ಯಾವುದೇ ಬಗೆಯ ಹೈಡ್ರೊಕಾರ್ಬನ್ನಿನಲ್ಲಿನ ಹೈಡ್ರೊಜನ್ನನ್ನು ಹ್ಯಾಲೊಜನ್ ಪರಮಾಣುವಿನಿಂದ ಆದೇಶಿಸಿದಾಗ ಹ್ಯಾಲೈಡ್ ದೊರೆಯುವುದು. ಒಂದಕ್ಕಿಂತ ಹೆಚ್ಚು ಹೈಡ್ರೊಜನ್ ಪರಮಾಣುಗಳನ್ನೂ ಆದೇಶಿಸಲು ಸಾಧ್ಯ. ಹೈಡ್ರೊಜನ್ನನ್ನು ನೇರವಾಗಿ ಆದೇಶಿಸಲು ಎಲ್ಲ ಸಂದರ್ಭಗಳಲ್ಲಿಯೂ ಸಾಧ್ಯವಿಲ್ಲ. ಸಾಮಾನ್ಯವಾಗಿ ಆಲ್ಕೊಹಾಲುಗಳಲ್ಲಿನ ಹೈಡ್ರಾಕ್ಸಿಲ್ ಪುಂಜದ ಆದೇಶದಿಂದ ಹ್ಯಾಲೈಡುಗಳನ್ನು ತಯಾರಿಸಲಾಗುತ್ತದೆ. ಹ್ಯಾಲೈಡುಗಳು ಪಟು ಸಂಯುಕ್ತಗಳಾದ್ದರಿಂದ ಆನೇಕ ರಾಸಾಯನಿಕ ಸಂಯೋಜನೆಗಳಲ್ಲಿ ಉಪಯೋಗಕ್ಕೆ ಬರುತ್ತವೆ. ಗ್ರೀನಾರ್ಡ್ ಸಂಯುಕ್ತಗಳೆಂಬ ಬಲುಮುಖ್ಯ ಆರ್ಗ್ಯನೋಲೋಹ ಸಂಯುಕ್ತಗಳ ತಯಾರಿಕೆಗೆ ಹ್ಯಾಲೈಡುಗಳೇ ಮೂಲವಸ್ತುಗಳು. ಅಪರ್ಯಾಪ್ತ ಆಲ್ಕೈಲ್ ಹ್ಯಾಲೈಡ್ ಆದ ವೀನೈಲ್ ಕ್ಲೋರೇಡನ್ನು ಪ್ಲಾಸ್ಟಿಕ್ಕುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. ಕ್ಲೋರೋಫಾರಂ ಮೀಥೇನಿನ ಟ್ರೈ ಹ್ಯಾಲೈಡ್. (ನೋಡಿ- ಆಲ್ಕೊಹಾಲುಗಳು)

ಉಪಯೋಗಗಳು

ಬದಲಾಯಿಸಿ

ಮೆಟಲ್ ಹ್ಯಾಲೈಡ್ಗಳು ಆಧುನಿಕ ಬೀದಿದೀಪಗಳಾದ ಮೆಟಲ್ ಹ್ಯಾಲೈಡ್ ದೀಪಗಳಲ್ಲಿ ಉಪಯೋಗಿಸುತ್ತಾರೆ.