ಹೊಂಗೆ ಎಣ್ಣೆ ಯನ್ನು ಹೊಂಗೆಯ ಮರದ ಬೀಜದಿಂದ ಸಂಗ್ರಹಣೆ ಮಾಡಲಾಗುತ್ತದೆ. ಹೊಂಗೆ ಮರವನ್ನು ತಮಾಲ ವೃಕ್ಷವೆಂದು ಕರೆಯಲಾಗುತ್ತದೆ. ಹೊಂಗೆ ಬೀಜದಿಂದ ತೆಗೆಯಲಾಗಿದ್ದ ಎಣ್ಣೆ ಅಡುಗೆ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಆಗುವುದಿಲ್ಲ. ಈ ಮರ ಪಾಪಿಲಿನೇಸಿಉಪಕುಟುಂಬ, ಫಾಭೇಸಿಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.

ಹೊಂಗೆಮರ
ಪೂದೊಂಗಲು
ಹೂವು
ಹಸಿಕಾಯಿ

ಬೇರೆ ಭಾಷೆಗಳಲ್ಲಿ ಹೊಂಗೆಯ ಹೆಸರು

ಬದಲಾಯಿಸಿ

ಹೊಂಗೆಯ ಮರ

ಬದಲಾಯಿಸಿ

ಹೊಂಗೆಯ ಮರವು ಉದ್ಯಾನವನದಲ್ಲಿ, ಬೀದಿಯಲ್ಲಿ, ರಸ್ತೆಯ ಎರಡು ಕಡೆಗಳಲ್ಲಿ ಇರುವುದನ್ನು ಎಲ್ಲರೂ ನೋಡಿರಬಹುದು. ಅಲ್ಲದೇ ಮನೆ ಆವರಣದಲ್ಲಿ, ಕಾಲೇಜಿನಲ್ಲಿ, ದೊಡ್ಡ ದವಾಖಾನೆಯಲ್ಲಿನ ಆವರಣಗಳಲ್ಲಿಯೂ ಇದನ್ನು ನೋಡಿರ ಬಹುದು. ಹೊಂಗೆಯ ಮರ ಮಧ್ಯಸ್ಥವಾಗಿ ಬೆಳೆಯುವ ಮರ. ಕೊಂಬೆಗಳಿರುತ್ತವೆ, ೬-೧೨ ಮೀ. ಎತ್ತರ ಬೆಳೆಯುತ್ತದೆ. ಮರದ ಕಾಂಡ ಅಡ್ಡಳತೆ ೨೫-೫೦ಸೆಂ.ಮೀ. ಇರುತ್ತದೆ, ಚೆನ್ನಾಗಿ ಬೆಳೆದ ದೊಡ್ಡ ಮರದ ಕಾಂಡ ಅಡ್ದಳತೆ ೫೦ಸೆಂ,ಮೀ,ಕ್ಕಿಂತ ಹೆಚ್ಚು ಇರುತ್ತದೆ. ಹೂವುಗಳು ಪಿಂಕು ಬೆಳ್ಳಗೆ ಮತ್ತು ಪೆರ್ಪಲ್ ರೆಡ್ ಬಣ್ಣದಲ್ಲಿ ಇರುತ್ತವೆ. ಮರ ೬-೭ನೇ ವಯಸ್ಸಿಗೆ ಬಂದ ಮೇಲೆ ಹೂವನ್ನು ಬಿಡುವುದಕ್ಕೆ ವೊದಲಾಗುತ್ತದೆ. ಏಪ್ರಿಲ್, ಮೇ ತಿಂಗಳುಗಳಲ್ಲಿ ಮರ ಹೂವನ್ನು ಬಿಡುತ್ತದೆ. ಕಾಯಿ ಜೂನ್-ಜುಲೈ ತಿಂಗಳಲ್ಲಿ ಬರುತ್ತದೆ. ಕಾಯಿ ಉದ್ದ ೪.೫-೬ ಸೆಂ.ಮೀ.ಇದ್ದು, ಅಗಲ ೨-೨.೫ಸೆ.ಮೀ ಇರುತ್ತದೆ. ದಪ್ಪ೫-೬ಸೆಂ.ಮೀ ಇದ್ದು ನೊಡುವುದಕ್ಕೆ ಮೂತ್ರಪಿಂಡಾಕಾರದಲ್ಲಿರುತ್ತದೆ. ಕಾಯಿಯಲ್ಲಿ ಕಾಳು ೨-೨.೫ ಸೆಂ.ಮೀ.ಉದ್ದ ಮತ್ತು ಒಂದು ಸೆಂ.ಮೀ ಅಗಲ ಇರುವುದುಂಟು. ಕಾಯ ಮೇಲೆ ದೃಢವಾದ, ಕಿತ್ತಲೆ ಸಿಪ್ಪೆ ಇರುತ್ತದೆ. ಕಾಯತೂಕ ೫-೬ಗ್ರಾಂ,ಬರುತ್ತದೆ, ಒಳಗಿನ ಕಾಳು ತೂಕ ೧.೩ಗ್ರಾಂ.ಗಳಿರಬಹುದು. ಕಾಯಿಯಿಂದ ೩೫-೪೦% ಎಣ್ಣೆಯನ್ನು ಉತ್ಪಾದನೆ ಮಾಡುವುದಕ್ಕೆ ಆಗುತ್ತದೆ. ಒಂದು ವರ್ಷಕ್ಕೆ ಒಂದು ಮರದಿಂದ ೫೦-೬೦ಕೇ. ಜಿ ಯಷ್ಟು ಬಿತ್ತನೆಯನ್ನು ಶೇಖರಣೆ ಮಾಡಲು ಸಾಧ್ಯವಿದೆ.

