F-1 ವೀಸಾ (ರಹದಾರಿ ಅನುಮತಿ ಪತ್ರ)

F-1 ವೀಸಾ ವು ವಲಸೆಯಲ್ಲದ, ಸಂಪೂರ್ಣ ಅವಧಿಯ ವಿದ್ಯಾರ್ಥಿ ವೀಸಾವಾಗಿದೆ, ಇದು ವಿದೇಶಿಗರಿಗೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಅವಕಾಶ ಮಾಡಿಕೊಡುತ್ತದೆ. ಈ F-2 ವೀಸಾ ವು F-1 ವಿದ್ಯಾರ್ಥಿಯ ಸಂಗಾತಿ (ಜೊತೆಗಾರರು) ಮತ್ತು ಮಕ್ಕಳಿಗಿರುವ ವೀಸಾವಾಗಿದೆ.

ವಿವರಣೆ

ಬದಲಾಯಿಸಿ

F ವೀಸಾವು ಶೈಕ್ಷಣಿಕ ವಿದ್ಯಾಭ್ಯಾಸ ಮತ್ತು/ಅಥವಾ ಭಾಷಾ ತರಬೇತಿಯನ್ನು ಪಡೆಯಲು ಇಚ್ಛಿಸುವವರಿಗೆ ಮೀಸಲಾದ, ಕಾಯಂ ಆಗಿ ನೆಲೆ ನಿಲ್ಲಲು-ಅವಕಾಶ ಕೊಡದ ವೀಸಾವಾಗಿದೆ. F-1 ವೀಸಾಗಳನ್ನು ಕೇವಲ ಶೈಕ್ಷಣಿಕ ಸಂಸ್ಥೆಗಳ ಮೂಲಕ ಮಾತ್ರ ನೀಡಲಾಗುತ್ತದೆ. F-2 ವೀಸಾಗಳನ್ನು F-1 ವಿದ್ಯಾರ್ಥಿಗಳ ಅವಲಂಬಿಗಳಿಗೆ ಕೊಡಲಾಗುತ್ತದೆ. F-2 ವೀಸಾ-ಹೊಂದಿರುವವರು ಯಾವುದೇ ರೀತಿಯ ವೇತನ ಪಡೆಯುವ ಉದ್ಯೋಗ ಹೊಂದುವುದನ್ನು ನಿಷೇಧಿಸಲಾಗಿದೆ. ಆದರೆ ಅಪ್ರಾಪ್ತ ವಯಸ್ಕ ಮಕ್ಕಳು ಸಾರ್ವಜನಿಕ ಶಾಲೆಗಳನ್ನು ಸೇರಬಹುದು. F-3 ವೀಸಾಗಳನ್ನು ಮೆಕ್ಸಿಕೊ ಅಥವಾ ಕೆನಡಾದ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ. ಅವರು ಶಾಲೆಗೆ ಹೋಗುವಾಗ ತಮ್ಮ ಮೂಲ ರಾಷ್ಟ್ರದಲ್ಲಿ ನೆಲೆಸಿದ್ದಾಗ ಅವರಿಗೆ ಇದನ್ನು ಕೊಡಲಾಗುತ್ತದೆ. "ಬಾರ್ಡರ್ ಕಮ್ಯೂಟರ್ಸ್(ಎಲ್ಲೆಯ ಪ್ರಯಾಣಿಕರು)" ಎಂದು ಕರೆಯಲ್ಪಡುವ ಈ ವೀಸಾ -ಹೊಂದಿರುವವರು ಅರೆಕಾಲಿಕ ಅಥವಾ ಪೂರ್ಣಾವಧಿಯಲ್ಲಿ ಅಧ್ಯಯನ ಮಾಡಬಹುದು. ಆದರೆ F-1 ವೀಸಾ-ಹೊಂದಿರುವವರಿಗೆ ಭಿನ್ನವಾಗಿ, ಇವರಿಗೆ ಶಾಲಾ-ಕ್ಯಾಂಪಸ್‌ನಲ್ಲಿ ಕೆಲಸ ಮಾಡಲು ಅವಕಾಶವಿರುವುದಿಲ್ಲ. ಆದರೂ ಇವರು ಕರಿಕ್ಯುಲರ್ ಪ್ರಾಕ್ಟಿಕಲ್ ಟ್ರೈನಿಂಗ್‌ಗೆ ಅನುಮತಿ ಪಡೆದಿರುತ್ತಾರೆ; (ವೃತ್ತಿಜೀವನದ ಪ್ರಾಯೋಗಿಕ ತರಬೇತಿ) ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ಅನ್ನು ಪದವಿಯ ನಂತರ ಮಾತ್ರ ಬಳಸಲಾಗುತ್ತದೆ (ಕೆಳಗೆ ನೋಡಿ).

