ಹೆಲ್ಲೊ ವರ್ಲ್ಡ್ ಕಂಪ್ಯೂಟರ್ ಪ್ರೋಗ್ರ್ಯಾಮ್

ಒಂದು "Hello, World!" ಕ್ರಮವಿಧಿ , ಜಾವಾಸ್ಕ್ರಿಪ್ಟ್

ಹೆಲ್ಲೊ ವರ್ಲ್ಡ್! ಪ್ರೋಗ್ರ್ಯಾಮು ( '"Hello, World!" program )' ತೋರುತೆರೆಯೊಂದರ ಮೇಲೆ "Hello, World!" ( ಅಥವಾ ಅಂತಹ ಬೇರೆ ಸಂದೇಶ ) ಎಂದು ತೋರಿಸುವ ಒಂದು ಕಂಪ್ಯೂಟರ್ ಪ್ರೊಗ್ರ್ಯಾಮ್ ಆಗಿದೆ. ಬಹಳಷ್ಟು ಪ್ರೋಗ್ರ್ಯಾಮಿಂಗ್ ಭಾಷೆಗಳಲ್ಲಿ ಸಾಧ್ಯವಿರುವ ಬಲುಸರಳವಾದ ಪ್ರೋಗ್ರ್ಯಾಂ ಆದ ಕಾರಣ ಅದನ್ನು ಪ್ರೋಗ್ರ್ಯಾಮಿಂಗ್ ಭಾಷೆಯೊಂದನ್ನು ಕಲಿಯಲು ಆರಂಭಿಸುವವರಿಗೆ ಆ ಭಾಷೆಯ ಮೂಲ ರಚನೆಯನ್ನು ತೋರಿಸಿಕೊಡಲು ಬಳಸಲಾಗುತ್ತಿದೆ. ಒಂದು ಭಾಷೆ ಅಥವಾ ಕಂಪ್ಯೂಟರ್ ನ ಕಾರ್ಯಕಾರಿ ವ್ಯವಸ್ಥೆಯು ವ್ಯವಸ್ಥೆ ಯು ಸರಿಯಾಗಿ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಲೂ ಅದನ್ನು ಬಳಸಲಾಗುತ್ತದೆ.

ಉದ್ದೇಶ

ಬದಲಾಯಿಸಿ

ಹೆಲ್ಲೊ ವರ್ಲ್ಡ್" ಪ್ರೋಗ್ರ್ಯಾಮು (ಕ್ರಮವಿಧಿ) ಸಾಮಾನ್ಯವಾಗಿ ಕಂಪ್ಯೂಟರ್ ಪ್ರೋಗ್ರ್ಯಾಮಿಂಗ್ ಕಲಿಯುವವರ ಪಾಲಿನ ಮೊದಲ ಪಾಠವಾಗಿದೆ . ಅದು ತುಂಬ ಸರಳವಾಗಿದ್ದು, ತಿಳಿದುಕೊಳ್ಳಲು ಬಲು ಸುಲಭವಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಒಂದು ಕಂಪ್ಯೂಟರ್ ಭಾಷೆಯಲ್ಲಿನ ಗಣಕ ವಿಜ್ಞಾನ(computer science)ದ ಮೂಲ ತತ್ವಗಳನ್ನು ಹೊಸಬರಿಗೆ ವಿವರಿಸಬಹುದಾಗಿದೆ. ನುರಿತ ಪ್ರೋಗ್ರ್ಯಾಮರ್ ಗಳು ಕೂಡ ಹೊಸಭಾಷೆಯೊಂದನ್ನು ಕಲಿಯುವಾಗ ಅದರ ನುಡಿಗಟ್ಟನ್ನೂ . ಭಾಷೆಯ ರಚನೆಯನ್ನೂ ಈ ಪ್ರೊಗ್ರ್ಯಾಮಿನಿಂದ ತಿಳಿಯಬಹುದಾಗಿದೆ. ಅಷ್ಟೇ ಅಲ್ಲದೆ, ಒಂದು ಭಾಷೆಯ ಕಂಪೈಲರ್, ಅಭಿವೃದ್ಧಿ-ಪೂರಕ-ಪರಿಕರ ( development environment) ಮತ್ತು ಇತರ ಪರಿಕರಗಳು ಕಂಪ್ಯೂಟರ್ ನಲ್ಲಿ ಸರಿಯಾಗಿ ಅಳವಡಿಕೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ.

ಇತಿಹಾಸ

ಬದಲಾಯಿಸಿ

ಇಂಥ ಪರೀಕ್ಷಾ-ಪ್ರೋಗ್ರ್ಯಾಮುಗಳು ಮೊದಲೆ ಇದ್ದುವಾದರೂ "Hello, world!" ನುಡಿಗುಚ್ಛವನ್ನು ಬಳಸುವ ಪದ್ದತಿಗೆ ದ ಸಿ ಪ್ರೋಗ್ರಾಮ್ಮಿಂಗ್ ಲಾಂಗ್ವೇಜ್ಎಂಬ ಪುಸ್ತಕದಲ್ಲಿನ ಉದಾಹರಣೆಯೊಂದು ಪ್ರೇರಣೆಯಾಯಿತು. ಆ ಪುಸ್ತಕದಲ್ಲಿನ ಉದಾಹರಣೆಯು "hello, world" ಎಂದು ತೆರೆಯ ಮೇಲೆ ತೋರಿಸುತ್ತದೆ ,ಇದನ್ನು [citation needed] ೧೯೭೪ ರ ಬೆಲ್ ಲ್ಯಾಬೊರೇಟರಿಯ ಬ್ರಯನ್ ಕೆರ್ನಿಘಾನ್ ರ ಆಂತರಿಕ ಮೆಮೊ - ಪ್ರೋಗ್ರಾಮ್ಮಿಂಗ್ ಇನ್ ಸಿ: ಏ ತುಟೋರಿಯಲ್,[] ದಿಂದ ತೆಗೆದುಕೊಳ್ಳಲಾಗಿದೆ.

ಉಲ್ಲೇಖಗಳು

ಬದಲಾಯಿಸಿ

  1. "Programming in C: A Tutorial" (PDF). Archived from the original (PDF) on 2015-02-23. Retrieved 2015-03-30.

ಬಾಹ್ಯ ಕೊಂಡಿಗಳು

ಬದಲಾಯಿಸಿ