ಹೊಲೆಯರು ಇಡಿ ಭಾರತವನ್ನು ಆಳಿದ ಚಾಲುಕ್ಯ ವಂಶಸ್ಥರು ಪಂಚ ಪೀಠದಲ್ಲಿ ಶಿವಾಚಾರ ಗೈಯುವ ಮಹನೀಯರು ಮತ್ತು ಶಿವಾಚಾರಕ್ಕೆ ಒಡೆಯರು. ಇವರು ಭಾರತದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ ಸಮುದಾಯದವರು. ಈ ಜನಾಂಗದ ಮೂಲ ಪುರುಷ ಛಲದಂಕಮಲ್ಲ ನೆಂದು ಡಾ. ಜಿ. ಶ್ರೀನಿವಾಸಯ್ಯ ತಣಿಗೆ ಎಂಬ ಪುಸ್ತಕದಲ್ಲಿ ಉಲೇಖಿಸಿದ್ದಾರೆ. ಹಾಗೆ ಈ ಸಮುದಾಯವು 18 ಪಣದ ಕುಲಸ್ಥರು ಬಲಗೈ ನವರು ಎಂದು ಸಾಹ ಕರೆಯಲ್ಪಡುತ್ತಾರೆ. ಹೊಲೆಯ ಸಮುದಾಯವು ಐತಿಹಾಸಿಕ ಹಿನ್ನೆಲೆಯುಳ್ಳ ಸಮುದಾಯವಾಗಿದೆ.

ಒಂದು ಕಾಲದಲ್ಲಿ ಇವರು, ಪ್ರಾಚೀನ ದಖ್ಖನ ಭಾರತದಲ್ಲಿ ಅನೇಕ ಪ್ರಾಚೀನ ರಾಜ್ಯಗಳನ್ನು ಬೆಳೆಸಿದ ಭೂಮಾಲೀಕರಾಗಿದ್ದರು. ಭಾರತೀಯ ಇತಿಹಾಸದ ಮಧ್ಯಯುಗದಲ್ಲಿ, ಇವರು ಪತನ ಹೊಂದಿದ ರಾಜ್ಯಗಳ ಯೋಧ ವರ್ಗಗಳಾಗಿದ್ದರು, ಹಾಗಾಗಿ ಇವರನ್ನು ಜಾತಿಭ್ರಷ್ಟರೆಂದು ಮಾಡಿ ಹಾಗೆಯೇ ನಡೆಸಿಕೊಳ್ಳಲಾಗುತ್ತಿತ್ತು. ಹೊಲ ಪದವು ಕೃಷಿಭೂಮಿಯನ್ನು ಸೂಚಿಸುತ್ತದೆ ಮತ್ತು ಹೊಲೆಯ ಪದವು ಹೊಲ ಪದದಿಂದ ವ್ಯುತ್ಪನ್ನವಾಗಿದೆ.

ಬ್ರಿಟಿಷ್ ಭಾರತದಲ್ಲಿ, ಹೊಲೆಯರು ಕೆನರಾ, ಕೊಡಗು ಮತ್ತು ಮೈಸೂರಿನಲ್ಲಿ ಇರುತ್ತಿದ್ದರು.ಇವರು ಹಿಂದೆ ಆದಿ ಕ್ಷತ್ರಿಯ ಕುಲ ಎನಿಸಿಕೊಂಡಿದ್ದರು. ಮತ್ತು ಆದಿ ಕರ್ನಾಟರು []

ಉಲ್ಲೇಖಗಳು

ಬದಲಾಯಿಸಿ
  1. ಛಲವಾದಿ ಚಾಲುಕ್ಯರು. ಛಲವಾದಿ ಚಾಲುಕ್ಯರ ಎಂಬ ಪುಸ್ತಕ. 2014. {{cite book}}: |first= missing |last= (help)



"https://kn.wikipedia.org/w/index.php?title=ಹೊಲೆಯ&oldid=1271311" ಇಂದ ಪಡೆಯಲ್ಪಟ್ಟಿದೆ