲಿನಾ. ಬ್ಲೀಚರ್ ವರದಿ. ೨೦-೦೧-೧೦ರಂದು ಪಡೆಯಲಾಯಿತು
- ↑ ೧೨.೦ ೧೨.೧ https://www.timesonline.co.uk/article/೦,,೭೯೭೩-೧೪೩೦೨೨೫,೦೦.html[ಶಾಶ್ವತವಾಗಿ ಮಡಿದ ಕೊಂಡಿ]
- ↑ TheFA.com - ಟ್ವೆಂಟಿ ಟು ಟ್ಯಾಕಲ್ ಆನ್ಸರ್ಸ್
- ↑ Kessel, Anna (2009-01-03). "Non-league presence in third round of FA Cup breaks all-time record". The Guardian. London. Retrieved 2010-05-02.
- ↑ "Ask Albert - Number 8". BBC News. 2000-12-07. Retrieved 2010-05-02.
- ↑ ಚೇಸ್‌ಟೌನ್ 1–3 ಕಾರ್ಡಿಫ್.
- ↑ "TheFA.com - Shocks do happen". The FA. Retrieved 2005-04-06.
- ↑ http://news.bbc.co.uk/sport೧/hi/football/fa_cup/೭೨೮೬೩೬೪.stm[ಶಾಶ್ವತವಾಗಿ ಮಡಿದ ಕೊಂಡಿ] FA Cup semi-final draw ೨೦೦೮
- ↑ "FA face Setanta shortfall". BBC News. 2009-06-23. Retrieved 2009-08-12.
- ↑ "FA Cup to be broadcast Free-to-Air". Retrieved 2009-10-27.
- ↑ "Latics to face Leeds in Cup". Retrieved 2009-10-27.
- ↑ "FA Cup and England TV rights up for grabs as Setanta falls into administration and prepares to disappear from our screens". Daily Mail. 23 June 2009. Retrieved 2009-12-30.
- ↑ Gibson, Owen (7 December 2009). "ESPN secures rights to show FA Cup matches from next season". The Guardian. London. Retrieved 2009-12-30.
- ↑ EXCLUSIVE: E.ON ಆಪ್ಟ್ ಎಗೇನ್ಸ್‌ಟ್ ಎಕ್ಸ್‌ಟೆಂಡಿಂಗ್ FA ಕಪ್ ಸ್ಪಾನ್ಸರ್‌ಷಿಪ್ ಡೀಲ್ | ಮೇಲ್ ಆನ್‌ಲೈನ್
- ↑ "Watch The FA Cup online".
- ↑ "Cup tie live online".
ಬಾಹ್ಯ ಕೊಂಡಿಗಳು
ಬದಲಾಯಿಸಿ- ದ FA ಕಪ್ ಆರ್ಚೀವ್ – ಇಂಗ್ಲೆಂಡ್'ನ ಅಧಿಕೃತ ಫುಟ್‌ಬಾಲ್ ಅಸೋಸಿಯೇಷನ್ ಜಾಲತಾಣ, ಎಲ್ಲಾ ಅರ್ಹತಾ ಸುತ್ತುಗಳ ವಿವರಗಳೂ ಸೇರಿದಂತೆ ದಿನಾಂಕಗಳೊಂದಿಗೆ ಫಲಿತಾಂಶಗಳು
- ಅಧಿಕೃತ FA ಕಪ್ ಜಾಲತಾಣ
- ಥಾಮಸ್ ಫಾಟ್ಟೊರಿನಿ Ltd. 1911ರ FA ಕಪ್‌ನ ನಿರ್ಮಾತೃಗಳು – ೧೯೧೧ರ FA ಕಪ್ ಹಾಗೂ ಇತರೆ ಕ್ರೀಡಾ ಪ್ರಶಸ್ತಿಗಳ ನಿರ್ಮಾತೃಗಳು
- FA ಕಪ್ ಗೋಯಿಂಗ್ ಅಂಡರ್ ದ ಹ್ಯಾಮರ್ – ದ್ವಿತೀಯ ಪ್ರಶಸ್ತಿಯ ಮಾರಾಟದ ಬಗ್ಗೆ BBC News ವಾಹಿನಿಯ ವರದಿ