'ಹೋಸೆ ಎಚೆಗಾರೈ'

(೧೮೩೩-೧೯೧೬)

ಅಗ್ರಮಾನ್ಯ ಸ್ಪಾನಿಷ್ ಅರ್ಥಶಾಸ್ತ್ರಜ್ಞರಾದ 'ಹೋಸೆ ಎಚೆಗಾರೈ 'ರವರು, ಫ್ರಾನ್ಸ್ ದೇಶದ ಫ್ರಾನ್ಸಿನ 'ಫ್ರೆಡರಿಕ್ ಮಿಸ್ತ್ರಾಲ್ 'ರವರ ಜೊತೆಯಲ್ಲಿ ನೋಬೆಲ್ ಪ್ರಶಸ್ತಿಯನ್ನು ಹಂಚಿಕೊಂಡರು

ಬದಲಾಯಿಸಿ

೧೯೦೪ ರಲ್ಲಿ ಹಂಚಿದ ನೋಬೆಲ್ ಪ್ರಶಸ್ತಿಯನ್ನು ಸ್ಪಾನಿಷ್ ಭಾಷೆಯ ಲೇಖಕ, ಎಚೆಗರಾರೈ, ಫ್ರಾನ್ಸಿನ ಫ್ರೆಡರಿಕ್ ಮಿಸ್ತ್ರಾಲ್ ರ ಜತೆಗೆ ಹಂಚಿಕೊಂಡರು. ಅರ್ಥಶಾಸ್ತ್ರದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡಿ, ಸ್ಪೇನ್ ಸರಕಾರದಲ್ಲಿ ಅರ್ಥಮಂತ್ರಿ ಹಾಗೂ 'ಲೋಕೋಪಯೋಗಿ ಇಲಾಖೆಯ ಮಂತ್ರಿ' ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೋಸೆ ಎಚೆಗಾರೈ ಆಗಲೇ ನಾಟಗಳನ್ನು ರಚಿಸುವ ಗೀಳನ್ನು ಬೆಳೆಸಿಕೊಂಡಿದ್ದರು. ಅವರ ನಾಟಕಗಳ ಪ್ರಧಾನ ಕಥಾವಸ್ತು, 'ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು, ಮತ್ತು ಅವುಗಳಿಗೆ ಆದರ್ಶವಾದಿಯಾದ ಧರ್ಮನಿಶ್ಠ ಪರಿಹಾರಗಳು,' ಎದ್ದು ಕಾಣಿಸುತ್ತವೆ. ಹೋಸೆ ಎಚೆಗಾರೈ ರು ಬರೆದ ಜನಪ್ರಿಯ ನಾಟಕಗಳು :

  • 'ದ ಅವೆಂಜರ್ಸ್ ವೈಫ್' (೧೮೭೪)
  • 'ದ ಸೋರ್ಡ್ಸ್ ಹ್ಯಾಂಡಲ್' (೧೮೭೪)
  • 'ದ ಸ್ಟೇಕ್ ಅಂಡ್ ದ ಕ್ರಾಸ್' (೧೮೭೮)
  • 'ಕಾನ್ ಫ್ಲಿ ಕ್ಟ್ಸ್ ಆಫ್ ಡ್ಯೂಟೀಸ್' (೧೮೭೮)
  • ' ದ ಸೆಯಿಂಟ್ ಆರ್ ಮ್ಯಾಡ್ ಮ್ಯಾನ್  ? (೧೮೮೨)
  • ' ಗ್ರೇಟ್ ಗಾಲಿಯೋಟ್' (೧೯೭೭)

ಈ ಶೀರ್ಷಿಕೆಗಳು ಮೂಲ ಸ್ಪಾನಿಷ್ ಭಾಷೆಯವುಗಳಲ್ಲ ; ೧೮೮೧ ರ ಇಂಗ್ಲೀಷ್ ಅನುವಾದಗಳದ್ದು.

ತಮ್ಮ ಕಾಲದ ಅಗ್ರಮಾನ್ಯ ಸ್ಪಾನಿಷ್ ಅರ್ಥಶಾಸ್ತ್ರಜ್ಞ ರಾದ ಹೋಸೆ ಎಚೆಗಾರೈ ರವರು, ಸಹಜವಾಗಿ, ಗಣಿತ ಹಾಗೂ ಅರ್ಥಶಾಸ್ತ್ರದ ಕೃತಿಗಳನ್ನೂ ಬರೆದು-ಪ್ರಕಟಿಸಿರುತ್ತಾರೆ. ಸಿವಿಲ್ ಎಂಜಿನಿಯರಿಂಗ್ ಶಾಸ್ತ್ರದಲ್ಲಿ ಆಸಕ್ತಿ ಬಂದು ಆ ಶಾಖೆಯಲ್ಲೂ ಹಲವು ವರ್ಷಗಳಕಾಲ ದುಡಿದಿದ್ದರು. ಆದರೆ ಹೋಸೆ ಎಚೆಗಾರೈ ರವರ ಗಮನಾರ್ಹ ಸೇವೆ, ಸ್ಪಾನಿಷ್ ಭಾಷಾ-ಸಾಹಿತ್ಯ ಕ್ಷೇತ್ರಕ್ಕೆ ಮೀಸಲಾಗಿತ್ತು. ರಂಗಭೂಮಿಗೆ ಒಂದು ಹೊಸದಿಕ್ಕನ್ನು ತೋರಲು ಸಹಾಯಕವಾಯಿತು.