ಎಣ್ಣೆಯನ್ನು ಸಂಗ್ರಹಿಸುವುದು

ಬದಲಾಯಿಸಿ

ಬೀಜದಿಂದ ಎಣ್ಣೆತೆಗೆಯ ಬೇಕೆಂದರೆ ವೊದಲು ಬಿತ್ತನೆ ಮೇಲಿದ್ದ ಹೋಟ್ಟು/ಸಿಪ್ಪೆ ಯನ್ನು ತೆಗೆಯಬೇಕು. ಮೇಲಿರುವ ಹೊಟ್ಟು ಅಥಾವಾ ಸಿಪ್ಪೆಯನ್ನು ಡಿಕಾರ್ಟಿಕೇಟರು ಎಂಬ ಯಂತ್ರಗಳಿಂದ ತೆಗೆಯುವರು. ಹೊಟ್ಟು ತೆಗೆದ ಕಾಳನ್ನು ಎಕ್ಸುಪೆಲ್ಲರು ಎನ್ನುವ ಯಂತ್ರಗಳ ಸಹಾಯದಿಂದ ಎಣ್ಣೆಯನ್ನು ತೆಗೆಯುವರು. ಹಿಂಡಿಯಲ್ಲಿ ೬-೧೦%ಇನ್ನು ಎಣ್ಣೆ ಉಳಿದಿರುತ್ತದೆ. ಇದ್ದನ್ನು ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ತೆಗೆಯಲಾಗುತ್ತದೆ. ಎಣ್ಣೆಯನ್ನು ತೆಗೆದ ಹಿಂಡಿಯನ್ನು ಹೊಲಗಳಲ್ಲಿ ಎರುಬು ಆಗಿ ಉಪಯೋಗಿಸಬಹುದು.

