ಹೇಮಂತ ಕುಲಕರ್ಣಿ (ನವೆಂಬರ್ ೨೫ ೧೯೧೬ - ಜುಲೈ ೨೨, ೧೯೯೪) ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಂತರರಾಷ್ಟ್ರೀಯ ಪ್ರಖ್ಯಾತಿಯ ಹೆಸರು. ಅವರು ಕನ್ನಡಕ್ಕಿಂತ ಇಂಗ್ಲಿಷ್‌ನಲ್ಲಿಯೇ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿ ಖ್ಯಾತಿ ಗಳಿಸಿದ್ದವರು[] .

ಹೇಮಂತ ಕುಲಕರ್ಣಿ
ಜನನನವೆಂಬರ್ ೨೫, ೧೯೧೬
ಬಿಜಾಪುರ
ಮರಣಜುಲೈ ೨೨, ೧೯೯೪
ವೃತ್ತಿಅಧ್ಯಾಪಕರು, ಇಂಗ್ಲಿಷ್ ಮತ್ತು ಕನ್ನಡ ಸಾಹಿತಿ

ಕನ್ನಡ ಮತ್ತು ಇಂಗ್ಲಿಷಿನಲ್ಲಿ ಪ್ರಸಿದ್ಧ ಬರಹಗಾರರಾದ ಹೇಮಂತ ಬಲವಂತರಾವ್ ಕುಲಕರ್ಣಿ ಅವರು ನವೆಂಬರ್ ೨೫, ೧೯೧೬ರ ವರ್ಷದಲ್ಲಿ ಬಿಜಾಪುರದಲ್ಲಿ ಜನಿಸಿದರು[] . ಹೇಮಂತ ಕುಲಕರ್ಣಿಯವರು ತಮ್ಮ ಪ್ರಾರಂಭಿಕ ವರ್ಷಗಳನ್ನು ಬಿಜಾಪುರ, ಹೈದರಾಬಾದ್, ಮುಂಬಯಿಗಳಲ್ಲಿ ಕಳೆದರು.ಮುಂದೆ ೧೯೬೦ರ ವೇಳೆಯಲ್ಲಿ ಅವರು ಅಮೆರಿಕದಲ್ಲಿ ನೆಲೆಸಿದರು ವಾಸ. ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದ ಕುಲಕರ್ಣಿಯವರು ಅಮೆರಿಕದಲ್ಲಿ ಅನೇಕ ವರ್ಷಗಳವರೆಗೆ ಅಧ್ಯಾಪಕ ವೃತ್ತಿ ಕೈಗೊಂಡಿದ್ದರು.

ಇಂಗ್ಲಿಷ್ ಸಾಹಿತ್ಯ ರಚನೆ

ಬದಲಾಯಿಸಿ
  • ಅಮೆರಿಕಾದ ಉಟ್ಹಾದಲ್ಲಿದ್ದಾಗ ಸ್ಟೀಫನ್ ಸ್ಪೆಂಡರ್ ಮೇಲೆ ಆಳವಾದ ಅಧ್ಯಯನ ನಡೆಸಿ ೧೯೭೦ರ ವರ್ಷದಲ್ಲಿ ಆತನ ಕೃತಿಗಳ ವರ್ಣನಾತ್ಮಕ ಸೂಚಿಯನ್ನು (Stephen Spender: poet in crisis) ಪ್ರಕಟಿಸಿದರು.
  • ‘ಮಾಬಿಡಿಕ್’ ಕೃತಿಯ ಅಧ್ಯಯನ ಮಾಡಿ ‘ಹಿಂದೂ ಅವತಾರ’ (Moby-Dick: A Hindu Avatar) ಎಂಬ ಹೆಸರಿನಲ್ಲಿ ೧೯೭೦ರಲ್ಲಿ ಗ್ರಂಥ ಪ್ರಕಟಿಸಿದರು.
  • ಹೇಮಂತರು ಸುಮಾರು ೧೫ ಇಂಗ್ಲಿಷ್ ಕವನಸಂಕಲನಗಳನ್ನು ಪ್ರಕಟಿಸಿದ್ದು ಅವು ಅವರಿಗೆ ಅಂತರರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟವು.
  • Serpent in the Stars,
  • The flaming sword,
  • Driftwood from the beach,
  • Journey to Mother,
  • Exploring Roots,
  • East Punjab in Crisis,
  • Tilted Towards Dawn,
  • In the Country of Black Mother,
  • Morning Dew: Poems,
  • Welding Flames: New Poems,
  • Burning with a Smile,
  • At the Well: Selected Poems,
  • Barbed Wire, Double-headed Drum,
  • Stepehe Spender,
  • works and Criticism ಮುಂತಾದವು ಹೇಮಂತ ಕುಲಕರ್ಣಿಯವರ ಇಂಗ್ಲಿಷ್ ಕೃತಿಗಳಲ್ಲಿ ಸೇರಿವೆ.

