ಹೈದರಾಬಾದ ಸಮಾಚಾರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಹೈದರಾಬಾದ ಸಮಾಚಾರ , ೧೯೪೧ ರಲ್ಲಿ ಮ. ಘ. ಪ. ಪ್ರಭುಗಳ ಸರಕಾರದ ವತಿಯಿಂದ ಪ್ರಕಟಣೆಯಲ್ಲಿದ್ದ ಈ ಪತ್ರಿಕೆ ತಿಂಗಳಿಗೊಮ್ಮೆ ಪ್ರಕಟವಾಗುತ್ತಿತ್ತು. ಕನ್ನಡವಲ್ಲದೆ ಉರ್ದು, ತೆಲುಗು ಮತ್ತು ಮರಾಠಿ ಭಾಷೆಗಳಲ್ಲೂ ಈ ಪತ್ರಿಕೆ ಪ್ರಕಟಗೊಳ್ಳುತ್ತಿತ್ತು.
ಈ ಪತ್ರಿಕೆಯಲ್ಲಿ ಪ್ರಕಟಣೆಗಳುತ್ತಿದ್ದ ವಿಭಾಗಗಳು ಈ ಕೆಳಗಿನಂತಿವೆ:
ಅ. ಸುದ್ದಿಗಳು ಆ. ಟೀಕೆ ಟಿಪ್ಪಣಿಗಳು ಇ. ಜಿಲ್ಲೆಯ ಸುದ್ದಿಗಳು ಈ. ಹೈದರಾಬಾದು ಸಂಸ್ಥಾನದಲ್ಲಿನ ವಿಶೇಷ ಸ್ಥಳಗಳು ಉ. ಜಾಹೀರಾತುಗಳು ಊ. ಯುದ್ಧಕಾಲದಲ್ಲಿ ಅನುಸರಿಸಬೇಕಾದ ನಿಯಮಗಳು
ಈ ಪತ್ರಿಕೆಯ ವಿಶೇಷವೆಂದರೆ ಇದರ ಮುದ್ರಣವನ್ನು ಮ. ಘ. ಪ. ಪ್ರಭುಗಳ ಸರಕಾರದ ಲಾಂಛನವನ್ನು ಪತ್ರಿಕೆಯಲ್ಲಿ ನೀರಿನ ಗುರುತು (ವಾಟರ್ ಮಾರ್ಕ್) ಇರುವ ಕಾಗದದ ಮೇಲೆ ಮುದ್ರಿಸಲಾಗುತ್ತಿತ್ತು. ದೇಶದೆಲ್ಲೆಡೆ ಸ್ವಾತಂತ್ರ್ಯದ ಅಲೆ ಎದ್ದಿದ್ದರಿಂದ, ನಕಲಿ ಪತ್ರಿಕೆಗಳ ಚಲಾವಣೆಯನ್ನು ಗುರುತು ಹಿಡಿಯಲು ಇದು ಸಹಾಯಕವಾಗಿತ್ತು.