ಹೊಂಗೆ ಎಣ್ಣೆ

ಬದಲಾಯಿಸಿ

ಬಿತ್ತನೆಯಿಂದ ತೆಗೆದ ಎಣ್ಣೆ ಆರೇಂಜಿ-ಅರಿಶಿನ ಬಣ್ಣವಾಗಿ ಕಾಣಿಸುತ್ತದೆ. ಚೇದು ರುಚಿ ಇರುತ್ತದೆ. ಗಾಢವಾದ ವಾಸನೆ ಹೊಂದಿರುತ್ತದೆ. ಎಣ್ಣೆಯಲ್ಲಿದ್ದ ಕರಂಜಿನ್(karanjin) ಮತ್ತು ಕರಂಜಕ್ರೋಮೆನ್(karanajachromen)ಕಾರಣ ಈ ಎಣ್ಣೆ ಪ್ತ್ರತ್ಯೇಕವಾದ ವಾಸನೆ ಮತ್ತು ರುಚಿ ಹೊಂದಿರುತ್ತದೆ[]

'ಹೊಂಗೆ ಎಣ್ಣೆ ಭೌತಿಕ ಮತ್ತು ರಸಾಯನಿಕ ಧರ್ಮಗಳು

ಲಕ್ಷಣ ಮಿತಿ
ಸಾಂದ್ರತೆ(density) 0.933
ಐಯೋಡಿನ್ ಮೌಲ್ಯ 113
ಸಪೊನಿಫಿಕೆಸನ್ ಮೌಲ್ಯ 186
viscisity 40.27
ಫ್ಲಾಷ್ ಪಾಯಿಂಟ್ 1820C
ಫ್ಯಾಟಿ(ಕೊಬ್ಬಿನ)ಆಮ್ಲ ಶೇಕಡ
ಪಾಮಿಟೀಕ್ ಆಮ್ಲ 4-8
ಸ್ಟಿಯರಿಕ್ ಆಮ್ಲ 2.5-8
ಅರಚಿಡಿಕಿ ಆಮ್ಲ 2.2-4.5
ಬೆಹೆನಿಕ್ ಆಮ್ಲ 4-5
ಲಿಗ್ನೊಸೆರುಕ್ ಆಮ್ಲ 1.5-3.5
ಒಲಿಕ್ ಆಮ್ಲ 44-75
ಲಿನೊಲಿಕ್ ಆಮ್ಲ 10-18
ಐಕೊಸೆನೊಯಿಕ್ ಆಮ್ಲ 9-12

ಎಣ್ಣೆಯ ಉಪಯೋಗಗಳು

ಬದಲಾಯಿಸಿ
  • ಜೈವಿಕ ಡಿಜಿಲ್(biodiesel)ಯನ್ನಾಗಿ ಹೊಂಗೆಯ ಎಣ್ಣೆಯನ್ನು ಉಪಯೋಗಿಸಬಹುದು.[][]
  • ಹೆರೆಯೆಣ್ಣೆ(libricant) ಯಾಗಿ ಉಪಯೋಗಿಸಬಹುದು.
  • ಸಾಬೂನ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
  • ಕೆಲವು ಎಣ್ಣೆ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
  • ಎಕ್ಸಿಮಾ, ಗಜಕರ್ಣ ಮುಂತಾದ ಎಲ್ಲಾ ಚರ್ಮ ರೋಗಗಳಿಗೆ ಕರಂಜ ತೈಲ ಅರ್ಥಾತ್ ಹೊಂಗೆ ಎಣ್ಣೆಯ ಉಪಯೋಗ ಪರಿಣಾಮಕಾರಿ ಎಂದು ಚರಕ ಸಂಹಿತೆಯಲ್ಲಿ ಉಲ್ಲೇಖವಾಗಿದೆ

ಉಲ್ಲೇಖಗಳು

ಬದಲಾಯಿಸಿ


^ a b c d Ashok Pandey (2008). Handbook of Plant-Based Biofuels. CRC. pp. 255–266. ISBN 1-56022-175-5.

^ Karmee, Sanjib Kumar; Chadha, Anju (September 2005). "Preparation of biodiesel from crude oil of Pongamia pinnata". Bioresour. Technol. 96 (13): 1425–9. doi:10.1016/j.biortech.2004.12.011. PMID 15939268. ^ Production of Biodiesel From Non Edible Plant Oils Having High FFA Content