ಹೋಮಿ ವ್ಯಾರವಾಲ
ಹೋಮಿ ವ್ಯಾರವಾಲ ಭಾರತದ ಮೊಟ್ಟಮೊದಲ ಮಹಿಳಾ ಛಾಯಾಚಿತ್ರಗಾರ್ತಿ ಮತ್ತು ಛಾಯಾಚಿತ್ರ ವರದಿಗಾರ್ತಿ (Photo Journalist) .ಡಾಲ್ಡ ೧೩ ಎಂದೇ ಅವರ ಗೆಳೆಯರ ಹತ್ತಿರ ಪ್ರಸಿದ್ಧರಾದ, ಹೋಮಿ ವ್ಯಾರವಾಲ ಭಾರತದ ಒಬ್ಬ ಸುಪ್ರಸಿದ್ಧ 'ಮಹಿಳಾ ಫೋಟೋಗ್ರಾಫರ್' ಆಗಿ ಜನಮನ್ನಣೆಯನ್ನು ಗಳಿಸಿದ್ದಾರೆ. ಅವರು 'ಫೋಟೋ ಜರ್ನಲಿಸಂ' ನಲ್ಲೂ ಸಾಕಷ್ಟು ಕೃಷಿಮಾಡಿದ್ದಾರೆ. ಜವಹರ್ ಲಾಲ್ ನೆಹರೂ, ಮಹಾತ್ಮ ಗಾಂಧಿಯಂತಹ ಪ್ರಸಿದ್ಧ ವ್ಯಕ್ತಿಗಳೂ ಸಹಿತ, ವ್ಯಾರವಾಲರನ್ನು ಡಾಲ್ಡ ೧೩ ಎಂದೇ ಸಂಬೋಧಿಸುತ್ತಿದ್ದರು.
ಜನನ ಮತ್ತು ವಿದ್ಯಾಭಾಸ
ಬದಲಾಯಿಸಿದಕ್ಷಿಣ ಗುಜರಾತಿನ ನವಸಾರಿ ನಗರದಲ್ಲಿ ೧೯೧೩ ರಲ್ಲಿ ಜನಿಸಿದರು. ಬಾಲ್ಯವನ್ನು ಅವರು ಬೊಂಬಾಯಿನಲ್ಲಿ ಕಳೆದರು. ಮುಂಬಯಿ ವಿಶ್ವವಿದ್ಯಾಲಯದ ಅಧೀನದ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಡಿಪ್ಲೊಮಾ ಗಳಿಸಿದರು. ಮದುವೆಯಾದದ್ದು ೧೩ ನೇ ವಯಸ್ಸಿನಲ್ಲಿ. ಸಾಂಪ್ರದಾಯಿಕ ಪಾರ್ಸಿ ಕುಟುಂಬದ ಹೋಮಿ ವ್ಯಾರವಾಲ ಪಾರ್ಸಿ ಶೈಲಿಯ ಸೀರೆಯನ್ನುಟ್ಟು ಅವರ ದೇಹಕ್ಕೆ ಹೋಲಿಸಿದರೆ ಅತಿದೊಡ್ಡ ಗಾತ್ರದ ಕ್ಯಾಮರವನ್ನು ಭುಜಕ್ಕೆ ಒರಗಿಸಿಕೊಂಡು ಸಭೆ-ಸಮಾರಂಭಗಳಲ್ಲಿ ಬಿರುಸಿನಿಂದ, ಸಂಭ್ರಮದಿಂದ ನಡೆದಾಡುತ್ತಿದ್ದರು. ಅವರ ಪತಿ, ಮಾನೆಕ್ ಶಾ ಫೋಟೋಗ್ರಫಿಯಲ್ಲಿ ತೀವ್ರ ಆಸಕ್ತಿಹೊಂದಿದ್ದರು. ಆದರೆ ಪತಿಯಿಂದ ಪ್ರೇರಿತರಾಗಿ 'ವ್ಯಾರವಾಲ'ರು ಒಬ್ಬ ಮಹಿಳಾ ಫೋಟೋಗ್ರಾಫರ್ ಆಗಿ ಹೆಸರಾದರು.
