ಶಂಕರೇಗೌಡ ಎಂದೇ ಪರಿಚಿತರಾದ ಡಾ. ಎಸ್‌. ಸಿ. ಶಂಕರೇಗೌಡರು ಮಂಡ್ಯ ಜಿಲ್ಲೆಯ ಹೆಸರಾಂತ ಚರ್ಮವೈದ್ಯರು. ರೋಗಿಯಿಂದ ₹ ೫ ರೂಪಾಯಿ ಮಾತ್ರ ಶುಲ್ಕ ಪಡೆಯುವುದರಿಂದ ಐದು ರೂಪಾಯಿ ಡಾಕ್ಟ್ರು ಎಂದೇ ಜನಪ್ರಿಯರಾಗಿದ್ದಾರೆ.[]

ಶಂಕರೇಗೌಡ
Born
ಶಿವಳ್ಳಿ, ಮಂಡ್ಯ ತಾಲ್ಲೂಕು, ಕರ್ನಾಟಕ
Occupations
  • ವೈದ್ಯ
  • ರೈತ

ವೈಯಕ್ತಿಕ ಜೀವನ

ಬದಲಾಯಿಸಿ

ಶಂಕರೇಗೌಡರು ಹುಟ್ಟಿದ್ದು ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ. ವೈದ್ಯಕೀಯ ಶಿಕ್ಷಣ ಪಡೆದದ್ದು ಮಣಿಪಾಲ್ ಕಾಲೇಜಿನಲ್ಲಿ.

ವೃತ್ತಿ ಜೀವನ

ಬದಲಾಯಿಸಿ

ಚರ್ಮವೈದ್ಯರಾಗಿ ಸುಮಾರು ೩೦ ವರ್ಷಗಳಿಂದ ಕೆಲಸ ಮಾಡುತ್ತಿರುವ ಶಂಕರೇಗೌಡ ಅವರಲ್ಲಿಗೆ ಬೆಂಗಳೂರು, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ತಮಿಳುನಾಡು, ಒಡಿಶಾ ಮತ್ತು ಮುಂಬೈನಿಂದಲೂ ರೋಗಿಗಳು ಬರುತ್ತಾರೆ.

ಇವರು ರೈತರೂ ಹೌದು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರೋಗಿಗಳಿಗೆ ಅವರ ಶುಲ್ಕ ಆರಂಭದಿಂದ ಇಲ್ಲಿಯವರೆಗೂ ₹ ೫ ರೂಪಾಯಿ ಮಾತ್ರ.

ರಾಜಕೀಯದಲ್ಲಿ

ಬದಲಾಯಿಸಿ

ಮಂಡ್ಯ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಸದಸ್ಯರಾಗಿ ಸೇವೆ ಮಾಡಿದ ಶಂಕರೇಗೌಡ ಅವರು ೨೦೧೮ರ ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡರು.[]

ಪ್ರಶಸ್ತಿಗಳು

ಬದಲಾಯಿಸಿ
  • ೨೦೧೯ - ಹೆಮ್ಮೆಯ ಕನ್ನಡಿಗ - ಪ್ರಶಸ್ತಿ ಜೀ ಕನ್ನಡ ವಾಹಿನಿಯಿಂದ.[]

ಉಲ್ಲೇಖಗಳು

ಬದಲಾಯಿಸಿ
  1. "ಶಂಕರೇಗೌಡ- ಐದು ರೂಪಾಯಿ ಡಾಕ್ಟ್ರು". Prajavani. 23 Apr 2018. Retrieved 6 Dec 2020.
  2. "ಪ್ರಚಾರದ ಮಧ್ಯೆಯೇ ರೋಗಿಗಳಿಗೆ '5 ರೂ. ಡಾಕ್ಟರ್‌' ಚಿಕಿತ್ಸೆ ನೀಡುತ್ತಿರುವ ಡಾ.ಶಂಕರೇಗೌಡ". Vijaya Karnataka. 27 Apr 2018. Retrieved 6 Dec 2020.
  3. "Zee Kannada's Hemmeya Kannadiga 2019 celebrates the highfliers of Karnataka". 28 Mar 2019. Retrieved 6 Dec 2020.