ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್

ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಎಂಬುದು ಜೆ.ಕೆ. ರೌಲಿಂಗ್‍ರವರು ಬರೆದ ಹ್ಯಾರಿ ಪಾಟರ್ ಸರಣಿಗಳಲ್ಲಿ ಐದನೆಯದಾಗಿದೆ. ಇದನ್ನು ೨೦೦೩ ರ ಜೂನ್ ೨೧ ರಂದು ಇಂಗ್ಲೆಂಡ್‍ನಲ್ಲಿ ಬ್ಲೂಮ್ಸ್‌ಬರಿ ಪ್ರಕಾಶನ ಸಂಸ್ಥೆ, ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ಕೊಲಾಸ್ಟಿಕ್ ಮತ್ತು ಕೆನಡಾದಲ್ಲಿ ರೇನ್‍ಕಾಸ್ಟ್ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿದವು. ಇದನ್ನು ಬಿಡುಗಡೆ ಮಾಡಿದ ಮೊದಲ ೨೪ ಗಂಟೆಗಳಲ್ಲಿ ಐದು ಮಿಲಿಯನ್ ಪ್ರತಿಗಳು ಮಾರಾಟವಾಗಿದ್ದವು.[]

ಹ್ಯಾರಿ ಪಾಟರ್ ಪುಸ್ತಕಗಳು
ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದ ಫೀನಿಕ್ಸ್
ಲೇಖಕಿಜೆ. ಕೆ. ರೊಲಿಂಗ್
ಚಿತ್ರಲೇಖಕಜೇಸನ್ ಕಾಕ್‍ಕ್ರಾಫ್ಟ್ (ಯುಕೆ)
ಮೇರಿ ಗ್ರ್ಯಾಂಡ್‍ಪ್ರೀ (ಯುಎಸ್)
ಪ್ರಕಾರಕಲ್ಪನೆ
ಪ್ರಕಾಶಕರುಬ್ಲೂಮ್ಸ್ ಬೆರಿ (ಯುಕೆ)
ಆರ್ಥರ್ ಎ. ಲೆವಿನ್/
ಸ್ಕೊಲ್ಯಸ್ಟಿಕ್ (ಯುಎಸ್)
ರೈನ್‌ಕೋಸ್ಟ್ (ಕೆನಡ)
ಬಿಡುಗಡೆ21 ಜೂನ್ 2003
ಪುಸ್ತಕ ಸಂಖ್ಯೆಐದು
ಮಾರಾಟತಿಳಿದಿಲ್ಲ
ಕಥಾ ಕಾಲಕ್ರಮಾಂಕ2 ಆಗಸ್ಟ್ 1995–ಜೂನ್ 17, 1996
ಅಧ್ಯಾಯಗಳು38
ಪುಟಗಳು766 (ಯುಕೆ)
870 (ಯುಎಸ್)
ಐಎಸ್‌ಬಿಎನ್0747551006
ಹಿಂದಿನ ಪುಸ್ತಕಹ್ಯಾರಿ ಪಾಟರ್ ಅಂಡ್ ದ ಗಾಬ್ಲೆಟ್ ಆಫ್ ಫ಼ಾಯರ್
ಮುಂದಿನ ಪುಸ್ತಕಹ್ಯಾರಿ ಪಾಟರ್ ಅಂಡ್ ದ ಹಾಫ್-ಬ್ಲಡ್ ಪ್ರಿನ್ಸ್

ಕಾದಂಬರಿಯು ಹಾಗ್‍ವಾರ್ಟ್ಸ್ ಸ್ಕೂಲ್ ಆಫ್ ವಿಚ್‍ಕ್ರಾಫ್ಟ್ ಅಂಡ್ ವಿಜ಼ರ್ಡಿಯಲ್ಲಿ (ಮಂತ್ರವಿದ್ಯೆ ಮತ್ತು ವಾಮಾಚಾರದ ಹಾಗ್‍ವಾರ್ಟ್ಸ್ ಶಾಲೆ) ಹ್ಯಾರಿ ಪಾಟರ್ ತನ್ನ ಐದನೇ ವರ್ಷದ ಶಾಲಾ ಅವಧಿಯಲ್ಲಿ ಹೇಗೆ ಹೋರಾಟ ನಡೆಸುತ್ತಾನೆ ಎಂಬುದನ್ನು ಚಿತ್ರಿಸುತ್ತದೆ. ಈ ಚಿತ್ರಣವು ಹ್ಯಾರಿ ಪಾಟರ್‍ನ ಶತ್ರು ಲಾರ್ಡ್ ವೊಲ್ಡೆಮಾರ್ಟ್‌ರ ಮರಳುವಿಕೆ, O.W.L. ಪರೀಕ್ಷೆಗಳು ಮತ್ತು ಮಿನಿಸ್ಟ್ರಿ ಆಫ್ ಮ್ಯಾಜಿಕ್‍ನ ಪ್ರತಿಬಂಧಕವನ್ನು ಒಳಗೊಂಡಿದೆ.

ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್, ೨೦೦೩ರಲ್ಲಿ ಅಮೇರಿಕನ್ ಲೈಬ್ರರಿ ಅಸೋಸಿಯೇಷನ್‍ನಿಂದ ಗಳಿಸಿದ ಯುವ ವಯಸ್ಕರ ಅತ್ಯುತ್ತಮ ಪುಸ್ತಕ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿತು. ಈ ಪುಸ್ತಕವನ್ನು ಚಲನಚಿತ್ರವಾಗಿಸಲಾಗಿದ್ದು, ಅದು ೨೦೦೭ರಲ್ಲಿ ಬಿಡುಗಡೆಯಾಯಿತು. ಅಲ್ಲದೇ ಎಲೆಕ್ಟ್ರಾನಿಕ್ ಆರ್ಟ್ಸ್ ಇದನ್ನು ಅನೇಕ ವಿಡಿಯೋ ಗೇಮ್‍ಗಳಾಗಿಸಿದೆ.

ಸಾರಾಂಶ

ಬದಲಾಯಿಸಿ

ಕಥಾವಸ್ತು ಪರಿಚಯ

ಬದಲಾಯಿಸಿ

ಹ್ಯಾರಿ ಪಾಟರ್‌ ಸರಣಿಯಲ್ಲಿರುವ ಹಿಂದಿನ ನಾಲ್ಕು ಕಾದಂಬರಿಗಳುದ್ದಕ್ಕೂ ಪ್ರಧಾನ ಪಾತ್ರ ಹ್ಯಾರಿ ಪಾಟರ್‌, ಈತ ಬೆಳೆಯುತ್ತಾ ಹೋದಂತೆ ಬರುವ ತೊಡಕುಗಳೊಂದಿಗೆ ಮತ್ತು ಪ್ರಸಿದ್ಧ ಮಂತ್ರವಾದಿಯಾಗುವಾಗಿನ ಸಂದರ್ಭದಲ್ಲಿ ಎದುರಾಗುವ ಸವಾಲುಗಳೊಂದಿಗೆ ಹೋರಾಡುತ್ತಾನೆ. ಹ್ಯಾರಿ ಮಗುವಾಗಿದ್ದಾಗ ಅತ್ಯಂತ ಶಕ್ತಿಶಾಲಿ ಕರಾಳ ಮಂತ್ರವಾದಿಯಾದ ವೊಲ್ಡೆಮಾರ್ಟ್‌ ಹ್ಯಾರಿಯ ಪೋಷಕರನ್ನು ಕೊಲ್ಲುತ್ತಾನೆ. ಆದರೆ ಹ್ಯಾರಿಯನ್ನು ಕೊಲ್ಲಲು ವಿಫಲ ಯತ್ನ ನಡೆಸಿದ ನಂತರ ನಿಗೂಢವಾಗಿ ಕಣ್ಮರೆಯಾಗುತ್ತಾನೆ. ಈ ಘಟನೆಯಿಂದಾಗಿ ಹ್ಯಾರಿಗೆ ತತ್‌ಕ್ಷಣದ ಖ್ಯಾತಿ ಲಭ್ಯವಾಗುತ್ತದೆ. ಅಲ್ಲದೇ ಆತನನ್ನು ಮುಗಲ್‌ ಅಥವಾ ಮಾಂತ್ರಿಕರಲ್ಲದ, ಚಿಕ್ಕಮ್ಮ ಪೆಟೂನಿಯಾ ಮತ್ತು ಚಿಕ್ಕಪ್ಪ ವೆರ್ನಾನ್‌‍ರವರ ಪಾಲನೆಯಲ್ಲಿ ಇರಿಸಲಾಗುತ್ತದೆ. ಇವರಿಗೆ ಡ್ಯೂಡ್ಲೆ ಡರ್ಸ್ಲೆ ಎಂಬ ಪುತ್ರನಿರುತ್ತಾನೆ.