ಕನ್ನಡ ಸಾಹಿತ್ಯ ರಚನೆ

ಬದಲಾಯಿಸಿ
  • ಹೇಮಂತ ಕುಲಕರ್ಣಿಯವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ 1952ರಲ್ಲಿ ಪ್ರಕಟಗೊಂಡ ‘ಭಗ್ನಮಂದಿರ’- ಅದು ಹಲವಾರು ಮರು ಮುದ್ರಣಗಳನ್ನು ಕಂಡಿದೆ.
  • ಕನ್ನಡದಲ್ಲಿ ಅವರ ಮೊದಲ ಕವನ ಸಂಕಲನ ‘ಸ್ನೇಹ ಸೂಕ್ತ’.
  • ಮುಂದೆ ೧೯೬೯ರಲ್ಲಿ ‘ಗೋಪುರ’,
  • ೧೯೮೭ರಲ್ಲಿ ‘ಹಿಮವೃಷ್ಟಿ’ ಕವನ ಸಂಕಲನಗಳನ್ನು ಪ್ರಕಟಿಸಿದರು.
  • 'ತಪ್ಪಿದ ಹೆಜ್ಜೆ' ಅವರ ಅನುವಾದಿತ ನಾಟಕ.
  • 'ಕೊನರಿದ ಕೊರಡು' ಅವರ ಮತ್ತೊಂದು ಕಾದಂಬರಿ.

ಕಾವ್ಯದ ನವ್ಯತೆ

ಬದಲಾಯಿಸಿ

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ಹೇಮಂತ ಕುಲಕರ್ಣಿಯವರ ಹಲವಾರು ಉಪನ್ಯಾಸಗಳು ವ್ಯವಸ್ಥಿತಗೊಂಡಿದ್ದವು. ಈ ಮೂಲಕ ‘ಕಾವ್ಯದಲ್ಲಿ ನವ್ಯತೆ’ ಎಂಬ ಉಪನ್ಯಾಸ ಸರಣಿಯು ಪ್ರಸಾರಾಂಗದಿಂದ ಪ್ರಕಟಿತಗೊಂಡಿದೆ. ಕನ್ನಡದಲ್ಲಿ ನವ್ಯತೆಯನ್ನು ಕುರಿತು ಬರೆದವರೆಲ್ಲರೂ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ ಕಾವ್ಯದಿಂದ ಪ್ರಭಾವಿತರಾಗಿದ್ದರೆ ಕುಲಕರ್ಣಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೆಕ್ಸಿಕೊ, ಚಿಲಿ, ಜಪಾನ್ ಮೊದಲಾದ ದೇಶಗಳ ಕಾವ್ಯವನ್ನು ಅಧ್ಯಯನಮಾಡಿ ವಿವೇಚನೆ ನಡೆಸಿದವರು.

