ಹ. ಶಿ. ಭೈರನಟ್ಟಿಯವರು ೧೯೫೦ ಮೇ ೨ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಪಾರ್ವತೆವ್ವ ; ತಂದೆ ಶಿವಪ್ಪ ಬಾಳಪ್ಪ ಭೈರನಟ್ಟಿ.

ಶಿಕ್ಷಣ, ಉದ್ಯೋಗ ಬದಲಾಯಿಸಿ

ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಸಂಪಾದಿಸಿದ ಭೈರನಟ್ಟಿಯವರು ಭಾರತೀಯ ಜೀವವಿಮಾ ನಿಗಮದಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ ಬದಲಾಯಿಸಿ

ತಮ್ಮ ೧೮ನೆಯ ವಯಸ್ಸಿನಿಂದಲೇ ಸಣ್ಣ ಕತೆಗಳನ್ನು ಬರೆಯಲು ಆರಂಭಿಸಿದ ಭೈರನಟ್ಟಿಯವರು, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದಾರೆ. ಅವರ ಪ್ರಕಟಿತ ಕೃತಿಗಳು ಇಂತಿವೆ:

ಕಾವ್ಯ ಬದಲಾಯಿಸಿ

ಹನಿಗವನಗಳು ಬದಲಾಯಿಸಿ

  • ನಕ್ಷತ್ರಪುಂಜ (೧೯೭೬)

ಕವನಸಂಕಲನ ಬದಲಾಯಿಸಿ

• ಬೆಳ್ಳಿ ತೆರೆಗೆ ಬದುಕಿನ ಚಿತ್ರ (೧೯೮೧) • ವರ್ತಮಾನಗಳು (೧೯೮೪) • ಕಂಪ್ಯೂಟರುಗಳೇ ತಿಳಿಸುತ್ತವೆ (೨೦೦೧)

ಕಥಾಸಂಗ್ರಹ ಬದಲಾಯಿಸಿ

ವೈಜ್ಞಾನಿಕ ಬದಲಾಯಿಸಿ

• ಬೈಲೆಟ್ ಮಾನವ (೧೯೭೫)

ಪ್ರವಾಸ ಬದಲಾಯಿಸಿ

• ನೆಲದ ಮೇಲೆ ಹೆಜ್ಜೆ (೧೯೮೦)

ಸಾಮಾಜಿಕ ಬದಲಾಯಿಸಿ

• ಪುಟಿವ ಮೀನುಗಳು (೧೯೮೧)

ವೈಜ್ಞಾನಿಕ ಬದಲಾಯಿಸಿ

• ಟಾಪ್ ಸೀಕ್ರೆಟ್ (೧೯೮೨)

ಕಾದಂಬರಿ ಬದಲಾಯಿಸಿ

ವೈಜ್ಞಾನಿಕ ಬದಲಾಯಿಸಿ

• ಟ್ರಿಪ್ಲೆಟ್ ಸಿಗ್ಮಿ (೧೯೮೦)

ಸಾಮಾಜಿಕ ಬದಲಾಯಿಸಿ

• ನೆರಳು (೧೯೮೩)

ಪ್ರಬಂಧಸಂಕಲನ ಬದಲಾಯಿಸಿ

ಕಥಾತ್ಮಕ ಲಲಿತ ಪ್ರಬಂಧಗಳು ಬದಲಾಯಿಸಿ

• ಬಣ್ಣದ ಕಣ್ಣು

ವೈಚಾರಿಕ ಬದಲಾಯಿಸಿ

• ಡಾ. ಬೆಟಗೇರಿ ಕೃಷ್ಣಶರ್ಮರ ಸಾಹಿತ್ಯದರ್ಶನ

ಪುರಸ್ಕಾರ ಬದಲಾಯಿಸಿ

ಹ.ಶಿ.ಭೈರನಟ್ಟಿಯವರ ಅನೇಕ ಕತೆ, ಕವನ ಹಾಗು ಹಾಸ್ಯಲೇಖನಗಳಿಗೆ ಸಾಹಿತ್ಯಸ್ಪರ್ಧೆಗಳಲ್ಲಿ ಪ್ರಶಸ್ತಿ ಲಭಿಸಿವೆ.

ಹವ್ಯಾಸ ಬದಲಾಯಿಸಿ

ಭೈರನಟ್ಟಿಯವರು ಉತ್ತಮ ಛಾಯಾಚಿತ್ರಗ್ರಾಹಕರು ಹಾಗು ವಿಡಿಯೋಗ್ರಾಫರ್ ಆಗಿದ್ದಾರೆ. ಧಾರವಾಡ ಪಟ್ಟಣದಲ್ಲಿಯ ಪ್ರಥಮ ವಿಡಿಯೋಗ್ರಾಫರ್ ಇವರೇ ಎನ್ನುವ ಹೆಗ್ಗಳಿಕೆ ಇವರದು. ಇದಲ್ಲದೆ, ಭೈರನಟ್ಟಿಯವರು ಸಂಗೀತದಲ್ಲೂ ಆಸಕ್ತರು. ಸ್ವತಃ ಉತ್ತಮ ತಬಲಾವಾದಕರಾಗಿದ್ದಾರೆ.

ಕೌಟುಂಬಿಕ ಬದಲಾಯಿಸಿ

ಭೈರನಟ್ಟಿಯವರ ಮಡದಿ ಶಕುಂತಲಾ ; ಪತಿಯ ಎಲ್ಲ ಹವ್ಯಾಸಗಳಿಗೂ ಒತ್ತಾಸೆಯಾಗಿ ನಿಂತಿದ್ದಾರೆ. ಮಗ ಚೇತನ ಜರ್ಮನಿಯಲ್ಲಿ ಎಮ್. ಎಸ್. ಪದವಿಯನ್ನು ಪಡೆದು ಈಗ ಪುಣೆಯಲ್ಲಿ ಇಂಜನಿಯರಿಂಗ್ ಹುದ್ದೆಯಲ್ಲಿದ್ದಾರೆ. ಮಗಳು ಲಕ್ಷ್ಮೀ ಸಹ ತನ್ನ ಇಂಜನಿಯರ್ ಪತಿಯ ಜೊತೆಗೆ ಪುಣೆಯಲ್ಲಿದ್ದಾಳೆ.

ಸಂತೃಪ್ತ ಕೌಟುಂಬಿಕ ಜೀವನ ಹೊಂದಿದ ಭೈರನಟ್ಟಿಯವರು ಸ್ನೇಹಜೀವಿಗಳೂ ಹೌದು. ಸಂಗೀತ, ಸಾಹಿತ್ಯ ಹಾಗು ಸ್ನೇಹಿತರೇ ಇವರ ಹವ್ಯಾಸ.