ಹ್ಯಾರಿ ೧೧ ನೇ ವಯಸ್ಸಿನಲ್ಲಿ ಮಾಂತ್ರಿಕ ಪ್ರಪಂಚವನ್ನು ಪ್ರವೇಶಿಸುತ್ತಾನೆಂದು ವಾಮಾಚಾರ ಮತ್ತು ಮಂತ್ರವಿದ್ಯೆಯ ಹೊಗ್ವರ್ಟ್ಸ್ ಶಾಲೆಯಲ್ಲಿ ದಾಖಲಿಸಲಾಗುತ್ತದೆ. ಅಲ್ಲಿ ಆತ ರಾನ್ ವೀಸ್ಲೆ ಮತ್ತು ಹರ್ಮಿಯನ್ ಗ್ರ್ಯಾಂಗರ್‌ರೊಂದಿಗೆ ಗೆಳೆತನ ಬೆಳೆಸುತ್ತಾನೆ, ಹಾಗೂ ಪುನಃ ಶಕ್ತಿಶಾಲಿಯಾಗುವ ಪ್ರಯತ್ನದಲ್ಲಿದ್ದ ಲಾರ್ಡ್ ವೊಲ್ಡೆಮೊರ್ಟ್‌ನನ್ನು ಎದುರಿಸುತ್ತಾನೆ. ಬೇಸಿಗೆ ವಿರಾಮದ ಬಳಿಕ ಶಾಲೆಗೆ ಮರಳಿದ ನಂತರ, ಹೊಗ್ವಾರ್ಟ್ಸ್‌‌ನ ವಿದ್ಯಾರ್ಥಿಗಳು ಪ್ರಸಿದ್ಧ "ರಹಸ್ಯಗಳ ಕೋಣೆ" ತೆರೆದ ನಂತರದಲ್ಲಿ ದಾಳಿಗೊಳಗಾಗುತ್ತಾರೆ. ಹ್ಯಾರಿ ಭೀಕರ ಸರೀಸೃಪವನ್ನು ಕೊಂದು ದಾಳಿಯನ್ನು ಕೊನೆಗೊಳಿಸುತ್ತಾನೆ. ಅಲ್ಲದೇ ಲಾರ್ಡ್ ವೊಲ್ಡೆಮೊರ್ಟ್, ಪುನಃ ಶಕ್ತಿಶಾಲಿಯಾಗಲು ಮಾಡಿದ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ. ಮುಂದಿನ ವರ್ಷಗಳಲ್ಲಿ ಹ್ಯಾರಿಗೆ ತಪ್ಪಿಸಿಕೊಂಡಿದ್ದ ಕೊಲೆಗಾರ ಸಿರಿಸ್ ಬ್ಲ್ಯಾಕ್ ತನ್ನನ್ನು ಕೊಲ್ಲುವ ಗುರಿಯಿಟ್ಟುಕೊಂಡಿದ್ದಾನೆಂದು ತಿಳಿಯುತ್ತದೆ. ಹೊಗ್ವರ್ಟ್ಸ್‌ನಲ್ಲಿನ ಕಟ್ಟೆಚ್ಚರದ ನಡುವೆಯೂ ಹ್ಯಾರಿ ತನ್ನ ಶಾಲೆಯ ಮೂರನೆ ವರ್ಷದ ಕೊನೆಯಲ್ಲಿ ಬ್ಲ್ಯಾಕ್‌ನನ್ನು ಎದುರಿಸುತ್ತಾನೆ, ಮತ್ತು ಆತನನ್ನು ಉಪಾಯವಾಗಿ ಈ ಕಾರ್ಯದಲ್ಲಿ ಸಿಕ್ಕಿಹಾಕಿಸಲಾಗಿದೆ ಎಂಬುದನ್ನು ತಿಳಿಯುತ್ತಾನೆ. ಅಲ್ಲದೇ ಹ್ಯಾರಿ, ಬ್ಲಾಕ್‌ ನಿಜವಾಗಿಯೂ ತನ್ನ ಮಾರ್ಗದರ್ಶಿ ಹಿತಪೋಷಕ ಎಂಬುದನ್ನು ಅರಿಯುತ್ತಾನೆ. ಹ್ಯಾರಿ ತನ್ನ ಶಾಲೆಯ ನಾಲ್ಕನೇ ವರ್ಷದಲ್ಲಿ ಅತ್ಯಂತ ಅಪಾಯಕಾರಿಯಾದ ಮಾಂತ್ರಿಕ ಪೈಪೋಟಿ, ಟ್ರೈವಿಜರ್ಡ್ ಪಂದ್ಯಾವಳಿ‌ಯಲ್ಲಿ ಭಾಗವಹಿಸುತ್ತಾನೆ. ಪಂದ್ಯಾವಳಿಯ ಕೊನೆಯಲ್ಲಿ ಲಾರ್ಡ್ ವೊಲ್ಡೆಮೊರ್ಟ್ ಶಕ್ತಿಶಾಲಿಯಾಗಿ ಮರಳುವುದನ್ನು ಹ್ಯಾರಿ ಕಾಣುತ್ತಾನೆ.

ಕಥಾವಸ್ತು ಸಾರಾಂಶ

ಬದಲಾಯಿಸಿ

ಈ ಕಾದಂಬರಿಯು ಹ್ಯಾರಿ ಮತ್ತು ಅವನ ಸೋದರ ಸಂಬಂಧಿ ಡ್ಯೂಡ್ಲೆ ಡ್ಯೂರ್ಸ್ಲೆ‌ರ ಮೇಲೆ ಡೆಮೆಂಟರ್‌ನ ದಾಳಿ ನಡೆದಾಗ ಆರಂಭವಾಗುತ್ತದೆ. ಹ್ಯಾರಿ ಅವರೊಂದಿಗೆ ಹೋರಾಡಲು ಮ್ಯಾಜಿಕ್ ಅನ್ನು ಬಳಸಿದನು. ಅಲ್ಲದೇ ಆತನು ಕಿರಿಯವಯಸ್ಸಿನವರ ಮ್ಯಾಜಿಕ್‍ಗಾಗಿ ಶಿಸ್ತಿನ ವಿಚಾರಣೆಗಾಗಿ ಹಾಜರಾಗಬೇಕಿತ್ತು. ವೊಲ್ಡೆಮೊರ್ಟ್‌ನ ಪುನರಾಗಮನ ಕಂಡು ಡಂಬಲ್ಡೋರ್ ಆರ್ಡರ್ ಆಫ್ ದಿ ಫೀನಿಕ್ಸ್ ಅನ್ನು ಪುನಃ ಕಾರ್ಯನಿರ್ವಹಿಸುವಂತೆ ಮಾಡಿದ. ಇದು ವೊಲ್ಡೆಮೊರ್ಟ್‌ನ ಗುಲಾಮರನ್ನು ಸೋಲಿಸಲು ಹಾಗು ಆತನ ಗುರಿಗಳನ್ನು ರಕ್ಷಿಸಲು ಕಾರ್ಯನಿರ್ವಹಿಸುವ ರಹಸ್ಯ ಸಂಸ್ಥೆಯಾಗಿರುತ್ತದೆ. ವೊಲ್ಡೆಮೊರ್ಟ್‌ನ ಪ್ರಸ್ತುತದ ಚಟುವಟಿಕೆಗಳ ಬಗ್ಗೆ ಹ್ಯಾರಿ ನೀಡಿದ ವಿವರಣೆಯ ಹೊರತಾಗಿಯೂ, ಮಿನಿಸ್ಟ್ರಿ ಆಫ್ ಮ್ಯಾಜಿಕ್ ಮತ್ತು ಮ್ಯಾಜಿಕ್ ಪ್ರಪಂಚದಲ್ಲಿದ್ದ ಇತರ ಅನೇಕರು ವೊಲ್ಡೆಮೊರ್ಟ್ ಹಿಂದಿರುಗಿದ್ದಾನೆ ಎಂಬುದನ್ನು ನಂಬದೆ, ಬದಲಿಗೆ ಹ್ಯಾರಿ ಮತ್ತು ಡಂಬಲ್ಡೋರ್‌ರನ್ನು ಅವಮಾನ ಮಾಡುತ್ತಾರೆ.[]

ಮಿನಿಸ್ಟ್ರಿ ಅದರ ಶಾಲೆಯ ಪಠ್ಯಕ್ರಮದ ಹೊಸ ಆವೃತ್ತಿಯನ್ನು ಜಾರಿಗೆ ತರುವ ಪಯತ್ನದಲ್ಲಿ, ಡೊಲೊರೇಸ್ ಉಮ್‌ಬ್ರಿಡ್ಜ್‌‌ರವರನ್ನು ಹೊಗ್ವಾರ್ಟ್ಸ್ ನ ಡಿಫೆನ್ಸ್ ಆಗ್ಯೇನ್ಸ್ಟ್ ಡಾರ್ಕ್ ಆರ್ಟ್ಸ್ ತರಗತಿಯ ಹೊಸ ಶಿಕ್ಷಕಿಯಾಗಿ ನೇಮಿಸುತ್ತಾರೆ. ಭಾಗಶಃ ಆಕೆ ಶಾಲೆಯ ಪದ್ಧತಿಯನ್ನು -ನಿರಂಕುಶ ಪ್ರಭುತ್ವದ ಪದ್ಧತಿಯಾಗಿ ಬದಲಾಯಿಸಿದಳು. ಅಲ್ಲದೇ ಮಾಟದ ವಿರುದ್ಧ ವಿದ್ಯಾರ್ಥಿಗಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂಬುದನ್ನು ಬೋಧಿಸಲು ನಿರಾಕರಿಸಿದಳು.[] ಅನಂತರ ಆಕೆಯನ್ನು ಶಾಲೆಯ ಪರೀಕ್ಷಾಧಿಕಾರಿಯಾಗಿ ಹಾಗು ಡಂಬಲ್ಡೋರ್‌ ನನ್ನು ಓಡಿಹೋಗುವಂತೆ ಒತ್ತಾಯಿಸಿದ ನಂತರ ಅಂತಿಮವಾಗಿ ಮುಖ್ಯೋಪಾಧ್ಯಾಯಿನಿಯಾಗಿ ನೇಮಿಸಲಾಗುತ್ತದೆ. ಹ್ಯಾರಿಯ ಸ್ನೇಹಿತರಾದ ರಾನ್ ಮತ್ತು ಹರ್ಮಿಯನ್ ವಿದ್ಯಾರ್ಥಿಗಳ ರಹಸ್ಯ ತಂಡವನ್ನು ರೂಪಿಸಲು ಹಾಗು ಆತ ಕಲಿತ ಉನ್ನತ ಮಟ್ಟದ ಕೌಶಲಗಳನ್ನು ಅವನ ಸಹಪಾಠಿಗಳಿಗೆ ಬೋಧಿಸಲು ಅವನ ಮನವೊಲಿಸುತ್ತಾರೆ. ಹೀಗೆ ಆತನು ಲೂನ ಲವ್‍ಗುಡ್‍ಳನ್ನು ಭೇಟಿಮಾಡಿದ. ಈಕೆ ಸಹೃದಯವುಳ್ಳ ಕಿರಿಯ ಮಾಟಗಾತಿಯಾಗಿದ್ದು, ವಿಚಿತ್ರವಾದ ಷಡ್ಯಂತ್ರ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದ್ದಳು.[] ವೊಲ್ಡೆಮೊರ್ಟ್‌ನ ಕೆಲವೊಂದು ಚಟುವಟಿಕೆಗಳನ್ನು ನೋಡಲು ಹ್ಯಾರಿಗೆ ಅವಕಾಶ ಮಾಡಿಕೊಡುವ ಮೂಲಕ ಅವನು ಮತ್ತು ವೊಲ್ಡೆಮೊರ್ಟ್ ದೂರ ಸಂವೇದನ ಸಂಬಂಧ ಹೊಂದಿದ್ದಾರೆ ಎಂಬುದನ್ನು ಕೂಡ ಅವನು ಕಂಡುಹಿಡಿದನು.