ಪತ್ರಿಕೋದ್ಯಮ

ಬದಲಾಯಿಸಿ

೧೯೮೪ರ ಸುಮಾರಿನಲ್ಲಿ ಭಾರತಕ್ಕೆ ಬಂದ ಹೇಮಂತ ಕುಲಕರ್ಣಿಯವರು ‘ಸೃಜನವೇದಿ’ ಎಂಬ ನಿಯತಕಾಲಿಕವನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ, ಅರವಿಂದ ನಾಡಕರ್ಣಿಯವರೊಡನೆ ಪ್ರಾರಂಭಿಸಿ ಹಲವಾರು ವರ್ಷಗಳ ಕಾಲ ಅದನ್ನು ನಡೆಸಿದರು.

ಪ್ರಶಸ್ತಿ ಗೌರವಗಳು

ಬದಲಾಯಿಸಿ

ಹೇಮಂತ ಕುಲಕರ್ಣಿಯವರಿಗೆ ಹಲವಾರು ಅಂತಾರಾಷ್ಟ್ರೀಯ ಮನ್ನಣೆಗಳು ಸಂದಿದ್ದವು-

  • ಫ್ಲಾರೆನ್ಸಿನಲ್ಲಿ ನಡೆದ ಜಾಗತಿಕ ಕವಿ ಸಮ್ಮೇಳನಕ್ಕೆ ಆಹ್ವಾನ,
  • ಅಮೆರಿಕದ ಫ್ಲಾರಿಡಾ ಕವಿ ಸಮ್ಮೇಳನದಲ್ಲಿ ಬಹುಮಾನ,
  • ಫ್ರೆಂಚ್ ಅಕಾಡಮಿಯಿಂದ ದೊರೆತ ಕಂಚಿನ ಪದಕ,
  • ನ್ಯಾಷನಲ್ ಅಕಾಡಮಿ ಆಫ್ ನ್ಯೂಯಾರ್ಕ್ ಸಂಸ್ಥೆಯಿಂದ ಗೌರವ ಡಾಕ್ಟರೇಟ್,
  • ಚೀನಾದಿಂದ ಹೋಚೌ ಸೆಂಚುರಿ ಆಫ್ ಪೊಯಟ್ಸ್ ಪ್ರಶಸ್ತಿ,
  • ಕಾವ್ಯದ ಮೂಲಕ ಶಾಂತಿ ಸೇವೆಗಾಗಿ ಅಂತಾರಾಷ್ಟ್ರೀಯ ಪದಕ,
  • ಉಟ್ಹಾ ವಿಶ್ವವಿದ್ಯಾಲಯದಿಂದ ‘ಮಾನವತಾವಾದಿ’ ಪ್ರಶಸ್ತಿ.
  • ಇಂಟರ್ ನ್ಯಾಷನಲ್ ಅಕಾಡಮಿ ಆಫ್ ಪೊಯೆಟ್ಸ್ ವತಿಯಿಂದ ಫೆಲೋಷಿಪ್ ಮುಂತಾದ ಅನೇಕ ಅಂತಾರಾಷ್ಟ್ರೀಯ ಗೌರವಗಳು ಸಂದವು.

ಕವಿ ಹೇಮಂತ ಕುಲಕರ್ಣಿಯವರು ಜುಲೈ ೨೨, ೧೯೯೪ರ ವರ್ಷದಲ್ಲಿ ಈ ಲೋಕವನ್ನಗಲಿದರು.

  1. ಕಣಜ Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ.
  2. ಗೂಗಲ್ನಲ್ಲಿ ಹೇಮಂತ ಕುಲಕರ್ಣಿ ಅವರ ಪ್ರಸಿದ್ಧ ಪುಸ್ತಕಗಳು

ಉಲ್ಲೇಖಗಳು

ಬದಲಾಯಿಸಿ
  1. %E0%B2%B2%E0%B2%95 %E0%B2%B0%E0%B3%8 D%E0%B2%A3% E0% B2%BF "ಹೇಮಂತ ಕುಲಕರ್ಣಿ". kanaja.in. Retrieved 8-2-2014. {{cite web}}: Check |url= value (help); Check date values in: |accessdate= (help)
  2. "ಹೇಮಂತ ಕುಲಕರ್ಣಿ". nammakannadanaadu.com. Archived from the original on 2020-04-24. Retrieved 8-2-2014. {{cite web}}: Check date values in: |accessdate= (help)