ಫೋಟೋಗ್ರಫಿ ಅವರ ವೃತ್ತಿಜೀವನವಾಯಿತು
ಬದಲಾಯಿಸಿ'ಹೋಮಿ ವ್ಯಾರವಾಲ', ೧೯೩೮ ರಲ್ಲಿ ತೆಗೆದ ಫೋಟೋ, ಅವರ 'ಫೋಟೋಗ್ರಫಿ ಜೀವನದ ಪ್ರಥಮ ಫೋಟೊ'ವೆಂದು ಪರಿಗಣಿಸಲ್ಪಟ್ಟಿತು. ಅವರು 'ಇನ್ ಆಲ್ ವಿಮೆನ್ ಪಿಕ್ನಿಕ್ ಪಾರ್ಟಿ 'ಎಂಬ ಶೀರ್ಷಿಕೆಯಡಿಯಲ್ಲಿ ಕ್ಲಿಕ್ಕಿಸಿದ ಚಿತ್ರಗಳು, ಅಂದಿನ ಸುಪ್ರಸಿದ್ಧ 'ಬಾಂಬೆ ಕ್ರಾನಿಕಲ್ ಪತ್ರಿಕೆ' ಯಲ್ಲಿ ಪ್ರಪ್ರಥಮ ಬಾರಿಗೆ ಪ್ರಕಟವಾದವು. 'ವ್ಯಾರವಾಲ'ರ ಪ್ರತಿ ಚಿತ್ರಕ್ಕೆ ಒಂದು ರೂಪಾಯಿ ಬಹುಮಾನವನ್ನು ಕೊಡಲಾಯಿತು. ಮುಂದೆ ದೆಹಲಿಗೆ ಅವರು ಹೋದನಂತರ ಅವರ ಅದೃಷ್ಟರೇಖೆ ಮೇಲೇರತೊಡಗಿತು. 'ಬ್ರಿಟಿಷ್ ಇನ್ ಫರ್ಮೇಶನ್ ಸರ್ವಿಸ್' ನಲ್ಲಿ ನೌಕರಿಗೆ ಸೇರಿದಾಗ, 'ಸ್ವಾತಂತ್ರ್ಯ ಸಂಗ್ರಾಮ'ದ ಕೆಲವು ಚಿತ್ರಗಳನ್ನು ತೆಗೆಯುವ ಪ್ರಸಂಗ ಒದಗಿತು. ಆಗ 'ಹೋಮಿ ವ್ಯಾರವಾಲ'ರಿಗೆ ಸಿಕ್ಕ ಪ್ರಚಾರ, ಅವರನ್ನು ಒಬ್ಬ 'ಹೆಸರಾಂತ ಮಹಿಳಾ ಫೋಟೋಗ್ರಾಫರ್' ನ್ನಾಗಿಸಲು ಸಹಾಯಮಾಡಿತು. ಅವರ ಹಲವಾರು ಚಿತ್ರಗಳು ಆಗಿನ ಕಾಲದ ಅತಿ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. ಉದಾಹರಣೆಗೆ
- ಪಾಕೀಸ್ಥಾನ-ಭಾರತ ಬೇರೆಯಾಗುವ ನಿರ್ಣಯಗಳನ್ನು ಅಂದಿನ ನಾಯಕರು ನಿರ್ಣಯಿಸುವ ಸಭೆ ಸೇರಿದ ಸಮಯದ ಚಿತ್ರಗಳು,
- ೧೯೪೭, ಆಗಸ್ಟ್ ೧೫ ರಂದು, 'ದೆಹಲಿಯ ಕೆಂಪುಕೋಟೆ'ಯ ಮೇಲೆ, ಪ್ರಪ್ರಥಮ ಬಾರಿಗೆ 'ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ ಚಿತ್ರ
- ಲಾರ್ಡ್ ಮೌಂಟ್ ಬ್ಯಾಟನ್ ಭಾರತದಿಂದ ನಿರ್ಗಮನಿಸಿದ ಚಿತ್ರ
- ಮಹಾತ್ಮಾ ಗಾಂಧಿಯವರ ನಿಧನ, ಅಂತಿಮಯಾತ್ರೆ
