ಹೊಸೂರ(ಹೆಚ್)
ಹೊಸೂರ(ಹೆಚ್) ಒಂದು ಚಿಕ್ಕ ಹಳ್ಳಿ ಹಾಗೂ ಪುಣ್ಯಕ್ಷೇತ್ರ.ಇದು ಕರ್ನಾಟಕ ರಾಜ್ಯದ ಬಿಜಾಪೂರ ಜಿಲ್ಲೆಯ ಬಿಜಾಪೂರ ತಾಲ್ಲೂಕಿನಲ್ಲಿದೆ. ಹೊಸೂರ(ಹೆಚ್) ಗ್ರಾಮವು ಬಬಲೇಶ್ವರ - ಯರಗಟ್ಟಿ ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಾಪೂರದಿಂದ ಸುಮಾರು ೬೦ ಕಿ. ಮಿ. ದೂರ ಇದೆ.
ಹೊಸೂರ(ಹೆಚ್)
ಹೊಸೂರ(ಹೆಚ್) | |
---|---|
village | |
Population (೨೦೧೨) | |
• Total | ೧೫೦೦ |
ದೇವಾಲಯಗಳು
ಬದಲಾಯಿಸಿಶ್ರೀ ದುರ್ಗಾದೇವಿ ದೇವಾಲಯ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಮತ್ತು ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಮಸೀದಿಗಳು
ಬದಲಾಯಿಸಿಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿ
ಬದಲಾಯಿಸಿಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಹಬ್ಬಗಳು
ಬದಲಾಯಿಸಿಪ್ರತಿವರ್ಷ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣ
ಬದಲಾಯಿಸಿಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಶಾಲೆಯು ೧೯೫೫ರಲ್ಲಿ ಪ್ರಾರಂಭವಾಗಿ ೧ನೇ ತರಗತಿಯಿಂದ ೮ನೇ ತರಗತಿವರೆಗೆ ೨೦೦ರಕ್ಕೂ ಹೆಚ್ಚು ವಿದ್ಯಾರ್ಥಿಗಳ್ಳಿದ್ದಾರೆ.
ರಾಜಕೀಯ
ಬದಲಾಯಿಸಿಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ಕೈಗಾರಿಕೆಗಳು
ಬದಲಾಯಿಸಿಗ್ರಾಮದ ಹತ್ತಿರ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಇದೆ.