This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಡಿಸೆಂಬರ್ ೨೦೧೫)
ಹೊಗೆನಕಲ್ ಜಲಪಾತವು ದಕ್ಷಿಣ ಭಾರತದ ಕಾವೇರಿ ನದಿಗೆ ಸೇರಿದ್ದು. ಬೆಂಗಳೂರಿನಿಂದ ಸುಮಾರು ೧೮೦ ಕಿ.ಮಿ. ದೊರದಲ್ಲಿದೆ. ಭಾರತದ "ನಯಾಗರ ಜಲಪಾತ"ವೆಂದೇ ಸುಪ್ರಸಿದ್ಧ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂದು ನಾಮಕರಣವಾಯಿತು. ಹೊಗೆನಕಲ್ ಜಲಪಾತ ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಯಲ್ಲಿದೆ.
ಶಿವನಸಮುದ್ರದಲ್ಲಿ ಅದ್ಭುತ ಜಲಧಾರೆಯನ್ನು ಸೃಷ್ಠಿಸಿ ಪೂರ್ವಾಭಿಮುಖವಾಗಿ ಸಾಗುವ ಕಾವೇರಿ ಮೆಟ್ಟೂರು ಜಲಾಶಯ ಸೇರುವ ಮುನ್ನ ನಯನ ಮನೋಹರ ಜಲಪಾತವನ್ನು ಸೃಜಿಸಿದ್ದಾಳೆ. ಹೊಗೆನಕಲ್ ಜಲಪಾತದ ಬಳಿಗೆ ಹೋಗಲು ಒಂದು ಕಿ.ಮೀ ದೂರ ನದಿ ಹರಿಯುವ ದಿಕ್ಕಿಗೆ ವಿರುದ್ಧವಾಗಿ ದೋಣಿ ಪಯಣ ಮಾಡಬೇಕು. ಹೊಗೆನಕಲ್ ನಲ್ಲಿ ಕಾವೇರಿ ಎರಡು ಕವಲುಗಳಾಗಿ, ಮತ್ತೆ ಹಲವು ಶಾಖೆಗಳಾಗಿ ಜಲಧಾರೆಯನ್ನು ಸೃಷ್ಠಿಸಿದೆ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಲ್ಲಿ ಕೆಲವೊಮ್ಮೆ ಕಾಮನಬಿಲ್ಲು ಮೂಡುತ್ತದೆ.