- ಜವಹರಲಾಲ್ ನೆಹರೂ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಮಹತ್ವದ ಚಿತ್ರಗಳು
ಪ್ರಶಸ್ತಿಗಳು
ಬದಲಾಯಿಸಿ- 'ಪದ್ಮವಿಭೂಷಣ ಪ್ರಶಸ್ತಿ'
ನೆಹರೂರವರ ಬಗ್ಗೆ ಅತ್ಯಂತ ಗೌರವ
ಬದಲಾಯಿಸಿ'ಜವಾಹರ್ ಲಾಲ್ ನೆಹರೂ' ರವರ ಬಗ್ಗೆ 'ವ್ಯಾರವಾಲ'ರಿಗೆ, ಅತೀವ ಆಸಕ್ತಿ, ಶ್ರಧ್ಹೆ, ಮತ್ತು ಗೌರವವಿತ್ತು. ಪಂ. ನೆಹರೂರವರು ಸಹಿತ, ಪ್ರತಿಬಾರಿ 'ವ್ಯಾರವಾಲ'ರನ್ನು ಕಂಡಾಗಲು 'ಓಹ್ ನೀನು ಮತ್ತೆ ಬಂದಿರುವೆಯಾ' ಎಂದು ನಗೆಯಾಡುತ್ತಿದ್ದರು. 'ವ್ಯಾರವಾಲ'ರು, ೧೯೫೪ ರಲ್ಲಿ ಕ್ಲಿಕ್ಕಿಸಿದ ಚಿತ್ರ, ಅವರ ಜೀವನದ ಅತ್ಯಂತ ಮಹತ್ವದ ಚಿತ್ರವಾಗಿತ್ತು. 'ಮಾಸ್ಕೊನಿಂದ ತಮ್ಮ ಸೋದರಿ, ವಿಜಯಲಕ್ಶ್ಮೀ ಪಂಡಿತ್ ರವರನ್ನು ಕರೆದೊಯ್ಯಲು ವಿಮಾನನಿಲ್ದಾಣದಲ್ಲಿ ಕಾಯುತ್ತಿರುವ, ಪಂ.ನೆಹ್ರೂರವರ ಚಿತ್ರ, ಅವರಿಗೆ ಬಲುಪ್ರಿಯವಾಗಿತ್ತು. 'ಮಾಸ್ಕೋದಲ್ಲಿ ಭಾರತದ ರಾಯಭಾರಿಯಾಗಿರುವ ತಮ್ಮ ಸೋದರಿ'ಯನ್ನು ಪ್ರೀತಿಯಿಂದ ಆಲಂಗಿಸಿ ಸ್ವಾಗತಿಸಲು ನೆಹರು ಅತ್ಯಂತ ಆಸ್ತೆಯಿಂದ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ಕೆಲವು ವೇಳೆ ಸಲಿಗೆಯಿಂದ ನೆಹ್ರೂರವರು, ನಗುತ್ತಾ, 'ಫೋಟೋಗ್ರಫಿ ಇಲ್ಲಿ ಅನುಮತಿಯಿಲ್ಲ ಎಂಬ ಪಲಕ'ದ ಕೆಳಗೆ ನಿಂತು. ಹೋಮಿ ವ್ಯಾರವಾಲರನ್ನು ಚಿತ್ರತೆಗೆಯಲು ಬೇಡುತ್ತಿದ್ದರು. 'ನಗೆ ಬೀರುತ್ತಾ ನಿಂತ ಮಾಸ್ಕೋದಲ್ಲಿ ಭಾರತದ ರಾಯಭಾರಿಯಾಗಿದ್ದ, ವಿಜಯಲಕ್ಷ್ಮೀ ಪಂಡಿತ್ ರ ಮತ್ತೊಂದು ಚಿತ್ರ' ವ್ಯಾರವಾಲರಿಗೆ ಮುದಕೊಟ್ಟ ಮತ್ತೊಂದು ಚಿತ್ರವಾಗಿತ್ತು. ಹೋಮಿಯವರು ತೆಗೆದ, 'ಎಲಿಝಬೆತ್ ರಾಣಿ' ಮತ್ತು 'ಡ್ವೈಟ್ ಐಸೆನ್ ಹೋವರ್' ಚಿತ್ರಗಳು, ಅವರಿಗೆ ಅತಿ ಪ್ರಿಯವಾದ ಚಿತ್ರಗಳು.