ಕಾದಂಬರಿಯ ಕೊನೆಯಲ್ಲಿ, ವೊಲ್ಡೆಮೊರ್ಟ್ ಮಿನಿಸ್ಟ್ರಿ ಆಫ್ ಮ್ಯಾಜಿಕ್‍ನಲ್ಲಿರುವ ಹ್ಯಾರಿಗೆ ಮತ್ತು ವೊಲ್ಡೆಮೊರ್ಟ್‌ಗೆ ಸಂಬಂಧಿಸಿದ ಭವಿಷ್ಯವಾಣಿಯ ದಾಖಲೆಯನ್ನು ಕದ್ದುತರುವಂತೆ ಹ್ಯಾರಿಯನ್ನು ಪ್ರಲೋಭಿಸುತ್ತಾನೆ. ಹ್ಯಾರಿ ಮತ್ತು ಅವನ ಸ್ನೇಹಿತರು ಹೋರಾಟದಲ್ಲಿ ವೊಲ್ಡೆಮೊರ್ಟ್‌ನ ಡೆತ್ ಈಟರ್‌ಗಳ ವಿರುದ್ಧ ಹೋರಾಡುವಾಗ ಭವಿಷ್ಯವಾಣಿಯ ದಾಖಲೆ ಚೂರು ಚೂರಾಗುತ್ತದೆ. ಆರ್ಡರ್ ಆಫ್ ದಿ ಫೀನಿಕ್ಸ್‌ನ ಸದಸ್ಯರು ಸರಿಯಾದ ಸಮಯಕ್ಕೆ ಬರುವುದರಿಂದ ಮಕ್ಕಳ ಜೀವ ಉಳಿಯುತ್ತದೆ. ಆದರೆ ಹೋರಾಟದಲ್ಲಿ ಹ್ಯಾರಿಯ ಹಿತಪೋಷಕ ಸಿರಿಸ್ ಬ್ಲ್ಯಾಕ್, ಬೆಲ್ಯಾಟ್ರಿಕ್ಸ್ ಲೆಸ್ಟ್ ರೇಂಜ್‍ನಿಂದ ಹತನಾಗುತ್ತಾನೆ. ಹ್ಯಾರಿ ಅವನ ಜೀವನದಲ್ಲಿ ನಾಲ್ಕನೆಯ ಬಾರಿ ಪ್ರವೇಶ ಭವನದಲ್ಲಿ ವೊಲ್ಡೆಮೊರ್ಟ್‌ನೊಂದಿಗೆ ಮುಖಾಮುಖಿಯಾಗುತ್ತಾನೆ. ಆದರೆ ಉಗ್ರ ಯುದ್ಧದಲ್ಲಿ ಡಾರ್ಕ್ ಲಾರ್ಡ್‌ನೊಂದಿಗೆ ಕಾದಾಡುತ್ತಿದ್ದ ಡಂಬಲ್ಡೋರ್ ಆತನನ್ನು ರಕ್ಷಿಸುತ್ತಾನೆ. ಕೊನೆಯಲ್ಲಿ ಬಹುಪಾಲು ಡೆತ್ ಈಟರ್‌ಗಳನ್ನು ಸೆರೆಹಿಡಿಯಲಾಗುತ್ತದೆ, ಹಾಗು ವೊಲ್ಡೆಮೊರ್ಟ್ ಮ್ಯಾಜಿಕ್ ಪ್ರಪಂಚದಿಂದ ಹಿಂದಿರುಗುವುದು ಖಚಿತವಾಗುತ್ತದೆ.[]

ಹೋರಾಟದ ನಂತರ ಡಂಬಲ್ಡೋರ್ ಹ್ಯಾರಿಗೆ ಅವನು ಹುಟ್ಟುವ ಸ್ವಲ್ಪ ಕಾಲದ ಮೊದಲು ವೊಲ್ಡೆಮೊರ್ಟ್‌ನನ್ನು ಸೋಲಿಸುವಂತಹ ಶಕ್ತಿಯುಳ್ಳ ಮಗುವೊಂದು ಜನಿಸಲಿದೆ ಎಂಬುದನ್ನು ಭವಿಷ್ಯವಾಣಿಯಲ್ಲಿ ತಿಳಿಸಲಾಗಿತ್ತು, ಎಂಬುದನ್ನು ವಿವರಿಸುತ್ತಾನೆ. ಭವಿಷ್ಯವಾಣಿಯು ಹ್ಯಾರಿ ಅಥವಾ ನೆವಿಲ್ಲೆ ಲಾಂಗ್ ಬಾಟಮ್ ಅನ್ನು ಸೂಚಿಸಿರಬಹುದು. ಆದರೆ ಹುಡುಕಿ ಕೊಲ್ಲಲು ಹ್ಯಾರಿಯನ್ನು ವೊಲ್ಡೆಮೊರ್ಟ್ ಆಯ್ಕೆ ಮಾಡಿಕೊಂಡಿದ್ದ. ವೊಲ್ಡೆಮೊರ್ಟ್ ಮರಳಿದ ನಂತರ ಸ್ವತಃ ಈಡೇರುವ ಭವಿಷ್ಯವಾಣಿಯ ಉಳಿದಿರುವ ದಾಖಲೆಯನ್ನು ಕಂಡುಹಿಡಿಯಲು ನಿರ್ಧರಿಸಿದನು. ಇದನ್ನು ಡಂಬಲ್ಡೋರ್ ಹ್ಯಾರಿಗೆ ತಿಳಿಯಪಡಿಸುತ್ತಾನೆ: ಮೊದಲನೆಯದಾಗಿ, "ಡಾರ್ಕ್ ಲಾರ್ಡ್ ಆತನನ್ನು ಅವನ ಸಮಾನವೆಂಬಂತೆ ಗುರುತಿಸಿದ್ದು", "ಇಬ್ಬರಲ್ಲಿ ಒಬ್ಬರು ಮಾತ್ರ ಬದುಕಬಲ್ಲರು"– ಅಂತಿಮವಾಗಿ, ಹ್ಯಾರಿ ಅಥವಾ ವೊಲ್ಡೆಮೊರ್ಟ್ ಮತ್ತೊಬ್ಬನನ್ನು ಕೊಲ್ಲುತ್ತಾರೆ.

ಬೆಳವಣಿಗೆ, ಪ್ರಕಟನೆ ಮತ್ತು ಸ್ವೀಕೃತಿ(ಒಪ್ಪಿಕೊಳ್ಳುವಿಕೆ)

ಬದಲಾಯಿಸಿ

ಬೆಳವಣಿಗೆ

ಬದಲಾಯಿಸಿ

ಬಿಬಿಸಿ ನ್ಯೂಸ್‍ನೊಂದಿಗೆ ನಡೆಸಲಾದ ಸಂದರ್ಶನದಲ್ಲಿ ರೌಲಿಂಗ್, ಪ್ರಧಾನ ಪಾತ್ರದ ಸಾವು ಬೇಸರವನ್ನುಂಟು ಮಾಡಿತ್ತೆಂದು ಸೂಚಿಸಿದ್ದಾರೆ.[] ಅಲ್ಲದೇ ಅವರಿಗೆ ಬೇಸರವಾಗದಿರಲು ಆ ಪಾತ್ರವನ್ನು ಉಳಿಸೆಂದು ಅವರ ಪತಿ ಸೂಚಿಸಿದ್ದರೂ ಕೂಡ, ಅವರು ಈ ಕಥಾನಕದಲ್ಲಿ "ನಿರ್ದಯಿ ಕೊಲೆಗಾರ್ತಿಯಾಗಬೇಕಾಯಿತೆಂದು ತಿಳಿಸಿದ್ದಾರೆ".[] ಅದೇನೇ ಆದರೂ ೨೦೦೭ರ ಸಂದರ್ಶನದಲ್ಲಿ ರೌಲಿಂಗ್, ಮೂಲತಃ ಅವರು ಈ ಪುಸ್ತಕದಲ್ಲಿ ಅರ್ಥುರ್ ವೆಸ್ಲೆಯ ಪಾತ್ರವನ್ನು ಕೊಲ್ಲಬೇಕೆಂದು ಯೋಜಿಸಿದ್ದರು. ಆದರೆ ಅಂತಿಮವಾಗಿ ಹಾಗೆ ಮಾಡಲಾಗಲಿಲ್ಲ.[] ಮತ್ತೊಂದು ಸಂದರ್ಶನದಲ್ಲಿ, ಏಳು ಕಾದಂಬರಿಗಳಲ್ಲಿ ಮತ್ತೆ ಏನನ್ನಾದರೂ ಬದಲಾಯಿಸಲು ಇದೆಯೇ ಎಂದು ಪ್ರಶ್ನಿಸಲ್ಪಟ್ಟಾಗ ರೌಲಿಂಗ್, ಅಂತಹ ಅವಕಾಶ ಸಿಕ್ಕಲ್ಲಿ ಅವರು ಫೀನಿಕ್ಸ್ ನನ್ನು ಮರುಸಂಪಾದಿಸಲು ಬಯಸುತ್ತೇನೆ, ಏಕೆಂದರೆ ಅದು ತುಸು ದೀರ್ಘವಾಗಿದೆ ಎನಿಸುತ್ತದೆಂದು ಪ್ರತಿಕ್ರಿಯಿಸಿದ್ದಾರೆ. ಸರಣಿಯಲ್ಲಿರುವ ಎಲ್ಲಾ ಇತರ ಪುಸ್ತಕಗಳು ೧೨ ಪಾಯಿಂಟ್ ಗ್ಯಾರ್ಮಂಡ್ ಫಾಂಟ್‍ನಲ್ಲಿದ್ದರೆ, ಫೀನಿಕ್ಸ್ ೧೧.೫ ಪಾಯಿಂಟ್ ಫಾಂಟ್‍ನಲ್ಲಿದೆ. ಇತರ ಪುಸ್ತಕಗಳಂತೆ ಇದನ್ನು ೧೨ ಪಾಯಿಂಟ್ ಫಾಂಟ್‍ನಲ್ಲಿ ಮುದ್ರಿಸಿದ್ದರೆ ಈ ಪುಸ್ತಕ ೧,೦೦೦ ಪುಟಗಳಷ್ಟು ದೊಡ್ಡದಾಗಿರುತ್ತಿತ್ತು.[]

