ಹ್ಯುಂಡೇ ಐಟ್ವೆಂಟಿ

ಹ್ಯುಂಡೇ ಐಟ್ವೆಂಟಿ ಅಕ್ಟೋಬರ್ ೨೦೦೮ರಲ್ಲಿ ಪ್ಯಾರಿಸ್ ಮೋಟರ್ ಪ್ರದರ್ಶನದಲ್ಲಿ ಮೊದಲ ಬಾರಿ ಪ್ರದರ್ಶಿಸಲಾದ, ಮತ್ತು ಡಿಸೆಂಬರ್ ೨೦೦೮ರಲ್ಲಿ ಭಾರತದಲ್ಲಿ ಐಟೆನ್ ಮತ್ತು ಐಥರ್ಟಿ ನಡುವೆ ಸರಿಹೊಂದುವಂತೆ ಮಾರಾಟಕ್ಕಿಡಲಾದ ಒಂದು ಸಬ್‍ಕಾಂಪ್ಯಾಕ್ಟ್ ಕಾರು. ಅದು ಮುಂಚಕ್ರ ಚಾಲಕ ಕಾರ್ ಆಗಿದ್ದು, ಮೂರು ಮತ್ತು ಐದು ಬಾಗಿಲುಗಳಿರುವ ರೂಪಗಳಲ್ಲಿ ದೊರೆಯುತ್ತದೆ. ಐಟ್ವೆಂಟಿ ಬಹುತೇಕ ಮಾರುಕಟ್ಟೆಗಳಲ್ಲಿ ಗೆಟ್ಸ್ ಬದಲಾಗಿ ಬಂದಿದೆಯಾದರೂ ಬ್ರಿಟನ್ ಮತ್ತು ಭಾರತದಲ್ಲಿ ಸದ್ಯಕ್ಕೆ ಗೆಟ್ಸ್ ಮಾರಾಟಕ್ಕಿರುತ್ತದೆ.