ಉದ್ಯೋಗ

ಬದಲಾಯಿಸಿ

ಒಂದು ವಾರಕ್ಕೆ ೨೦ ಅಥವಾ ಅದಕ್ಕಿಂತ ಕಡಿಮೆ ಗಂಟೆಗಳ ಕಾಲ ಕ್ಯಾಂಪಸ್‌ನಲ್ಲೇ ಉದ್ಯೋಗ ಮಾಡುವ ಅವಕಾಶ ಹೊಂದಿರುವುದನ್ನು ಹೊರತು ಪಡಿಸಿ F-1 ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ USನಲ್ಲಿ ಸಿಟಿಜನ್‌ಶಿಪ್ ಆಂಡ್ ಇಮಿಗ್ರೇಶನ್ ಸರ್ವಿಸಸ್ (USCIS)ನ ಪ್ರಮಾಣೀಕರಣ ವಿಲ್ಲದೆ ಕೆಲಸ ಮಾಡಲು ಅನುಮತಿ ಇರುವುದಿಲ್ಲ. ಆದರೆ USCIS ಕರಿಕ್ಯುಲರ್ ಪ್ರಾಕ್ಟಿಕಲ್ ಟ್ರೈನಿಂಗ್ (CPT) ಮತ್ತು ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ (OPT)ಗಾಗಿ ಉದ್ಯೋಗ ಮಾಡುವ ಅನುಮತಿ ನೀಡಬಹುದು. ವಿದ್ಯಾರ್ಥಿಗಳು ಒಟ್ಟು ೪೦ ತಿಂಗಳ ಕಾಲ ಕಾರ್ಯಾಗಾರ ಶಿಬಿರ ರೂಪದ ತರಬೇತಿಯಲ್ಲಿ (ಉದಾ. ಇಂಟರ್ನ್‌ಶಿಪ್) ಕೆಲಸ ಮಾಡುವ ಅವಕಾಶ ಹೊಂದಿರುತ್ತಾರೆ. ಇದನ್ನು ಕರಿಕ್ಯುಲರ್ ಪ್ರಾಕ್ಟಿಕಲ್ ಟ್ರೈನಿಂಗ್ (CPT) ಮತ್ತು ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ (OPT) ಒದಗಿಸುತ್ತವೆ. ಈ ನಡುವೆ ೨೦೦೮ ಏಪ್ರಿಲ್ ೮ರಂದು ಆದೇಶವೊಂದು ಅಂಗೀಕಾರವಾಯಿತು. ಇದು STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ)ನ ವಿದ್ಯಾರ್ಥಿಗಳಿಗೆ OPT ಅಡಿಯಲ್ಲಿ ೨೯ ತಿಂಗಳ ಕಾಲ ಕಾನೂನುಸಮ್ಮತವಾಗಿ ಕೆಲಸ ಮಾಡಲು ಅವಕಾಶ ನೀಡಿದೆ.[] OPT ಅಡಿಯಲ್ಲಿ ಕೆಲಸ ಮಾಡುವಾಗ F-1 ವಿದ್ಯಾರ್ಥಿಯು 90 ದಿನಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡದಿರುವುದಕ್ಕೆ(ರಜಾ-ತೆಗೆದುಕೊಳ್ಳಲು) ಅವಕಾಶವಿರುವುದಿಲ್ಲ.[]

ತೆರಿಗೆಗಳು

ಬದಲಾಯಿಸಿ

F-1 ವೀಸಾ-ಹೊಂದಿರುವವರು ಸೀಮಿತ ಅವಧಿಗೆ FICA ತೆರಿಗೆಗಳು, ಸಾಮಾಜಿಕ ಭದ್ರತೆ ಮತ್ತು ಮೆಡಿಕೇರ್(ಆರೋಗ್ಯ ವಿಮೆ)ನಿಂದ ವಿನಾಯಿತಿ ಪಡೆದಿರುತ್ತಾರೆ.[] ಆದರೆ ಅನ್ವಯವಾದರೆ ಅವರು ಫೆಡರಲ್ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಐದು ಅಥವಾ ಅದಕ್ಕಿಂತ ಕಡಿಮೆ ವರ್ಷಗಳ ಕಾಲ USAಯಲ್ಲಿ ಇದ್ದುಕೊಂಡು ಫೆಡರಲ್ ಆದಾಯ ತೆರಿಗೆಗಳನ್ನು ಪಾವತಿಸುವ F-1 ವಿದ್ಯಾರ್ಥಿಗಳು ನಿವಾಸಿಗರಲ್ಲದ 1040NR ಅಥವಾ 1040NR-EZ ತೆರಿಗೆ ಫಾರ್ಮ್‌ಗಳನ್ನು ಬಳಸಬೇಕಾಗುತ್ತದೆ. ಕೆಲವು F-1 ವೀಸಾ-ಹೊಂದಿರುವವರು ಅವರ ಮೂಲ ರಾಷ್ಟ್ರದ ಆಧಾರದಲ್ಲಿ ಕೆಲವು ತೆರಿಗೆ ಒಪ್ಪಂದ ಸೌಕರ್ಯಗಳನ್ನು ಹೊಂದುವ ಅವಕಾಶವಿರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. ೨೦೦೮ ಏಪ್ರಿಲ್ ೮ ರಂದು, DHS ಅರ್ಹ ವಿದ್ಯಾರ್ಥಿಗಳಿಗೆ ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್‌ನ ಅವಧಿಯ ವಿಸ್ತರಣೆಯನ್ನು ಪ್ರಕಟಿಸಿತು."Student Visas". US Dept of State. Archived from the original on 2011-04-01. Retrieved 2010-09-28.
  2. ಪೀರಿಯಡ್ಸ್ ಆಫ್ ಅನ್ಎಂಪ್ಲಾಯ್ಮೆಂಟ್ ಡ್ಯೂರಿಂಗ್ OPT ಪುಟ 22 "press_opt_ifr.pdf" (PDF). DHS. Archived from the original (PDF) on 2009-05-30. Retrieved 2010-09-28.
  3. ವೇಜಸ್ ಪೈಡ್ ಟು ಎಂಪ್ಲಾಯ್ಸ್ - ಗ್ರ್ಯಾಜ್ವೇಟೆಡ್ ವಿದ್‌ಹೋಲ್ಡಿಂಗ್ ಅಂಡರ್ ಪೇ ಫಾರ್ ಪರ್ಸನಲ್ ಸರ್ವಿಸಸ್ ಪರ್ಫಾರ್ಮ್ಡ್."Publication 515". IRS.

ಹೊರಗಿನ ಕೊಂಡಿಗಳು

ಬದಲಾಯಿಸಿ