ಪ್ರಕಟಣೆ ಮತ್ತು ಬಿಡುಗಡೆ

ಬದಲಾಯಿಸಿ

ಪಾಟರ್‌ನ ಅಭಿಮಾನಿಗಳು ನಾಲ್ಕನೆಯ ಮತ್ತು ಐದನೆಯ ಪುಸ್ತಕಗಳು ಬಿಡುಗಡೆಯಾಗುವ ನಡುವೆ ಮೂರು ವರ್ಷಗಳವರೆಗೆ ಕಾಯಬೇಕಾಯಿತು.[][] ಐದನೇ ಪುಸ್ತಕ ಬಿಡುಗಡೆ ಮಾಡುವ ಮೊದಲು, ಮೊದಲ ನಾಲ್ಕು ಪುಸ್ತಕಗಳ ೨೦೦ ಮಿಲಿಯನ್ ಪ್ರತಿಗಳು ಆಗಲೇ ಮಾರಾಟವಾಗಿದ್ದವು. ಅಲ್ಲದೇ ೨೦೦ ರಾಷ್ಟ್ರಗಳಲ್ಲಿ ೫೫ ಭಾಷೆಗಳಿಗೆ ಅನುವಾದ ಮಾಡಲಾಗಿತ್ತು.[] ಸರಣಿಗಳು ಜಾಗತಿಕ ಸಂಗತಿಯಾದಂತೆ ಪುಸ್ತಕವು ಮುಂಚಿತವಾಗಿ ಕಾಯ್ದಿರಿಸಿದ್ದ ಹೊಸ ದಾಖಲೆಯನ್ನೇ ಸೃಷ್ಟಿಸಿತು. ಆಗ ೨೦೦೩ರ ಜೂನ್ ೨೦ ರಂದು ಮಧ್ಯರಾತ್ರಿಯಲ್ಲಿ ಸಾವಿರಾರು ಜನ ಅವರ ಪುಸ್ತಕದ ಪ್ರತಿಗಳನ್ನು ಪಡೆಯಲು ಪುಸ್ತಕದ ಮಳಿಗೆಯ ಎದುರು ಕಾದಿದ್ದರು.[] ಭದ್ರ ಕಾವಲಿನ ಹೊರತಾಗಿಯೂ ಮರ್ಸಿಸೈಡ್‍ನ ಎರ್ಲ್ಸ್‌ಟೌನ್‍ನಲ್ಲಿನ ದಾಸ್ತಾನು ಮಳಿಗೆಯಲ್ಲಿ ೨೦೦೩ ರ ಜೂನ್ ೧೫ ರಂದು ಸಾವಿರಾರು ಪ್ರತಿಗಳನ್ನು ಅಪಹರಿಸಲಾಗಿತ್ತು.[೧೦]

ವಿಮರ್ಶಾತ್ಮಕ ಪ್ರತಿಕ್ರಿಯೆ

ಬದಲಾಯಿಸಿ

ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಪುಸ್ತಕಕ್ಕೆ ಸಾಮಾನ್ಯವಾಗಿ ಉತ್ತಮ ಪ್ರತಿಕ್ರಿಯೆ ದೊರೆಯಿತು. ಅಲ್ಲದೇ ಇದು ಅನೇಕ ಪ್ರಶಸ್ತಿಗಳನ್ನು ಕೂಡ ಗಳಿಸಿತು. ಯುವ ವಯಸ್ಕರಿಗೆ ಇದು ಅತ್ಯುತ್ತಮವಾದ ಪುಸ್ತಕವೆನ್ನಲಾಯಿತು. ಅಲ್ಲದೇ ೨೦೦೪ ರಲ್ಲಿ ಅಮೇರಿಕನ್ ಲೈಬ್ರರಿ ಅಸೋಸಿಯೇಷನ್‍ನಿಂದ ಗಮನಾರ್ಹ ಪುಸ್ತಕವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.[೧೧][೧೨] ಇದು ಇತರ ಅನೇಕ ಪ್ರಶಸ್ತಿಗಳೊಂದಿಗೆ, ಒಪೆನ್ ಹೆಮ್ ಟಾಯ್ ಪ್ರೊರ್ಟ್ಫೋಲಿಯೋ ದ ೨೦೦೪ ರ ಚಿನ್ನದ ಪದಕವನ್ನು ಕೂಡ ಪಡೆದುಕೊಂಡಿತು.[೧೩]

ಅಲ್ಲದೇ ಕಾದಂಬರಿ ವಿಮರ್ಶಕರಿಂದಲೂ ಕೂಡ ಎಲ್ಲೆಡೆಯೂ ಉತ್ತಮ ಮೆಚ್ಚುಗೆ ಪಡೆಯಿತು. ರೌಲಿಂಗ್‍ರನ್ನು ಅವರ ಕಲ್ಪನೆಗಾಗಿ ಯುಎಸ್ಎ ಟುಡೇ ಯ ಬರಹಗಾರ ಡೈರ್ಡ್ರೆ ಡೊನಾಹೆಯವರು ಪ್ರಶಂಸಿಸಿದರು.[೧೪] ಟೀಕಿಸಿದ ಬಹುಪಾಲು ವಿಮರ್ಶಕರು ಕಾದಂಬರಿಯಲ್ಲಿದ್ದ ಅಹಿಂಸೆ ಮತ್ತು ಪುಸ್ತಕದುದ್ದಕ್ಕೂ ಬರುವ ನೈತಿಕ ಸಂಗತಿಗಳನ್ನು ಕುರಿತಂತೆ ಇದ್ದ ಕಾಳಜಿಯನ್ನು ವಿಶ್ಲೇಷಿಸಿದ್ದರು.[೧೫] ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದಂತೆ ಬಲವಾದ ಧಾರ್ಮಿಕ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.

ನ್ಯೂಯಾರ್ಕ್ ಟೈಮ್ಸ್‌ನ ಬರಹಗಾರ ಜಾನ್ ಲಿವೊನಾರ್ಡ್, "ದಿ ಆರ್ಡರ್ ಆಫ್ ದಿ ಫೀನಿಕ್ಸ್, ಮಂದಗತಿಯಲ್ಲಿ ಆರಂಭವಾಗಿ ವೇಗವನ್ನು ತಂದುಕೊಂಡು ಅದರ ಬಿರುಸಿನ ಅಂತ್ಯದ ಕಡೆಗೆ ಲಾಗ ಹಾಕುತ್ತ, ಪುಟಿದು ವೇಗವಾಗಿ ಸಾಗುತ್ತದೆ....ಹ್ಯಾರಿ ದೊಡ್ಡವನಾಗುತ್ತ ಹೋದಂತೆ ರೌಲಿಂಗ್ ಉತ್ತಮವಾಗಿ ಚಿತ್ರಿಸುತ್ತಾ ಹೋಗಿದ್ದಾರೆ ಎಂದು ಕಾದಂಬರಿ ಕುರಿತು ಹಲವರಿಂದ ಮೆಚ್ಚುಗೆ ಸೂಚಿತವಾಗಿದೆ".[೧೬] ಆದರೂ ಕೂಡ ಅವರು ಪ್ರತಿಸ್ಪರ್ಧಿ "ಡ್ರಾಕೊ ಮ್ಯಾಫೈ" ಮತ್ತು ಊಹಿಸಬಹುದಾದ ವೊಲ್ಡೆಮೊರ್ಟ್‌ರನ್ನು ಟೀಕಿಸಿದ್ದಾರೆ.[೧೬] ಕ್ರಿಸ್ಚಿಯನ್ ರೈಟ್ ಗ್ರೂಪ್‍ನ ಫೋಕಸ್ ಆನ್ ದಿ ಫ್ಯಾಮಿಲಿ ಸಂಸ್ಥೆಯ ಜೂಲಿ ಸ್ಮಿತ್ ಹೌಸರ್‌ರವರು ನೀಡಿರುವ ಮತ್ತೊಂದು ವಿಮರ್ಶೆಯಲ್ಲಿ ಪುಸ್ತಕವನ್ನು ಕುರಿತು ಕೆಳಕಂಡಂತೆ ಹೇಳಿದ್ದಾರೆ: "ಸರಣಿಗಳಲ್ಲಿ ಬಂದ ಎಲ್ಲಾ ಪುಸ್ತಕಗಳಲ್ಲಿ ಇದು ಅತ್ಯಂತ ದುರ್ಬಲವಾಗಿದ್ದು, ಹಿಂದಿನ ಎರಡು ಕಾದಂಬರಿಗಳಿಗಿಂತ ಫೀನಿಕ್ಸ್ ಹೆಚ್ಚು ದಾರುಣವಾಗಿರುವಂತೆ ಕಂಡುಬರುವುದಿಲ್ಲ."[೧೫] ಸ್ಮಿತ್ ಹೌಸರ್, ಪುಸ್ತಕ ನೈತಿಕವಾಗಿ ಅಷ್ಟಾಗಿ ಸಮರ್ಥವಾಗಿಲ್ಲವೆಂದೂ ಟೀಕಿಸಿದ್ದಾರೆ. ಹ್ಯಾರಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಸುಳ್ಳುಹೇಳುತ್ತಾನೆ. ಅಲ್ಲದೇ ಆ ಸಮಯದಲ್ಲಿ ಅಹಿಂಸೆ "ಭೀಕರವಾಗಿರುತ್ತದೆ, ಮತ್ತು ಕಣ್ಣಿಗೆ ಕಟ್ಟಿದಂತಿರುತ್ತದೆ."[೧೫]

ಅನೇಕ ಕ್ರೈಸ್ತ ಗುಂಪುಗಳು, ಈ ಪುಸ್ತಕ ಮತ್ತು ಹ್ಯಾರಿ ಪಾಟರ್ ಸರಣಿಯ ಉಳಿದ ಪುಸ್ತಕಗಳು ವಾಮಾಚಾರ ಅಥವಾ ಇಂದ್ರಜಾಲಕ್ಕೆ ಉಲ್ಲೇಖ ಹೊಂದಿವೆ ಎಂಬುದನ್ನು ತಮ್ಮ ಅಭಿಪ್ರಾಯದಲ್ಲಿ ವ್ಯಕ್ತಪಡಿಸಿವೆ. ಅನೇಕ ಧಾರ್ಮಿಕ ಗುಂಪುಗಳು ಕೂಡ ಸರಣಿಗಳಿಗೆ ಅವರ ಬೆಂಬಲ ವ್ಯಕ್ತಪಡಿಸಿವೆ. ಕ್ರಿಸ್ಚ್ಯಾನಿಟಿ ಟುಡೇ ನಿಯತಕಾಲಿಕೆಯು ಪುಸ್ತಕವನ್ನು ಹೊಗಳಿ ೨೦೦೦ ಜನವರಿಯಲ್ಲಿ ಸಂಪಾದಕೀಯವನ್ನು ಪ್ರಕಟಿಸಿತು. ಈ ಸಂಪಾದಕೀಯದಲ್ಲಿ ಸರಣಿಯನ್ನು "ಸದ್ಗುಣಗಳ ಪುಸ್ತಕ"ವೆಂದು ಕರೆಯಿತಲ್ಲದೇ, "ವಾಸ್ತವವಾಗಿ ಆಧುನಿಕ ವಾಮಚಾರವು ಮಕ್ಕಳನ್ನು ಆಕರ್ಷಿಸುತ್ತದೆ, ಈ ಪ್ರಲೋಭಕ ಹುಸಿ ಧರ್ಮದಿಂದ ನಮ್ಮ ಮಕ್ಕಳನ್ನು ನಾವು ರಕ್ಷಿಸಲೇಬೇಕು", ಇದು "ಅನುಕಂಪ, ನಿಷ್ಠೆ, ಧೈರ್ಯ, ಸ್ನೇಹ ಮತ್ತು ತ್ಯಾಗಗಳ ಅತ್ಯುತ್ತಮ ಉದಾಹರಣೆಗಳನ್ನು ಹೊಂದಿರುವದಾದರೂ" ಇದು ಎಲ್ಲಾ ಪಾಟರ್ ಪುಸ್ತಕಗಳನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ಹೇಳುವ ಮೂಲಕ ಮೇಲ್ಕಂಡ ವಾಕ್ಯವನ್ನು ಸಂಪಾದಕೀಯದಲ್ಲಿ ಸಮರ್ಥಿಸಿದೆ.[೧೭]

