೧೦೮, ಸಂಕಟ್ ಮೋಚನ್ ಧಾಮ್ ಹನುಮಾನ್ ಮಂದಿರ್, ಕರೋಲ್ ಬಾಗ್, ನವ ದೆಹಲಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಉಲ್ಲೇಖ ಲಭ್ಯವಿಲ್ಲ. ಲೇಖನದ ಹೆಸರು, ಶೈಲಿ ಬದಲಿಸಬೇಕಿದೆ. ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ಹೊಸ ದೆಹಲಿಯ ಕರೋರ್ ಬಾಗ್ ನಲ್ಲಿರುವ ಸಂಕಟ್ ಮೋಚನ್ ಧಾಮ್ ಹನುಮಾನ್ ಮಂದಿರದ ಸ್ಥಾಪಕ,[೧] ಮಹಂತ್ ನಾಗ್ ಬಾಬ ಸೇವಾಗಿರ್ ಜಿ ಮಹಾರಾಜ್ ಅವರು. ತಮ್ಮ ಶಿಷ್ಯರಿಗೆ ತಮ್ಮ ಯುವಾವಸ್ಥೆಯಲ್ಲಿ ಒಂದು ಹನುಮಾನ್ ಪೂಜಾಗೃಹವನ್ನು ನಿರ್ಮಿಸಲು ಕನಸು ಕಾಣುತ್ತಿದ್ದರು. ಕೊನೆಗೆ ಅದು ಅವರಿಗೆ ಸಿದ್ಧಿಸಿತು. ಈಗಿನ ದೇವಸ್ಥಾನವಿರುವ ಜಾಗದಲ್ಲಿ ಧುನ (ಶಿವನ ಭಸ್ಮ) ಮತ್ತು ಹನುಮಾನ್ ಜಿ ಯವರ ಚಿಕ್ಕ ಮೂರ್ತಿ ಇದ್ದಿತು. ಬಾಬಾಜಿಯವರು ಈ ಸ್ಥಳದಲ್ಲಿ ಕುಳಿತು, ಹಲವಾರು ವರ್ಷಗಳ ಕಠಿಣ ತಪಸ್ಸಿನಿಂದ ಹನುಮಾನ್ ಜಿ ಪ್ರಕಟಗೊಂಡು, ಈಗಿರುವ ಸ್ಥಳದಲ್ಲಿ ತನ್ನ ಬೃಹತ್ ಮೂರ್ತಿಯನ್ನು ಸ್ಥಾಪಿಸಬೇಕೆಂದು ಆಜ್ಞೆಯಾಯಿತು. ಅದನ್ನು ಶಿರಸಾವಹಿಸಿ ಮುಂದುವರೆದ ಬಾಬಾ ತಮ್ಮ ಭಕ್ತಗಣದ ನೆರವಿನಿಂದ ಹನುಮಾನ್ ದೇವಸ್ಥಾನದ ನಿರ್ಮಾಣ ಕಾರ್ಯ, ಸನ್, ೧೯೯೪ ರಲ್ಲಿ ಆರಂಭವಾಯಿತು. ಸುಮಾರು ೧೩ ವರ್ಷಗಳ ಬಳಿಕ ನಿರ್ಮಾಣವಾದ ೧೦೮ ಅಡಿ ಎತ್ತರದ ಹನುಮಾನ್ ಮೂರ್ತಿ, ವಿಶ್ವದಲ್ಲೇ ಅತಿ ದೊಡ್ಡಮೂರ್ತಿಯೆಂದು ಪ್ರಸಿದ್ಧವಾಗಿದೆ.