ಮರಣ
ಬದಲಾಯಿಸಿ೧೯೭೦ ರಲ್ಲಿ 'ಹೋಮಿ ವ್ಯಾರವಾಲ' ರ ಪತಿ, ಮಾನೆಕ್ ಶಾ ನಿಧನರಾದ ಬಳಿಕ 'ಬರೋಡ'ದಲ್ಲಿ ನೆಲೆಸಿದರು. ತಮ್ಮ ೯೮ ರ ವಯಸ್ಸಿನಲ್ಲಿ, ಭಾನುವಾರ ೧೫, ಜನವರಿ, ೨೦೧೨, ಮಂಚದಿಂದ ಆಯತಪ್ಪಿ ಕೆಳಗೆ ಬಿದ್ದಕಾರಣಕ್ಕಾಗಿ ಬರೋಡದ ಆಸ್ಪತ್ರೆಗೆ ದಾಖಲಾದರು. ಆದರೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
ನೋಡಿ
ಬದಲಾಯಿಸಿ- ಹೋಮಿ ವ್ಯಾರವಾಲ ಅವರದೇ ಪುಟ-ಹೊಮೈ ವ್ಯಾರಾವಾಲಾ ವಿಕಿಯಲ್ಲಿದೆ.
ಹೊರ ಸಂಪರ್ಕ
ಬದಲಾಯಿಸಿ- [[೧]]
References^ "An iconic observer - The curious life and times of Homai Vyarawalla". The Telegraph.
January 23 , 2011. http://www.telegraphindia.com/1110123/jsp/opinion/story_13478946.jsp. ^ "Magazine / Personality : India through her eyes". The Hindu. 2006-03-12.
http://www.hindu.com/mag/2006/03/12/stories/2006031200400500.htm Archived 2012-01-18 ವೇಬ್ಯಾಕ್ ಮೆಷಿನ್ ನಲ್ಲಿ.. Retrieved 2012-01-16. ^ "The Times of India on Mobile". M.timesofindia.com. 1913-12-09.
http://m.timesofindia.com/PDATOI/articleshow/6276844.cms. Retrieved 2012-01-16.
^ "Photojournalism: Arthur Fellig (Weegee) and Homai Vyarawalla". Mendeley. 1913-12-09. doi:10.1080/17512780802560823.
http://www.mendeley.com/research/photojournalism-arthur-fellig-weegee-and-homai-vyarawalla/[ಶಾಶ್ವತವಾಗಿ ಮಡಿದ ಕೊಂಡಿ]. Retrieved 2012-01-16.
^ "Homai gets Padma Vibhushan". The Times of India. Jan 25, 2011.
http://timesofindia.indiatimes.com/city/vadodara/Homai-gets-Padma-Vibhushan/articleshow/7362865.cms.
^ a b c d "Meet India's first lady photographer Homai Vyarawalla". Rediff.com. 3 Mar, 2011.
http://www.rediff.com/news/slide-show/slide-show-1-second-part-of-the-interview-with-homai-vyrawalla/20110303.htm. Biography Gadihoke, Sabeena (2006),
India In Focus: Camera Chronicles of Homai Vyarawalla, New Delhi: UNESCO/Parzor, ISBN 81-88204-66-8 Magazine articles