ಕೃತಿಯ ಘಟನೆಗಳನ್ನೇ ಹೋಲುವ ಕಥೆಗಳು ಮತ್ತು ಅದರ ಉತ್ತರ ಭಾಗಗಳು

ಬದಲಾಯಿಸಿ

ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್, ಹ್ಯಾರಿ ಪಾಟರ್ ಸರಣಿಯಲ್ಲಿ ಐದನೇ ಪುಸ್ತಕವಾಗಿದೆ.[] ಈ ಸರಣಿಯ ಮೊದಲ ಪುಸ್ತಕ ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್ ಅನ್ನು ೧೯೯೭ ರಲ್ಲಿ ಬ್ಲೂಮ್ಸ್‌ಬರಿ ಪ್ರಕಾಶನ ಸಂಸ್ಥೆ ಆರಂಭಿಕ ೫೦೦ ಮುದ್ರಣ ಪ್ರತಿಗಳನ್ನು ಗಟ್ಟಿರಟ್ಟಿನ ಹೊದಿಕೆಯುಳ್ಳ ಪುಸ್ತಕದಲ್ಲಿ ಪ್ರಕಟಿಸಿತು. ಅವುಗಳಲ್ಲಿ ಮುನ್ನೂರಷ್ಟನ್ನು ಗ್ರಂಥಾಲಯಗಳಿಗೆ ವಿತರಿಸಲಾಗಿತ್ತು.[೧೮] ಆಗ ೧೯೯೭ರ ಕೊನೆಯ ಹೊತ್ತಿಗೆ ಯುಕೆ ಆವೃತ್ತಿ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಯನ್ನು ಗಳಿಸಿತು. ಅಲ್ಲದೇ ನೆಸ್ಲೆ ಸ್ಮಾರ್ಟೀಸ್ ಬುಕ್‍ಪ್ರೈಸ್‍ನ ೯ ರಿಂದ ೧೧ ವರ್ಷದ ವರ್ಗದೊಳಗೆ ಬರುವ ಪುಸ್ತಕಗಳಿಗೆ ನೀಡುವ ಚಿನ್ನದ ಪದಕವನ್ನೂ ಪಡೆಯಿತು.[೧೯] ಎರಡನೆಯ ಪುಸ್ತಕ ಹ್ಯಾರಿ ಪಾಟರ್ ಅಂಡ್ ದಿ ಛೆಂಬರ್ ಆಫ್ ಸೀಕ್ರೆಟ್ಸ್, ಮೂಲತಃ ಯುಕೆಯಲ್ಲಿ ೧೯೯೮ರ ಜುಲೈ ೨ ರಂದು ಮತ್ತು ಯುಎಸ್‍ನಲ್ಲಿ ೧೯೯೯ ರ ಜೂನ್ ೨ ರಂದು ಪ್ರಕಟಗೊಂಡಿತು.[೨೦][೨೧] ಹ್ಯಾರಿ ಪಾಟರ್ ಆಂಡ್ ದಿ ಪ್ರಿಸ್ನರ್ ಆಫ್ ಅಸ್ಕಬಾನ್ ಅನ್ನು ಒಂದು ವರ್ಷದ ನಂತರ ಯುಕೆಯಲ್ಲಿ ೧೯೯೯ರ ಜುಲೈ ೮ ರಂದು ಹಾಗೂ ಯುಎಸ್‍ನಲ್ಲಿ ೧೯೯೯ ಸೆಪ್ಟೆಂಬರ್ ೮ ರಂದು ಪ್ರಕಾಶಿಸಲಾಯಿತು.[೨೦][೨೧] ಹ್ಯಾರಿ ಪಾಟರ್ ಅಂಡ್ ದಿ ಗಾಬ್ಲೆಟ್ ಆಫ್ ಫೈರ್ ಅನ್ನು ೨೦೦೦ ನೆಯ ಜುಲೈ ೮ ರಂದು ಬ್ಲೂಮ್ಸ್‌ಬರಿ ಮತ್ತು ಸ್ಕೂಲಸ್ಟಿಕ್ ಪ್ರಕಾಶನ ಸಂಸ್ಥೆಗಳು ಏಕಕಾಲದಲ್ಲಿ ಪ್ರಕಟಿಸಿದ್ದವು.[೨೨]

ಆರ್ಡರ್ ಆಫ್ ದಿ ಫೀನಿಕ್ಸ್ ನ ಪ್ರಕಟಣೆಯ ನಂತರ ಸರಣಿಯ ಆರನೇ ಪುಸ್ತಕ ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್ ಅನ್ನು ೨೦೦೫ ರ ಜುಲೈ ೧೬ ರಂದು ಪ್ರಕಟಿಸಲಾಯಿತು. ಅಲ್ಲದೇ ಪ್ರಪಂಚದಾದ್ಯಂತ ಇದು ಬಿಡುಗಡೆಯಾದ ಮೊದಲ ೨೪ ಗಂಟೆಗಳಲ್ಲಿ ಇದರ ೯ ಮಿಲಿಯನ್ ಪ್ರತಿಗಳು ಮಾರಾಟವಾಗಿದ್ದವು.[][೨೩] ಏಳನೆ ಮತ್ತು ಅಂತಿಮ ಕಾದಂಬರಿ,ಹ್ಯಾರಿ ಪಾಟರ್ ಅಂಡ್ ದಿ ಡೆಥ್ಲಿ ಹ್ಯಾಲೋಸ್ ಅನ್ನು ೨೦೦೭ ರ ಜುಲೈ ೨೧ ರಂದು ಪ್ರಕಟಿಸಲಾಯಿತು.[೨೪] ಇದರ ಬಿಡುಗಡೆಯಾದ ೨೪ ಗಂಟೆಗಳ ಒಳಗೆ ೧೧ ಮಿಲಿಯನ್ ಪ್ರತಿಗಳು ಮಾರಾಟಗೊಂಡವು: ೨.೭ ಮಿಲಿಯನ್ ಪ್ರತಿಗಳು ಯುಕೆಯಲ್ಲಿ ಹಾಗೂ ೮.೩ ಮಿಲಿಯನ್ ಯುಎಸ್‍ನಲ್ಲಿ ಮಾರಾಟವಾಗಿದ್ದವು.[೨೩]

ರೂಪಾಂತರಗಳು(ಅಳವಡಿಕೆಗಳು)

ಬದಲಾಯಿಸಿ

ಚಲನಚಿತ್ರ

ಬದಲಾಯಿಸಿ

ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಅನ್ನು ೨೦೦೭ರಲ್ಲಿ, ಚಲನಚಿತ್ರ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಯಿತು. ಇದನ್ನು ಮೈಕೆಲ್ ಗೋಲ್ಡನ್‍ಬರ್ಗ್‌ರವರು ಬರೆದ ಚಿತ್ರಕಥೆಯಿಂದ ಡೇವಿಡ್ ಯೇಟ್ಸ್ ನಿರ್ದೇಶಿಸಿದ್ದರು. ಈ ಚಲನಚಿತ್ರವನ್ನು, ಡೇವಿಡ್ ಬರೋನ್‍ನೊಂದಿಗೆ ಸೇರಿ ಡೇವಿಡ್ ಹೇಮ್ಯಾನ್‍ರ ಕಂಪನಿ ಮತ್ತು ಹೇಡೇ ಫಿಲ್ಮ್ಸ್ ನಿರ್ಮಿಸಿತು. ಈ ಚಿತ್ರಕ್ಕಾಗಿ £೭೫ ರಿಂದ ೧೦೦ ಮಿಲಿಯನ್ ($೧೫೦–೨೦೦ ಮಿಲಿಯನ್),[೨೫][೨೬] ನಷ್ಟು ಖರ್ಚು ಮಾಡಲಾಗಿದೆಯೆಂದು ವರದಿಮಾಡಲಾಗಿದೆ. ಅಲ್ಲದೇ ಇದು ಹನ್ನೊಂದನೇ ಸ್ಥಾನದಲ್ಲಿರುವ ಅತ್ಯಧಿಕ ಹಣಗಳಿಸಿದ ಸಾರ್ವಕಾಲಿಕ ಚಲನಚಿತ್ರವಾಯಿತು, ಹಾಗು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ವಾಣಿಜ್ಯ ಯಶಸ್ಸನ್ನು ಕೂಡ ಗಳಿಸಿತು.[೨೭] ಚಲನಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡಿದ ೫-ದಿನಗಳೊಳಗೆ $೩೩೩ ಮಿಲಿಯನ್ ಅನ್ನು ಗಳಿಸಿತು. ಅಲ್ಲದೇ ಸಾರ್ವಕಾಲಿಕ ಮೂರನೆಯ ಚಿತ್ರವಾಗುವುದರೊಂದಿಗೆ ಒಟ್ಟು $೯೩೮.೩೭೭.೦೦೦ ಮಿಲಿಯನ್ ಅನ್ನು ಬಾಚಿಕೊಂಡಿತು; ಹಾಗು ೨೦೦೭ ರಲ್ಲಿ ಒಟ್ಟಾಗಿ ಅತ್ಯಂತ ಹೆಚ್ಚು ಹಣಗಳಿಸಿದ ಚಲನಚಿತ್ರಗಳಲ್ಲಿ ಇದು ಪೈರೇಟ್ಸ್ ಆಫ್ ದ ಕೆರಿಬಿಯನ್: ಆಟ್ ವರ್ಲ್ಡ್ಸ್ ಎಂಡ್ ನಂತರ ಎರಡನೆಯ ಸ್ಥಾನ ಗಳಿಸಿತು.[೨೮][೨೯]

