ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ (ಚಲನಚಿತ್ರ)

2018ರ ಕನ್ನಡ ಚಲನಚಿತ್ರ

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ೨೦೧೮ ರ ಭಾರತೀಯ ಕನ್ನಡ ಭಾಷೆಯ ಚಿತ್ರ. ನಾಗೇಂದ್ರ ಬಾಬು ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ.[] ಸುದರ್ಶನ್. ಜಿ, ರಾಮಮೂರ್ತಿ. ಎಚ್. ಆರ್ ಮತ್ತು ಹರೀಶ್ ಶೇರಿಗಾರ್ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ರಾಮಚಂದ್ರ ಹಡಪದ್ ಅವರು ಸಂಗೀತ ನೀಡಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಅನಂತ್ ನಾಗ್, ರಾಧಿಕಾ ಚೇತನ್ ಮತ್ತು ಗೀತಾಂಜಲಿ ರೈ ಇದ್ದಾರೆ. ಪಿ. ಕೆ. ಏಚ್. ದಾಸ್ ಛಾಯಾಗ್ರಾಹಕರಾಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.[]

Hottegagi Genu Battegagi
ಚಿತ್ರ:Hottegagi Genu Battegagi.jpg
Film poster
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ನಿರ್ದೇಶನನರೇಂದ್ರ ಬಾಬು
ನಿರ್ಮಾಪಕಸುದರ್ಶನ್ ಜಿ.
ರಾಮ ಮೂರ್ತಿ ಎಚ್.ಆರ್.
ಹರೀಶ್ ಶೇರಿಗಾರ್
ಚಿತ್ರಕಥೆನರೇಂದ್ರ ಬಾಬು
ಕಥೆನರೇಂದ್ರ ಬಾಬು
ಪಾತ್ರವರ್ಗಅನಂತ್ ನಾಗ್
ರಾಧಿಕಾ ಚೇತನ್
ಗೀತಾಂಜಲಿ ರೈ
ಸಂಗೀತರಾಮಚಂದ್ರ ಹಡಪದ್
ಛಾಯಾಗ್ರಹಣಪಿ.ಕೆ. ಎಚ್. ದಾಸ್
ಸಂಕಲನಗುಣ
ಸ್ಟುಡಿಯೋACME ಮೂವೀಸ್ ಇಂಟರ್ ನ್ಯಾಷನಲ್
ಬಿಡುಗಡೆಯಾಗಿದ್ದು೨೫ ಮೇ ೨೦೧೮
ದೇಶಭಾರತ
ಭಾಷೆKannada

ಪಾತ್ರವರ್ಗ

ಬದಲಾಯಿಸಿ
  • ಶ್ಯಾಮ್ ಪ್ರಸಾದ್ ಆಗಿ ಅನಂತ್ ನಾಗ್
  • ಶ್ರಾವ್ಯ ಆಗಿ ರಾಧಿಕಾ ಚೇತನ್
  • ಗೀತಾಂಜಲಿ ರೈ
  • ಹರೀಶ್ ಶೇರಿಗಾರ್

ನಿರ್ಮಾಣ

ಬದಲಾಯಿಸಿ

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬುದು ಕನ್ನಡದ ಪ್ರಸಿದ್ದ ಗಾದೆ ಮಾತು. ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಅನಂತ್ ನಾಗ್ ಅವರು ಈ ಹೆಸರನ್ನು ಇಡಲು ಸೂಚಿಸಿದ್ದರು. ಈ ಚಿತ್ರಕ್ಕೆ ನಿರ್ದೇಶಕರ ಪ್ರಕಾರ ಕಲ್ಲು ಸಕ್ಕರೆ ಕೊಳ್ಳಿರೋ ಎಂಬ ಹೆಸರು ಇಡಲಾಗಿತ್ತು. 

ಉಲ್ಲೇಖಗಳು

ಬದಲಾಯಿಸಿ
  1. "Hottegagi Genu Battegagi cast and crew by MovieKoop".
  2. "Hottegagi Genu Battegagi first Kannada film to shoot at world's tallest building".