ಮಾರುತಿಯ ಎದೆ ಹರಿದು, ಭಗವಾನ್ ರಾಮ್, ಸೀತಾ, ಲಕ್ಷ್ಮಣ್ ದರ್ಶನ
ಬದಲಾಯಿಸಿವಾರದಲ್ಲಿ ಎರಡು ಬಾರಿ ಮಂಗಳವಾರ ಮತ್ತು ಶನಿವಾರ, ಬೆಳಿಗ್ಗೆ, ೮.೧೫ ರಿಂದ ಸಾಯಂಕಾಲ, ೮.೧೫ ರ ವರೆಗೆ ಪೂಜೆ ನಡೆಯುತ್ತದೆ. (ಎಲಕ್ಟ್ರಾನಿಕ್ ಮಾಧ್ಯಮದ ಉಪಯೋಗ ಪಡೆದು), ಭಗವಾನ್ ರಾಮ್, ಸೀತಾಜಿ ಮತ್ತು ಲಕ್ಷ್ಮಣ್ ರ ದರ್ಶನವನ್ನು ಭಜರಂಗ್ ಬಲಿ, ಹನುಮಾನ್ ಜಿ ಎದೆ ಹರಿದು ತೋರಿಸುವ ಸುಯೋಗ, ಭಕ್ತಾದಿಗಳಿಗೆ ಆ ದಿನಗಳಲ್ಲಿ ಉಪಲಭ್ದವಿದೆ. ಧುನ್ ಅತಿ ಜನಪ್ರಿಯತೆ ಗಳಿಸಿತು. ವೈಷ್ಣುದೇವಿಯ ಮಂದಿರವೂ ಹನುಮಾನ್ ಮಂದಿರದ ಭಾಗವಾಗಿದೆ. ಇಲ್ಲಿ ವೈಷ್ಣುಮಾತೆಯು ಪಿಂಡಿಯ ರೂಪದಲ್ಲಿ ಗುಹೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗಂಗಾಮಾತೆಯ ದರ್ಶನ ೨೦೦೬ ರ ಮಾರ್ಚ್, ೩೦ ರಂದು, ಪಾವನ ಜ್ಯೊತಿ ಬಾಬಾಜಿ ಹಿಮಾಚಲ ಪ್ರದೇಶದ ಕಾಂಗ್ರಾದಿಂದ ತಂದರು. ಸಂಕಟ್ ಮೋಚನ್ ಧಾಮ್ ಗೆ ಭೇಟಿ ನೀಡುವವರ ಸಂಖ್ಯೆ ಲಕ್ಷಾಂತರ. ಭಕ್ತರು ಕಪ್ಪುವಸ್ತ್ರವನ್ನು ಅರ್ಪಿಸುತ್ತಾರೆ. ಚೂರಿ. ಸಾಸುವೆ ಎಣ್ಣೆ, ಒಂದು ಪ್ರಣತಿ, ಬೆಲ್ಲ, ಕಡಲೆ, ಉದಕ್ ದಾಲ್, ಎಳ್ಳು, ಮತ್ತು ಯಾವುದಾದರೂ ರೂಪದಲ್ಲಿ ಲೋಹ, ಹೂವಿನ ಹಾರ, ನಿಂಬೆಹಣ್ಣು ಇತ್ಯಾದಿಗಳನ್ನು ಸಮರ್ಪಿಸುವ ಪರಿಪಾಠವಿದೆ.