ವಿಡಿಯೋ ಗೇಮ್ಸ್‌

ಬದಲಾಯಿಸಿ

ಪುಸ್ತಕದ ಮತ್ತು ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ನ ಚಲನಚಿತ್ರ ಆವೃತ್ತಿಯ ವಿಡಿಯೋ ಗೇಮ್ ರೂಪಾಂತರಗಳನ್ನು, ಮೈಕ್ರೋಸಾಫ್ಟ್ ವಿಂಡೋಸ್, ಪ್ಲೇಸ್ಟೇಷನ್ ೨, ಪ್ಲೇಸ್ಟೇಷನ್ ೩, ಎಕ್ಸ್ ಬಾಕ್ಸ್ ೩೬೦, PSP, ನಿಂಟೆಂಡೊ DS, ವೀ, ಗೇಮ್ ಬಾಯ್ ಅಡ್ವಾನ್ಸ್ ಮತ್ತು ಮ್ಯಾಕ್ OS Xಗಳಿಗಾಗಿ ನಿರ್ಮಿಸಲಾಯಿತು.[೩೦] ಇದನ್ನು ೨೦೦೭ ರ ಜುಲೈ ೨೫ ರಂದು ಯುಎಸ್‍ನಲ್ಲಿ, ೨೦೦೭ ರ ಜೂನ್ ೨೮ ರಂದು ಆಸ್ಟ್ರೇಲಿಯಾದಲ್ಲಿ ಮತ್ತು ೨೦೦೭ ರ ಜೂನ್ ೨೯ ರಂದು ಇಂಗ್ಲೆಂಡ್‍ನಲ್ಲಿ ಪ್ಲೇಸ್ಟೇಷನ್ ೩, PSP, ಪ್ಲೇಸ್ಟೇಷನ್ ೨, ವಿಂಡೋಸ್‍ಗಳಿಗಾಗಿ ಬಿಡುಗಡೆ ಮಾಡಲಾಯಿತು. ಅಲ್ಲದೇ ೨೦೦೭ ರ ಜುಲೈ ೩ ರಂದು ಇತರ ಬಹುಪಾಲು ವೇದಿಕೆಗಳಿಗಾಗಿ ಬಿಡುಗಡೆ ಮಾಡಲಾಯಿತು.[೩೧] ಎಲೆಕ್ಟ್ರಾನಿಕ್ ಆರ್ಟ್ಸ್ ಗೇಮ್‍ಗಳನ್ನು ಪ್ರಕಟಿಸಿದೆ.[೩೨]

ಧಾರ್ಮಿಕ ಪ್ರತಿಕ್ರಿಯೆ

ಬದಲಾಯಿಸಿ

ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಮತ್ತು ಹ್ಯಾರಿ ಪಾಟರ್ ಸರಣಿಗಳಲ್ಲಿರುವ ಪುಸ್ತಕಗಳ ಸುತ್ತ ಸುಳಿದಾಡಿದ ವಿವಾದಗಳು, ಕಾದಂಬರಿಯು ಒಳಗೊಂಡಿರುವ ಐಂದ್ರಜಾಲಿಕ ಅಥವಾ ಸೈತಾನನ ಉಪಪಠ್ಯಗಳಿಗೆ ಸಂಬಂಧಿಸಿದೆ. ಸರಣಿ ಕುರಿತು ನೀಡಲಾದ ಧಾರ್ಮಿಕ ಪ್ರತಿಕ್ರಿಯೆಗಳು ಕೇವಲ ನಕಾರಾತ್ಮಕವಾಗಿರಲಿಲ್ಲ. "ಅವರು ಕೊನೆಯ ಪಕ್ಷ ದೇವತಾಶಾಸ್ತ್ರದ ದೃಷ್ಟಿಕೋನದಿಂದಲಾದರೂ ಟೀಕಿಸಿದ್ದರೆ" ಒಳಿತು ಎಂದು ರೌಲಿಂಗ್ ತಿಳಿಸಿದ್ದಾರೆ, "ಪುಸ್ತಕವನ್ನು ಪ್ರಶಂಸಿಸಿದ್ದಾರೆ ಮತ್ತು ಧಾರ್ಮಿಕ ಉಪದೇಶ ನೀಡುವವರೂ ಅದನ್ನು ಒಪ್ಪಿಕೊಂಡಿದ್ದಾರೆ, ಅಲ್ಲದೇ ಅನೇಕ ವಿಭಿನ್ನ ನಂಬಿಕೆಗಳಿಂದ ಇದನ್ನು ರಚಿಸಲಾಗಿದೆ, ಹೀಗೆ ಇದು ಅತ್ಯಂತ ಆಸಕ್ತಿದಾಯಕ ಮತ್ತು ತೃಪ್ತಿಕರ ವಿಷಯವಾಗಿದೆ".[೩೩]

ಸರಣಿಗಳಿಗೆ ವಿರೋಧ

ಬದಲಾಯಿಸಿ

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಶಾಲೆಗಳು ಪುಸ್ತಕದ ಬಿಡುಗಡೆಯನ್ನು ನಿಷೇಧಿಸಿದವು. ಇದು ವ್ಯಾಪಕ ಪ್ರಚಾರ ಪಡೆದ ಕಾನೂನಿನ ಮೊಕದ್ದಮೆಗಳಿಗೆ ಕಾರಣವಾಯಿತು. ಮಂತ್ರವಿದ್ಯೆ ಸರ್ಕಾರದಿಂದ ಮಾತ್ರ ಇದು ಗುರುತಿಸಲ್ಪಟ್ಟ ಧರ್ಮವಾಗಿದೆ, ಎಂದು ಇದನ್ನು ವಿರೋಧಿಸಲಾಯಿತು. ಅಲ್ಲದೇ ಸಾರ್ವಜನಿಕ ಶಾಲೆಯಲ್ಲಿ ಈ ಕಾದಂಬರಿಗೆ ಅವಕಾಶ ನೀಡುವುದರಿಂದ ಅದು ಚರ್ಚ್ ಮತ್ತು ರಾಜ್ಯದ ನಡುವೆ ಇರುವ ಪ್ರತ್ಯೇಕತೆಯನ್ನು ಉಲ್ಲಂಘಿಸುತ್ತದೆ.[][೩೪][೩೫] ಸರಣಿಯು ಅಮೇರಿಕನ್ ಲೈಬ್ರರಿ ಅಸೋಸಿಯೇಷನ್‍ನ ೧೯೯೯–೨೦೦೧ ರ "ಅತ್ಯಂತ ವಿವಾದಕ್ಕೆ ಒಳಪಟ್ಟ ಪುಸ್ತಕಗಳ" ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು.[೧೯]

ಅನೇಕ ರಾಷ್ಟ್ರಗಳಲ್ಲಿ ಸರಣಿಗಳಿಗೆ ಧಾರ್ಮಿಕ ವಿರೋಧವನ್ನು ಕೂಡ ವ್ಯಕ್ತಪಡಿಸಲಾಯಿತು. ಗ್ರೀಸ್ ಮತ್ತು ಬಲ್ಗೇರಿಯಾದ ಸಾಂಪ್ರದಾಯಿಕ ಚರ್ಚ್‌ಗಳು ಸರಣಿಗಳ ವಿರುದ್ಧ ಪ್ರತಿಭಟನೆ ನಡೆಸಿದವು.[೩೬][೩೭] ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿನ ಖಾಸಗಿ ಶಾಲೆಗಳಲ್ಲಿ ಈ ಪುಸ್ತಕವನ್ನು ನಿಷೇಧಿಸಲಾಗಿತ್ತು. ಅಲ್ಲದೇ ಇರಾನಿನ ರಾಜ್ಯ ಒಡೆತನದ ಪತ್ರಿಕೆ ಇದನ್ನು ಟೀಕಿಸಿತ್ತು.[೩೮][೩೯]

ಸರಣಿಯ ಬಗೆಗೆ ರೋಮನ್ ಕ್ಯಾಥೋಲಿಕ್ಕರಲ್ಲಿಯೇ ಇದರ ಬಗೆಗಿನ ಅಭಿಪ್ರಾಯ ವಿಭಿನ್ನವಾಗಿತ್ತು. ಆದರೆ ೨೦೦೩ರಲ್ಲಿ ಕ್ಯಾಥೋಲಿಕ್ ವಲ್ಡ್ ರಿಪೋರ್ಟ್ನಲ್ಲಿ ಇದರ ನಿಯಮಗಳು ಮತ್ತು ಅಧಿಕಾರಿಗಳ ಕಡೆಗೆ ಹ್ಯಾರಿ ಹೊಂದಿದ್ದ ಅಗೌರವವನ್ನು ಟೀಕಿಸಿತು. ಅಲ್ಲದೇ ಮ್ಯಾಜಿಕಲ್ ಮತ್ತು ಲೌಕಿಕ ಪ್ರಪಂಚವನ್ನು "ಸೃಷ್ಟಿಯಲ್ಲಿನ ದೈವೀ ಆದೇಶದ ಮೂಲಭೂತ ನಿರಾಕರಣೆ"ಯಂತೆ ಬೆರೆಸಿರುವುದಕ್ಕಾಗಿ ಸರಣಿಯನ್ನು ದೂಷಿಸಿದೆ.[೪೦] ಆಗ ೨೦೦೫ ರಲ್ಲಿ ಧಾರ್ಮಿಕ ಕೂಟದ ಮುಖ್ಯಸ್ಥರಾಗಿ, ಅದೇ ವರ್ಷ ಅನಂತರ ಪೋಪ್ ಸ್ಥಾನ ಅಲಂಲರಿಸಿದ ಧರ್ಮಪಾಲಕ ಜೋಸೆಫ್ ರಾಟ್ಜಿಂಗರ್, ನಂಬಿಕೆಯ ಸಿದ್ಧಾಂತ ಕುರಿತು ಮಾತನಾಡುವಾಗ ಸರಣಿಯ ಬಗ್ಗೆ ಹೀಗೆಂದಿದ್ದಾರೆ: "ಇದು ಗಮನಕ್ಕೆ ಬರದಂತೆಯೇ ನಮ್ಮನ್ನು ಆಕರ್ಷಿಸುವ ಸೂಕ್ಷ್ಮ ಪ್ರಲೋಭನೆಯಾಗಿದ್ದು, ಸರಿಯಾಗಿ ಬೆಳೆಯುವ ಮೊದಲೇ ಆಳದಲ್ಲಿ ಕ್ರೈಸ್ತ ಧರ್ಮವನ್ನೇ ಹಾಳು ಮಾಡಿಬಿಡಬಹುದು" ಎಂದು ವಿವರಿಸಿದ್ದಾರೆ."[೪೧] ಅಲ್ಲದೇ ಈ ಅಭಿಪ್ರಾಯ ವ್ಯಕ್ತಪಡಿಸುವ ಪತ್ರವನ್ನು ಪ್ರಕಟಿಸಲು ಅನುಮತಿ ನೀಡಿದರು.[೪೨] ವೆಸ್ಟ್‌ಮಿನಸ್ಟರ್‌ನ ಆರ್ಚ್‌ಬಿಷಪ್‍ರ ವಕ್ತಾರ, ಧರ್ಮಪಾಲಕ ರಾಟ್ಜಿಂಗರ್‌ರವರ ಮಾತುಗಳು ಬದ್ಧತೆ ಹೊಂದಿಲ್ಲ, ಏಕೆಂದರೆ ಇದು ನಂಬಿಕೆ ಸಿದ್ಧಾಂತಕ್ಕೆಂದು ಧಾರ್ಮಿಕ ಕೂಟದಲ್ಲಿ ಮಾಡಿದ ಅಧಿಕೃತ ಪ್ರಕಟಣೆಯಲ್ಲ ಎಂದೂ ತಿಳಿಸಿದ್ದರು.[೪೧]

ಸಕಾರಾತ್ಮಕ ಪ್ರತಿಕ್ರಿಯೆಗಳು

ಬದಲಾಯಿಸಿ

ಕೆಲವು ಧಾರ್ಮಿಕ ಪ್ರತಿಕ್ರಿಯೆಗಳು ಸಕಾರಾತ್ಮಕವಾಗಿದ್ದವು. ಎಮಿಲಿ ಗ್ರೀಸಿಂಗರ್, ಕಲ್ಪನಾ ಸಾಹಿತ್ಯ ಮಕ್ಕಳಿಗೆ ಸತ್ಯದೊಂದಿಗೆ ಹೇಗೆ ಬದುಕಬೇಕೆಂಬುದನ್ನು ಕಲಿಸಲು ಸಹಾಯ ಮಾಡುತ್ತದೆ. ಪ್ಲ್ಯಾಟ್‌ಫಾರ್ಮ್ ೯¾ ಮೂಲಕ ಹ್ಯಾರಿಯ ಮೊದಲ ಪ್ರಯಾಣವು, ನಂಬಿಕೆ ಮತ್ತು ಭರವಸೆಯ ಅನ್ವಯಿಕೆಯಾಗಿದೆ ಎಂದು ವಿವರಿಸುತ್ತಾರೆ. ಅಲ್ಲದೇ ಅವನು ಎಲ್ಲರಿಗಿಂತ ಮೊದಲು ಸಾರ್ಟಿಂಗ್ ಹ್ಯಾಟ್ (ಸಮಸ್ಯೆಗಳನ್ನು ಬಗೆಹರಿಸುವ ಟೋಪಿಯೊಂದಿಗೆ) ನನ್ನು ಎದುರಿಸುತ್ತಾನೆ. ಮೊದಲನೆಯ ಪುಸ್ತಕದಲ್ಲಿ ಹ್ಯಾರಿಯನ್ನು ಕಾಪಾಡುವ ಆತನ ತಾಯಿಯ ತ್ಯಾಗವನ್ನು ಅವರು ಪರಿಗಣಿಸಿದ್ದಾರೆ. ಅಲ್ಲದೇ ಸರಣಿಗಳ ಉದ್ದಕ್ಕೂ ಮಂತ್ರವಾದಿಯ ಮ್ಯಾಜಿಕಲ್ "ತಂತ್ರವನ್ನು" ಮೀರಿಸುವಂತಹ ಹಾಗು ಶಕ್ತಿಯ ಹಂಬಲದಲ್ಲಿದ್ದ ವೊಲ್ಡೆಮಾರ್ಟ್‌ ಅರ್ಥಮಾಡಿಕೊಳ್ಳಲು ಸಾಧ್ಯವಾಗದ, ಅತ್ಯಂತ ಪ್ರಬಲ "ಆಳವಾದ ಮ್ಯಾಜಿಕ್" ಗಳನ್ನು ಸಾದರಪಡಿಸಲಾಗಿದೆ.[೪೩]

ಪುಸ್ತಕದ ಬಗ್ಗೆ ಕೆಲವು ಸಕಾರಾತ್ಮಕ ರೋಮನ್ ಕ್ಯಾಥೋಲಿಕ್ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಲಾಗಿದೆ. ಚರ್ಚ್ ವರ್ಕಿಂಗ್ ಪಕ್ಷದ ಸದಸ್ಯರಾಗಿರುವ ಮಾನ್ ಸಿಂಗ್ನಾರ್ ಪೀಟರ್ ಫ್ಲೀಟ್‍ವುಡ್, ೨೦೦೩ರಲ್ಲಿ ಹೊಸ ಯುಗದ ಸಂಗತಿಗಳು ಕುರಿತಂತೆ, ಹ್ಯಾರಿ ಪಾಟರ್ ನ "ಕಥೆಗಳು ಕೆಟ್ಟದಾಗಿಲ್ಲ ಮತ್ತು ಕ್ರೈಸ್ತ ವಿರೋಧಿ ಸಿದ್ಧಾಂತಕ್ಕಾಗಿ ನಿಷೇಧಿಸುವಂತೆಯೂ ಇಲ್ಲ ಎಂದಿದ್ದಾರೆ. ಅವರು ಒಳ್ಳೆಯದು ಮತ್ತು ಕೆಟ್ಟದರ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವಲ್ಲಿ ಮಕ್ಕಳಿಗೆ ಸಹಾಯ ಮಾಡಿದ್ದಾರೆ", ರೌಲಿಂಗ್‌ ಕ್ರೈಸ್ತಧರ್ಮಕ್ಕೆ ಅನುಸಾರವಾಗಿಯೇ ಇದನ್ನು ಬರೆದಿದ್ದಾರೆ. ಅಲ್ಲದೇ ಕಥೆಗಳು ಕೆಟ್ಟದ್ದನ್ನು ಸೋಲಿಸಲು ತ್ಯಾಗ ಮಾಡಬೇಕೆಂಬುದನ್ನು ಚಿತ್ರಿಸುತ್ತವೆ ಎಂದು ಹೇಳಿದ್ದಾರೆ.[೪೧][೪೪]

ಅನುವಾದಗಳು

ಬದಲಾಯಿಸಿ

ವಿದೇಶದಲ್ಲಿನ ಪುಸ್ತಕದ ಮೊದಲ ಅಧಿಕೃತ ಅನುವಾದವು ವಿಯೆಟ್ನಾಮೀಸ್ ಭಾಷೆಯಲ್ಲಿದ್ದು, ಇದರ ಅನುವಾದ ೨೦೦೩ ರ ಜುಲೈ ೨೧ ರಂದು ಮೊದಲ ಇಪ್ಪತ್ತೆರೆಡು ಕಂತುಗಳಲ್ಲಿನ ಬಿಡುಗಡೆಯಲ್ಲಿ ಕಂಡುಬಂದಿದೆ. ಮೊದಲ ಅಧಿಕೃತ ಯುರೋಪಿಯನ್ ಅನುವಾದವು ಸೈಬೀರಿಯಾ ಭಾಷೆಯಲ್ಲಿದ್ದು, ಸೈಬೀರಿಯಾ ಮತ್ತು ಮಾಂಟೆನೆಗ್ರೊ‍ನಲ್ಲಿ ಕಂಡುಬಂದಿತು. ಇದನ್ನು ೨೦೦೩ ರ ಸೆಪ್ಟೆಂಬರ್ ಮೊದಲಾರ್ಧದಲ್ಲಿ ಅಧಿಕೃತ ಪ್ರಕಾಶಕ ನ್ಯಾರೊಡ್ನಾ ಕ್ನಿಜಿಗಾ ರವರು ಪ್ರಕಟಿಸಿದ್ದರು. ಇತರ ಅನುವಾದಗಳು ಅನಂತರ ಕಂಡುಬಂದವು, ಉದಾಹರಣೆಗೆ ೨೦೦೩ರ ನವೆಂಬರ್‌ನಲ್ಲಿ ಡಚ್ ಮತ್ತು ಜರ್ಮನ್‍ನಲ್ಲಿ ಕಾಣಿಸಿದವು. ಫ್ರಾನ್ಸ್‌ನಲ್ಲಿ ಇಂಗ್ಲೀಷ್ ಭಾಷೆಯ ಆವೃತ್ತಿಯು ಅತ್ಯುತ್ತಮ ಮಾರಾಟದ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು. ಜರ್ಮನಿ ಮತ್ತು ನೆದರ್ಲೆಂಡ್‍ಗಳಲ್ಲಿ ಅನಧಿಕೃತವಾಗಿ ವಿತರಿಸಲಾದ ಅನುವಾದ ಕಾರ್ಯವನ್ನು ಅಂತರಜಾಲದಲ್ಲಿ ಆರಂಭಿಸಲಾಯಿತು.[೪೫]