ನಾಗಾ ಬಾಬಾಜಿಯವರ ಸಮಾಧಿ
ಬದಲಾಯಿಸಿಮಂದಿರದ ಕಾರ್ಯ ನೆರವೇರುತ್ತಿದ್ದಂತೆ, ಬಾಬಾಜಿರವರು ತಮ್ಮ ದೇಹತ್ಯಾಗಮಾಡಲು ಆಶಿಸಿದ್ದರು. ಸನ್ ೨೦೦೮ರ ಜನವರಿ ೨೫ ರಂದು ನಾಗಾಬಾಬಾರವರು ದೇಹತ್ಯಾಗ ಮಾಡಿದರು. ಭಕ್ತರು ಬಾಬಾರವರ ಸಮಾಧಿಯನ್ನು ದೇವಸ್ಥಾನದ ಸಮ್ಮುಖದಲ್ಲೇ ಸ್ಥಾಪಿಸಿದ್ದಾರೆ. ಹನುಮಾನ್ ಮಂದಿರದ ಒಳಗೇ ಬಾಬಾರವರ ಸಮಾಧಿಯನ್ನು ಸ್ಥಾಪಿಸಲು ಭಕ್ತಗಣ ಇಷ್ಟಪಟ್ಟಿದ್ದರು. ಆ ಸ್ಥಳದಲ್ಲೇ ಶಿವಲಿಂಗವನ್ನು ಸ್ಥಾಪಿಸಿದ್ದಾರೆ. ಅಲ್ಲಿ ಅಖಂಡವಾಗಿ ದೀಪ ಉರಿಯುತ್ತಿರುತ್ತದೆ. ಮಹಂತ್ ನಾಗಾಬಾಬಾ ಸ್ಮಾರಕ ಟ್ರಸ್ಟ್ ನ ವತಿಯಿಂದ, ಬಾಬಾಜಿಯವರ ದೇಹಾಂತವಾದ ದಿನ, ಜನವರಿ ೨೫ ರಂದು, ದೇಶದ ವಿವಿಧ ಕಡೆಗಳಿಂದ ಸಾಧು-ಸಂತರು, ಮಹಂತರು, ಪೂಜಾರಿಗಳು, ಹನುಮಾನ್ ಮಂದಿರದ ಬಳಿ ಬಂದು ನೆರೆದರು. ಹೀಗೆ ಆ ಭಂಡಾರದ ವ್ಯವಸ್ಥೆಯಾಯಿತು. ಅವರೆಲ್ಲರೂ ಒಮ್ಮತದಿಂದ ಪ್ರತಿವರ್ಷವೂ ಪೂಜಾಪಾಠಗಳನ್ನು ನಡೆಸುವ ನಿಶ್ಚಯಮಾಡಿದರು.
ಹನುಮಾನ್ ಜಿ, ಮಂದಿರ ತಲುಪಲು
ಬದಲಾಯಿಸಿಕೀರ್ತಿನಗರ ಕಡೆಯಿಂದ ಮೆಟ್ರೋದಲ್ಲಿ ಪ್ರಯಾಣಿಸಿದರೆ-ಶಾದಿಪುರ್- ಪಟೇಲ್ ನಗರ -ರಾಜೇಂದ್ರ ಪ್ಲೇಸ್ -ಕರೋಲ್ ಬಾಗ್ -ಝಂಡೆವಾಲನ್ ನಲ್ಲಿಳಿದು ಮಂದಿರಕ್ಕೆ ಹೋಗಬಹುದು. ಹೊಸ ದೆಹಲಿಯ ಝಂಡೆವಾಲನ್ ಮೆಟ್ರೋ ರೈಲ್ವೆ ನಿಲ್ದಾಣದ ಹತ್ತಿರದಲ್ಲೇ ಇರುವ ಈ ಮಂದಿರ, ಪಹಾಡ್ ಗಂಜ್ ಹೊಸ ದೆಹಲಿ ರೈಲ್ವೆ ನಿಲ್ದಾಣಕ್ಕೆ ಸುಮಾರು ೧೧ ಕಿ.ಮೀ.ದೂರದಲ್ಲಿದೆ. ಆರ್ಯಸಮಾಜ್ ರಸ್ತೆ ಹನುಮಾನ್ ಮಂದಿರಕ್ಕೆ ಹತ್ತಿರದಲ್ಲಿದೆ.
ಉಲ್ಲೇಖಗಳು
ಬದಲಾಯಿಸಿ- ↑ "108 Foot Shri Sankat Mochan Dham, Dec, 9, 2014". Archived from the original on 2012-04-18. Retrieved 2012-04-20.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)