ಇವನ್ನೂ ಗಮನಿಸಿ‌

ಬದಲಾಯಿಸಿ

ಉಲ್ಲೇಖಗಳು‌

ಬದಲಾಯಿಸಿ
  1. ೧.೦ ೧.೧ "July date for Harry Potter book". BBC. 21 ಡಿಸೆಂಬರ್ 2004. Retrieved 27 ಸೆಪ್ಟೆಂಬರ್ 2008.
  2. ೨.೦ ೨.೧ ೨.೨ Leonard, John (13 ಜುಲೈ 2003). "Harry Potter and the Order of the Phoenix'". The New York Times. Archived from the original on 16 ಏಪ್ರಿಲ್ 2009. Retrieved 28 ಸೆಪ್ಟೆಂಬರ್ 2008. {{cite news}}: Italic or bold markup not allowed in: |publisher= (help)
  3. A. Whited, Lana. (2004). The Ivory Tower and Harry Potter: Perspectives on a Literary Phenomenon. University of Missouri Press. p. 371. ISBN 9780826215499.
  4. ೪.೦ ೪.೧ "ರೌಲಿಂಗ್ ಟಿಯರ್ಸ್ ಅಟ್ ಪಾಟರ್ ಬುಕ್ ಡೆತ್", BBC ನ್ಯೂಸ್, ೨೦೦೩ ರ ಜೂನ್ ೧೮ ೨೦೦೭ ರ ಜುಲೈ ೨೪ ರಂದು ಪುನಃ ಸಂಪಾದಿಸಲಾಯಿತು.
  5. Brown, Jen (24 ಜುಲೈ 2007). "Stop your sobbing! More Potter to come". MSNBC Interactive. Archived from the original on 20 ಆಗಸ್ಟ್ 2007. Retrieved 31 ಮೇ 2009. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  6. Vieira, Meredith (30 ಜುಲೈ 2007). "Harry Potter: The final chapter". Dateline NBC. Archived from the original on 24 ಜುಲೈ 2009. Retrieved 31 ಮೇ 2009.
  7. ೭.೦ ೭.೧ ೭.೨ Ross, Shmuel (2000–2009). "Harry Potter Timeline: 2000 to the Present". Pearson Education, publishing as Infoplease. Retrieved 11 ಜುಲೈ 2009. {{cite web}}: Unknown parameter |coauthors= ignored (|author= suggested) (help)CS1 maint: date format (link)
  8. "Harry Potter Books". MuggleNet.com. 1999–2009. Archived from the original on 6 ಜೂನ್ 2009. Retrieved 29 May 2009. {{cite web}}: Check date values in: |date= (help); More than one of |archivedate= and |archive-date= specified (help); More than one of |archiveurl= and |archive-url= specified (help)
  9. ೯.೦ ೯.೧ "Potter-mania sweeps bookstores". CNN. 30 ಜೂನ್ 2003. Retrieved 29 ಮೇ 2009.
  10. "Thousands of Potter books stolen". BBC. 17 ಜೂನ್ 2003. Retrieved 29 ಮೇ 2009.
  11. "Best Books for Young Adults Annotated List 2004". American Library Association. 2004. Archived from the original on 14 ಏಪ್ರಿಲ್ 2009. Retrieved 30 ಮೇ 2009.
  12. "2004 Notable Children's Books". American Library Association. 2009. Archived from the original on 5 ಸೆಪ್ಟೆಂಬರ್ 2009. Retrieved 30 ಮೇ 2009.
  13. Levine, Arthur (2001 - 2005). "Awards". Arthur A. Levine Books. Archived from the original on 29 ಏಪ್ರಿಲ್ 2006. Retrieved 30 May 2009. {{cite web}}: Check date values in: |date= (help); More than one of |archivedate= and |archive-date= specified (help); More than one of |archiveurl= and |archive-url= specified (help)
  14. Donahue, Deirdre (25 ಜೂನ್ 2003). "Rich characters, magical prose elevate 'Phoenix'". USA Today. Retrieved 31 ಮೇ 2009.
  15. ೧೫.೦ ೧೫.೧ ೧೫.೨ Smithouser, Julie (2009). "Harry Potter and the Order of the Phoenix". Focus on the Family. Archived from the original on 8 ಮೇ 2006. Retrieved 31 ಮೇ 2009.
  16. ೧೬.೦ ೧೬.೧ Leonard, John (13 ಜುಲೈ 2003). "Nobody Expects the Inquisition". New York Times. Retrieved 31 ಮೇ 2009.
  17. ಸಂಪಾದಕೀಯ (೨೦೦೦,ಜನವರಿ ೧೦). "ವೈ ವಿ ಲೈಕ್ ಹ್ಯಾರಿ ಪಾಟರ್" Archived 27 September 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. ಕ್ರಿಶ್ಚಿಯಾನಿಟಿ ಟುಡೇ .
  18. Elisco, Lester (2000–2009). "The Phenomenon of Harry Potter". TomFolio.com. Archived from the original on 12 ಏಪ್ರಿಲ್ 2009. Retrieved 22 ಜನವರಿ 2009. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)CS1 maint: date format (link)
  19. ೧೯.೦ ೧೯.೧ Knapp, N.F. (2003). "In Defense of Harry Potter: An Apologia" (PDF). School Libraries Worldwide. International Association of School Librarianship. 9 (1): 78–91. Archived from the original (PDF) on 9 ಮಾರ್ಚ್ 2011. Retrieved 14 ಮೇ 2009.
  20. ೨೦.೦ ೨೦.೧ "A Potter timeline for muggles". Toronto Star. 14 ಜುಲೈ 2007. Retrieved 27 ಸೆಪ್ಟೆಂಬರ್ 2008. {{cite news}}: Italic or bold markup not allowed in: |publisher= (help)
  21. ೨೧.೦ ೨೧.೧ "Harry Potter: Meet J.K. Rowling". Scholastic Inc. Retrieved 27 ಸೆಪ್ಟೆಂಬರ್ 2008.
  22. "Speed-reading after lights out". London: Guardian News and Media Limited. 19 ಜುಲೈ 2000. Retrieved 27 ಸೆಪ್ಟೆಂಬರ್ 2008.
  23. ೨೩.೦ ೨೩.೧ "Harry Potter finale sales hit 11 m". BBC News. 23 July 2007. Retrieved 21 August 2008. {{cite news}}: Check date values in: |accessdate= (help)
  24. "Rowling unveils last Potter date". BBC. 1 ಫೆಬ್ರವರಿ 2007. Retrieved 27 ಸೆಪ್ಟೆಂಬರ್ 2008.
  25. Cornwell, Tim (24 ಜನವರಿ 2007). "Oscars signal boom (except for Scots)". The Scotsman. Retrieved 24 ಜನವರಿ 2007. {{cite news}}: Italic or bold markup not allowed in: |publisher= (help)
  26. Haun, Harry (20 ಜೂನ್ 2007). "Harry the Fifth". Film Journal International. Archived from the original on 26 ಜೂನ್ 2007. Retrieved 26 ಜೂನ್ 2007. {{cite news}}: Italic or bold markup not allowed in: |publisher= (help)
  27. "Harry Potter and the Order of the Phoenix (2007)". Box Office Mojo. Retrieved 5 ಫೆಬ್ರವರಿ 2009.
  28. "Worldwide Openings". Box Office Mojo. Retrieved 6 ಮಾರ್ಚ್ 2008.
  29. "2007 Worldwide Grosses". Box Office Mojo. 6 ಮಾರ್ಚ್ 2008.
  30. "Harry Potter and the Order of the Phoenix: The Videogame". Electronic Arts Inc. 2007. Archived from the original on 19 ಜನವರಿ 2012. Retrieved 11 ಜುಲೈ 2009. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  31. "Harry Potter: Phoenix". CBS Interactive Inc. 2009. Archived from the original on 11 ಜೂನ್ 2009. Retrieved 10 ಜೂನ್ 2009.
  32. "Harry Potter and the Half Blood Prince: The Video Game". Electronic Arts Inc. 2009. Archived from the original on 18 ಮೇ 2009. Retrieved 30 ಮೇ 2009. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  33. "Time Person of the Year Runner Up: JK Rowling". 19 ಡಿಸೆಂಬರ್ 2007. Archived from the original on 21 ಡಿಸೆಂಬರ್ 2007. Retrieved 23 ಡಿಸೆಂಬರ್ 2007. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  34. "Georgia mom seeks Harry Potter ban". Associated Press. 4 October 2006. {{cite web}}: Check date values in: |date= (help)
  35. Laura Mallory (2007). "Harry Potter Appeal Update". HisVoiceToday.org. Archived from the original on 4 ಫೆಬ್ರವರಿ 2007. Retrieved 16 May 2007. {{cite web}}: Check date values in: |accessdate= (help); More than one of |archivedate= and |archive-date= specified (help); More than one of |archiveurl= and |archive-url= specified (help)
  36. Clive Leviev-Sawyer (2004). "Bulgarian church warns against the spell of Harry Potter". Ecumenica News International. Archived from the original on 28 ಸೆಪ್ಟೆಂಬರ್ 2007. Retrieved 15 June 2007. {{cite web}}: Check date values in: |accessdate= (help); More than one of |archivedate= and |archive-date= specified (help); More than one of |archiveurl= and |archive-url= specified (help)
  37. "Church: Harry Potter film a font of evil". Kathimerini. 2003. Retrieved 15  June 2007. {{cite web}}: Check date values in: |accessdate= (help)
  38. "Emirates ban Potter book". BBC News. 12 ಫೆಬ್ರವರಿ 2002. Retrieved 10 ಜುಲೈ 2007.
  39. "Iranian Daily: Harry Potter, Billion-Dollar Zionist Project". The Mimri blog. Retrieved 10 September 2007. {{cite web}}: Check date values in: |accessdate= (help)
  40. O'Brien, M. (21 April 2003). "Harry Potter - Paganization of Children" (PDF). Catholic World Report. Archived from the original (PDF) on 20 ಏಪ್ರಿಲ್ 2021. Retrieved 15  May 2009. {{cite journal}}: Check date values in: |accessdate= and |date= (help)
  41. ೪೧.೦ ೪೧.೧ ೪೧.೨ Malvern, J. (14 July 2005 ). "Harry Potter and the Vatican enforcer". London: The Times. Archived from the original on 15 ಮೇ 2009. Retrieved 15 May 2009. {{cite news}}: Check date values in: |date= (help)CS1 maint: extra punctuation (link)
  42. "Pope Opposes Harry Potter Novels - Signed Letters from Cardinal Ratzinger Now Online". LifeSite News. 13 July 2005. Archived from the original on 28 ಏಪ್ರಿಲ್ 2007. Retrieved 13 March 2007. {{cite news}}: Check date values in: |accessdate= and |date= (help)
  43. Griesinger, E. (2002). "Harry Potter and the "deeper magic": narrating hope in children's literature". Christianity and Literature. 51 (3): 455–480. Archived from the original on 29 ಜೂನ್ 2012. Retrieved 15 ಮೇ 2009.
  44. Fields, J.W. (2007). "Harry Potter, Benjamin Bloom, and the Sociological Imagination" (PDF). International Journal of Teaching and Learning in Higher Education. 19 (2). ISSN 1812-9129. Retrieved 15 ಮೇ 2009.
  45. "Harry auf Deutsch: Projekt-Übersicht der Harry Potter Übersetzung(en)". Retrieved 5 ಡಿಸೆಂಬರ್ 2005.

ಬಾಹ್ಯ ಕೊಂಡಿಗಳು‌

ಬದಲಾಯಿಸಿ

ಟೆಂಪ್ಲೇಟು:Hpw